ತುಪ್ಪದ ಲಾಭಗಳು! ತಿಳಿದರೆ ಆಶ್ಚರ್ಯ

0

ಇವತ್ತಿನ ಲೇಖನದಲ್ಲಿ ತುಪ್ಪದ ಮಹತ್ತ್ವವನ್ನು ತಿಳಿಸಲಾಗಿದೆ. ಬಹಳಷ್ಟು ಜನರು ದಪ್ಪವಾಗುತ್ತೀವಿ, ಕೊಬ್ಬು ಹೆಚ್ಚಾಗುತ್ತದೆ, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಂದು ಎಷ್ಟೋ ಜನರು ಬಿಟ್ಟಿದ್ದಾರೆ ಇದು ಸರಿನೋ ತಪ್ಪೋ ಎಂದು ಈ ಲೇಖನದ ಮೂಲಕ ವಿವರಿಸುತ್ತೇನೆ. ಆಯುರ್ವೇದ ಪ್ರಕಾರ ತುಪ್ಪವನ್ನು ಘೃತವೆಂದು ಕರೆಯುತ್ತಾರೆ. ಘೃತವು ಶೀತವೀರ್ಯ ದ್ರವ್ಯ ಅಂದರೆ ಘೃತಧಿ ಎಂದರೆ ಮೇಧ್ಯ ತುಪ್ಪವೆನ್ನುವುದು ಮೇಧ್ಯರಸಾಯನ ಮೇಧ್ಯ ಎಂದರೆ ಮನಸ್ಸಿಗೆ ಸಂಬಂಧಪಟ್ಟಿರುವುದು

ಬುದ್ಧಿವಂತಿಕೆಗೆ ಸಂಬಂಧಿಸಿರುವುದು ತುಪ್ಪವನ್ನು ಯಾರು ತಿನ್ನುತ್ತಾರೋ ಅವರ ಬುದ್ಧಿ ಚುರುಕಾಗುತ್ತದೆ. ನಮ್ಮ ದೇಹದಲ್ಲಿ ತ್ರಿದೋಷಗಳು ಇವೆ ವಾತ, ಪಿತ್ತ, ಕಫ ನಮ್ಮ ದೇಹದಲ್ಲಿ ಪಿತ್ತ ಹೆಚ್ಚಾದರೆ ತುಪ್ಪವು ಉತ್ತಮ ಔಷಧಿ. ದೇಹದಲ್ಲಿ ಉತ್ಪತ್ತಿಯಾಗಿರುವ ಪಿತ್ತದ ಪ್ರಕೋಪತೆಯನ್ನು ಕಡಿಮೆ ಮಾಡಲು ಈ ಘೃತವನ್ನು ಬಳಸಬಹುದು. ಇದನ್ನು ಬಳಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಪಿತ್ತದಿಂದ ಆಗಿರುವ ಸಮಸ್ಯೆಗಳು ಅಂದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಗಿರಬಹುದು, ಚರ್ಮದ ಸಮಸ್ಯೆ ಇರಬಹುದು, ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಒತ್ತಡ ಹೆಚ್ಚಳ, ಕಣ್ಣಿನ ಸಮಸ್ಯೆ ಇವೆಲ್ಲವೂ ಕೂಡ ಪಿತ್ತ ದೋಷದಿಂದ ಬರುವಂತಹ ಕಾಯಿಲೆಗಳು. ಹಿತಮಿತವಾಗಿ ತುಪ್ಪವನ್ನು ತಿನ್ನುವುದರಿಂದ ಇಂತಹ ಕಾಯಿಲೆಗಳಿಂದ ದೂರವಿರಬಹುದು. ಈ ತುಪ್ಪದಿಂದ ಮನೆಮದ್ದನ್ನು ಮಾಡಿಕೊಳ್ಳಬಹುದು.

ಒಂದು ಕೆಜಿ ತುಪ್ಪ ವನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ ನೀರನ್ನು ಹಾಕಿ 20 ರಿಂದ 30 ಸಲ ಕೈಯಿಂದ ಕಿವಿಚಿಕೊಳ್ಳಿ, ನಂತರ ನೀರನ್ನು ಚೆಲ್ಲಿ ಈ ತರಹದ ವಿಧಾನವನ್ನು ನೂರು ಸಲ ಪ್ರತಿ ಸಲ ನೀರನ್ನು ಹಾಕಿ, ಕಿವಿಚಿ ಚೆಲ್ಲಿ ನಂತರ ತುಪ್ಪವು ಪೇಸ್ಟ್ ಆಕರಾವಾಗುತ್ತದೆ. ಅಂದರೆ ಕ್ರೀಂ ತರಹ ಆಗಿರುತ್ತದೆ. ಇದನ್ನು ಶತ ದೌತ ಘೃತವೆಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ.

