ಧನು ರಾಶಿ ವರ್ಷ ಭವಿಷ್ಯ

ನಾವು ಈ ಲೇಖನದಲ್ಲಿ ಧನುಸ್ಸು ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ.
ಇಲ್ಲಿ ಬರುವ ವಿಷಯಗಳನ್ನು ಸಾಕಷ್ಟು ರೀತಿ ಅನ್ವೇಷಣೆ ಮಾಡಿ ಹೇಳಲಾಗುತ್ತದೆ .ಇಲ್ಲಿ ಒಂದು ವರ್ಷಕ್ಕೆ ಅನ್ವಯಿಸುವ ವಿಷಯಗಳನ್ನು ಹೇಳಲಾಗುತ್ತದೆ .ಮತ್ತು ಸೂಕ್ತವಾದ ಸಲಹೆಗಳನ್ನು ಕೂಡ ಕೊಡಲಾಗುತ್ತದೆ . ಪಂಚಮದಲ್ಲಿ ಇರುವ ಗುರು ಬಹಳಷ್ಟು ಶುಭ ವಿಚಾರಗಳನ್ನು ತಂದುಕೊಡುತ್ತದೆ . ಧನಸ್ಸು ರಾಶಿಯ ವ್ಯಕ್ತಿಗಳ ಪೂರ್ವ ಪುಣ್ಯ ಸ್ಥಾನವನ್ನು ಬಲಿಷ್ಠವಾಗಿ ಮಾಡಿರುತ್ತದೆ .

ಅಂದರೆ ಜನ್ಮಾಂತರದ ಅವಧಿಯಲ್ಲಿ ಯಾವುದಾದರೂ ಒಳ್ಳೆ ಕಾರ್ಯ ನಡೆಯುತ್ತಿದ್ದರೆ , ಅಂದರೆ ಯಾರಿಗೋ ಸಹಾಯ ಮಾಡುವುದು ಪುಣ್ಯಕರವಾಗಿ ಇರುತ್ತದೆ . ನೀವು ಯಾವುದೇ ಕೆಲಸವನ್ನು ಮಾಡಬೇಕಾದರೂ , ಒಂದು ರೀತಿಯ ಪ್ರೇರಣೆ ನಿಮಗೆ ಬೇಕಾಗುತ್ತದೆ . ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದರೂ ಪ್ರೇರಣೆ ಬೇಕಾಗುತ್ತದೆ . ಅಂದರೆ ನಾವು ಲಾಭದ ಉದ್ದೇಶ ಇಟ್ಟುಕೊಂಡು ಒಂದು ಒಳ್ಳೆಯ ಕೆಲಸವನ್ನು ಮಾಡುತ್ತೇವೆ . ಮನುಷ್ಯನ ಸ್ವಭಾವವೇ ಇದಾಗಿರುತ್ತದೆ .

ಅಂದರೆ ನಮ್ಮ ಸುತ್ತ ನಾವೇ ಸುತ್ತುವುದು . ಒಂದು ವೇಳೆ ಈ ತರಹದ ಕೆಲಸ ನೀವು ಮಾಡಿದ್ದರೆ , ಜನ್ಮಾಂತರದಲ್ಲಿ ಇರುವ ಅಥವಾ ಈ ಜನ್ಮದಲ್ಲಿ ಇರಬಹುದು ಅದನ್ನು ಅನುಭವಿಸುವ ಸಮಯ ಬಂದಾಗ , ಪೂರ್ವ ಪುಣ್ಯಗಳ ಸ್ಥಾನ ಬಲವಾಗುತ್ತದೆ . ಒಂದು ಗಿಡಕ್ಕೆ ನೀರು ಗೊಬ್ಬರ ಹಾಕಿ ಬೆಳೆಸಿರುತ್ತೀರಾ , ಆದರೆ ಈಗ ಇದು ಫಲ ಕೊಡುವ ಸಮಯವಾಗಿರುತ್ತದೆ .ಸಾಡೇಸಾತಿ ನಡೆಯುವ ಸಮಯದಲ್ಲಿ ಬಹಳ ಕಷ್ಟ ಅನುಭವಿಸಿರುತ್ತೀರಾ .ಈಗ ಬದಲಾವಣೆಯಾಗುವ ಸಮಯ ಬಂದಿರುತ್ತದೆ .

