ವೃಶ್ಚಿಕ ರಾಶಿ ವರ್ಷ ಭವಿಷ್ಯ 2024

0

ನಾವು ಈ ಲೇಖನದಲ್ಲಿ 2024 ರ ವೃಶ್ಚಿಕ ರಾಶಿಯ ವರ್ಷ ಭವಿಷ್ಯ ಹೇಗೆ ಇದೆ ಎಂದು ತಿಳಿಯೋಣ . ಅವಶ್ಯಕತೆ ಇಲ್ಲದ ತೊಂದರೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಿರುತ್ತದೆ . ಅವರು ತಮ್ಮ ಸಮಯದಿಂದ ತಪ್ಪಿಸಿಕೊಳ್ಳಲು ನಿಮಗೆ ತೊಂದರೆ ಕೊಡುತ್ತಿರುತ್ತಾರೆ . ಹಾಗಾಗಿ ನೀವು ಕೂಡ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಆ ತೊಂದರೆಯಿಂದ ತಪ್ಪಿಸಿ ಕೊಳ್ಳಬೇಕಾಗುತ್ತದೆ . ಇದು ಯಾವ ರೀತಿಯ ತೊಂದರೆ ಎಂದರೆ , ವ್ಯಾಜ್ಯಗಳು , ಕೋರ್ಟು ಕಟ್ಟಲೇ , ಕೈ ಕೈ ಮಿಲಾಯಿಸುವುದು ,

ಈ ತರದ ಗೊಂದಲಗಳಿಂದ ಹೊರಗೆ ಬರಲು ಆಗದಷ್ಟು ಪರಿಸ್ಥಿತಿ ಬಿಗಡಾಯಿಸುತ್ತಾ ಹೋಗುತ್ತದೆ . ಇದನ್ನು ನಮ್ಮ ಅಸ್ತಿತ್ವದ ಪ್ರಶ್ನೆ ಎಂದು ತೆಗೆದುಕೊಳ್ಳಲಾಗುತ್ತದೆ . ಈ ತರಹದ ಕೆಲಸಗಳನ್ನು ಮಾಡಲು ಹೋಗಬಾರದು .ಈ ತರಹದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ನಿಮಗೆ ಒಂದು ಒಳ್ಳೆಯ ಶುಭ ಸುದ್ದಿ ತಿಳಿಯುತ್ತದೆ .ಶತ್ರುಗಳ ಭಾದೆ ಕಡಿಮೆಯಾಗುವುದು . ಬೇಡದ ವಿಚಾರಗಳಿಗೆ ಸಮಯ ವ್ಯರ್ಥವಾಗುತ್ತಿರುತ್ತದೆ . ಆದಾಯದ ವಿಚಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ .

ಇಂತಹ ಸಮಸ್ಯೆಗಳು ಇರುವವರಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ .ಇದರಲ್ಲಿ ದಶ ಭುಕ್ತಿ , ಜಾತಕ ಫಲ , ಗ್ರಹಗಳ ಬಲಾಬಲ , ಹೀಗೆ ಸಾಕಷ್ಟು ವಿಚಾರಗಳು ಇರುತ್ತದೆ .ಮತ್ತು ಎಲ್ಲಾ ವಿಚಾರಗಳ ಪ್ರಭಾವ ಇರುತ್ತದೆ . ತುಂಬಾ ವಿಚಾರಗಳು ನಿಮ್ಮ ಮನಸ್ಸಿಗೆ ಬರುತ್ತದೆ .ನಾವು ನೀಡುವ ಸಲಹೆಗಳಿಂದ ನಿಮಗೆ ಒಳ್ಳೆಯ ವಿಚಾರಗಳು ದೊರೆಯುತ್ತದೆ . ಮೇ ತಿಂಗಳ ನಂತರ ಯಾಕೆ ಬದಲಾವಣೆಯಾಗುತ್ತದೆ ಎಂದರೆ , ಗುರು ಆರನೇ ಮನೆಯಲ್ಲಿರುವಾಗ ಬಹಳಷ್ಟು ಶತ್ರು ಬಾಧೆಯನ್ನು ಕೊಡುವುದು ಸಾಮಾನ್ಯ .

