ಇಂದಿನ ಲೇಖನದಲ್ಲಿ ಕುಂಭರಾಶಿಯವರ ಗುಣ ಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಕುಂಭ ರಾಶಿಯವರಿಗೆ ನಾಲೆಡ್ಜ್ ಪಡೆಯಲು ತುಂಬಾ ಆಸಕ್ತಿ ಇರುತ್ತದೆ ಮತ್ತು ಆ ನಾಲೆಡ್ಜ್ ಅನ್ನು ಬೇರೆಯವರಿಗೆ ಕೊಡಲು ಇಷ್ಟಪಡುತ್ತಾರೆ. ಇವರಲ್ಲಿ ಜ್ಞಾನ ಮತ್ತು ದಯೆ ಅಪಾರವಾಗಿರುತ್ತದೆ. ಇವರು ಪ್ರತಿಯೊಂದು ವಿಷಯವನ್ನು ಬಹಳ ಬೇಗ ಗ್ರಹಿಸುತ್ತಾರೆ. ಪ್ರತಿಯೊಂದು ವಿಷಯವನ್ನು ಆಳವಾಗಿ ತಿಳಿದುಕೊಳ್ಳುತ್ತಾರೆ ಮತ್ತು ಅದನ್ನು ಬೇರೆಯವರಿಗೆ ಹೇಳಿಕೊಡಬೇಕೆಂದು ಬಯಸುತ್ತಾರೆ.
ಇವರ ಕಮ್ಯುನಿಕೇಷನ್ಸ್ ಸ್ಕಿಲ್ ತುಂಬಾ ಚೆನ್ನಾಗಿ ಇರುತ್ತದೆ. ಇವರ ಸ್ವಭಾವದಿಂದ ಜನರನ್ನು ತಮ್ಮತ್ತ ಸೆಳೆಯುತ್ತಾರೆ ಮತ್ತು ಇವರು ತಮ್ಮ ಇಷ್ಟದ ಪ್ರಕಾರ ಬದುಕುತ್ತಾರೆ. ಜೀವನದಲ್ಲಿ ಬೆಳೆಯಬೇಕೆಂದು ಬಯಸುತ್ತಾರೆ ಮತ್ತು ಬೇರೆಯವರು ಬೆಳೆಯಲು ಸಹಾಯ ಮಾಡುತ್ತಾರೆ. ಕುಂಭ ರಾಶಿ ವಾಯು ತತ್ತ್ವವಾಗಿರುತ್ತದೆ. ಈ ರಾಶಿಯವರು ಬೇರೆ ರಾಶಿಯವರ ಜೊತೆ ಬಹಳ ಬೇಗ ಅಟ್ಯಾಚ್ ಮೆಂಟ್ ಹೊಂದುತ್ತಾರೆ. ಕುಂಭ ರಾಶಿಯವರ ವಿಶಿಷ್ಟ ಗುಣವೇನೆಂದರೆ ಇವರಿಗೆ ಒಂದು ವಿಷಯಲ್ಲಿ ನೋವಾದರೇ
ಅದು ಬೇರೆಯವರಿಗೂ ಅದು ನೋವಾಗಬಹುದೆಂದು ತಿಳಿದುಕೊಂಡು ಆ ಸಮಸ್ಯೆಗೆ ಬಹಳ ಬೇಗ ಸಲ್ಯುಷನ್ಸ್ ಅನ್ನು ಹುಡುಕಿಕೊಳ್ಳುತ್ತಾರೆ. ಕುಂಭರಾಶಿಯವರು ಎಲ್ಲರನ್ನು ಸಮಾನ ದೃಷ್ಠಿಯಿಂದಲೂ ನೋಡುತ್ತಾರೆ. ಕುಂಭರಾಶಿಯ ರಾಶ್ಯಾಧಿಪತಿ ಶನಿಗ್ರಹವಾಗಿರುತ್ತದೆ. ಶನಿ ಗ್ರಹವು ಯಾವಾಗಲೂ ನ್ಯಾಯದ ಮಾರ್ಗದಲ್ಲಿರಲು ಇಷ್ಟಪಡುತ್ತದೆ. ಕುಂಭ ರಾಶಿಯವರು ಜ್ಞಾನವನ್ನು ಬೇರೆಯವರಿಗೆ ಕೊಡಲು ಇಷ್ಟಪಡುತ್ತಾರೆ. ಇವರು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಲು ಇಷ್ಟಪಡುತ್ತಾರೆ.
