ತುಲಾ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ತುಲಾ ರಾಶಿ ಡಿಸೆಂಬರ್ ಮಾಸ ಭವಿಷ್ಯ. ನಿಮ್ಮ ಉತ್ಸಾಹ, ಉಲ್ಲಾಸ ಇದೆ ನೋಡಿ ಅದೇ ನಿಮ್ಮನ್ನ ಮುಂದಕ್ಕೆ ಕರ್ಕೊಂಡ್ ಹೋಗುವಂತ ಒಂದು ಸಾಧ್ಯತೆ ಜಾಸ್ತಿ ಇದೆ ಈ ತಿಂಗಳಲ್ಲಿ. ಸ್ನೇಹಿತರೆ ಬಹಳಷ್ಟು ಸಲ ಹೀಗಾಗುತ್ತೆ ಲೈಫಲ್ಲಿ. ಒಂದು ಪ್ಯಾಕೆಟ್ ಇರತ್ತೆ, ಅದು ಕಾಣ್ಸೋದೆ ಒಂತರ, ಆ ಪ್ಯಾಕೆಟ್ ನ ಮೇಲ್ಗಡೆ ಇರೋದೇ ಒಂತರಾ, ಒಳಗಡೆ ಇರೋ ಪ್ರಾಡಕ್ಟೇ ಇನ್ನೊಂದ್ ತರ. ತುಲಾ ರಾಶಿಯವರಿಗೆ ಇದೇ ತರ ಒಂದ್ ಪರಿಸ್ಥಿತಿ ನಿರ್ಮಾಣ ಆಗ್ತಾ ಇದೆ ಲೈಫಲ್ಲಿ. ಹೊರಗಡೆ ಬಹಳ ಅಟ್ರಾಕ್ಟಿವ್

ಆಗಿ ಕಾಣಿಸ್ಬಹುದು, ನೋಡೋ ವ್ಯಕ್ತಿಗಳಿಗೆ ತುಂಬಾ ಚೆನ್ನಾಗಿ ಕಾಣಿಸ್ಬಹುದು, ಬಟ್ ಒಳಗಡೆ ಇರೋದೇ ಬೇರೆ. ಅಂದ್ರೆ ಒಳಗಡೆ ನೀವು ನಿಮ್ಮಷ್ಟಕ್ಕೆ ಸಫರ್ ಆಗ್ತಿದ್ದೀರಾ. ಹೆಚ್ಚಿನ ಜನರ ಜೀವನದಲ್ಲಿ ಇದು ನಡಿತಾ ಇರುವಂತ ಸಾಧ್ಯತೆ ಇದೆ. ನೀವು ಖುಷಿಯಾಗಿದ್ದೀರಾ ಅಂತ ಹೊರ ಜಗತ್ತಿಗೆ ಕಾಣಿಸ್ತಾ ಇರುತ್ತೆ. ಬಟ್ ನಿಮ್ ಪರಿಸ್ಥಿತಿ ಏನಂತ ಅದು ಖಂಡಿತ ನಿಮ್ಮೊಬ್ರಿಗೆ ಗೊತ್ತು.

ಡಿಸೆಂಬರ್ ಅಂದ್ರೆ ಒಂದು ಲಾಸ್ಟ್ ಮಂತ್ ಇದು ವರ್ಷದ್ದು. ಬಹಳ ಹೆಡೇಕ್, ಸಿಕ್ಕಾಪಟ್ಟೆ ಟೆನ್ಶನ್ನು, ಸಣ್ಣ ಕೆಲಸ ಸಂಬಳ ಕಡಿಮೆ ಅನ್ನೋರಿಗೂ ಕೂಡ ಏನೋ ದೊಡ್ಡ ಪ್ರೆಸಿಡೆಂಟು, ಪ್ರೈಮಿನಿಸ್ಟರಿಗೂ ಇರೋ ಅಷ್ಟು ಟೆನ್ಶನ್ ಇದೆ. ಅಂದ್ರೆ ಜೀವನಾನೆ ಹಂಗಾಗ್ಬಿಟ್ಟಿದೆ ನಮ್ದು. ಕೆಲಸ ಇಲ್ಲ ಮನೆಯಲ್ಲಿ ಕೂತಿದ್ದೀನಿ ಅಂದ್ರು ಫ್ಯಾಮಿಲಿ ಪ್ರಾಬ್ಲಮ್ಸ್. ಜೀವನ ಸುಲಭವಾಗಿ ಮಾಡ್ಬೇಕು ಅಂತ ನೀವು ಇಷ್ಟಪಡ್ತೀರಾ. ಪೀಸ್ ಲವಿಂಗ್ ವ್ಯಕ್ತಿಗಳು ನೀವು, ಶಾಂತಿಯನ್ನ ಇಷ್ಟಪಡ್ತೀರಾ, ಸಮಾಧಾನವನ್ನ ಇಷ್ಟಪಡ್ತೀರಾ ಲೈಫಲ್ಲಿ.