ಏಳನೇ ಮನೆಗೆ ಗುರು ಹೋದಾಗ ಗುರುವಿನ ಪೂರ್ಣ ದೃಷ್ಟಿ ನಿಮ್ಮ ಮೇಲೆ ಇರುತ್ತದೆ .ನಿಮ್ಮ ರಾಶಿಯ ಮೇಲೆ ಇರುತ್ತದೆ . ಮತ್ತೊಂದು ಕಡೆ ಶನಿ ಅಂದರೆ ಅರ್ಧ ಅಷ್ಟಮ ಶನಿ ಇರುತ್ತಾನೆ . ಸ್ವಲ್ಪ ಕಷ್ಟ ಮತ್ತು ಕಿತಾಪತಿ ಇದ್ದೇ ಇರುತ್ತದೆ .ಆದರೂ ಅದರಲ್ಲೇ ಒಂದು ಬೆಂಬಲ ಸಿಗುತ್ತದೆ. ಜೀವನದಲ್ಲಿ ಆಶಾ ಭಾವನೆ ಬೆಳೆಯುವ ಸಾಧ್ಯತೆ ಇರುತ್ತದೆ .ಕೌಟುಂಬಿಕ ಜೀವನ ಸರಿಯಾದ ರೀತಿಯಲ್ಲಿ ಹೋಗುವ ವ್ಯವಸ್ಥೆ ಗುರುವಿನಿಂದ ಆಗುವುದರಿಂದ , ನಿಮ್ಮ ಜೀವನದ ಗುಣಮಟ್ಟದಲ್ಲಿ ಅಥವಾ ವ್ಯಕ್ತಿತ್ವದಲ್ಲಿ ಬೆಳವಣಿಗೆ ಆಗುತ್ತದೆ .

ಖುಷಿ ಹೆಚ್ಚಾಗುತ್ತದೆ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ .ಬಂಧು ಮಿತ್ರರು ನಿಮ್ಮ ಜೊತೆಯಲ್ಲಿ ಇರುತ್ತಾರೆ . ಪತ್ನಿ ಮತ್ತು ಮಕ್ಕಳು ಈ ತರಹದ ಖುಷಿಗಳು ನಿಮ್ಮದು ಆಗುತ್ತದೆ . ಶನಿ ಮತ್ತು ಗುರುವಿನಿಂದ ಒಂದು ಸಮತೋಲನ ಉಂಟಾಗುತ್ತದೆ .ಪರಿಸ್ಥಿತಿಯಲ್ಲಿ ನಕಾರಾತ್ಮಕವಾಗಿ ಇರುತ್ತದೆ .ನೀವು ಬಯಸಿದ ರೀತಿ ನಿಮ್ಮ ಜೀವನ ಇರುವುದಿಲ್ಲ . ಮೇ ತಿಂಗಳ ನಂತರ ಗುರುವಿನ ಆಶೀರ್ವಾದದಿಂದ ಬಹಳಷ್ಟು ಆಗದೇ ಇರುವ ಕೆಲಸಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ .

ವ್ಯಾಪಾರ ವ್ಯವಹಾರಗಳ ಸುಧಾರಣೆ ಆಗುತ್ತದೆ . ರಾಶಿಯಲ್ಲಿ ಗುರು ದೃಷ್ಟಿ ಇರುವಾಗ ಮತ್ತು ರಾಶಿಯಿಂದ ಸಪ್ತಮ ಭಾಗದಲ್ಲಿ ಇರುವಾಗ , ಖುಷಿ ಸಿಗಬೇಕು ಎಂದರೆ, ಹಣ ಸ್ವಲ್ಪ ಕರಗಬೇಕಾಗುತ್ತದೆ . ಒಳ್ಳೆಯ ಕ್ಷೇತ್ರಗಳನ್ನು ವೀಕ್ಷಣೆ ಮಾಡಬೇಕು ಎಂದರೆ, ನಮ್ಮ ಮನಸ್ಸು ಪ್ರಶಾಂತವಾಗಿ ಇರಬೇಕು . ಮತ್ತು ಜೀವನದಲ್ಲಿ ಖುಷಿ ಇರಬೇಕು . ಧಾರ್ಮಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳಬಹುದು .ದಾನ ಧರ್ಮ ಮಾಡುವ ಗುಣ ಇರುತ್ತದೆ .ಬಹಳಷ್ಟು ಜನರಲ್ಲಿ ಮೇ ತಿಂಗಳ ನಂತರ ನಕಾರಾತ್ಮಕ ದಿಕ್ಕಿನಿಂದ ಧನಾತ್ಮಕ ದಿಕ್ಕಿನತ್ತ ಹೋಗುವ ಸಾಧ್ಯತೆ ಇರುತ್ತದೆ .

