ತೀರಿ ಹೋದವರು ಕನಸಿನಲ್ಲಿ ಯಾವ ರೀತಿ ಕಾಣಿಸಿದರೆ ಏನರ್ಥ?

0

ತೀರಿ ಹೋದವರು ಕನಸಿನಲ್ಲಿ ಯಾವ ರೀತಿ ಕಾಣಿಸಿದರೆ ಏನರ್ಥ. ಕನಸಿನಲ್ಲಿ ಈ ರೀತಿ ಕಾಣಿಸಿಕೊಂಡರೆ ಈ ಸೂಚನೆ ನೀಡುತ್ತದೆ ಎಂದು ಹೇಳಲಾಗುತ್ತದೆ. ತೀರಿ ಹೋದವರು ಕನಸು ಬಿದ್ದರೆ ಯಾವುದೋ ದೊಡ್ಡ ಆಪತ್ತು ಕಾದಿದೆ ವೃತ್ತಿ ಜೀವನದಲ್ಲಿ ಸಮಸ್ಯೆಗಳಾಗಬಹುದು ತುಂಬಾ ಬೇಕಾದವರನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.

ನೀವು ನಿಜ ಜೀವನದಲ್ಲಿ ತುಂಬಾನೇ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಹಿರಿಯರು ಕನಸಿನಲ್ಲಿ ಕಾಣಿಸಿಕೊಂಡರೆ ಆ ಸಮಸ್ಯೆ ಪರಿಹಾರ ಸಿಗುವುದು ಎಂದು ಹೇಳಲಾಗುವುದು. ಇನ್ನು ಕೆಲವೊಮ್ಮೆ ನಿಮ್ಮಿಂದ ಏನಾದರೂ ತಪ್ಪಾಗುತ್ತಿದ್ದರೆ ಅದರಿಂದ ದೂರ ಸರಿಯಿರಿ ಎಂಬ ಸೂಚನೆಯೂ ಆಗಿರುತ್ತದೆ. ಅವರು ನಿಮ್ಮ ಕನಸಿನಲ್ಲಿ ಯಾವ ರೀತಿ ಕಾಣಿಸಿಕೊಂಡರು ಎಂಬುವುದರ ಮೇಲೆ ಕೂಡ ಆ ಕನಸಿನ ಅರ್ಥ ಏನು ಎಂದು ಸೂಚಿಸುತ್ತದೆ.

ನಿಮ್ಮನ್ನು ಬೈಯ್ಯುತ್ತಿರುವಂತೆ ಕನಸು ಕಂಡರೆ : ನಿಮ್ಮ ಹಿರಿಯರು ನಿಮ್ಮನ್ನು ಬೈಯ್ಯುತ್ತಿರುವಂತೆ ಕನಸು ಕಂಡರೆ ನೀವು ನಿಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿ ಕನಸು ಕಂಡರೆ ನಿಮ್ಮಿಂದ ಏನು ತಪ್ಪಾಗುತ್ತಿದೆ ಎಂದು ಯೋಚಿಸಿ ಆ ತಪ್ಪುಗಳಿಂದ ದೂರವಿರಿ. ನಿಮ್ಮ ಹಿರಿಯರು ಕನಸಿನಲ್ಲಿ ಬಂದು ನಿಮ್ಮನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ಲಕ್ಷ್ಯ ಮಾಡಬೇಡಿ.

ನಿಮ್ಮ ಕಡೆಗೆ ಕೈ ಚಾಚುತ್ತಿದ್ದರೆ: ನೀವು ಏನೋ ದೊಡ್ಡ ಸಮಸ್ಯೆ ಎದುರಿಸುತ್ತಿದ್ದರೆ ಎಲ್ಲವೂ ಸರಿಯಾಗಲಿದೆ ಹೆದರಬೇಡ ಎಂಬ ಸೂಚನೆಯಾಗಿದೆ. ನೀವು ತುಂಬಾ ನೋವಿನಲ್ಲಿದ್ದಾಗ ಆ ನೋವಿನಿಂದ ಹೊರಬರುವಿರಿ ಎಂಬ ಸೂಚನೆಯನ್ನು ನೀಡುತ್ತದೆ.