ಅಂದರೆ ಇದನ್ನು ನೀವು ಗುರುತಿಸಿ ತೃಪ್ತಿ ಪಡಬೇಕು . ಆದರೆ ಅಷ್ಟು ಸುಲಭವಾಗಿ ತೃಪ್ತಿ ಪಟ್ಟುಕೊಳ್ಳಲು ಕೆಲವಷ್ಟು ಜನರಿಗೆ ಸಾಧ್ಯವಾಗುವುದಿಲ್ಲ . ಅದಕ್ಕೆ ಒಂದು ಕಾರಣ ಇದೆ .ಈ ಗೊಂದಲದಿಂದ ಹೊರಗಡೆ ಬರಲು ಈ ಸಮಯದಲ್ಲಿ ನಿಮಗೆ ತುಂಬಾ ಸಹಾಯವಾಗುತ್ತದೆ .ಶನಿ ಗ್ರಹಕ್ಕೆ ಉದ್ಯೋಗ ಕಾರಕ ಎಂದು ಕರೆಯಲಾಗುತ್ತದೆ .ಬಹಳಷ್ಟು ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಉದ್ಯೋಗ ಕಳೆದು ಕೊಂಡಿರುವವರಿಗೆ ಮತ್ತು ಉದ್ಯೋಗ ಹುಡುಕುವವರಿಗೆ ,

ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ . ಪ್ರಯತ್ನ ಬಿಡದೆ ಮುಂದುವರಿಸಿ ಕೊಂಡು ಹೋಗಬೇಕು . ಈ ರಾಶಿಯವರು ವಯಸ್ಸಾದ ಕಾಲದವರೆಗೂ ಪ್ರಯತ್ನ ಅನ್ನುವುದನ್ನು ಬಿಡುವುದಿಲ್ಲ. ಇದನ್ನು ಮುಂದುವರಿಸುತ್ತಾ
ಇರುತ್ತಾರೆ . ಕೆಲಸ ಅನ್ನೋದು ನಮ್ಮ ಗುರುತನ್ನು ತಂದು ಕೊಡುತ್ತದೆ . ನಮ್ಮ ಒಳ್ಳೆಯ ಸಮಯವನ್ನು ಮನೆಯವರ ಜೊತೆ , ಕುಟುಂಬದವರ ಜೊತೆ , ಮಕ್ಕಳ ಜೊತೆ ಕಳೆಯಬೇಕಾದ ಸಮಯವನ್ನು ನಾವು ಕೆಲಸದಲ್ಲಿಯೇ ಕಳೆದಿರುತ್ತೇವೆ . ಕೆಲಸದಲ್ಲಿ ಮುಂದೆ ಬರಬೇಕು ಅನ್ನುವ ಕಾರಣದಿಂದ ನಮ್ಮ ಅಮೂಲ್ಯವಾದ ಸಮಯವನ್ನು ಕಳೆದು ಕೊಂಡಿರುತ್ತೇವೆ .

ಈ ಶನಿ ದೇವರ ಅನುಗ್ರಹದಿಂದ ನಿಮಗೆ ಕೆಲಸದಲ್ಲಿ ಶ್ರದ್ದೆ ಎನ್ನುವುದು ಮೊದಲೇ ಬಂದಿರುತ್ತದೆ . ಶನಿ ಮತ್ತು ಗುರು ಇವರಿಬ್ಬರು ಸೇರಿ ನಿಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಸಾಧ್ಯ ಆಗುತ್ತದೆ. ಮತ್ತು ಇದು ಮುಂದುವರೆಯುತ್ತದೆ .ಎಲ್ಲಾ ಗ್ರಹಗಳು ಈ ವರ್ಷದಲ್ಲಿ ನಿಮಗೆ ಕೊಡುವುದೇ ಇರುತ್ತದೆ . ಆದರೆ ಅದನ್ನು ನೀವು ಗುರುತಿಸಬೇಕು ಅಷ್ಟೇ. ಹಾಗೆ ಯಾವುದೇ ಒಂದು ಕ್ಷೇತ್ರದಲ್ಲಿ ತಜ್ಞರು ಅಥವಾ ಸಿದ್ದರು ಅಂತ ಕರೆಸಿಕೊಳ್ಳುವ ವ್ಯಕ್ತಿಗಳು ಗೌರವಾನ್ವಿತರು ಆಗಿರುತ್ತಾರೆ .