ಅರ್ಧ ಅಷ್ಟಮ ಶನಿಯ ಕೆಲಸ ಏನು ಅಂದರೆ , ಉದ್ವೇಗ ಉಂಟು ಮಾಡುವ ಕೆಲಸ ಆಗಿರುತ್ತದೆ .ನಷ್ಟ ಆಗುವುದು , ಸಂಬಂಧಗಳಲ್ಲಿ ಬಿಕ್ಕಟ್ಟು ಶುರುವಾಗುವುದು , ಪಾಲುದಾರಿಕೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ .ಹಣಕಾಸಿನ ಕುಂಠಿತ ಸಾಧ್ಯವಾಗುತ್ತದೆ . ಹಣಕಾಸಿನಲ್ಲಿ ತುಂಬಾ ಸಮಸ್ಯೆ ಉಂಟಾಗುವುದಿಲ್ಲ .ಯಾಕೆಂದರೆ ಕೇಂದ್ರದಲ್ಲಿರುವ ಶನಿ ಗ್ರಹದಿಂದ ಒಳ್ಳೆಯ ಪರಿಣಾಮವನ್ನು ನಿರೀಕ್ಷೆ ಮಾಡಬಹುದು .ಆ ಒಳ್ಳೆಯ ಪರಿಣಾಮಗಳು ಏನೆಂದರೆ , ಹಣಕಾಸಿನ ವಿಚಾರದಲ್ಲಿ ತೊಂದರೆ ಬರದೆ ಇರುವುದು .

ಉಳಿತಾಯ ಕಡಿಮೆಯಾಗಬಹುದು , ಕೆಲವೊಂದು ನಷ್ಟಗಳು ಕೂಡ ಆಗಬಹುದು , ಆದರೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳುವ ಸಾಧ್ಯತೆ ಕಡಿಮೆ ಇರುತ್ತದೆ .ಅರ್ಧ 1ಅಷ್ಟಮ ಶನಿ ಎನ್ನುವುದು , ಸಾಡೇ ಸಾತಿ ವಿಚಾರದಷ್ಟು ಗಂಭೀರವಾದ ವಿಚಾರ ಅಲ್ಲ , ಸಮಸ್ಯೆಗಳು ತುಂಬಾ ತೀವ್ರವಾಗಿ ಇರುವುದಿಲ್ಲ . ಆರೋಗ್ಯದಲ್ಲಿ , ಮಾನಸಿಕ ಮಟ್ಟದಲ್ಲಿ , ಹಣಕಾಸಿನ ಸ್ಥಿತಿಯಲ್ಲಿ ,

ಕೆಲವೊಂದು ಪರಿವರ್ತನೆಗಳು ಮತ್ತು ಹಣ ಬಂದರೂ , ಕೂಡ ಕೆಲವೊಂದು ನಕಾರಾತ್ಮಕ ಅಂಶಗಳ ಜೊತೆಗೆ ಗಂಭೀರವಾದ ಪರಿಸ್ಥಿತಿ ಇದಾಗಿರುವುದಿಲ್ಲ .ಗುರುಬಲ ಇರುವುದರಿಂದ ಗುರು ಗ್ರಹದ ಕೃಪೆ ನಿಮ್ಮ ಮೇಲೆ ಇರುತ್ತದೆ .ಮೇ ತಿಂಗಳ ನಂತರ ಬಹಳಷ್ಟು ಒಳ್ಳೆಯ ಸುಧಾರಣೆಯನ್ನು ನಿರೀಕ್ಷೆ ಮಾಡಬಹುದು . ಈ ಸಮಸ್ಯೆಯನ್ನು ಮೂಲದಲ್ಲೇ ಚಿವುಟಿ ಹಾಕಬೇಕು .

ಈ ಸಮಸ್ಯೆ ಮುಂದೆ ತುಂಬಾ ದೊಡ್ಡದಾಗಿ ಬೆಳೆಯುತ್ತದೆ ಎಂದು ನಿಮ್ಮ ಗಮನಕ್ಕೆ ಬಂದಾಗ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ದಾರಿಯನ್ನು ನೋಡಿಕೊಳ್ಳಬೇಕು . ಎರಡುವರೆ ವರ್ಷ ಅರ್ಧ ಅಷ್ಟಮ ಶನಿ ಇದ್ದ ಕಾರಣ ಈಗ ಮುಂದೆ ಬರುವುದು ಪಂಚಮ ಶನಿ . ಯಾವುದೇ ಧೀರ್ಘ ಸಮಸ್ಯೆ ಆಗದೆ ಇರುವ ತರ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು . ಯಾವುದೇ ಒಂದು ಕೆಲಸ ಮುಂದುವರೆದುಕೊಂಡು ಹೋಗಬೇಕು ಅಂದರೆ , ನೀವು ಹಠ ಮಾಡಿ ಆ ಕೆಲಸ ಮುಂದುವರಿಸಬೇಕು .