ಎಲ್ಲ ಬ್ಯಾಲೆನ್ಸ್ ಆಗಿರಬೇಕು, ಕರೆಕ್ಟ್ ಆಗಿರಬೇಕು, ಲೆಕ್ಕ ಎಲ್ಲೂ ತಪ್ಪಬಾರದು ಅಂತ ನಿಮ್ಮ ಆಲೋಚನೆ ಇರತ್ತೆ. ಬಟ್ ಏನ್ ಮಾಡೋಣ ಹೇಳಿ ನೀರಲ್ಲಿ ಹೋಗಿ ಕೂತ್ಕೊಳ್ಳೋಣ ಅಂದ್ರು ಅದೇ ನೀರಲ್ ಹೋಗ್ ಕೂತ್ಕೊಳ್ಳೋಣ ಅಂದ್ರೆ ನಾನ್ ಹೇಳೋದು ನೀರಲ್ ಹೋಗ್ ಕೂತ್ಕೊಳ್ಳೋಣ ತುಂಬಾ ಹೀಟ್ ಆಗಿದೆ ಬಾಡಿ ಅಂತ ಅಂದ್ಕೊಂಡ್ರೂ ಕೂಡ ನೀರು ಕುತ್ತಿಗೆಗಿಂತ ಮೇಲ್ಗಡೆ ಬಂದ್ಬಿಡತ್ತೆ.

ಎಲ್ ತಲೆವರೆಗೂ ಬಂದು ಮುಳುಗೋಗ್ ಬಿಡ್ತೀನೋ ಅಂತ ಭಯ ಶುರುವಾಗತ್ತೆ ನಿಮಗೆ. ಇದು ನಿಮ್ಮ ಸದ್ಯದ ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೊರಗಡೆ ಬರ್ತೀರಾ? ಬರೋದಿದ್ರೆ ಯಾವಾಗ? ಡಿಸೆಂಬರ್ ತಿಂಗಳಲ್ಲಿ ಆತರ ಕಾಂಟ್ರಿಬ್ಯುಟ್ ಮಾಡುವಂತ ಏನಾದ್ರೂ ಅಂಶಗಳು ಇದ್ದಾವ ನಿಮ್ಮನ್ನ ಹೊರಗಡೆ ತರೋದಕ್ಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇದನ್ನು ಪೂರ್ತಿಯಾಗಿ ಓದಿ.

ಹೊಸ ವರ್ಷಕ್ಕೆ ಕಾಲಿಡೋದಕ್ಕೆ ಮೊದಲು ಬಹಳಷ್ಟು ಸ್ವಾರಸ್ಯಕರವಾದ ವಿಚಾರಗಳು ಇಲ್ಲಿ ನಿಮಗೆ ಸಿಗುತ್ತವೆ. ಪಂಚಮ ಶನಿ ಅಂತ ಹೇಳ್ತ ಬಂದಿದ್ದೇವೆ, ಹಾಗೇನೆ ಈ ಕೇತು ಗ್ರಹ ಕೂಡ ರಾಶಿಯಲ್ಲಿತ್ತು ಈಗ ಹೊರಗಡೆ ಹೋಗಿದೆ. ಬಹಳಷ್ಟು ವ್ಯಕ್ತಿಗಳಿಗೆ ಈ ಕೇತು ಗ್ರಹದ ಒಂದು ಪರಿವರ್ತನೆ ಪಾಸಿಟಿವ್ ಪರಿಣಾಮಗಳನ್ನ ತರೋವಂತ ಒಂದು ಸಾಧ್ಯತೆ ಇದೆ. ಯಾಕೆಂದರೆ ರಾಹು ಷಷ್ಟ ಸ್ಥಾನಕ್ಕೆ ಬಂದಾಗ ಒಂದಷ್ಟು ವಿಚಾರಗಳಲ್ಲಿ ಪ್ರಗತಿ ಆಗ್ಲೇಬೇಕು. ವಿಶೇಷವಾಗಿ ಈ ಶತ್ರುಗಳು ಅನ್ಸ್ಕೊಂಡಂತ ವ್ಯಕ್ತಿಗಳು ಒಂಚೂರು

ಏಟು ತಿನ್ನುವಂತದ್ದು, ಮರ್ಮಾಘಾತ ಆಗತ್ತೆ ಅವರಿಗೆ. ನೀವೇನು ಯುದ್ಧ ಮಾಡಬೇಕಾಗಿರಲ್ಲ ಅವರತ್ರ. ಅವರೇನೇ ನಿಮಗೆ ಕಾಲು ಎಳೆಯೋದು, ತೊಂದರೆ ಕೊಡೋದು, ಕೀಟಲೆ ಮಾಡೋದು ಎಲ್ಲಾ ತರದ ಶತ್ರುಗಳಿರ್ತಾರೆ. ಈಗ ಕೆಲವರು ಕೀಟ್ಲೆ ಮಾಡ್ತಿರ್ತಾರೆ ಸತತವಾಗಿ, ಅಂದ್ರೆ ಅವರ ಮನಸ್ಸಲ್ಲಿ ಒಂತರ ನೆಗೆಟಿವ್ ಇದಿರತ್ತೆ ನೆಗೆಟಿವ್ ಕ್ಯಾರೆಕ್ಟರ್ ಗಳು ಅವು,

ವಿಲನ್ ಅಂತ ಹೇಳಕ್ಕಾಗಲ್ಲ ನೆಗೆಟಿವ್ ಕ್ಯಾರೆಕ್ಟರ್ ಗಳು. ಅವರೇನ್ ಮಾಡ್ತಾರೆ ಅಂದ್ರೆ ನಿಮ್ಮನ್ನ ತುಳಿಯೋದಕ್ಕೆ ಏನೇನ್ ಸಾಧ್ಯಾನೋ ಅದನ್ನೆಲ್ಲ ಪ್ರಯೋಗಿಸ್ತಾ ಇರ್ತಾರೆ. ಒಂತರಾ ಮೆಂಟಲ್ ವಾರ್ ಫೇರ್ ಅಂದ್ರೆ ಮೈಂಡ್ ಗೇಮ್ಸ್. ನಿಮ್ಮನ್ನ ನೀವು ಅವರ ಕಂಟ್ರೋಲ್ ನಲ್ಲಿ ಇರ್ಬೇಕು ಅಥವಾ ನೀವು ತಗ್ಗಿ ಬಗ್ಗಿ ನಡಿಬೇಕು ಅಥವಾ ನಿಮಗೆ ಒಂದು ಆತ್ಮವಿಶ್ವಾಸ ಇರಬಾರದು ಆತರ ಮಾಡೋದಕ್ಕೆ ಪ್ರಯತ್ನ ಮಾಡ್ತಾ ಇರ್ತಾರೆ. ಆ ವ್ಯಕ್ತಿಗಳು ಪೂರ್ತಿಯಾಗಿ ಸದೆಬಡೆಯೋದಕ್ಕೆ ಆಗೋದಿಲ್ಲ ನಿಮ್ಮತ್ರ ಅವರನ್ನ.