ಅವರು ತುಂಬಾನೇ ಖುಷಿಯಾಗಿದ್ದರೆ ಅವರು ತುಂಬಾ ಖುಷಿಯಲ್ಲಿದ್ದಂತೆ ಕಂಡರೆ ಅದು ಅದೃಷ್ಟದ ಸಂಕೇತ ನಿಮ್ಮ ಹಿರಿಯರನ್ನು ಕಂಡರೆ ನಿಮಗೆ ಶೀಘ್ರದಲ್ಲಿಯೇ ಶುಭವಾಗಲಿದೆ ಎಂಬ ಸೂಚನೆ ಎಂದು ಹೇಳಲಾಗುವುದು. ಅಲ್ಲದೇ ನಿಮ್ಮ ಕುಟುಂಬ ದೊಡ್ಡದಾಗಲಿದೆ ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂಬುವುದರ ಸೂಚನೆಯಾಗಿದೆ.

ಪೂರ್ವಜರು ತುಂಬಾ ಬೇಸರದಲ್ಲಿ ಇದ್ದಂತೆ ಕಂಡು ಬಂದರೆ ನಿಮ್ಮ ಕುಟುಂಬದಲ್ಲಿ ಯಾವುದೂ ಸರಿಯಿಲ್ಲ ಯಾವುದೋ ದೊಡ್ಡ ಸಮಸ್ಯೆಯಿದೆ ಕುಟುಂಬದಲ್ಲಿ ನೆಮ್ಮದಿಯಿಲ್ಲ ಎಂದಾಗ ಈ ರೀತಿ ಕನಸು ಬೀಳುವುದು.

ಅವರ ಜೊತೆ ಮಾತನಾಡುತ್ತಿರುವಂತೆ ಕಂಡರೆ ನಿಮ್ಮ ಆಪ್ತರ ಜೊತೆ ಮನಸ್ತಾಪ ಉಂಟಾಗುವುದು ಎಂಬ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುವುದು.

ಅವರ ಜೊತೆ ನಡೆದು ಹೋಗುವಂತೆ ಕಂಡರೆ ನಿಮ್ಮ ಯಾವುದೇ ಕಷ್ಟದ ಸಂದರ್ಭವಿರಲಿ ಹೆದರಬೇಕಾಗಿಲ್ಲ. ನಿಮ್ಮವರು ಸದಾ ನಿಮ್ಮೊಂದಿಗೆ ಇರುತ್ತಾರೆ. ನೀವು ಆ ಕಷ್ಟಗಳಿಂದ ಹೊರಬರುತ್ತೀರಿ ಎಂಬುವುದರ ಸೂಚನೆಯಾಗಿದೆ.

ಅವರು ಅಳುತ್ತಿರುವವರಂತೆ ಕಂಡು ಬಂದರೆ ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಜಗಳ ಉಂಟಾಗುವುದು ಎಂಬುವುದರ ಸೂಚನೆಯಾಗಿದೆ.

ಪೂರ್ವಜರು ಜಗಳವಾಡುತ್ತಿರುವಂತೆ ಕಂಡುಬಂದೆ ನಿಮ್ಮಲ್ಲಿ ತುಂಬಾನೇ ಗೊಂದಲವಿದೆ ನಿಮ್ಮ ತಪ್ಪು ನಿರ್ಧಾರಗಳಿಂದ ತುಂಬಾನೇ ಸಮಸ್ಯೆಯಾಗಬಹುದು ಎಂಬುವುದರ ಸೂಚನೆಯಾಗಿದೆ.

ಅವರು ನಿಮ್ಮನ್ನು ಓಡಿಸುತ್ತಿರುವಂತೆ ಕಂಡರೆ ನೀವು ಯಾವುದೋ ತಪ್ಪು ಕಾರ್ಯ ಮಾಡಿದ್ದೀರಿ ಎಂಬುವುದನ್ನು ಸೂಚಿಸುತ್ತದೆ.
ಸ್ವಪ್ನ ಶಾಸ್ತ್ರ ಏನು ಹೇಳುತ್ತದೆ ಎಂದರೆ ನಮ್ಮಲ್ಲಿರುವ ಭಾವನೆಗಳು ಕನಸಿನ ರೂಪದಲ್ಲಿ ಕಾಣಿಸುವುದು ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ತಪ್ಪು ಮಾಡಿದರೆ ಹೊರ ಜಗತ್ತಿಗೆ ಸರಿ ಎಂದು ತೋರಿಸಲು ಪ್ರಯತ್ನಿಸಿದರೂ ನಾವು ತಪ್ಪು ಮಾಡುತ್ತಿದ್ದೇವೆ ಎಂಬುವುದು ನಮಗೆ ಗೊತ್ತಿರುತ್ತದೆ ಆದ್ದರಿಂದ ನಮ್ಮ ಸೂಕ್ತ ಮನಸ್ಸಿನ ಭಾವನೆಗಳು ಕನಸಿನ ರೀತಿಯಲ್ಲಿ ಕಾಣಬಹುದು.

Leave A Reply

Your email address will not be published.