ಇಂಥವರು ಯಾವುದೇ ಒಂದು ವಿಚಾರಗಳನ್ನು ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ .ಕೆಲಸದಲ್ಲಿ ಅಥವಾ ವ್ಯವಹಾರಗಳಲ್ಲಿ ನಿಮಗೆ ಸಹಾಯ ಮಾಡುವವರು ಆಗಿರುತ್ತಾರೆ . ಇಂತಹ ವ್ಯಕ್ತಿಗಳ ಜೊತೆ ನಿಮ್ಮ ಸ್ನೇಹ ಬೆಳೆಯುತ್ತದೆ .ಮಹಾನ್ ವ್ಯಕ್ತಿಗಳಿಂದ ನಿಮಗೆ ಸಹಕಾರ ದೊರೆಯಲಿದೆ .ಜೀವನಕ್ಕೆ ಒಂದು ರೀತಿಯ ಬೇರೇ ಆಯಾಮವನ್ನು ಕೊಡುತ್ತದೆ .ಇದರಿಂದ ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸಲು ತುಂಬಾ ಸಹಾಯವಾಗುತ್ತದೆ . ಒಂದು ಸಲಹೆ ಎನ್ನುವುದು ನಿಮ್ಮ ಜೀವನದಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ .

ಯಾರಾದರೂ ಒಂದು ಸಲಹೆಯನ್ನು ಕೊಟ್ಟರೆ ಅದಕ್ಕೆ ತುಂಬಾ ಮಹತ್ವ ಕೊಟ್ಟು , ನಿಮ್ಮ ಜೀವನದಲ್ಲಿ ಪಾಲನೆ ಮಾಡುವುದರಿಂದ ನಿಮ್ಮ ಪ್ರಗತಿ ಉತ್ತುಂಗಕ್ಕೆ ಏರುತ್ತದೆ . ಗುರುವಿನಿಂದ ಸಿಗುವ ಆಶೀರ್ವಾದ ಪಡೆದು ಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಪಾಠವನ್ನು ಕಲಿಯಬಹುದು. ಉಳಿತಾಯ ಮಾಡುವುದನ್ನು ಕಲಿಯಬೇಕು . ಇದರಿಂದ ತಿಳಿದುಕೊಳ್ಳುವುದು ಇದ್ದರೆ , ಬದುಕಿಗೆ ಇದನ್ನು ಉಪಯೋಗಿಸಿಕೊಂಡು ಊರುಗೋಲಿನ ಹಾಗೆ ಬಳಸಿಕೊಳ್ಳಬೇಕು .

ನೀವು ಮೇ ತಿಂಗಳು ಕಳೆದ ನಂತರ ಗುರು ಗ್ರಹ ನಿಮಗೆ ನಕಾರಾತ್ಮಕವಾಗಿ ಆಗುತ್ತದೆ . ಗುರು ಗ್ರಹ ಆರನೇ ಮನೆಗೆ ಹೋದಾಗ ಬರುವಂತಹ ವಿಶೇಷವಾಗಿ ಶತ್ರು ಭಾದೆ ಮತ್ತು ಆಸ್ತಿ ಪಾಸ್ತಿಯ ವಿಚಾರದಲ್ಲಿ ಸಣ್ಣ ಪುಟ್ಟ ನಷ್ಟಗಳು ಉಂಟಾಗಬಹುದು .ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಬಹುದು . ಸ್ಪಷ್ಟವಾಗಿ ಹೇಳುವುದಾದರೆ , ಶನಿ ಗ್ರಹದ ಅನುಗ್ರಹ ಮುಂದುವರೆಯುತ್ತದೆ . ನೀವು ಮುಂದೆ ಇನ್ನೂ ಒಂದು ವರ್ಷದವರೆಗೆ ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಹೋಗುತ್ತದೆ .

ಗುರುಬಲ ಕಡಿಮೆಯಾದರೂ , ನಿಮಗೆ ಶನಿ ಬೆಲೆ ಇದ್ದೇ ಇರುತ್ತದೆ . ಸಿಗುವಂತಹ ಇನ್ನೊಂದು ಬಲ ಎಂದರೆ ಕೇತು ಗ್ರಹ . ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಹಣಕಾಸಿನ ಸ್ಥಿತಿ ಬಹಳ ಭದ್ರವಾಗಿ ಇರುವ ಒಂದು ವ್ಯವಸ್ಥೆಯನ್ನು ನಿಮಗೆ ಕೇತು ಗ್ರಹ ಮಾಡಿಕೊಡುತ್ತದೆ . ಆಸ್ತಿ ಸೊತ್ತು ಇಂತಹ ವಿಷಯದಲ್ಲಿ ನಿಮಗೆ ಒಳ್ಳೆಯ ಪ್ರಗತಿ ಆಗುತ್ತದೆ . ರಾಶಿ ಫಲದ ದೃಷ್ಟಿಯಿಂದ ಹೇಳುವುದಾದರೆ ಗಮನಾರ್ಹವಾದ ಹಿನ್ನಡೆ ಬರುವುದಿಲ್ಲ . ಇಷ್ಟೆಲ್ಲಾ ಒಳ್ಳೆಯ ವಿಚಾರಗಳು ಇದ್ದರೂ ,