ಯಾಕಂದ್ರೆ ಅದು ನೇರಾನೇರ ಯುದ್ಧ ಕೂಡ ಅಲ್ಲ. ಏನು ಕತ್ತಿ, ಮಚ್ಚು, ಲಾಠಿ ತಕೊಂಡು ಹೊಡೆದಾಡುವಂತ ಪರಿಸ್ಥಿತಿ ಅದಲ್ಲ. ಅವರೆಲ್ಲ ಒಳಗಿನವರೇ, ನಿಮಗೆ ಬೇಕಾದವರೇ ಅಥವಾ ನಿಮ್ಮ ರಕ್ತ ಸಂಬಂಧಿಗಳೇ ಆಗಿರ್ತಾರೆ ಬಹಳಷ್ಟು ಸಂದರ್ಭದಲ್ಲಿ. ಆತರದ ವ್ಯಕ್ತಿಗಳು ಸ್ವಲ್ಪ ತಗ್ತಾರೆ ಅಂದ್ರೆ ಅವರ ಶಕ್ತಿ ಸ್ವಲ್ಪ ಕಡಿಮೆ ಆಗತ್ತೆ. ಅದಕ್ಕೆ ನಿದರ್ಶನಗಳು ನಿಮಗೆ ಸಿಗ್ತಾ ಹೋಗ್ತವೆ,

ಅವರ ಶಕ್ತಿ ಕಡಿಮೆ ಆಗಿರೋದಕ್ಕೆ. ಆದರೂ ಅವರ ವಿಚಾರದಲ್ಲಿ ನೀವು ಕೇರ್ಫುಲ್ ಆಗಿರಬೇಕು. ಪಂಚಮಶನಿ ಇರೋದ್ರಿಂದ ರಾಹುಬಲ ಪೂರ್ತಿ ಸಾಕಾಗದೆ ಇರ್ಬಹುದು ಹಾಗೆ ಸಪ್ತಮದಲ್ಲಿ ಇರುವಂತ ಗುರು ಒಂಚೂರು ಶುಭಗಳನ್ನ ನಿಮಗೆ ಉಂಟು ಮಾಡ್ತಾನೆ. ದೃಷ್ಟಿ ರಾಶಿ ಮೇಲೆ ಬಿದ್ದಾಗ ಈಗ ಮೊದಲೇ ಹೇಳಿದೆ ನೋಡಿ ನಿಮಗೆ ಏನೇನ್ ಸಮಸ್ಯೆಗಳಾಗ್ತಾ ಇದ್ದಾವೆ, ಯಾವ್ ತರ ವ್ಯಕ್ತಿಗಳು ನಿಮಗೆ ತೊಂದರೆ ಕೊಡ್ತಾ ಇದ್ದಾರೆ ಅಂತ. ನಿಮ್ಮ ಆಂತರ್ಯದ ಸಮಸ್ಯೆಗಳು ಅಂದ್ರೆ

ಈ ಒಂದು ಯಾವುದೋ ಒಂದು ನೋವಿರಬಹುದು ನಿಮ್ಮ ಮನಸ್ಸಿನಲ್ಲಿ, ಅದನ್ನ ಒಂಚೂರು ಪೂರ್ತಿ ನಿವಾರಣೆಯಾಗದೇ ಇದ್ರೂ ಕೂಡ ಒಂಚೂರು ಒಂದ್ ಮಟ್ಟಕ್ಕೆ ಓಕೆ ಅನ್ನೋ ಒಂದು ಸಂದರ್ಭವನ್ನ ಗುರು ನಿಮಗೆ ತರ್ತಾನೆ. ಹಾಗೇನೆ ಮನೋವೈಜ್ಞಾನಿಕವಾಗಿ ಒಂದಷ್ಟು ವಿಶೇಷವಾದಂತ ವಿಚಾರಗಳಿದ್ದಾವೆ, ವಿಶ್ಲೇಷಣೆಗಳಿದಾವೆ ಮಿಸ್ ಮಾಡದೆ ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಈ ಸತತವಾಗಿ ಕಷ್ಟವನ್ನು ಅನುಭವಿಸ್ತಾ ಇರ್ತೀರಾ, ಒಂದ್ ಸ್ವಲ್ಪ ದುಡ್ ಬರ್ತಾ ಇದೆ ಇವಾಗ, ನಮಗೇನ್ ಅನ್ಸತ್ತೆ ಹೇಳಿ.

