ಈ ರಾಶಿಯವರು ಯಾಕೆ ತುಂಬಾ ಚೆಂದ?

ಈ ಲೇಖನದಲ್ಲಿ ನಾವು ಯಾವ ಆರು ರಾಶಿಯವರಿಗೆ ಹುಟ್ಟಿನಿಂದಲೇ ಕಲೆ ಬಂದಿರುತ್ತದೆ. ಎಂಬುದನ್ನು ನೋಡೋಣ. ಈ ಆರು ರಾಶಿಯವರು ಹುಟ್ಟಿನಿಂದಲೇ ಕಲಾ ಸರಸ್ವತಿಯನ್ನು ಹೊಲಿಸಿಕೊಂಡೇ ಹುಟ್ಟಿರುತ್ತಾರೆ. ಆ ಆರು ರಾಶಿಗಳನ್ನು ನಾವು ಈ ಲೇಖನದಲ್ಲಿ ಪರಿಚಯ ಮಾಡಿಕೊಳ್ಳೋಣ. ಯಾವ ಯಾವ ರಾಶಿಯಲ್ಲಿ ಹುಟ್ಟಿದವರಿಗೆ ಯಾವ ರೀತಿಯ ಕಲೆ ಹುಟ್ಟಿನಿಂದಲೇ ಬಂದಿರುತ್ತದೆ. ಎ೦ದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಎಲ್ಲರಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ.

ಒಂದಲ್ಲ ಒಂದು ವಿಚಾರದಲ್ಲಿ ಪಂಟರಾಗಿರುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು , ಹೇಳಿದ್ದನ್ನು ತಾಳ್ಳೆಯಿಂದ ಕೇಳುವುದು ಕೂಡ ಒಂದು ಕಲೆಯಾಗಿರುತ್ತದೆ. ಕೆಲವೊಬ್ಬರ ಜೀವನದಲ್ಲಿ ಸಮಯ ಸಂದರ್ಭ ಬಂದಾಗ ಅಂತಹ ವಿಶೇಷವಾದ ಕಲೆಗಳು ಹೊರ ಬರುತ್ತದೆ. ಆದರೆ ಈಗ ನಾವು ಹೇಳುವ ಆ ಆರು ರಾಶಿಗಳ ಹೆಸರಲ್ಲಿ ಹುಟ್ಟಿದ ಜನರಲ್ಲಿ ಕಲೆ ಮಾತ್ರನಲ್ಲಿ, ಕಲೆಗೆ ಜೀವಂತಿಕೆಯನ್ನು ತುಂಬುತ್ತಾರೆ. ಈಗ ನಾವು ಆ ಆರು ರಾಶಿಗಳಲ್ಲಿ ಮೊದಲನೆಯದು

” ಮೀನ” ರಾಶಿ.ಮೀನ ರಾಶಿಯಲ್ಲಿ ಹುಟ್ಟಿದ ಜನ ಮೀನಿನ ಹಾಗೆ ಒಂದು ಕಡೆ ನಿಲ್ಲಲ್ಲ. ಒಂದಲ್ಲ ಒಂದು ಕೆಲಸ ಮಾಡುತ್ತಿರುತ್ತಾರೆ. ಅದರ ಜೊತೆಗೆ ಕಲ್ಪನೆ ಮಾಡಿಕೊಳ್ಳುವ ಗುಣ ಇರುತ್ತದೆ. ಇವರು ಒಳ್ಳೆಯ ಮೂಡಿನಲ್ಲಿ ಇರುತ್ತಾರೆ, ಖುಷಿಯಾಗಿರುತ್ತಾರೆ, ಅಂದರೆ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುತ್ತಾರೆ. ಇವರ ಕನಸಿಗೆ ಪಾರವೇ ಇರುವುದಿಲ್ಲ. ಇವರು ಬೇಗ ಭಾವುಕರಾಗುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಂಡು ಹಚ್ಚಿಕೊಳ್ಳುತ್ತಾರೆ. ಈ ತರಹದ ಗುಣ ಇರುವ ಜನರು ಕಲೆ ,

