ಸುಳ್ಳು ಹೇಳುವವರ ಲಕ್ಷಣಗಳು

0

ನಾವು ಈ ಲೇಖನದಲ್ಲಿ ಸುಳ್ಳು ಮಾತನಾಡುವ ಜನರ ಲಕ್ಷಣಗಳು ಯಾವುದು ಎ೦ದು ತಿಳಿಯೋಣ . ಯಾರೊಬ್ಬರಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ಅವರನ್ನು ಸುಲಭವಾಗಿ ನಂಬಬೇಡಿ . ಇಲ್ಲವಾದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ .

ಯಾವುದಾದರೂ ಒಬ್ಬ ಹೊಸ ವ್ಯಕ್ತಿ ಪರಿಚಯವಾದಾಗ ಅವರ ಬಗ್ಗೆ ತುಂಬಾ ಹೇಳಿಕೊಳ್ಳುತ್ತಿದ್ದಾರೆ , ಅಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸುಲಭವಾಗಿ ಗುರುತಿಸಬಹುದು. ಯಾವುದೇ ವ್ಯಕ್ತಿ ತನ್ನ ಬಗ್ಗೆ ವಿಪರೀತ ಹೋಗಳುವುದಿಲ್ಲ.

ಅವರ ಕೈಗಳು ಎಲ್ಲಿರುತ್ತದೆ? ನೀವು ಯಾರೊಬ್ಬರ ಜೊತೆ ಮಾತನಾಡುವಾಗ ಅವರ ಕೈಗಳನ್ನು ಮುಖ್ಯವಾಗಿ ಗಮನಿಸಿ.

ಕೈಗಳನ್ನು ಹಿಸುಕುವುದು, ಮಾತನಾಡುವಾಗ ಬಾಯಿಗೆ ಕೈ ಅಡ್ಡವಾಗಿ ಇಟ್ಟು ಮಾತನಾಡುವುದು, ನಿಮ್ಮ ಮಾತು ಕೇಳಿಸಿಕೊಳ್ಳುವಾಗ ಆಗಾಗ ಕಣ್ಣುಗಳನ್ನು ಉಜ್ಜುವುದು, ಕೈಗಳಿಂದ ಆಗಾಗ ಅವರ ಕಿವಿಗಳನ್ನು ಮುಟ್ಟುವುದು, ಅಥವಾ ಕೂದಲನ್ನು ಮುಟ್ಟವುದು ಮಾಡುತ್ತಿದ್ದರೆ , ಅವರು ಸುಳ್ಳು ಹೇಳುತ್ತಿದ್ದಾರೆ ಎಂದಥ೯ .

ಕಾಲು ಮತ್ತು ಕೈಗಳನ್ನು ಸೊಟ್ಟಗೆ ಮಾಡಿ ನಿಲ್ಲುವುದು . ನೇರವಾಗಿ ನಿಲ್ಲದೆ ಕೈ ಮತ್ತು ಕಾಲುಗಳನ್ನು ಸೊಟ್ಟಗೆ ಮಾಡಿ ನಿಂತು ಮಾತನಾಡುತ್ತಿದ್ದರೆ , ನಿಮ್ಮ ಎದುರಿಗಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ.

ಸುಳ್ಳು ಹೇಳುವವರಿಗೆ ನೇರವಾಗಿ ನಿಂತು ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯವಾಗುವುದಿಲ್ಲ.

ನಿಮ್ಮ ಜೊತೆ ಮಾತನಾಡುವವರು ಅವರ ತಲೆಯನ್ನು ನಮ್ಮ ತಲೆಯ ಹತ್ತಿರ ತಂದು ಗುಟ್ಟು ಹೇಳುವ ರೀತಿ ಮಾತನಾಡುತ್ತಿದ್ದಾರೆ ಅಂದರೆ , ಸುಳ್ಳು ಹೇಳಿ ನಮ್ಮಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅರ್ಥ.

ತೊದಲು ಮಾತುಗಳು : ಕೆಲವೊಮ್ಮೆ ಭಯದಿಂದ ಮಾತನಾಡುವಾಗ ತೊದಲುತ್ತಾರೆ. ಸುಳ್ಳು ಹೇಳುವವರ ಹತ್ತಿರ ಅವರು ಹೇಳುತ್ತಿರುವ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀವು ಕೇಳಿದರೆ ತೊದಲುತ್ತಾರೆ. ಇದರಿಂದ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸುಲಭವಾಗಿ ಗುರುತಿಸಬಹುದು .

ಸ್ವರದಲ್ಲಿ ಬದಲಾವಣೆ : ನಮಗೆ ಗೊತ್ತಿರುವ ವ್ಯಕ್ತಿಯಾಗಿದ್ದರೆ ಅವರ ಸ್ವರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗೊತ್ತಾಗುತ್ತದೆ. ಅವರು ನಮ್ಮಿಂದ ಏನಾದರೂ ಅಥವಾ ಯಾವುದಾದರೂ ವಿಷಯವನ್ನು ಬಚ್ಚಿಟ್ಟರೆ ಅವರ ಸ್ವರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಗುರುತಿಸಬಹುದು.

ತುಂಬಾ ದೊಡ್ಡದಾಗಿ ನಿಟ್ಟುಸಿರು ಬಿಡುವುದು ಅಥವಾ ನಿಮ್ಮ ಕಣ್ಣಲ್ಲಿ ನೋಡಿ ನೇರವಾಗಿ ಮಾತನಾಡದಿರುವುದು ಮಾಡಿದರೆ ನಿಮ್ಮಿಂದ ಏನೋ ಬಚ್ಚಿಡುತ್ತಿದ್ದಾರೆ ಎ೦ದು ಅರ್ಥ . ಯಾರೊಬ್ಬರಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡರೆ ಅವರನ್ನು ಸುಲಭವಾಗಿ ನಂಬಬೇಡಿ .

Leave A Reply

Your email address will not be published.