ಸಿಂಹ ರಾಶಿಯವರ ಜೂನ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಜೂನ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಸಿಂಹ ರಾಶಿಯವರ ಲಾಂಛನ ಸಿಂಹ ವಾಗಿರುತ್ತದೆ. ರಾಶ್ಯಾಧಿಪತಿ ರವಿಯು ಆಗಿರುತ್ತದೆ. ಇದು ಅಗ್ನಿ ತತ್ವದ ರಾಶಿ ಆಗಿರುತ್ತದೆ . ಇದು ಪುರುಷ ಲಿಂಗದ ರಾಶಿಯಾಗಿದೆ. ಈ ರಾಶಿಯ ರತ್ನ ಮಾಣಿಕ್ಯವಾಗಿರುತ್ತದೆ. ಅದೃಷ್ಟದ ಬಣ್ಣ ಗುಲಾಬಿ ಮತ್ತು ಕೆಂಪು ಬಣ್ಣವಾಗಿದೆ. ಅದೃಷ್ಟದ ದಿನವೂ ರವಿವಾರ ಮತ್ತು ಬುಧವಾರವಾಗಿರುತ್ತದೆ . ಶ್ರೀ ಸೂರ್ಯನಾರಾಯಣ ಸ್ವಾಮಿ ಅದೃಷ್ಟದ ದೇವತೆಯಾಗಿರುತ್ತದೆ.

ಅದೃಷ್ಟದ ಸಂಖ್ಯೆ ಒಂದು , ಐದು ಒಂಬತ್ತು ,ಆಗಿರುತ್ತದೆ . ಅದೃಷ್ಟದ ದಿನಗಳು 1 ,10 ,19 ,28 ಗಳಾಗಿರುತ್ತದೆ. ಮಿತ್ರ ರಾಶಿಯು ಮೇಷ , ಮಿಥುನ ಕನ್ಯಾ ರಾಶಿಯು ಆಗಿರುತ್ತದೆ . ಶತ್ರು ರಾಶಿಯು ತುಲಾ , ಕುಂಭ , ವೃಷಭ ರಾಶಿಯಾಗಿರುತ್ತದೆ. ಸಿಂಹ ರಾಶಿಯವರು ಬಹಳ ಮಹತ್ವಕಾಂಕ್ಷಿಗಳಾಗಿರುತ್ತಾರೆ. ಬಹಳ ಆಲೋಚನೆಯನ್ನು ಮಾಡಿ ಏನೇ ಕೆಲಸ ಮಾಡಿದರೂ ಬಹುದೊಡ್ಡದಾಗಿ ಮಾಡಲು ಪ್ರಯತ್ನ ಪಡುತ್ತಾರೆ. ಯಾವಾಗಲೂ ಮಹತ್ವಕಾಂಕ್ಷೆಯುಳ್ಳವರು ಸದಾ ಕ್ರಿಯಾತ್ಮಕರಾಗಿರಲು ಬಯಸುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಉದಾರಿಗಳಾಗಿರುತ್ತಾರೆ .

ಸ್ನೇಹಪರರು ಸಹ ಆಗಿರುತ್ತಾರೆ. ಜೂನ್ ತಿಂಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ. ಸಾಕಷ್ಟು ಸವಾಲುಗಳನ್ನು ಸಹ ನೀವು ಎದುರಿಸಬೇಕಾಗುತ್ತದೆ. ಆಕಸ್ಮಿಕವಾಗಿ ಅಥವಾ ಅನಿರೀಕ್ಷಿತವಾಗಿ ಏರಿಳಿತಗಳನ್ನು ಕಾಣುತ್ತೀರಾ. ಮತ್ತು ಶುಭ ಕಾರಕವಾದ ಫಲಗಳನ್ನು ಸಹ ನೀವು ಕಾಣುತ್ತೀರಾ . ಸಾಕಷ್ಟು ಬದಲಾವಣೆ ಮತ್ತು ಧನಾತ್ಮಕವಾದ ಬದಲಾವಣೆಗಳು ಉಂಟಾಗುತ್ತದೆ. ನೀವು ಒಂದು ಸಾರಿ ಹಠ ಮಾಡಿದರೆ ಅಥವಾ ಛಲದಿಂದ ಕೆಲಸದಲ್ಲಿ ತೊಡಗಿಕೊಂಡರೆ ಅದನ್ನು ಪೂರ್ಣ ಮಾಡುವವರೆಗೂ ಬಿಡುವಂತಹ ಮನಸ್ಥಿತಿಯವರಲ್ಲ ಸಿಂಹ ರಾಶಿಯವರು ಕೊನೆಗಳಿಗೆವರೆಗೂ ಸಹ ಹೋರಾಡುತ್ತಾರೆ.