ಸಾಹಿತ್ಯ, ಚಿತ್ರಕಲೆ, ಕಥೆ, ಕವನಗಳನ್ನು ರಚನೆ ಮಾಡುವುದರಲ್ಲಿ ಹೆಚ್ಚು ಆಸಕ್ತಿಯನ್ನು ಕೋರುತ್ತಾರೆ. ಈ ಎಲ್ಲಾ ಕಲೆಗಳು ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ತಮ್ಮ ಭಾವನೆಗಳನ್ನು ಇವರು ಇವುಗಳ ಮೂಲಕ ವ್ಯಕ್ತ ಪಡಿಸುತ್ತಾರೆ. ಮತ್ತೇ ಸಂಗೀತ ಜ್ಞಾನ ತುಂಬಾ ಚೆನ್ನಾಗಿರುತ್ತದೆ. ಯಾವುದೇ ಹಾಡನ್ನು ಇವರು ಹಾಡಿದರೆ ಭಾವ ತುಂಬಿ ಹಾಡುವುದರಿಂದ ಮತ್ತೇ ಮತ್ತೇ ಕೇಳಬೇಕು ಅಂತ ಅನಿಸುತ್ತದೆ.

ಸಂಗೀತ ಕಲಿಯಲೇ ಬೇಕು ಅಂತ ಇರುವುದಿಲ್ಲ. ಕಲಿಯ ದೇ ಹಾಡುವ ತಾಕತ್ತು ಇರುತ್ತದೆ. ಮೀನ ರಾಶಿಯವರು ಅಡುಗೆ ಮಾಡುವುದರಲ್ಲಿ ನಿಪುಣರಾಗಿರುತ್ತಾರೆ. ಈ ಮೀನ ರಾಶಿಗೆ ಅಧಿಪತಿ ಗುರು . ಗುರುವಿನ ಹಾಗೆ ಕಲಿಸೋಕೆ , ಬುದ್ದಿ ಹೇಳೋಕೆ, ಅರ್ಥ ಮಾಡಿಸೋಕೆ , ಸದಾ ಸಿದ್ದರಾಗಿರುತ್ತಾರೆ. ಗುರು ವಾಣಿ ಕಾರಕನೂ ಆಗಿರುವುದರಿಂದ ಇವರನ್ನು ಮಾತಿನಲ್ಲಿ ಗೆಲ್ಲೋಕೆ ಸ್ವಲ್ಪ ಕಷ್ಟ . ಗುಟ್ಟು ಮಾಡೋ ಕಲೆಯನ್ನು ಕೂಡ ಇವರಿಂದ ಕಲಿಯಬಹುದು.

ಈಗ ನಾವು ಎರಡನೇ ರಾಶಿಯ ಬಗ್ಗೆ ತಿಳಿಯೋಣ. ಬುದ್ಧಿಕಾರಕ ಬುಧ ಅಧಿಪತಿಯಾದ “ಮಿಥುನ ” ರಾಶಿಯ ಬಗ್ಗೆ ತಿಳಿದುಕೊಳ್ಳೋಣ ಇವರ ಬಗ್ಗೆ ಹೇಳುವುದಾದರೆ ಇವರು ದ್ವಂದ್ವ ಸ್ವಭಾವದವರಾಗಿರುತ್ತಾರೆ. ಅದು ಸರೀನಾ ,ಇದು ಸರೀನಾ , ಆ ಕೆಲಸ ಮಾಡಬೇಕಾ, ಈ ಕೆಲಸ ಮಾಡಬಾರದು ಹೆಚ್ಚಿನ ವಿಚಾರದಲ್ಲಿ ಅನುಮಾನ ಇದ್ದರೂ ಬಹಳ ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಲ್ಲೇ ಹೋದರೂ ಹೊಂದು ಕೊಳ್ಳುವ ಗುಣ ಇರುತ್ತದೆ.

