ಇಂತಹ ಮಹಿಳೆಯರಿಂದ ಮನೆಯ ಏಳಿಗೆ ಏಕೆ ಆಗುವುದಿಲ್ಲ

0

ನಾವು ಈ ಲೇಖನದಲ್ಲಿ ಇಂತಹ ಮಹಿಳೆಯರಿಂದ ಮನೆಯ ಏಳಿಗೆ ಏಕೆ ಆಗುವುದಿಲ್ಲ ಎಂಬುದರ ಬಗ್ಗೆ ತಿಳಿಯೋಣ .ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು .

ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ . ಏನೋ ಒಂದು ಅಡುಗೆ ಮಾಡಿ ಇಡೀ ದಿನ ಟಿವಿ ಮೊಬೈಲ್ ಮತ್ತು ತಿನ್ನುವುದು ಮಲಗುವುದು ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ .

ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ನೋಡಿ ನಿಮ್ಮ ಫ್ಯಾಮಿಲಿ ಅಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕೆಲವೊಬ್ಬರು ಇರುತ್ತಾರೆ .

2.ಮಾತಿನಲ್ಲಿ ಇತಿಮಿತಿ ಇರುವುದಿಲ್ಲ ಕೆಲವೊಬ್ಬರು ಆಡುವ ಮಾತಿನಲ್ಲಿ ಇತಿಮಿತಿ ಇರುವುದಿಲ್ಲ . ಚಿಕ್ಕವರು ದೊಡ್ಡವರು ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ . ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುತ್ತಿರುತ್ತಾರೆ . ಗಂಡನಿಗೂ ಕೂಡ ಬೆಲೆ ಕೊಡುವುದಿಲ್ಲ .

ಗಂಡನನ್ನು ಹೋಗು ಬಾ ಎಂದು ಕರೆಯುತ್ತಾರೆ . ಫ್ರೆಂಡ್ ರೀತಿ ನೋಡುತ್ತಾರೆ . ಅದು ನಿಜ ಹೋಗು ಬಾ ಹಲವಾರು ರೀತಿಯಲ್ಲಿ ಉಚ್ಛರಿಸಬಹುದು. ಆದರೆ 10 ಜನರ ಮಧ್ಯದಲ್ಲಿ ಇರುವಾಗ ಮಾತನಾಡುವ ರೀತಿ ಬೇರೆ ಇರಬೇಕು .

3.ದೇವರ ಮೇಲೆ ಭಕ್ತಿ ಇರುವುದಿಲ್ಲ. ದೇವರ ಪೂಜೆ ಹಬ್ಬ ಹರಿದಿನ ಆಚಾರ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾರೆ.

4.ವ್ಯರ್ಥವಾಗಿ ಸಮಯ ಕಳೆಯುವುದು ಕೆಲವೊಬ್ಬರು ಟಿವಿ ಮುಂದೆ ಅಥವಾ ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ಸಮಯ ಕಳೆದಿದ್ದೇ ಅವರಿಗೆ ಗೊತ್ತಾಗುವುದಿಲ್ಲ .

ಮನೆಗೆ ಯಾರು ಬಂದರು ಯಾರು ಹೋದರು ಗಂಡ ಆಫೀಸ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಅವರಿಗೆ ಒಂದು ಗ್ಲಾಸ್ ನೀರು ಕೊಡಬೇಕು .

ಮಕ್ಕಳು ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು . ಇದ್ಯಾವುದೂ ಅರಿವಿಲ್ಲದೆ ಟಿವಿ ಮುಂದೆ ಕೂತಿರುತ್ತಾರೆ . ಧಾರಾವಾಹಿಯ ಒಂದು ಸೀನ್ ಕೂಡ ಮಿಸ್ ಮಾಡುವುದಿಲ್ಲ .

5.ಕಷ್ಟ ಸುಖದ ಅರಿವಿಲ್ಲದೆ ಇರುವುದು .

ಕೆಲವೊಬ್ಬರಿಗೆ ಗಂಡ ಎಷ್ಟು ಕಷ್ಟಪಟ್ಟು ದುಡಿದು, ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ ‘ ಎಂಬುವ ಅರಿವಿರುವುದಿಲ್ಲ. ಒಟ್ಟಿನಲ್ಲಿ ಅವರ ಬಯಕೆಗಳು ಈಡೇರಬೇಕು .

ಬೇಜವಾಬ್ದಾರಿ ಮಲಗಲು ಏಳಲು ನಿಗದಿತ ಸಮಯವಿಲ್ಲ. ಅಡುಗೆ ಮಾಡುವುದರಲ್ಲಿ ತಿನ್ನುವುದರಲ್ಲೂ ಇತಿಮಿತಿ ಇರುವುದಿಲ್ಲ . ಆಹಾರ ನೀರು ಯಾವುದಕ್ಕೂ ಗಮನ ಕೊಡುವುದಿಲ್ಲ. ಇತಿ -ಮಿತಿಯಾಗಿ ಲಿಮಿಟ್ ನಲ್ಲಿ ಬಳಸುವುದಿಲ್ಲ. ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಗ್ರಿಗಳ ಬಗ್ಗೆ ಅರಿವಿರುವುದಿಲ್ಲ . ಕುಲ ಬೀಳಬಹುದು, ಕುಳಿತು ಹೋಗಬಹುದು, ಹಾಳಾಗಬಹುದು, ಎಂಬ ಅರಿವಿಲ್ಲದೆ ಎಲ್ಲವನ್ನು ವೇಸ್ಟ್ ಮಾಡುತ್ತಾರೆ . ಹೆಣ್ಣು ಮನೆಯ ಮಹಾಲಕ್ಷ್ಮಿ ಸಂಸಾರದ ಕಣ್ಣು . ಮನೆಯನ್ನು ಬೆಳಗುವ ದೀಪ ಅವಳು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಮನೆಯನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಸಾಧ್ಯ .

Leave A Reply

Your email address will not be published.