ಇದು ತುಟಿ ಬಿರುಕು, ಹಿಮ್ಮಡಿ ಒಡೆತ, ಚರ್ಮದ ಉರಿ, ಅಂಗೈ ಅಂಗಾಲು ಉರಿಯ ಸಮಸ್ಯೆಗೆ ಇದನ್ನು ಬಳಸುವುದರಿಂದ ಪಿತ್ತ ದೋಷವು ಕಡಿಮೆಯಾಗಿ ದೇಹವನ್ನು ತಂಪು ಮಾಡುತ್ತದೆ.
ಮಲಬದ್ಧತೆಯ ಸಮಸ್ಯೆ ಇರುವವರು ಈ ತುಪ್ಪವನ್ನು ಬಳಸಿದರೆ ಮಾತ್ರ ನಿವಾರಣೆಯಾಗುತ್ತದೆ. ಕರುಳಿನಲ್ಲಿ ಲುಬ್ರಿಕೆಂಟ್ ಲೇಯರ್ ಇರುತ್ತದೆ

ಇದು ಫಾರ್ಮೇಷನ್ ಆಗುವುದು ತುಪ್ಪವನ್ನು ಸೇವನೆ ಮಾಡಿದರೆ ಮಾತ್ರ ಸುಲಭವಾಗಿ ಮಲವಿಸರ್ಜನೆ ಮಾಡಲು ಸಹಾಯ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ನ್ನು ಉಂಟುಮಾಡುತ್ತದೆ. ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ತುಪ್ಪವನ್ನು ಯಾವಾಗ, ಎಷ್ಟು, ಹೇಗೆ ತೆಗೆದುಕೊಳ್ಳಬೇಕೆಂದರೆ ಬೆಳಿಗ್ಗೆ ಮತ್ತು ಸಾಯಾಂಕಾಲ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಉತ್ತಮ.

ಊಟದ ಜೊತೆಯಲ್ಲಿ ತೆಗೆದುಕೊಂಡರೂ ತಪ್ಪೇನಿಲ್ಲ. ರಸಾಯನ ರೀತಿನೇ ತೆಗೆದುಕೊಳ್ಳಬೇಕೆಂದು ಬಯಸುವವರು ಒಂದು ಲೋಟ ಹಾಲಿಗೆ ಒಂದು ಸ್ಪೂನ್ ತುಪ್ಪ, ಒಂದು ಚಿಟಿಕಿ ಅರಿಶಿಣ ಹಾಕಿ ಬೆಳಿಗ್ಗೆ ಸಾಯಂಕಾಲ ಮಕ್ಕಳಿಗೆ ಕೊಟ್ಟರೆ ಇದು ಮೇಧ್ಯ ರಸಾಯನವಾಗಿ ಕೆಲಸ ಮಾಡುತ್ತದೆ. ಮಕ್ಕಳಿಗೆ ಬುದ್ಧಿಶಕ್ತಿ ಹೆಚ್ಚುತ್ತದೆ, ನೆನಪಿನ ಶಕ್ತಿಹೆಚ್ಚುತ್ತದೆ, ಹತ್ತಿರ ದೃಷ್ಠಿ,

ದೂರದೃಷ್ಠಿ, ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ. ಹಸುವಿನ ತುಪ್ಪವನ್ನು ನೆರಳಿನಲ್ಲಿ ಕೂತು ಕೆಲಸ ಮಾಡುವವರಿಗೆ ಮಕ್ಕಳಿಗೆ, ಮತ್ತು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವ ರೈತರು, ಕೂಲಿಕಾರ್ಮಿಕರು ಎಮ್ಮೆಯ ತುಪ್ಪವನ್ನು ಬಳಸಿದರೆ ಒಳ್ಳೆಯದು. ನಿಮ್ಮ ದುಡಿಮೆಗೆ ಅನುಸಾರವಾಗಿ ನೀವು ಯಾವ ತುಪ್ಪವನ್ನು ಬಳಸಬೇಕೆಂದು ತಿಳಿದುಕೊಂಡು ಬಳಸಿ.

ತುಪ್ಪವನ್ನು ತಿಂದರೆ ಕೆಲವರಿಗೆ ಗಂಟಲು ಇನ್ಫೆಕ್ಷನ್ ಆಗುತ್ತದೆ, ಕೆಲವರಿಗೆ ಕೆಮ್ಮು ಬರುತ್ತದೆ, ಆದ್ದರಿಂದ ತುಪ್ಪಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಕಾಯಿಸಿ ತುಪ್ಪವನ್ನು ಬಳಸಿದರೆ ಯಾವುದೇ ರೀತಿಯ ತೊಂದರೆಯೂ ಇಲ್ಲ. ನಮ್ಮ ಹಿಂದಿನ ಕಾಲದಿಂದಲೂ ಇದನ್ನು ಬಳಸುತ್ತಾ ಬಂದಿದ್ದಾರೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಇದು ನಮ್ಮ ಭಾರತೀಯ ಪರಂಪರೆಯಲ್ಲಿ ಪಂಚಾಮೃತದಲ್ಲಿ ಬರುವ ಒಂದು ಅಂಶವಾಗಿದೆ.

Leave A Reply

Your email address will not be published.