ಆಶು ಕವನಗಳನ್ನು ಬರೆಯುವುದು, ಆಶು ಕಥೆ ಅಂದರೆ, ತಕ್ಷಣವೇ ಯಾವ ವಿಷಯ ಕೊಟ್ಟರೂ ಬರೆದು ಆ ಸ್ಪರ್ಧೆ ಗೆಲಲ್ಲಿವ ಗುಣ ಇರುತ್ತದೆ. ಕಥೆ , ಕವನ, ನಗೆ, ಬರವಣಿಗೆ , ಬರೆಯಲು ಸಿದ್ಧರಿರುತ್ತಾರೆ. ನಾಲ್ಕು ಸಾಲು ಬರೆದರೂ ಅದರಲ್ಲಿ ಒಬ್ಬರ ಜೀವನ ಬರೆಯುವಷ್ಟು ಸಕ್ತರಾಗಿರುತ್ತಾರೆ. ಈ ರಾಶಿಯವರು ಶಿಕ್ಷಕ ವೃತ್ತಿಯಲ್ಲಿದ್ದರೆ ಎಂತಹ ಕಷ್ಟದ ವಾರಗಳಾದರೂ ಅದನ್ನ ಸರಳವಾಗಿ ಹೇಳಿಕೊಡುವ ಮತ್ತು ಅರ್ಥ ಮಾಡಿಸುವ ಕಲೆ ಇವರಿಗೆ ಇರುತ್ತದೆ. ಅಡುಗೆ, ಕಸೂತಿ, ಭಾಷಣ, ಮಕ್ಕಳನ್ನು ನೋಡಿಕೊಳ್ಳುವುದು, ಒಂದೇ ಸಲ ಎರಡು ಮೂರು ಕೆಲಸ ನಿಭಾಯಿಸುವ ಕಲೆ ಹುಟ್ಟಿನಿಂದಲೇ ಇವರಿಗೆ ಬಂದಿರುತ್ತದೆ.

ಈಗ ನಾವು ಮೂರನೇ ರಾಶಿಯ ಬಗ್ಗೆ ತಿಳಿದುಕೊಳ್ಳೋಣ. ಗುಮ್ಮೋ ಗೂಳಿಯ ಸಂಕೇತನಾದ ” ವೃಷಭ” ರಾಶಿಯ ಬಗ್ಗೆ ತಿಳಿಯೋಣ. ಈ ರಾಶಿಯ ಜನರಿಗೆ ಆಶ್ಚರ್ಯವಾಗಬಹುದು. ಈ ರಾಶಿಗೆ ಅಧಿಪತಿ ಶುಕ್ರ. ಶುಕ್ರನ ಕೃಪೆ ಇದೆ ಅಂದರೆ ಕಲೆ, ಸೌಂದರ್ಯ, ಇಂತಹ ವಿಚಾರಗಳಲ್ಲಿ ಹೆಸರು ಮಾಡವುದರಲ್ಲಿ ಅನುಮಾನ ಇರುವುದಿಲ್ಲಿ ಈ ರಾಶಿಯಲ್ಲಿ ಹುಟ್ಟಿದವರಿಗೆ ಆಸೆ , ಆಕಾಂಕ್ಷೆಗಳು ಜಾಸ್ತಿಯಾಗಿರುತ್ತದೆ. ಸುಂದರವಾಗಿ ಕಾಣಬೇಕು. ಎಲ್ಲರೂ ನಮ್ಮನ್ನೇ ಹೊಗಳಬೇಕು ಅಂತ ಇರುತ್ತದೆ.

ಹಾಗಾಗಿ ಸುಂದವಾಗಿ ಕಾಣೋಕೆ ಅಲಂಕಾರ ಮಾಡಿಕೊಳ್ಳುವ ಕಲೆ ಚೆನ್ನಾಗಿರುತ್ತದೆ. ಇವರು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಚೆನ್ನಾಗಿ ಅಲಂಕಾರ ಮಾಡುವ ಕಲೆ ಈ ರಾಶಿಯವರಲ್ಲಿ ಇರುತ್ತದೆ. ಇವರಲ್ಲಿ ಚಿತ್ರಕಲೆ, ಶಿಲ್ಲ ಕಲೆ, ಕುಂಬಾರಿಕೆ, ಇಂತಹುದರಲ್ಲಿ ಕರಕುಶಲತೆ ಹೆಚ್ಚಾಗಿ ರುತ್ತದೆ. ಹೊಲಿಗೆ, ಮೆಹಂದಿ, ಹಾಕುವುದು, ಈ ರೀತಿಯಾಗಿ ಬಹಳಷ್ಟು ಕಲೆ ಈ ರಾಶಿಯಲ್ಲಿ ಇರುತ್ತದೆ.

