ಎಚ್ಚರ..!ಈ ಏಳು ತಪ್ಪು ಖಂಡಿತ ಮಾಡಬೇಡಿ …!!

0

ನಾವು ಈ ಲೇಖನದಲ್ಲಿ ಪೊರಕೆಯ ಮಹತ್ವದ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತ ಮಾಡಬೇಡಿ …!! ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮೀದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.

ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ . ಸಂಪತ್ತು ಮತ್ತು ಸಮೃದ್ಧಿ ಇರುತ್ತದೆ. ವಾಸ್ತು ಪಂಡಿತರ ಪ್ರಕಾರ ಕೃಷ್ಣ ಪಕ್ಷದಲ್ಲೇ ಹೊಸ ಪೊರಕೆ ಖರೀದಿಸಬೇಕು . ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಮಾಡಬಾರದು .

4.ಪೊರಕೆ ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಮನೆಯಲ್ಲಿ ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಪೊರಕೆ ಇಡಬೇಕು. 5.ಯಾವತ್ತಿಗೂ ಕೂಡ ಹಾಸಿಗೆ ಕೆಳಗಡೆ ಪೊರಕೆ ಇಡುವ ಪರಿಪಾಠ ಇಟ್ಟುಕೊಳ್ಳಬೇಡಿ .6.ಸೂರ್ಯಾಸ್ತದ ಬಳಿಕ ಯಾವತ್ತಿಗೂ ಪೊರಕೆ ಬಳಸಬಾರದು ಎಂದು ಹೇಳುತ್ತಾರೆ.ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದು ಬಿಡುತ್ತಾರೆ. ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಲೇಬೇಡಿ .

ಪೊರಕೆಯನ್ನು ಕಾಲಿನಿಂದ ತುಳಿಯಬೇಡಿ. ಅಥವಾ ಕಾಲಿನಿಂದ ಸರಿಸುವುದನ್ನು ಮಾಡಬೇಡಿ. ಪೊರಕ್ಕೆಯನ್ನು ದಾಟಬಾರದು ಇವೆಲ್ಲಾ ನಿಶಿದ್ಧ. ಅಡುಗೆ ಮನೆ ಗುಡಿಸಲು ಪ್ರತ್ಯೇಕ ಪೊರಕೆ ಇಟ್ಟುಕೊಳ್ಳಿ ಇದು ತುಂಬಾ ಶುಭ ಎನ್ನಲಾಗುತ್ತದೆ . ಮನೆ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆ ಬಳಸಬೇಡಿ .

ಯಾರಾದರೂ ಮನೆಯಿಂದ ಹೊರಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು. ಕಾರಣ ಇದು ಯಾವುದೇ ಅಪಘಾತಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ನೀವು ಮನೆಯನ್ನು ಬದಲಾಯಿಸಿದರೆ ,ಹೊಸ ಮನೆಯಲ್ಲಿ ಬಳಸಲು ಹೊಸ ಪೊರೆಕೆಯನ್ನು ಬಳಸಿ .ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಉತ್ತಮ ಹೆಜ್ಜೆ.

13.ಮನೆಯಲ್ಲಿ ಕಸ ಗುಡಿಸುವ ಪೊರಕೆಯಿಂದ ನಿಮ್ಮ ಕಾಲುಗಳ ಧೂಳನ್ನು ಒರೆಸುವುದನ್ನು ತಪ್ಪಿಸಿ . ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ.ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿ ಪರ್ವದಲ್ಲಿ ಪೊರಕೆಯನ್ನು ಖರೀದಿಸುವ ನಂಬಿಕೆಯೂ ಇದೆ .

Leave A Reply

Your email address will not be published.