ನಿಮ್ಮ ಮನಸ್ಸು ನಕಾರಾತ್ಮಕ ವಿಚಾರದ ಕಡೆ ವಾಲುತ್ತಿರುತ್ತದೆ . ಒಳ್ಳೆಯ ವಿಚಾರವನ್ನು ಗುರುತಿಸುವುದಕ್ಕೆ ಮತ್ತು ತೃಪ್ತಿ ಪಡುವುದಕ್ಕೆ ನಿಮ್ಮ ಕೈಯಲ್ಲಿ ಆಗುತ್ತಿರುವುದಿಲ್ಲ . ಒಳ್ಳೆಯ ವಿಚಾರಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ .ವಿಶೇಷವಾಗಿ ಮೂಲಾ ನಕ್ಷತ್ರ ಇರುವವರಿಗೆ ಸಮಸ್ಯೆಗಳು ಇರುತ್ತವೆ . ಈ ನಕ್ಷತ್ರದವರು ಧನಾತ್ಮಕವಾಗಿ ಯೋಚನೆ ಮಾಡುವುದು ತುಂಬಾ ಕಡಿಮೆ ಇರುತ್ತದೆ. ಕಷ್ಟಗಳು ಇರುತ್ತದೆ ಮತ್ತು ತುಂಬಾ ಜನರು ಕಷ್ಟಗಳನ್ನು ತಮ್ಮ ಮೈ ಮೇಲೆ ಎಳೆದು ಕೊಳ್ಳುತ್ತಾರೆ .

ಹಾಗೆಯೇ ಜಾತಕ ಕೂಡ ತುಂಬಾ ಮುಖ್ಯವಾಗುತ್ತದೆ .ಜಾತಕದಲ್ಲಿ ನಕಾರಾತ್ಮಕ ವಿಚಾರಗಳು ಇದ್ದರೆ, ರಾಶಿ ಫಲದಲ್ಲಿ ಏನೇ ಒಳ್ಳೆಯದು ಆದರೂ , ಅದು ಸಾಧ್ಯವಾಗದೇ ಇರಬಹುದು .ನಿಗೂಢವಾದ ಶಕ್ತಿ ನಿಮ್ಮ ನಕಾರಾತ್ಮಕ ವಿಚಾರದ ಕಡೆ ತೆಗೆದುಕೊಂಡು ಹೋಗುತ್ತದೆ . ಸುಪ್ತ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ರಾಶಿಯಲ್ಲಿ ನಾಲ್ಕನೇ ಭಾವದಲ್ಲಿ ರಾಹು ಇರುತ್ತದೆ .ಇದು ತುಂಬಾ ಮಟ್ಟಿಗೆ ನಕಾರಾತ್ಮಕ ವಿಚಾರದ ಕಡೆ ಎಳೆಯುತ್ತಿರುತ್ತದೆ .

ನೀವೇ ಬಲವಂತವಾಗಿ ಧನಾತ್ಮಕ ಅಥವಾ ಒಳ್ಳೆಯ ವಿಚಾರದ ಕಡೆ ಹೋಗಬೇಕು .ಇದನ್ನು ನೀವೇ ಗುರುತಿಸಬೇಕು .ಆತ್ಮವಿಶ್ವಾಸ ಕಡಿಮೆ ಇದ್ದಾಗ , ನಮ್ಮ ಜೊತೆ ದೇವರು ಇದ್ದಾನೆ ಅವನು ಕಾಪಾಡುತ್ತಾನೆ ಎಂಬ ಭರವಸೆ ಇಟ್ಟುಕೊಳ್ಳಬೇಕು .ಈ ತರಹ ಒಂದಲ್ಲ ಒಂದು ಧನಾತ್ಮಕವಾಗಿ ಯೋಚನೆ ಮಾಡುತ್ತಾ ಹೋಗಬೇಕು . ತನ್ನಿಂದ ತಾನೇ ಯಾವುದೇ ವಿಚಾರಗಳು ಆಗುವುದಿಲ್ಲ .ನಾವು ಒಳ್ಳೆಯ ದಾರಿಯಲ್ಲಿ ನಡೆಯುವುದರಿಂದ ಯಶಸ್ಸು ಮತ್ತು ಪ್ರಗತಿಯನ್ನು ಕಾಣಬಹುದು . ನಿಮಗೆ ಪ್ರೇರಣೆಯನ್ನು ನೀಡಲು ದೇವರು ನಿಮ್ಮ ಜೊತೆಗೆ ಇರುತ್ತಾನೆ ಎಂದು ಆಶಿಸಲಾಗುತ್ತದೆ .

Leave a Comment