ಈಗ ನಾವು ನಾಲ್ಕನೇ ರಾಶಿಯ ಬಗ್ಗೆ ತಿಳಿಯೋಣ . ಈ ರಾಶಿ ನಮ್ಮ ವರನಟ ರಾಜಣ್ಣನವರು ಹುಟ್ಟಿರುವ ರಾಶಿ ” ತುಲಾ” ರಾಶಿ,ಈ ರಾಶಿ ಸಮತೋಲನದ ಬಗ್ಗೆ ಹೇಳುತ್ತದೆ. ಈ ರಾಶಿಗೆ ಶುಕ್ತ ಅಧಿಪತಿಯಾಗಿರುವುದರಿಂದ ಈ ಜನ ಕಲೆ, ಸೌಂದರ್ಯದ ವಿಚಾರದಲ್ಲಿ ಮೇಲಿರುತ್ತಾರೆ. ಇವರು ನ್ಯಾಯದ ಪರ ಒಳ್ಳೆಯ ಕೆಲಸ ಮಾಡುವ ವಿಚಾರದಲ್ಲಿ ಗಮನ ಇರುತ್ತದೆ. ಕಲೆ, ಸಾಹಿತ್ಯ ಸಂಗೀತ ,

ಇಂತಹ ವಿಚಾರ ಹುಟ್ಟಿನಿಂದಲೇ ಬಂದಿರುತ್ತದೆ. ಈ ರಾಶಿಯ ಜನರಿಗೆ ತಾಳ್ಮೆ , ಬುದ್ದಿವಂತಿಕೆ , ಮಾತಲ್ಲೇ ಗೆಲ್ಲೋ ಕಲೆ, ಚಿತ್ರಕಲೆ, ಇಂತಹುದರಲ್ಲಿ ಆಸಕ್ತಿ ಇರುವುದರಿಂದ ಇವರು ಬಣ್ಣಗಳನ್ನು ಇಷ್ಟ ಪಡುತ್ತಾರೆ. ಫೋಟೋಗ್ರಾಫಿ , ಒಳಾಂಗಣ ವಿನ್ಯಾಸ, ಇಂತಹುದರಲ್ಲಿ ಒಳ್ಳೆಯ ಸಾಧನೆ ಮಾಡಬಹುದು. ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದನ್ನು ನಿಭಾಯಿಸುವ ಗುಣ ಈ ರಾಶಿಯವರಿಗೆ ಇರುತ್ತದೆ.

ಈಗ ನಾವು ಐದನೇ ರಾಶಿಯ ಬಗ್ಗೆ ತಿಳಿಯೋಣ ಮಾತ್ರಕಾರಕ ಚಂದ್ರ ಅಧಿಪತಿಯಾಗಿರೋ “ಕಟಕ ” ರಾಶಿಯ ಬಗ್ಗೆ ತಿಳಿಯೋಣ. ಚಂದ್ರ ಎಷ್ಟು ನಿಶ್ಯಬ್ಧನಾಗಿರುತ್ತಾನೋ ಹಾಗೆ ಈ ರಾಶಿಯವರೂ ಕೂಡ ಶ ನಿಶ್ಯಬ್ಧವಾಗಿರುತ್ತಾರೆ. ಆದರೆ ಈ ರಾಶಿಯವರನ್ನು ಕೆಣಕಿದರೆ ಏಡಿಯ ಹಾಗೆನೇ ಎದುರಾಳಿಗೆ ತೊಂದರೆ ಕೊಡದೆ ಬಿಡುವುದಿಲ್ಲ. ಈ ರಾಶಿಯವರಿಗೆ ತಾಯಿಯ ಜೊತೆ ತುಂಬಾ ಭಾವುಕರಾಗಿರುತ್ತಾರೆ. ಈ ವಿಚಾರದಲ್ಲಿ ತುಂಬಾ ಭಾವಕನಾಗಿ ವರ್ತಿಸುತ್ತಾರೆ. ಇದರ ಜೊತೆಗೆ ಕಲೆ, .ಸಂಗೀತ ,