ಯಾರೋ ಕೇಳ್ತಾರೆ ಮಕ್ಕಳಿರ್ಬಹುದು, ಇದೊಂದು ತಗೊಳ್ಳಾ ಅಂತ. ಅದೊಂದು ಸಣ್ಣ ಮಕ್ಕಳಾದ್ರೆ ಒಂದ್ ಆಟಿಕೆನೋ ಇನ್ನೇನೋ ಇರ್ಬಹುದು. ದೊಡ್ಡೋರಾದ್ರೆ ಒಂಚೂರು ಜಾಸ್ತಿ ಅಮೌಂಟ್ ನ ವಸ್ತುಗಳಿರ್ಬಹುದು, ಮೊಬೈಲ್ ಫೋನು ಅಥವಾ ಯಾವುದೋ ಒಂದು ಆಪ್ ಬೈ ಮಾಡೋದು. ಮನೆಯವ್ರು ಹಂಗೆ ಮಾಡ್ತಾರೆ ದುಡ್ ಬರ್ತಾ ಇದ್ಯಲ್ಲ ಏನೋ ಒಂದ್ ತಕೋ ಬಿಡೋಣ ಅಂತ.

ಪ್ರಿಡ್ಜ್, ಟಿವಿ, ವಾಷಿಂಗ್ ಮಷೀನ್, ಹೋಂ ಅಪ್ಲೈಯನ್ಸಸ್ ನಿಂದ ಶುರು ಮಾಡಿ ಅವಶ್ಯಕತೆ ಇರೋದಿಲ್ಲ ಫ್ರಿಡ್ಜ್ ಹಳೇ ಪ್ರಿಡ್ಜ್ ಬಿದ್ಕೊಂಡಿದೆ ಅಲ್ಲಿ, ಅಂದ್ರೆ ಚೆನ್ನಾಗೆ ವರ್ಕ್ ಆಗ್ತಿದೆ. ಆದ್ರೂ ಕೂಡ ಪವರ್ ಕಡಿಮೆ ಸಾಕಾಗತ್ತೆ ಹೊಸ ಫ್ರಿಡ್ಜ್ ಗೆ ಅಂತ್ಲೋ ಅಥವಾ ಇದು ಬಹಳ ಹಳೆದಾಗಿದೆ ಮಾಡೆಲ್ ಅಂತ್ಲೋ ಅಥವಾ ತುಂಬಾ ಸೌಂಡ್ ಮಾಡುತ್ತೆ ಅಂತ್ಲೋ ಅಥವಾ ಈಗ ಬರೋ ಪ್ರಿಡ್ಜ್ ಗಳಲ್ಲಿ ತುಂಬಾ ಜಾಗ ಇರತ್ತೆ ಅಂತ್ಲೋ ಯಾವ್ದೋ ಒಂದ್ ಕಾರಣಕ್ಕೆ ನೀವು ಅದನ್ನ ತಕ್ಕೊಳೋದಕ್ಕೆ ಹೊರಡುವಂತ ಚಾನ್ಸಸ್ ಇದೆ.

ಇದೊಂದು ಎಕ್ಸಾಂಪಲ್ ಕೊಡ್ತಿರೋದು ಕಾರ್ ಹಳೆದಾಯ್ತು ಅಂತ್ಲೋ, ಬೈಕ್ ಹಳೆದಾಯ್ತು ಅಂತ್ಲೋ, ಮನೆಗ್ ಪೇಂಟ್ ಮಾಡಿಸಬೇಕು ಅಂತ್ಲೋ ಅಥವಾ ಏನೋ ಒಂದು ಫಂಕ್ಷನ್ ಮಾಡ್ಬೇಕು ಅಂತ್ಲೋ ದುಡ್ಡು ಖಾಲಿಯಾಗತ್ತೆ, ಕೈತಪ್ಪತ್ತೆ ನಿಮ್ದು. ಡಿಸೆಂಬರ್ ಅಂತಲ್ಲ ಈ ಡಿಸೆಂಬರ್, ಜನವರಿ, ಫೆಬ್ರುವರಿ ಈ ತಿಂಗಳುಗಳಲ್ಲಿ ಆ ತರದ ಸಾಧ್ಯತೆಗಳು ಇದ್ದೇ ಇದಾವೆ ಹೆಂಗಿದ್ರೂ.

ಇದು ಯಾವುದೇ ಇನ್ವೆಸ್ಟ್ ಮೆಂಟ್ ಆಗಿರೋದಿಲ್ಲ. ಪೂರ್ತಿಯಾಗಿ ಇನ್ವೆಸ್ಟ್ ಮೆಂಟ್ ಅಲ್ಲ ಅಂತ ಹೇಳೋದಕ್ಕೆ ಆಗೋದಿಲ್ಲ. ಯಾವುದೋ ಒಂದು ಫಂಕ್ಷನ್ನು ಅಥವಾ ಯಾವುದೋ ಒಂದು ಅಂದ್ರೆ ಡೆಡ್ ಇನ್ವೆಸ್ಟ್ ಮೆಂಟ್ ಅಂತೀವಿ ನೋಡಿ. ಸ್ವಲ್ಪಮಟ್ಟಿಗೆ ಡೆಡ್ಡೆ ಅದು ಖುಷಿಗಾಗಿ ಮಾಡುವಂತದ್ದು. ಆ ತರದ ಖರ್ಚುಗಳು ಜಾಸ್ತಿ ಆಗುವ ಸಾಧ್ಯತೆಗಳಿದ್ದಾವೆ. ಮತ್ತೆ ಅದ್ರಲ್ಲಿ ನಿಮಗೆ ಲಂಗು ಲಗಾಮಿರೋದಿಲ್ಲ. ಕೇರ್ಫುಲ್ ಆಗಿರಿ ಈ ವಿಚಾರದ ಬಗ್ಗೆ ಯಾಕಂದ್ರೆ ಕೈ ತಪ್ಪುವಂತ ಸಾಧ್ಯತೆಗಳು ಜಾಸ್ತಿ ಇದ್ದಾವೆ.