ಇಲ್ಲದಿದ್ದರೆ ಆ ಕೆಲಸ ಮುಂದುವರೆಯಲು ಸಾಧ್ಯವಾಗುವುದಿಲ್ಲ .ನಿಮ್ಮ ಜೀವನವನ್ನು ಸರಳವಾಗಿ ತೆಗೆದು ಕೊಳ್ಳುವದರಿಂದ , ಮುಂದೆ ಅದು ಬಹಳ ಕಷ್ಟಕ್ಕೆ ಸಾಧ್ಯ ಮಾಡಿಕೊಡುತ್ತದೆ . ಅರ್ಧ ಭಾಗ ಅದೃಷ್ಟ ನಮ್ಮನ್ನು ಕಾಪಾಡುವುದು ಆದರೆ , ಇನ್ನರ್ಧ ಭಾಗ ನಮ್ಮ ಪ್ರಯತ್ನ ಆಗಿರಬೇಕು . ಇವೆರಡೂ ಸೇರಿ ಜೀವನದಲ್ಲಿ ಒಂದು ದಾರಿ ರೂಪುಗೊಳ್ಳುವಂತೆ ಮಾಡುತ್ತದೆ . ಆದರೆ ನಾವು ಒಂದಲ್ಲ ಒಂದು ರೀತಿಯಲ್ಲಿ ಸತತವಾಗಿ ಪ್ರಯತ್ನ ಮಾಡುತ್ತಿರಬೇಕು .

ನಿರೀಕ್ಷೆಗೂ ಮೀರಿದ ತಪ್ಪನ್ನು ನಾವು ಮಾಡಬಾರದು .ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ . ದುಡುಕದೆ ಆಲೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ . ಮನೆಗೆ ಬೇಕಾದ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಬೇಕಾದರೆ ಆತುರದಿಂದ ಖರೀದಿಸಬಾರದು ಯೋಚನೆ ಮಾಡಿ ತೆಗೆದುಕೊಳ್ಳಬೇಕು . ನಿಮ್ಮ ಮಾನಸಿಕ ಒತ್ತಡದಿಂದ ನಿಮ್ಮ ಮನೆಯವರನ್ನ ಮತ್ತೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದೇ ಇರಬಹುದು. ವೈ ಮನಸ್ಸುಗಳಿಗೆ ದಾರಿ ಮಾಡಿಕೊಡುವುದು .

ಎಲ್ಲರ ಮೇಲೆ ರೇಗಾಡುವುದು ಅಥವಾ ಕಿರುಚಾಡುವುದು . ಇದರಿಂದ ಸಂಬಂಧಗಳ ಹಾದಿ ತಪ್ಪಿಸಬಹುದು . ಆದ್ದರಿಂದ ಎಚ್ಚರಿಕೆಯಿಂದ ಇರಬೇಕು .ಚತುರ್ಥದ ಭಾಗದಲ್ಲಿ ಶನಿ ಇದ್ದಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ .ಯಾಕೆಂದರೆ ಕೆಟ್ಟ ಸಮಸ್ಯೆಗಳ ಬಗ್ಗೆ ಪದೇ ಪದೇ ಆಲೋಚನೆಗಳು ನಿಮ್ಮ ತಲೆಯಲ್ಲಿ ಬರುತ್ತಿರುತ್ತದೆ ..ಈ ಸಮಯದಲ್ಲಿ ನಿಮ್ಮಲ್ಲಿ ಧೈರ್ಯ ಕೂಡ ಕಡಿಮೆಯಾಗುತ್ತದೆ .

ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನೀವು ತಜ್ಞರ ಬಳಿ ಅಥವಾ ನಿಮ್ಮ ಸ್ನೇಹಿತರ ಬಳಿ ಸಲಹೆಯನ್ನು ಪಡೆದುಕೊಳ್ಳಬೇಕಾಗುತ್ತದೆ . ಅವರಿಂದ ನೀವು ಪ್ರೇರಣೆಯನ್ನು ಸತತವಾಗಿ ಪಡೆದುಕೊಳ್ಳುತ್ತಿರಬೇಕು . ಇದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ . ಗುರುಬಲ ಕೂಡ ಇರುತ್ತದೆ ಮತ್ತು ಗುರುವಿನ ಅನುಗ್ರಹ ಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ .ಯಾವುದೇ ಒಂದು ಶುಭ ಕಾರ್ಯಗಳಿಗೆ ಒಳ್ಳೆಯ ಸಮಯ ವೃಶ್ಚಿಕ ರಾಶಿಯವರಿಗೆ ಆಗಿರುತ್ತದೆ ಎಂದು ಹೇಳಬಹುದು .

Leave A Reply

Your email address will not be published.