ನೀವು ಯಾರ ಅಧೀನದಲ್ಲಿ ಇರಲು ಸಹ ಇಷ್ಟಪಡುವುದಿಲ್ಲ ಸ್ವತಂತ್ರವಾಗಿ ಜೀವಿಸಲು ಇಚ್ಛಿಸುವವರಾಗಿರುತ್ತೀರಾ. ಆದ್ದರಿಂದ ಹಿಡಿದ ಕೆಲಸವನ್ನು ಪೂರ್ಣವಾಗುವವರೆಗೂ ಬಿಡುವುದಿಲ್ಲ. ವಾಹನ ಮತ್ತು ಮನೆ ಭೂಮಿ ಯಾವುದೇ ವಸ್ತುಗಳನ್ನು ಖರೀದಿಸಲು ಇಚ್ಛೆಪಡುವವರು ಖಂಡಿತವಾಗಿಯೂ ಈ ಜೂನ್ ತಿಂಗಳಿನಲ್ಲಿ ಖರೀದಿಸಬಹುದು. ನೀವು ಖರೀದಿಸುವ ಮೊದಲು ನಿಮ್ಮ ಹಣಕಾಸಿನ ಅಂದರೆ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ.

ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮವನ್ನು ಹಾಕಿದರೆ ಒಳ್ಳೆಯ ಸಾಧನೆಯನ್ನು ಮಾಡಬಹುದು. ಹೆಚ್ಚಿನ ಪರಿಶ್ರಮವನ್ನು ನೀವು ಹಾಕಿದ್ದಲ್ಲಿ ನಿಮಗೆ ನೌಕರಿಯೂ ಸಹ ಸಿಗಬಹುದು. ಮನಶಾಸ್ತ್ರಜ್ಞರು, ವೈದ್ಯಕೀಯ ರಂಗದಲ್ಲಿರುವವರು ವಿದೇಶಿ ವ್ಯಾಸಂಗ ಮಾಡುತ್ತಿರುವವರು ವಿಶೇಷವಾದ ಸಾಧನೆಯನ್ನು ಸಹ ಮಾಡಬಹುದು. ಮದುವೆಯಾಗದೆ ಇರುವಂತಹ ವಧು ವರರಿಗೆ ಮದುವೆ ಅವಕಾಶಗಳು ಸಹ ಕೂಡಿಬರುತ್ತದೆ. ಉದ್ಯೋಗದಲ್ಲಿ ನಿಮಗೆ ಬಡ್ತಿ ದೊರೆಯುತ್ತದೆ .

ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ದೊರಕುತ್ತದೆ . ಸರಕಾರಿ ಮತ್ತು ‌ ಅರೆ ಸರ್ಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವವರಿಗೆ ನೀವು ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳಿ ಅದನ್ನು ಸಮರ್ಥಿಸಿಕೊಳ್ಳುವ ಕಾರ್ಯದಲ್ಲಿ ಮಾತ್ರ ತೊಡಗಬೇಡಿರಿ. ಇದು ನಿಮಗೆ ನಿರಾಳತೆಯನ್ನು ಒದಗಿಸುತ್ತದೆ. ಮತ್ತು ಆ ಸಮಸ್ಯೆಯಿಂದ ಆಚೆ ಬರಲು ನಿಮಗೆ ದಾರಿ ತೋರಿಸುತ್ತದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ನಿಗ ವಹಿಸಿ. ಯಾರ ಜೊತೆ ಕೆಲಸ ಮಾಡುತ್ತೇನೆ ಎಂಬುದರ ಬಗ್ಗೆ ನಿಗಾ ವಹಿಸಿ ಕೆಲಸ ಮಾಡಿದರೆ ಒಳ್ಳೆಯದು. ಸಮಯವನ್ನು ವ್ಯರ್ಥ ಮಾಡಬೇಡಿರಿ. ನೀವು ದುಡಿಮೆಯ ಫಲ ನಿಮಗೆ ಸಿಕ್ಕೆ ಸಿಗುತ್ತದೆ.

ಆದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿರಿ. ಶಾಲಾ ಕಾಲೇಜುಗಳನ್ನು ನಿರ್ವಹಣೆ ಮಾಡುವಂಥವರಿಗೆ ಪೀಠೋಪಕರಣಗಳನ್ನು ತಯಾರಿಸುವವಂತವರಿಗೆ ಒಳ್ಳೆ ಲಾಭವು ದೊರಕುತ್ತದೆ . ಮತ್ತು ಪುಸ್ತಕ ವ್ಯಾಪಾರಿಗಳು ಸ್ವಲ್ಪ ಎಚ್ಚರಿಕೆಯಿಂದ ವವ್ಯ ಹರಿಸಬೇಕಾಗುತ್ತದೆ. ಸ್ತ್ರೀ ರೋಗ ತಜ್ಞರು ಮತ್ತು ವೈದ್ಯಕೀಯ ರಂಗದಲ್ಲಿರುವವರು ಒಳ್ಳೆಯ ಸ್ಥಾನಮಾನಗಳು ದೊರಕುತ್ತದೆ. ಕಲಾವಿದರು ಒಳ್ಳೆಯ ಪ್ರಶಸ್ತಿ ಮತ್ತು ಮನ್ನಣೆ ದೊರಕುತ್ತದೆ ನಿಮ್ಮಲ್ಲಿರುವ ಕಲೆಗೆ ಬೆಲೆ ಸಿಗುತ್ತದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರಕುತ್ತದೆ. ಪ್ರೀತಿ ವಿಶ್ವಾಸ ಗೌರವ ಮನ್ನಣೆಗಳು ದೊರಕುತ್ತದೆ.

ಬೆನ್ನು ನೋವಿನ ಸಮಸ್ಯೆಗಳು ಕಾಲು ನೋವಿನ ಸಮಸ್ಯೆಗಳು ಈ ರೀತಿಯ ಸಣ್ಣಪುಟ್ಟ ತೊಂದರೆಗಳು ನಿಮ್ಮನ್ನು ಕಾಡುತ್ತದೆ. ನಿಮ್ಮ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ತಾತ್ಕಾಲಿಕ ಸಮಸ್ಯೆ ಇದ್ದರೆ ವೈದ್ಯರ ಸಂದರ್ಶನವನ್ನು ಪಡೆದುಕೊಳ್ಳಿ. ಆರೋಗ್ಯದ ಬಗ್ಗೆ ನಿಗವಹಿಸಿ ಅದಕ್ಕೆ ಸೂಕ್ತವಾದಂತಹ ಯೋಗ ಧ್ಯಾನ ವ್ಯಾಯಾಮ ಈ ರೀತಿಯ ದಿನಚರಿಯನ್ನು ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಒಟ್ಟಾರೆಯಾಗಿ ಅದ್ಭುತವಾದ ಫಲಗಳೇ ದೊರಕುತ್ತದೆ. ಆದರೆ ಎಚ್ಚರಿಕೆಗಳನ್ನು ಸಹ ನೀವು ಪಾಲಿಸಬೇಕಾಗುತ್ತದೆ.

ಜೂನ್ ತಿಂಗಳಲ್ಲಿ ಪರಿಹಾರಗಳೆಂದರೆ ಮಾತೆ ಲಕ್ಷ್ಮಿ ಪೂಜೆಯನ್ನು ಮಾಡಿ ಕೊಳ್ಳಿ. ಒಳ್ಳೆಯ ಫಲಗಳು ದೊರಕುತ್ತದೆ. ಮನೆ ದೇವರ ಆರಾಧನೆಯನ್ನು ಮಾಡಿ ಗುರುಗಳ ಸೇವೆಯನ್ನು ಮಾಡಿ. ಗುರುರಾಯರ ದರ್ಶನವನ್ನು ಮಾಡಿ. ಗುರು ದತ್ತಾತ್ರೇಯರ ದರ್ಶನವನ್ನು ಮಾಡಿಕೊಳ್ಳಿ ಒಳ್ಳೆಯ ಫಲಗಳನ್ನು ಕಾಣುತ್ತೀರಾ. ಅನಾಥರಿಗೆ ದೀನದಲಿತರಿಗೆ ವಿಷಮ ಪರಿಸ್ಥಿತಿಯಲ್ಲಿರುವವರಿಗೆ ನಿಮ್ಮ ಕೈಲಾದಂತಹ ಸಹಾಯವನ್ನು ಮಾಡಿ.

Leave a Comment