ಹಾಗಂತ ಡಿಸೆಂಬರ್ ತಿಂಗಳು ಬಹಳ ಖುಷಿ ತಿಂಗಳಾಗತ್ತೆ ನಿಮ್ಮ ಮಟ್ಟಿಗೆ. ಅಭೂತಪೂರ್ವವಾದ ರೀತಿಯಲ್ಲಿ ಖುಷಿ ಸಿಗತ್ತೆ ಅಂದ್ರೆ ಈ ಒಂದು ಡಿಸೆಂಬರ್ ನೀವು ಎಕ್ಸ್ಪೆಕ್ಟ್ ಮಾಡಿರಲ್ಲ ಈತರ ಇರ್ಬಹುದು ಅಂತ. ಯಾಕಂದ್ರೆ ಈ ತಿಂಗಳಲ್ಲಿ ರಾಶಿಯಲ್ಲೇ ಶುಕ್ರ ಇರ್ತಾನೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ದುಡ್ಡು ಬರೋವಂತದ್ದು, ಕೂಡಿಟ್ಟಿರುವ ದುಡ್ಡು ಬಹಳ ಏರಿಕೆ ಕಾಣುವಂತದ್ದು,

ಶೇರು ಮ್ಯೂಚುಯಲ್ ಫಂಡ್ ಈತರದಲ್ಲಿ ಇಟ್ಟಿದ್ರೆ, ಹಾಗೇನೆ ಸಂಪಾದನೆ ಜಾಸ್ತಿ ಆಗತ್ತೆ. ರಾಶಿಯಿಂದ ದ್ವಿತೀಯ ಭಾಗಕ್ಕೆ ಹೋದಾಗ ಅದು ಕೂಡ ಇಂಪ್ರೂವ್ಮೆಂಟೇ ದುಡ್ಡಿನ ಮಟ್ಟಿಗೆ ಇನ್ನೂ ಒಳ್ಳೆಯದು. ಸೋ ಲಕ್ಷ್ಮಿ ದೇವಿಯ ಅನುಗ್ರಹ ಒಟ್ಟಾರೆಯಾಗಿ ಈ ತಿಂಗಳಲ್ಲಿ ಇದೆ ಅಂತ ಹೇಳ್ಬಹುದು ತುಲಾ ರಾಶಿಯವರಿಗೆ. ಮಹತ್ವದ ಪರಿವರ್ತನೆಗಳಾಗ್ತವೆ ತುಲಾ ರಾಶಿಯವರಿಗೆ ರಾಶಿಯಲ್ಲಿ ಶುಕ್ರ ಇರುವಾಗ. ಮಹತ್ವದ ಪರಿವರ್ತನೆಗಳು ಅಂತಂದ್ರೆ ಏನೇನ್ ಆಗ್ಬಹುದು?

ಅಂದ್ರೆ ಈ ವ್ಯಕ್ತಿಗಳು ಕೆಲಸ ಹುಡುಕ್ತಾ ಇದ್ರೆ ಕೆಲಸ ಸಿಗೋವಂತದ್ದು ಮತ್ತು ಆತ್ಮವಿಶ್ವಾಸದ ಪ್ರದರ್ಶನ ಮಾಡ್ತೀರಾ ನೀವು. ಆತ್ಮವಿಶ್ವಾಸ ಅಂದ್ರೆ ಏನು ಒಂಚೂರ್ ಧೈರ್ಯದಿಂದ ವರ್ತನೆ ಮಾಡ್ತೀರಾ ಮತ್ತೆ ನೀವ್ ಮಾಡೋ ಕೆಲಸಗಳಲ್ಲಿ ನಿಮಗೆ ಒಂಚೂರ್ ತಾಳ್ಮೆ, ಒಂಚೂರು ಸ್ಪೂರ್ತಿ, ಪ್ರೇರಣೆ ಸಿಗತ್ತೆ. ನಗ್ತಾ ನಗ್ತಾ ಕೆಲಸ ಮಾಡೋದಕ್ಕೆ ಸಾಧ್ಯ ಆಗತ್ತೆ. ಎಂಜಾಯ್ ಮಾಡ್ತೀರಾ, ಮಾಡೋ ಕೆಲಸಗಳನ್ನ ಎಂಜಾಯ್ ಮಾಡುವಂತದ್ದು. ಈಗ ನಿಮ್ಮ ಕಸ್ಟಮರ್ ಗಳು ಅಥವಾ ಕ್ಲೈಂಟ್ ಗಳು ಅಂತೀವಿ ಅಥವಾ

ನಿಮ್ಮ ಬಾಸ್ ಇರ್ಬಹುದು ಅವ್ರಿಗೆಲ್ಲಾ ಖುಷಿ ಕೊಡತ್ತೆ. ವಿಶೇಷವಾಗಿ ಶುಕ್ರ ಅನ್ನೋದು ಪ್ರೇರಣೆ ನೀಡುವಂತ ಗ್ರಹ. ತುಲಾ ರಾಶಿ ತುಲಾ ರಾಶಿಯ ವ್ಯಕ್ತಿಗಳಿಗೆ ಶುಕ್ರ ಗ್ರಹ ಬಹಳ ಇಂಪಾರ್ಟೆಂಟ್ ಆಗುತ್ತೆ. ಒಳ್ಳೆ ಪ್ರೇರಣೆಯನ್ನ ಕೊಡುತ್ತ ಅದು. ಸ್ಪೂರ್ತಿಯನ್ನು ಕೊಡತ್ತೆ. ಅದು ನಿಮ್ಮ ಉತ್ಸಾಹ, ಉಲ್ಲಾಸ ಇದೆ ನೋಡಿ ಅದೇ ನಿಮ್ಮನ್ನ ಮುಂದಕ್ಕೆ ಕರ್ಕೊಂಡ್ ಹೋಗುವಂತ ಒಂದ್ ಸಾಧ್ಯತೆ ಜಾಸ್ತಿ ಇದೆ ಈ ತಿಂಗಳಲ್ಲಿ.

