40/50/60 ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು

0

ನಾವು ಈ ಲೇಖನದಲ್ಲಿ 40/ 50/ 60/ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು ಯಾವುದು ಎಂದು ತಿಳಿಯೋಣ .

40 – 50 – 60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು : – 1 . ನಿಮಗೆ ಬಾಯಾರಿಕೆ ಇಲ್ಲದಿದ್ದರೂ, ಅಥವಾ ಅವಶ್ಯಕತೆ ಇಲ್ಲದಿದ್ದರೂ , ಸಹ ಯಾವಾಗಲೂ ದಿನಕ್ಕೆ ಕನಿಷ್ಠ ಎರಡು ಲೀಟರ್ ಅಂದರೆ ದಿನಕ್ಕೆ 8 ಗ್ಲಾಸ್ ನೀರನ್ನು ಕುಡಿಯಿರಿ . ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನ ಸಮಸ್ಯೆಗಳು ದೇಹದಲ್ಲಿ ನೀರಿನ ಕೊರತೆಯಿಂದಾಗಿಯೇ ಬರುತ್ತದೆ .

2 . ಸಾಧ್ಯವಾದಷ್ಟು ಕೆಲಸವನ್ನು ಮಾಡಿ . ನಡಿಗೆ , ಈಜು ಅಥವಾ ಯಾವುದೇ ರೀತಿಯ ಕ್ರೀಡೆ ಅಂತಹ ದೇಹದ ಚಲನೆ ಇರಬೇಕು .

3 . ಕಡಿಮೆ ತಿನ್ನಬೇಕು , ಹೆಚ್ಚು ತಿನ್ನುವ ಹಂಬಲವನ್ನು ಬಿಡಿ . ಏಕೆಂದರೆ ಅದು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮನ್ನು ವಂಚಿತಗೊಳಿಸಬೇಡಿ , ಆದರೆ ಪ್ರಮಾಣವನ್ನು ಕಡಿಮೆ ಮಾಡಿ . ಪ್ರೋಟೀನ್ ಕಾರ್ಬೋಹೈಡ್ರೈಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ .

4 . ವಾಹನವನ್ನು ಅಗತ್ಯವಿದ್ದರೆ ಮಾತ್ರ ಬಳಸಿ. ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ

5 . ಕೋಪವನ್ನು ಬಿಟ್ಟುಬಿಡಿ, ಚಿಂತಿಸುವುದನ್ನು ನಿಲ್ಲಿಸಿ, ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ, ತೊಂದರೆಯ ಸಂದರ್ಭದಲ್ಲಿ ನಿಮ್ಮನ್ನು ನೀವೇ ಸಮಾಧಾನ ಪಡಿಸಿಕೊಳ್ಳಬೇಕು . ಇಲ್ಲವೆಂದರೆ ಅವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

6 . ಸಕಾರಾತ್ಮಕ ಜನರೊಂದಿಗೆ ಮಾತನಾಡಿ . ಮತ್ತು ಅವರ ಮಾತುಗಳನ್ನು ಆಲಿಸಿ .

7 . ಮೊದಲನೆಯದಾಗಿ ಹಣದ ಮೇಲಿನ ಬಾಂಧವ್ಯವನ್ನು ಬಿಟ್ಟುಬಿಡಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ ನಗು ಮುಖದಿಂದ ಮಾತನಾಡಿ .

8 . ಹಣ, ಸ್ಥಾನ, ಪ್ರತಿಷ್ಠೆ , ಅಧಿಕಾರ, ಸೌಂದರ್ಯ , ಜಾತಿ, ಮತ್ತು ಪ್ರಭಾವ ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತದೆ . ನಮ್ರತೆಯು ಜನರನ್ನು ಹತ್ತಿರ ತರುತ್ತದೆ .

9 . ನಿಮ್ಮ ಕೂದಲು ಬಿಳಿಯಾಗಿ ಇದ್ದರೆ ಅದು ಜೀವನದ ಅಂತ್ಯ ಎಂದರ್ಥವಲ್ಲ .ಆದರೆ ಜೀವನ ಸಾಗರದ ಅನುಭವ ನಿಮಗಿದೆ ಎಂದರ್ಥ . ಇದು ಉತ್ತಮ ಜೀವನಕ್ಕೆ ನಾಂದಿ . ಆಶಾವಾದಿಯಾಗಿ ಇರಿ . ನೆನಪಿನೊಂದಿಗೆ ಬದುಕಿ , ಪ್ರಯಾಣಿಸಿ , ಆನಂದಿಸಿ , ನೆನಪುಗಳನ್ನು ರಚಿಸಿ .

10 . ಪುಟ್ಟ ಮಕ್ಕಳೊಂದಿಗೆ ಪ್ರೀತಿ ಸಹಾನುಭೂತಿಯಿಂದ ಮಾತನಾಡಿ, ವ್ಯಂಗ್ಯವಾಗಿ ಏನನ್ನು ಹೇಳಬೇಡಿ. ನಿಮ್ಮ ಮುಖದಲ್ಲಿ ಪುಟ್ಟ ನಗುವನ್ನು ಇರಿಸಿ , ಎಷ್ಟೇ ದೊಡ್ಡ ಕಷ್ಟ ಇದ್ದರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ . ಕಷ್ಟ ಬಂದಾಗ ಯಾರ ಹತ್ತಿರವಾದರೂ ಸಹಾಯ ಕೇಳುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ, ಯಾಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯ ಇರುತ್ತದೆ. ಆದರೆ ಸಹಾಯದ ಭಾರ ಜೀವನ ಪರ್ಯ೦ತ ಇರುತ್ತದೆ.

Leave A Reply

Your email address will not be published.