ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ? ತಿಳಿಯಿರಿ

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಅದೃಷ್ಟ ಬೇಕು ಅಂದ್ರೆ ಹೀಗೆ ಮಾಡಿ. ನಾವು ದಿನ ಹಾಗೂ ಅದಕ್ಕೆ ಸಂಬಂಧಿಸಿದ ದೇವರ ಪ್ರಕಾರ ಆ ಬಣ್ಣದ ಬಟ್ಟೆಗಳನ್ನ ಧರಿಸಿದರೆ ಅದೃಷ್ಟ ಒಲಿಯುತ್ತದೆ ಎನ್ನುವ ನಂಬಿಕೆ ಇದೆ ಹಾಗಾದ್ರೆ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂಬುದು ಇಲ್ಲಿದೆ.

ಸೋಮವಾರ: ಸೋಮವಾರ ಈ ದಿನವನ್ನ ಚಂದ್ರ ಆಳುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಈ ದಿನ ನೀವು ತಿಳಿ ಬಣ್ಣದ ಬಟ್ಟೆಗಳನ್ನ ಧರಿಸಬೇಕು. ಕಣ್ಣಿಗೆ ಹಿತವಾಗುವ ಬಟ್ಟೆ ಧರಿಸಿದರೆ ಅಂದರೆ ಬಿಳಿ, ಕೆನೆ, ತಿಳಿ ಗುಲಾಬಿ, ಆಕಾಶ ನೀಲಿ, ತಿಳಿ ಹಳದಿ ಬಟ್ಟೆಗಳನ್ನು ಧರಿಸಿದರೆ ಉತ್ತಮ.

ಮಂಗಳವಾರ: ಈ ದಿನವನ್ನ ಆಂಜನೇಯನಿಗೆ ಸಮರ್ಪಿಸಲಾಗಿದೆ. ಹಾಗಾಗಿ ಈ ದಿನ ಗಾಢ ಬಣ್ಣದ ಬಟ್ಟೆಯನ್ನ ಧರಿಸಬೇಕು ಎನ್ನಲಾಗುತ್ತದೆ. ನೀವು ಸಾಧ್ಯವಾದರೆ ಈ ದಿನ ಕೇಸರಿ, ಕಿತ್ತಳೆ, ಹಳದಿ ಮತ್ತು ಕೆಂಪು ಬಣ್ಣಗಳನ್ನು ಹಾಕಬಹುದು.

ಬುಧವಾರ: ಬುಧವಾರವನ್ನು ಗಣೇಶನಿಗೆ ಅರ್ಪಣೆ ಮಾಡಲಾಗುತ್ತದೆ. ಮುಖ್ಯವಾಗಿ ಗಣೇಶನಿಗೆ ಹಸಿರು ಬಣ್ಣ ಎಂದರೆ ತುಂಬಾ ಇಷ್ಟ. ಹಾಗಾಗಿ ಈ ಬಣ್ಣದ ಬಟ್ಟೆಯನ್ನ ನೀವು ಧರಿಸಬಹುದು. ಇದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ.

ಗುರುವಾರ: ಈ ದಿನವನ್ನ ಭಗವಾನ್ ವಿಷ್ಣುವಿಗೆ ಮೀಸಲಿಟ್ಟುವುದರಿಂದ ವಿಷ್ಣುವಿನ ಆರಾಧನೆ ಮಾಡಬೇಕಾಗುತ್ತದೆ. ಈ ದಿನ ಮುಖ್ಯವಾಗಿ ನೀವು ಹಳದಿ ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದಾಗುತ್ತದೆ.

ಶುಕ್ರವಾರ: ಶುಕ್ರವಾರ ಸಾಮಾನ್ಯವಾಗಿ ದೇವಿಯ ಆರಾಧನೆ ಮಾಡಲಾಗುತ್ತದೆ. ದೇವಿಗೆ ಕೆಂಪು ಬಣ್ಣ ತುಂಬಾ ಇಷ್ಟ. ಹಾಗಾಗಿ ಕೆಂಪು ಬಣ್ಣವನ್ನು ಧರಿಸಬಹುದು. ಇದರ ಜೊತೆಗೆ ಫ್ಲೋರಲ್ ಪ್ರಿಂಟ್ ಬಟ್ಟೆ ಅಥವಾ ಮರೂನ್, ಕಡು ನೀಲಿ ಮುಂತಾದ ಗಾಢ ಬಣ್ಣಗಳ ಬಟ್ಟೆ ಧರಿಸಬಹುದು.

ಶನಿವಾರ: ಶನಿವಾರವನ್ನು ಶನಿ ದೇವರಿಗೆ ಮೀಸಲಿಡಲಾಗಿದೆ. ಶನಿಗೆ ಕಪ್ಪು ಮತ್ತು ನೀಲಿ ಬಣ್ಣ ಎಂದರೆ ಬಹಳ ಇಷ್ಟ. ಹಾಗಾಗಿ ನೀವು ಈ ಬಣ್ಣಗಳ ಬಟ್ಟೆಯನ್ನ ಆರಾಮವಾಗಿ ಧರಿಸಬಹುದು. ಕಪ್ಪು, ಕಡು ಕಂದು, ಕಡು ನೀಲಿ, ನೇರಳೆ, ನೇರಳೆ ಅಥವಾ ಕಾಫಿ, ಗಾಢ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು.

ಭಾನುವಾರ: ಭಾನುವಾರ ಸೂರ್ಯನ ದಿನ. ಸೂರ್ಯನಿಗೆ ಸಹ ಕೆಂಪು ಬಣ್ಣ ತುಂಬಾ ಇಷ್ಟ. ಈ ದಿನ ಕೆಂಪು, ಕಿತ್ತಳೆ, ಹಳದಿ ಮತ್ತು ಚಿನ್ನದ ಬಣ್ಣಗಳನ್ನು ನೀವು ಧರಿಸಿದರೆ ಜೀವನದಲ್ಲಿನ ಕಷ್ಟಗಳಿಗೆ ಪರಿಹಾರ ನೀಡುತ್ತದೆ.

Leave a Comment