ಹಾಗೇನೆ ದ್ವಿತೀಯಕ್ಕೆ ಹೋದಾಗ್ಲೂ ಕೂಡ ಈ ವಿಚಾರಗಳೇ ಕಂಟಿನ್ಯೂ ಆಗ್ತವೆ. ಶುಕ್ರ ದ್ವಿತೀಯದಲ್ಲೂ ಕೂಡ ಬಹಳ ಒಳ್ಳೆಯದನ್ನೇ ತರ್ತಾನೆ. ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಬಹಳ ಪ್ರಗತಿ ಇದೆ ನೋಡಿ 24ರ ನಂತರ ನಿಮಗೆ ಆಶ್ಚರ್ಯ ಆಗತ್ತೆ ಅದನ್ನ ಯೋಚನೆ ಮಾಡಿದ್ರೆ. ಹಾಗಂತ ಅಡ್ಡಿ ಆತಂಕಗಳು ಬರ್ತವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರಬಹುದು,

ಮನೆ ಕಟ್ಟೋದ್ ಇರಬಹುದು, ಕೊಡೋ ಕೊಳ್ಳೋ ವ್ಯವಹಾರಗಳು ಈ ಒಂದು ಇನ್ವೆಸ್ಟ್ ಮೆಂಟಿಗೆ ಸಂಬಂಧಪಟ್ಟ ಕೊಡೋ ಕೊಳ್ಳುವಂತಹ ವ್ಯವಹಾರಗಳು ಅದಕ್ಕೆಲ್ಲ ಅಷ್ಟೊಂದು ಶುಭ ಇಲ್ಲ. ಸ್ವಲ್ಪ ಕುಜ ದ್ವಿತೀಯದಲ್ಲಿರುವಾಗ ಮೊದ್ಲೇ ಅಂದೆ ಖರ್ಚುಗಳು ಜಾಸ್ತಿ ಆಗ್ತವೆ ಅಂತ ತಲೆಬಿಸಿ ಕೂಡ ಸ್ವಲ್ಪ ಜಾಸ್ತಿ ಆಗತ್ತೆ. ದುಡ್ಡಿಗೆ ಸಂಬಂಧಪಟ್ಟ ಯಾವುದರಲ್ಲಿ ಇನ್ವೆಸ್ಟ್ ಮಾಡಬೇಕು ಅದೋ ಇದೋ ಅಂತ. ಅದನ್ ತಕೋಬೇಕಾ ಇದನ್ ತಕೋಬೇಕಾ ಅಂತ ಯೋಚನೆ ಯಾವುದಾದ್ರೂ ವಸ್ತುಗಳನ್ನ ಖರೀದಿ ಮಾಡೋದಿದ್ರೆ,

ಈ ತರದ ಗೊಂದಲಗಳು ಸ್ವಲ್ಪ ಜಾಸ್ತಿ ಆಗೋ ಚಾನ್ಸಸ್ ಇದೆ. ರಿಯಲ್ ಎಸ್ಟೇಟ್ ಅಂತಂದೆ ಸರ್ಕಾರಿ ಕೆಲಸ ಕಾರ್ಯಗಳು ಮತ್ತೆ ಖಾಸಗಿ ಕೆಲಸ ಕಾರ್ಯಗಳಲ್ಲಿ ಇರುವಂತ ವ್ಯಕ್ತಿಗಳಿಗೂ ಕೂಡ ಈ ತಿಂಗಳು ಚೆನ್ನಾಗೇ ಇರುತ್ತೆ. ಯಾಕಂದ್ರೆ ವಿಶೇಷವಾಗಿ ಹದಿನಾರನೇ ತಾರೀಕಿನ ನಂತರ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೇನೆ ನಿಮ್ಮ ಆತ್ಮವಿಶ್ವಾಸ, ಆತ್ಮಸ್ಥೈರ್ಯ ದ್ವಿಗುಣವಾಗುವಂತದ್ದು.

ಒಂದು ಸ್ವಲ್ಪ ಪ್ರಕಾಶ ಸಿಗತ್ತೆ ನಿಮ್ ಜೀವನಕ್ಕೆ. ಮಾನ ಸನ್ಮಾನಗಳು, ಪ್ರಶಂಸೆಗಳು, ಗೌರವಗಳು, ಪ್ರಶಸ್ತಿಗಳು ಈ ತರದ್ದು ಕೂಡ ಸಿಗುವಂತ ಸಾಧ್ಯತೆಗಳಿದ್ದಾವೆ ರವಿ ತೃತೀಯ ಭಾಗಕ್ಕೆ ಬಂದಾಗ 16ನೇ ತಾರೀಕಿಗೆ. ಸೋ ಮೊದ್ಲೇ ಹೇಳ್ದೆ ಈ ಡಿಸೆಂಬರ್ ತಿಂಗಳು ಚೆನ್ನಾಗಿದೆ ಅಂತ ಸೋ ಬೆಸ್ಟ್ ಪಿರಿಯಡ್ ಯಾವುದು ಅಂತ ಕೇಳಿದ್ರೆ 16ನೇ ತಾರೀಕಿನ ನಂತ್ರ ಅಂದ್ರೆ ಎಗ್ಸಾಕ್ಟ್ ಆಗಿ ಇಯರ್ ಎಂಡ್ ಅಂತೀವಿ ಈ 16ನೇ ತಾರೀಕು. ಕ್ರಿಸ್ಮಸ್ ಬರತ್ತೆ ಆಮೇಲೆ, ಆಮೇಲೆ ಹೊಸ ವರ್ಷ ಬರತ್ತೆ ಈ ಟೈಮನ್ನಾ ಇಯರ್ ಎಂಡ್ ಅಂತ ಕನ್ಸಿಡರ್ ಮಾಡೋದು.

