ವೃಷಭ ರಾಶಿ ನವೆಂಬರ್ ಮಾಸ ಭವಿಷ್ಯ

0

ನವೆಂಬರ್ ತಿಂಗಳಿನ ವೃಷಭ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಪ್ರಾರಂಭದಿಂದಲೂ ಒಳ್ಳೆಯದೇ ಆಗಿತ್ತೆಂದರೇ ಅದೇ ಮುಂದುವರಿಕೆ ಇರುತ್ತದೆ. ವಿಶೇಷವಾಗಿ ಎಲ್ಲರಿಗೂ ಹಿಂದಿನಿಂದ ಪಿತೂರಿ ಮಾಡುವವರು ಇರುತ್ತಾರೆ ಮತ್ತು ಚಾಡಿ ಹೇಳುವವರು ಇರುತ್ತಾರೆ. ಉದ್ಯೋಗಿಗಳಿಗೆ ಈ ರೀತಿಯ ಜನರಿಂದ ತೊಂದರೆಯಾಗುತ್ತದೆ. ಈ ತಿಂಗಳಿನಲ್ಲಿ ಆ ತರಹದ ಶತೃಗಳು ನಿಮ್ಮಿಂದ ದೂರವಾಗುತ್ತಾರೆ.

ಕೆಲಸ ಕಾರ್ಯಗಳಲ್ಲಿ ಪ್ರಗತಿ ಉಂಟಾಗುವುದು. ಪ್ರಗತಿಯಾಗುತ್ತಿದ್ದರೇ ವೇಗವನ್ನು ಪಡೆದುಕೊಳ್ಳುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ಮತ್ತು ನಿಮ್ಮ ಕ್ಷೇತ್ರ ಯಾವುದೇ ಇರಬಹುದು ನೀವು ಇಟ್ಟುಕೊಂಡಿರುವ ಗುರಿಯನ್ನು ತಲುಪುತ್ತೀರಿ. ಅದಕ್ಕೆ ಪೂರಕವಾಗಿ ಎಲ್ಲಾ ರೀತಿಯಿಂದಲೂ ಸಪೋರ್ಟ್ ಸಿಗುತ್ತದೆ. ಆರಂಭ ಚೆನ್ನಾಗಿ ಇರುತ್ತದೆ. ರಾಹು ನಿಮಗೆ ಒಳ್ಳೆಯದ್ದನ್ನ ಮಾಡುತ್ತಾನೆ.

ಕೇತು ಸ್ವಲ್ಪ ಮಧ್ಯಮ ಫಲವನ್ನು ನೀಡುತ್ತಾನೆ. ರಾಹು ಏಕದಶ ಭಾವದಲ್ಲಿರುವುದರಿಂದ ನಿಗೂಢವಾದ ದುಡ್ಡು ಸಿಗಬಹುದು ಮತ್ತು ನೀವು ಅಂದುಕೊಳ್ಳದ ರೀತಿಯಲ್ಲಿ ನಿಮಗೆ ಸಂಪತ್ತು ಅಥವಾ ದುಡ್ಡು ಸಿಗಬೇಕಾಗಿರುವುದು ನಿಮಗೆ ಸಿಗುತ್ತದೆ. ಕೇತುಗ್ರಹದಿಂದ ಸ್ವಲ್ಪ ಕೆಟ್ಟದ್ದು, ಸ್ವಲ್ಪ ಒಳ್ಳೆಯದ್ದಾಗುತ್ತದೆ. ಅದೇ ತರಹ ಶನಿಗ್ರಹವು ಕೂಡ ಒಂದಷ್ಟು ಕೆಟ್ಟದ್ದು, ಒಂದಷ್ಟು ಒಳ್ಳೆಯದ್ದು ಆಗುತ್ತದೆ.

ಕೆಲಸದಲ್ಲಿ ಹಾರ್ಡ್ ವರ್ಕ್ ಇರುವುದರಿಂದ ಕೆಲಸದಲ್ಲಿ ಒತ್ತಡವೂ ಇರುತ್ತದೆ. ಶನಿ ವಕ್ರತ್ವವಾಗಿ ಇರುತ್ತಾನೆ. ನವೆಂಬರ್ ತಿಂಗಳಿನಲ್ಲಿ ಶನಿ ಗ್ರಹದ ವಕ್ರತ್ವ ಹೋದಾಗ ಸ್ವಲ್ಪ ಒಳ್ಳೆಯದಾಗುತ್ತದೆ. ಕೆಲಸದಲ್ಲಿ ತುಂಬಾನೇ ಸ್ಪರ್ಧೆ ಇರುತ್ತದೆ. ಹೊಸ ಕೆಲಸ ಆದರೇ ಸನ್ನಿವೇಶಗಳನ್ನ ನಿಭಾಯಿಸುವುದು, ಒತ್ತಡಗಳ ನಿಭಾಯಿಸುವುದು, ಕೆಲಸದಲ್ಲಿರುವವರ ವಿಶ್ವಾಸವನ್ನು ಕಾಯ್ದುಕೊಳ್ಳುವುದು,

ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮ ಮೇಲೆ ವಿಶ್ವಾಸವಿಡಬೇಕು, ಒಗ್ಗಟಾಗಿ ಕೆಲಸ ಮಾಡಬೇಕು, ಮೇಲಾಧಿಕಾರಿಗಳು ನಿಮ್ಮ ಮೇಲೆ ಇಟ್ಟಿರುವ ಭರವಸೆಗಳನ್ನು ಉಳಿಸಿಕೊಳ್ಳಬೇಕು, ಇಂತಹ ಜವಾಬ್ದಾರಿಗಳನ್ನ ನಿರ್ವಹಿಸಬೇಕಾಗುತ್ತದೆ. 16ನೇ ತಾರೀಖಿನ ವರೆಗೆ ಕುಜ ಮತ್ತು ರವಿಯು ಬಹಳ ಬಲಿಷ್ಠವಾಗಿರುತ್ತದೆ. ಷಷ್ಠಭಾವದಲ್ಲಿರುವುದರಿಂದ ಬಹಳ ಒಳ್ಳೆಯದಾಗುತ್ತದೆ. ಮತ್ತು ಪಾಸಿಟಿವ್ ಆಗಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಪ್ರಗತಿ ಇದೆ. ರಿಯಲ್ ಎಸ್ಟೇಟ್,

ಮನೆ ಕಟ್ಟುವುದು, ಕಟ್ಟಡಗಳನ್ನು ಕಟ್ಟಲು ಬೇಕಾಗುವ ಸಲಕರಣೆಗಳನ್ನು ಮಾರುವಂತಹವರು, ಯಾವುದೇ ರೀತಿಯ ಹಾರ್ಡ್ ವೇರ್ ಸಾಮಾಗ್ರಿಗಳನ್ನು ಮಾರುವಂತಹವವರು ಇಂತಹವರಿಗೆ ಯಶಸ್ಸು ಸಿಗುತ್ತದೆ. ಎಲ್ಲರಿಗೂ ವ್ಯವಹಾರ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತದೆ. 16 ನೇ ತಾರೀಖು ದಾಂಪತ್ಯ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಬಿರುಕು ಉಂಟಾಗುತ್ತದೆ. ಸಣ್ಣ ಪುಟ್ಟ ವಿಷಯಕ್ಕೆ ವೈಮನಸ್ಸು ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಒಂದು ಕ್ಷಣಕ್ಕೆ ಬಸ್,

ಟ್ರೈನ್ ಮಿಸ್ ಆಗುವುದು, ಕೆಲವೊಂದು ಅವಕಾಶಗಳು ಮಿಸ್ ಆಗುವ ಸಾಧ್ಯತೆ ಇರುವಂತಹದ್ದೆಲ್ಲವೂ ಈ ಮಾಸದಲ್ಲಿ ನಿವಾರಣೆಯಾಗುತ್ತದೆ. ಈ ನವೆಂಬರ್ ಮಾಸವು ಅದೃಷ್ಠದ ಮಾಸವಾಗಿರುವುದರಿಂದ ನಿಮಗೆ ಯಶಸ್ಸು ಸಿಗುತ್ತದೆ. ಬುಧ ಗ್ರಹವು ನಿಮಗೆ ಸಂತೋಷವನ್ನು ಕೊಡುತ್ತಾನೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗುತ್ತದೆ. ಟ್ಯುಟೋರಿಯಲ್ ಗಳು ಹೆಚ್ಚು ನೊಂದಣಿಯಾಗುವಂತದ್ದು,

ಇಂಜಿನಿಯರಿಂಗ್, ಐಟಿ ಕ್ಷೇತ್ರದವರಿಗೆ ಮತ್ತು ಎಲ್ಲರಿಗೂ ಈ ಮಾಸವು ಲಾಭದಾಯಕವಾಗಿಯೇ ಇದೆ. 16ನೇ ತಾರೀಖಿನ ವರೆಗೆ ವಿಶೇಷವಾದ ಯಶಸ್ಸು ಆಮೇಲೇ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಾ ಹೋಗುತ್ತದೆ. ಹೆಣ್ಣು ಮಕ್ಕಳ ವಿಷಯದಲ್ಲಿ ತಪ್ಪು ತಿಳುವಳಿಕೆಗಳು ಹೆಚ್ಚು ಇರುತ್ತದೆ. ಪತಿಯಾಗಿ, ಪತ್ನಿಯಾಗಲೀ ಸಮಯವನ್ನು ಕೊಡಬೇಕಾಗುತ್ತದೆ. ಅಂದರೆ ಪತ್ನಿ ಪತಿಗೆ, ಪತಿಯೂ ಪತ್ನಿಗೆ ಸಮಯವನ್ನು ಕೊಡಬೇಕಾಗುತ್ತದೆ.

Leave A Reply

Your email address will not be published.