ಸಾಹಿತ್ಯ, ಇದರಲ್ಲಿ ಹೊಲವು ಹೆಚ್ಚು ಇರುತ್ತದೆ. ಚಿತ್ರ ಚೆನ್ನಾಗಿದ್ದರೂ ಆ ಚಿತ್ರದಲ್ಲಿ ತಪ್ಪು ಹುಡುಕುವ ಕಲೆ ಇವರಲ್ಲಿ ಹೆಚ್ಚಾಗಿ ಇರುತ್ತದೆ. ಇವರು ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡುವ ಗುಣ ಇರುತ್ತದೆ. ಇವರಲ್ಲಿ ಚಿತ್ರಕಲೆ, ಪೋಟೋಗ್ರಾಫಿ , ಛಾಯಾಚಿತ್ರ ಬರವಣಿಗೆ, ಅಡುಗೆ, ಹೀಗೆ ಎಲ್ಲ ತರಹದ ಕಲೆಗಳಲ್ಲೂ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ. ಇವರು ಬೇರೆರಿಯ ವರ ಮನಸ್ಸಿನಲ್ಲಿ ಏನು ಇದೆ ಎಂದು ಮತ್ತು, ಉದ್ದೇಶ ತಿಳಿದುಕೊಳ್ಳುವ ಕಲೆ ಇವರಿಗೆ ಇದೆ. ಇವರಿಗೆ ಚಂದ್ರನಿಂದ ಹೊಲಿದಿರುವ ಕಲೆ ಎಂದರೆ ತಾಳ್ಳೆ , ಶಾಂತಿ ಇದನ್ನು ಇವರ ಜೀವದ ಉದ್ದಕ್ಕೂ ಅಳವಡಿಸಿಕೊಳ್ಳುತ್ತಾರೆ.

ಈಗ ನಾವು ಆರನೇ ರಾಶಿಯ ಬಗ್ಗೆ ತಿಳಿಯೋಣ ರಾಜ ಗಾಂಭೀರ್ಯದಿಂದ ಇರೋ ಕಣ್ಣಿನಲ್ಲೇ ಹೆದರಿಸೋ ರಾಶಿಯಾದ “” ಸಿಂಹ” ರಾಶಿಯ ಬಗ್ಗೆ ತಿಳಿಯೋಣ . ಸೂರ್ಯನಿಗೆ ಅಧಿಪತಿಯಾಗಿರುವ ಈ ಸಿಂಹ ರಾಶಿಯ ಜನ ಕೂಡ ಕಲೆ, ಸಾಹಿತ್ಯದ ಕಡೆಗೆ ಆಸಕ್ತಿ ತೋರುತ್ತಾರೆ. ಈ ರಾಶಿಯ ಜನರಲ್ಲಿ ನೋಡೋಕೆ ಉಗ್ರ ಎನಿಸಿದರೂ ಮಗುವಿನ ಮುಗ್ಧತೆ ಕೂಡ ಇರುತ್ತದೆ. ಇವರು ಸ್ವಂತವಾಗಿಯೇ ಕೆಲಸ ಮಾಡುತ್ತಾರೆ.

ಬೇರೆಯವರ ಸಹಾಯ ಪಡೆದುಕೊಳ್ಳುವುದು ಕಡಿಮೆ. ಹಾಗೇ ಸೃಜನಾತ್ಮಕ ಕೆಲಸ ಮಾಡಲು ಮುಂದೆ ಬರುತ್ತಾರೆ. ಕಥೆ, ಕವನ, ಸಂಗೀತ, ಬರವಣಿಗೆ ಇದರಲ್ಲಿ ಹೊಲವು ಜಾಸ್ತಿ ಇರುತ್ತದೆ. ಸ್ಟೇಜ್ ಮೇಲೆ ಆಗಲಿ ಸ್ಟೇಜ್ ಹಿಂದೆ ಕೆಲಸ ಮಾಡಿದರು ಜನರ ಗಮನ ಸೆಳೆಯುತ್ತಾರೆ . ಚಿತ್ರಕಲೆ, ಸಂಗೀತ’. ಅಡುಗೆ , ಬರವಣಿಗೆ, ಎಲ್ಲಾ ಕಲೆಗಳಲ್ಲೂ ಕಲಿಯದೇ ತಮ್ಮನ್ನು ತಾವು ಪ್ರದರ್ಶನ ಮಾಡೋ ಕಲೆ ಇದೆ. ಮತ್ತು ಸಾಮರ್ಥ್ಯ ಇರುತ್ತದೆ. ಕಲೆ ಜೊತೆಗೆ ಕಣ್ಣಲ್ಲೇ ಎದರಿಸೋ ಕಲೆ ಇವರಲ್ಲಿ ಇರುತ್ತದೆ. ಇವರು ಬೇರೆಯವರ ಮೇಲೆ ತಮ್ಮ ನಡತೆ ಹಾಗೆ ಮಾತಿನಿಂದಲೇ ಪ್ರಭಾವ ಬೀರುವ ಗುಣ ಈ ಸಿಂಹ ರಾಶಿಯವರಲ್ಲಿ ಇರುತ್ತದೆ.

Leave a Comment