ಅಲ್ಲ ನಮ್ಮ ದೃಷ್ಟಿಯಲ್ಲಿ ಇಯರ್ ಬೇರೆ ಇಯರ್ ಎಂಡ್ ಬೇರೆ ಧಾರ್ಮಿಕವಾಗಿ ಹೇಳೋದಾದ್ರೆ, ಪಂಚಾಂಗದ ದೃಷ್ಟಿಯಿಂದ ಹೇಳೋದಾದ್ರೆ. ಆದ್ರೆ ನಾವು ಒಂಥರಾ ಈ ವರ್ಲ್ಡ್ ಕ್ಯಾಲೆಂಡರ್ ಗೆ ಒಗ್ಕೊಂಡ್ ಬಿಟ್ಟಿದ್ದೀವಿ. ಸೋ ಈ ಇಯರ್ ಎಂಡ್ ಚೆನ್ನಾಗಿದೆ ಅಂತ ಹೇಳಬಹುದು ನಿಮ್ಗೆ. ಆ 15 ದಿನಗಳು ಏನಿದ್ದಾವೆ ನೋಡಿ ತೃತೀಯದಲ್ಲಿ ರವಿ ಹೋದಾಗ ಬಹಳಷ್ಟು ಪ್ರಗತಿ ಆಗತ್ತೆ.

ಈ ಕುಜ ಮತ್ತೆ ಬುಧ ಸ್ವಲ್ಪ ನೆಗೆಟಿವ್ ಆಗಿರ್ತಾರೆ ನಿಮಗೆ. ಅಷ್ಟೊಂದು ಪವರನ್ನ ನಿಮಗೆ ಕೊಡದೆ ಹೋಗ್ಬಹುದು. ಚಿಕ್ಕ ಪುಟ್ಟ ಸಮಸ್ಯೆಗಳು, ತಲೆನೋವುಗಳು ಎದುರಾಗಬಹುದು. ಆತ್ಮಸ್ಥೈರ್ಯ ಕುಸಿಯುವಂತ ಬೆಳವಣಿಗೆಗಳನ್ನ ಈ ಗ್ರಹಗಳು ಉಂಟು ಮಾಡಬಹುದು. ವಿಶೇಷವಾಗಿ ಎಂಪ್ಲಾಯಿಗಳ ಮಟ್ಟಿಗೆ ಸಣ್ಣಪುಟ್ಟ ಕಿರಿಕಿರಿಗಳು, ಮಾಡೋ ಕೆಲಸಗಳಲ್ಲಿ ದೋಷಗಳು, ಗ್ರಹಿಕೆಯಲ್ಲಿನ ತಪ್ಪುಗಳು ಅಂದ್ರೆ ಕೆಲಸ ಅವರೇನೋ ಹೇಳಿರ್ತಾರೆ ನೀವೇನೋ ಅಂದ್ಕೊಳ್ಳೋದು,

ಯಾರಿಗೋ ಇಮೇಲ್ ಮಾಡ್ಬೇಕು ಅದನ್ನ ಮರೆತು ಬಿಡೋದ್ ನೀವು ಅಥವಾ ಇಮೇಲ್ ಮಾಡಿರ್ತೀರಾ ಬೌನ್ಸ್ ಆಗಿರತ್ತೆ ಅದು, ನೀವು ಅದನ್ನು ಸರಿಯಾಗಿ ಗಮನಿಸಿ ಇರೋದಿಲ್ಲ ಇ-ಮೇಲ್ ಮಾಡಿದ್ದೀನಿ ಅಂತ ನಿಮ್ಮಷ್ಟಕ್ಕೆ ನೀವು ಅನ್ಕೊಂಡ್ ಬಿಡ್ತೀರಾ. ಯಾರೋ ಒಬ್ಬರು ಮೇಲ್ ಮಾಡಿರ್ತಾರೆ ನಿಮಗೆ ಆ ಮೇಲ್ ಸ್ಪಾಮಿಗೆ ಹೋಗಿರುತ್ತೆ ನಿಮ್ಮ ಗಮನಕ್ಕೆ ಬಂದಿರಲ್ಲ ಅದು, ಆಗ ಕೆಲಸ ಕೆಟ್ಟೋಗತ್ತೆ ನೋಡಿ. ನೀವು ಅವರಿಗೆ ಮೇಲ್ ಬಂದಿಲ್ಲ ಅಂತ ತಿಳಿಸಬೇಕು ತಾನೆ, ಅದನ್ನ ಹೇಳೋದಕ್ಕೆ ನಿಮಗೆ ಮರೆತು ಹೋಗಿರುತ್ತೆ.

