ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು ಇಂಥವರನ್ನು ಮದುವೆಯಾಗುವ ಮುನ್ನ ಒಮ್ಮೆ ಯೋಚಿಸಿ.
ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತದೆ. ಆದರೆ ಅದು ಗಡಿ ದಾಟಿದ್ರೆ ಬಾಂಧವ್ಯ ಉಳಿಯುವುದಿಲ್ಲ. ನಾನು ನನ್ನದು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನು ತೋರಿಸುವವರಿಂದ ದೂರವಿರುವುದು ಉತ್ತಮ. ಮದುವೆಯನ್ನು ಜೀವನದ ಪ್ರಮುಖ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಪ್ರತಿಯೊಬ್ಬರು ತಮ್ಮ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.
ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿದೆ ಎಂದು ಭಾವಿಸಿ ಕೆಲವರು ಮದುವೆಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ ಸಾಮರಸ್ಯ ಇಲ್ಲದೆ ತಮ್ಮ ದಾಂಪತ್ಯವನ್ನು ವಿಚ್ಛೇದನದಲ್ಲಿ ಅಂತ್ಯಗೊಳಿಸುತ್ತಾರೆ. ಹೀಗಾಗಿ ನೀವು ಮದುವೆಯಾಗುವವರಲ್ಲಿ ಈ ಲಕ್ಷಣಗಳಿದ್ದರೇ ಅವರಿಂದ ದೂರವಾಗುವುದೇ ಒಳ್ಳೆಯದು.
ಸರ್ವಾಧಿಕಾರಿ ಲಕ್ಷಣ: ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ಆಯ್ಕೆಗಳು ಇರುತ್ತವೆ. ತಮ್ಮಿಷ್ಟದಂತೆ ತಮ್ಮ ಬದುಕು ರೂಪಿಸಿಕೊಳ್ಳುವ ಆಯ್ಕೆ ಪ್ರತಿಯೊಬ್ಬರ ಕನಸಾಗಿರುತ್ತದೆ.
ಆದರೆ ನಿಮ್ಮ ಸಂಗಾತಿ ನಿಮ್ಮನ್ನು ಎಲ್ಲದಕ್ಕೂ ನಿಯಂತ್ರಣ ಮಾಡುತ್ತಿದ್ದರೆ ಉದಾಹರಣೆಗೆ ಇದನ್ನೆ ತಿನ್ನಿ ಈ ಉಡುಗೆಯನ್ನೇ ಧರಿಸಿ ಅಲ್ಲಿ ಹೋಗಬೇಡ ಅವರ ಜೊತೆ ಮಾತನಾಡಬೇಡ ಈ ರೀತಿ ಪ್ರತಿ ವಿಷಯದಲ್ಲೂ ನಿಮ್ಮನ್ನು ನಿಯಂತ್ರಿಸುವವರು ಉತ್ತಮ ಸಂಗಾತಿಯಾಗಲು ಸಾಧ್ಯವಿಲ್ಲ.
ಗೌರವ ನೀಡುವ ವ್ಯಕ್ತಿ: ಗೌರವ ನೀಡುವುದು ಪರಸ್ಪರ ಸಂಗಾತಿಗಳ ಕರ್ತವ್ಯ ಆಗಿರುತ್ತದೆ. ಮದುವೆಯಾಗಲು ಬಯಸುವ ಇಬ್ಬರ ನಡುವೆ ಇದು ಸಮಾನವಾಗಿರಬೇಕು. ಗೌರವ ಕೊಡುವ ಅಭ್ಯಾಸವಿಲ್ಲದವರು ಯಾರೊಂದಿಗೂ ಸುಖವಾಗಿರಲು ಸಾಧ್ಯವಿಲ್ಲ.
ಅತಿಯಾದ ಅಹಂಕಾರ: ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತದೆ ಆದರೆ ಅದು ಗಡಿ ದಾಟಿದ್ರೆ ಬಾಂಧವ್ಯ ಉಳಿಯುವುದಿಲ್ಲ. ನಾನು ಹೇಳುವುದನ್ನೇ ಕೇಳು ಮಾಡು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನ ತೋರಿಸುವವರಿಂದ ದೂರವಿರುವುದು ಒಳ್ಳೆಯದು.