ಹೀಗೆ ಗ್ರಹಿಕೆಗಳಲ್ಲಿನ ದೋಷಗಳು ನೀವು ಏನನ್ನೋ ಇನ್ನೇನೋ ಅಂತ ತಿಳ್ಕೊಳ್ಳೋದು. ನಾಯಿಯನ್ನು ಮೊಲ ಅಂತ ತಿಳ್ಕೊಳ್ಳೋದು, ಮುಂದ್ಗಡೆ ಹೋಗ್ಬಿಡೋದು ನಾಯಿ ಬೊಗಳಿದಾಗ ಬೆಚ್ಚಿ ಬೀಳ್ತೀರಾ. ಕಚ್ಚೋ ನಾಯಿ ಆದ್ರಂತೂ ಗ್ರಹಚಾರ ಕೆಟ್ಟೋಯ್ತು ನಿಮ್ದು. ಮೊಲವನ್ನ ನಾಯಿ ಅಂತ ತಿಳ್ಕೊಳ್ಳೋದು ಭಯ ಭಕ್ತಿಯಿಂದ ಹೋಗೋದು. ಕೆಲವರಿಗೆ ನಾಯಿ ಬಗ್ಗೆ ಭಯ ಇರುತ್ತೆ ನೋಡಿ,

ಆಗ ಜನ ನಿಮ್ಮನ್ನ ನೋಡಿ ನಗಾಡೋದು. ಸೋ, ಈ ತರದ ಬೆಳವಣಿಗೆಗಳು ಜಾಸ್ತಿ ಆಗಬಹುದು. ಹುಷಾರಾಗಿರಬೇಕು ಮೊಲ ಯಾವುದು? ನಾಯಿ ಯಾವುದು ಇದನ್ನು ಗುರುತಿಸುವಂತಹ ಒಂದು ತಾರತಮ್ಯ ನೀತಿಯನ್ನ ನೀವು ಅನುಸರಿಸಬೇಕಾಗುತ್ತದೆ ಬಹಳ ಸ್ಪಷ್ಟವಾಗಿ. ಸ್ವಲ್ಪ ಈ ಬುದ್ಧಿಗೆ ಮಂಕು ಕವಿಯುವಂತ ಸಾಧ್ಯತೆ ಇದೆ. ಮಂಕು ಕವಿಯೋದು ಅಂದ್ರೆ ಇನ್ನೇನು ಅಲ್ಲ ಸ್ವಲ್ಪ ಮಸುಕಾಗೋದು ಅಂದ್ರೆ ಕಾಣೋ ವಸ್ತುಗಳು ಮಸುಕಾಗ್ತವೆ ಕಣ್ಣು ಬ್ಲರ್ ಆದಾಗ.

ಅದೇ ತರ ಆಲೋಚನೆಯಲ್ಲಿ ಬರುವಂತ ವಿಚಾರಗಳು ಮಸುಕಾಗೋವಂತದ್ದು ಅಂದ್ರೆ ಸ್ಪಷ್ಟತೆ ಸಿಗದೇ ಇರುವಂತದ್ದು ನಿಮಗೆ. ಅಂದ್ರೆ ದ್ವಂದ್ವ ಅದ್ ಮಾಡಿದ್ರೆ ಸರೀನಾ, ಇದ್ ಮಾಡಿದ್ರೆ ಸರೀನೋ, ಅದು ಮಾಡ್ಬಹುದು ಅನ್ಸುತ್ತೆ, ಇದು ಮಾಡ್ಬಹುದು ಅನ್ಸುತ್ತೆ, ನಾನಿಲ್ಲು ಇರ್ಬಹುದು, ಎಲ್ಲಿಗಾದ್ರೂ ಟೂರಿಗಾದ್ರೂ ಹೋಗ್ಬಹುದು, ಮನೇಲಿ ಕೂತ್ಕೊಂಡು ಕೆಲಸ ಮಾಡ್ಬಹುದು, ಆಫೀಸಿಗೆ ಹೋಗಿ ಕೆಲಸ ಮಾಡ್ಬಹುದು ಏನ್ ಮಾಡ್ಬೇಕು ಅಂತ ಗೊತ್ತಾಗಲ್ಲ.

ದಾರಿಯಲ್ಲಿ ನೋಡಿದ್ರೆ ಆತರ ಟ್ರಾಫಿಕ್ ಮನೇಲಿ ಯಾರೋ ಒಂದು ಏನೋ ಒಂದು ಕೆಲಸ ಹೇಳ್ತಾರೆ ನಮಗೆ. ಈ ತರದ ಟೆನ್ಶನ್, ತಲೆ ಹರಟೆಗಳು. ಇದೆಲ್ಲ ಇದ್ದಿದ್ದೇ ಲೈಫ್ ನಲ್ಲಿ ದೊಡ್ಡ ವಿಚಾರ ಅಂತ ಹೇಳ್ತಾ ಇಲ್ಲ. ಬಟ್ ಈ ಒಂದು ಡಿಸೆಂಬರ್ ಮಟ್ಟಿಗೆ ನಿಮಗೆ ಇದನ್ನೆಲ್ಲ ಎಕ್ಸ್ಪೆಕ್ಟ್ ಮಾಡಬಹುದು. ಸೋ ಈ ತರಹ ಕಿರಿಕಿರಿಗಳಿಂದ ನಿಮಗೆ ಮುಕ್ತಿ ಸಿಗ್ಲಿ, ಕೆಲಸಕ್ಕೆ ಒಳ್ಳೆ ಅವಕಾಶಗಳು ಏರ್ಫಾಟಾಗ್ಲಿ, ಹಾಗೇನೆ ಅದರಿಂದ ಒಳ್ಳೆ ಸಂಪಾದನೆ ಕೂಡ ಆಗ್ಲಿ ಅಂತ ಎಕ್ಸ್ಪೆಕ್ಟ್ ಮಾಡ್ತಾ ಇದನ್ನ ಇಲ್ಲಿಗೆ ಮುಗಿಸ್ತಿದ್ದೇನೆ.

Leave A Reply

Your email address will not be published.