ಸುಳ್ಳುಕೋರರು: ನಿಮ್ಮ ಜೀವನದಲ್ಲಿ ಸುಳ್ಳುಗಾರನನ್ನ ಎಂದಿಗೂ ಆಹ್ವಾನಿಸಬೇಡಿ. ಇದು ಮನೋರೋಗದ ಲಕ್ಷಣವೂ ಹೌದು. ಪ್ರತಿಯೊಂದು ಸಣ್ಣ ವಿಷಯದ ಬಗ್ಗೆ ಸುಳ್ಳು ಹೇಳುವ ವ್ಯಕ್ತಿ ನಿಮ್ಮೊಂದಿಗೆ ಎಷ್ಟು ಆತ್ಮವಿಶ್ವಾಸವನ್ನು ಹೊಂದಬಹುದು ಅನ್ನೋದರ ಬಗ್ಗೆ ಯೋಚಿಸಿ.
ಪ್ರಾಮಿಸ್ ಬ್ರೇಕರ್: ಒಂದಲ್ಲ ಎರಡು ಬಾರಿ ಭರವಸೆಯನ್ನು ಉಳಿಸಿಕೊಳ್ಳದವರಿಂದ ಎಚ್ಚರವಿರಿ.
ಅವರು ಪದೇ ಪದೇ ಇದೇ ತಪ್ಪು ಮಾಡುತ್ತಿದ್ದರೇ ಅವರಿಗೆ ಕೊಟ್ಟ ಮಾತಿಗೆ ಬೆಲೆ ಗೊತ್ತಿಲ್ಲ ಎಂದರ್ಥ. ಅವರಿಗೆ ಭರವಸೆ ನೀಡುವುದು ಸಣ್ಣ ವಿಷಯವಾಗಿರುತ್ತದೆ.
ಪದೇ ಪದೇ ತಪ್ಪು ಮಾಡುವವರು ಒಂದು ಅಥವಾ ಎರಡು ಸಾರಿ ತಪ್ಪು ಮಾಡಿದರೆ ಕ್ಷಮಿಸಬಹುದು ಆದರೇ ಪದೇ ಪದೇ ತಪ್ಪು ಮಾಡೋ ಅಭ್ಯಾಸ ಹೊಂದಿರುವ ಜನರು ಉತ್ತಮ ಜೀವನ ಸಂಗಾತಿಯಾಗಿರಲು ಸಾಧ್ಯವಿಲ್ಲ. ಅವರಿಗೆ ಕ್ಷಮೆಯ ಬೆಲೆಯೂ ಗೊತ್ತಿರುವುದಿಲ್ಲ.
ಆಲಿಸುವ ತಾಳ್ಮೆ ಇಲ್ಲದೆ ಇರುವವರು: ಎಷ್ಟೋ ಜನರಿಗೆ ತಾವು ಆಡಿದ್ದು ಇತರರು ಕೇಳಬೇಕು ಎಂಬುದು ಮಾತ್ರವೇ ಮುಖ್ಯವಾಗಿರುತ್ತದೆಯೇ ಹೊರತು ಇತರರು ಹೇಳುವ ಮಾತನ್ನು ಕೇಳುವ ತಾಳ್ಮೆ ಇರುವುದಿಲ್ಲ ಅಂತಹ ವ್ಯಕ್ತಿಯಲ್ಲಿ ಆಲಿಸುವ ತಾಳ್ಮೆ ಎಷ್ಟಿದೆ ಎಂಬುದನ್ನು ನೀವು ಗಮನಿಸಬೇಕು.
ಕನ್ಯಾದಾನ ಅನ್ನುವುದು ಹೆತ್ತವರ ಹೆಮ್ಮೆಯ ಮಾನವಾಗಿರುತ್ತದೆ. ನಿಮ್ಮ ಸರಿಯಾದ ಆಯ್ಕೆ ನಿಮ್ಮ ಜೀವನವನ್ನೇ ರೂಪಿಸಬಹುದು. ಹಾಗಾಗಿ ನಿಮ್ಮ ಜೀವನ ಸಂಗಾತಿ ಸೆಲೆಕ್ಟ್ ಮಾಡುವಾಗ ಆತುರ ಪಡಬೇಡಿ, ನಿಧಾನವಾಗಿ ತಾಳ್ಮೆಯಿಂದ ಯೋಚಿಸಿ ಸೆಲೆಕ್ಟ್ ಮಾಡಿ.