ಬೇರೆಯವರ ಜೊತೆ ವಾದ ಮಾಡಲು ಇಷ್ಟಪಡುವುದಿಲ್ಲ. ಕುಂಭ ರಾಶಿಯ ವ್ಯಕ್ತಿಗಳು ಪ್ರಗತಿಶೀಲರಾಗಿ ಇರಲು ಇಷ್ಟಪಡುತ್ತಾರೆ. ಇವರು ಮಾನವೀಯತೆಯನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ತುಂಬಾ ಜೀವನದಲ್ಲಿ ಸಂತೋಷವಾಗಿರಲು ಇಷ್ಟಪಡುತ್ತಾರೆ. ಇವರಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನೇ ಮಾಡುತ್ತಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಇವರು ಒಂಟಿಯಾಗಿ ಇರಲು ಇಷ್ಟಪಡುವುದಿಲ್ಲ ಮತ್ತು ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರವನ್ನು ಹುಡುಕಿಕೊಳ್ಳುತ್ತಾರೆ.
ಇವರಲ್ಲಿ ಮುಂದಾಲೋಚನೆ ಇರುತ್ತದೆ. ಈ ರಾಶಿಯವರು ಜನರ ಜೊತೆ ಬೆರೆಯಲು ಇಷ್ಟಪಡುತ್ತಾರೆ. ಜನರನ್ನ ತಮ್ಮ ಮಾತಿನಿಂದಲೇ ತನ್ನತ್ತ ಸೆಳೆಯುತ್ತಾರೆ. ಆಗಾಗಿ ಜನ ಇವರ ಜೊತೆ ಚೆನ್ನಾಗಿ ಬೆರೆಯುತ್ತಾರೆ. ಇವರು ಶಾಂತ ಸ್ವಭಾವದವರಾಗಿದ್ದು, ಯಾವಾಗಲೂ ಕೂಲ್ ಆಗಿ ಇರಲು ಇಷ್ಟಪಡುತ್ತಾರೆ. ಇವರು ಬೇರೆಯವರ ಗುಣಗಳನ್ನು ತಿಳಿದುಕೊಳ್ಳಬೇಕು ಮತ್ತು ತಮ್ಮ ಬಗ್ಗೆಯೂ ಬೇರೆಯವರು ತಿಳಿದುಕೊಳ್ಳಬೇಕೆಂದು ಬಯಸುತ್ತಾರೆ. ಇವರು ತಮ್ಮ ಪಾರ್ಟನರ್ ಗೆ ಸ್ವತಂತ್ರ ಕೊಡುತ್ತಾರೆ ಮತ್ತು ಸಮಾನ ದೃಷ್ಠಿಯಿಂದ ನೋಡುತ್ತಾರೆ.
ಕುಂಭ ರಾಶಿಯ ವ್ಯಕ್ತಿಗಳು ತಮ್ಮ ಸ್ನೇಹಿತರಿಗೆ ಏನೂ ಬೇಕಾದರೂ ಮಾಡಲು ತಯಾರು ಇರುತ್ತಾರೆ. ಇವರು ತಮ್ಮ ಸ್ನೇಹಿತರನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆಂದರೆ ಅವರಲ್ಲಿ ಕ್ರಿಯೆಟಿವಿಟಿ, ನಾಲೆಡ್ಜ್ ಇರುವ ವ್ಯಕ್ತಿಗಳನ್ನ ಹೆಚ್ಚು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಕುಂಭರಾಶಿಯವರು ಫ್ಯಾಮಿಲಿ ರೆಸ್ಪಾನ್ಸಿಬಿಲಿಟಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಕುಂಭ ರಾಶಿಯವರ ನೆಗಿಟಿವ್ ಗುಣವೇನೆಂದರೆ ಇವರ ಆಸೆಯನ್ನು ವ್ಯಕ್ತಪಡಿಸಿದಾಗ ಆ ಸ್ನೇಹಿತರು ಮಾಡದೇ ಇದ್ದಾಗ ಅವರನ್ನು ಸ್ನೇಹಿತರಾಗಿ ಇಟ್ಟುಕೊಳ್ಳುವುದಿಲ್ಲ.
ಕುಂಭರಾಶಿಯ ಪುರುಷರು ಬುದ್ಧಿವಂತರು, ಉತ್ಸಾಹ, ಸ್ವತಂತ್ರತೆ ಮತ್ತು ಸಾಮಾಜಿಕತೆಯನ್ನು ಇಷ್ಟಪಡುತ್ತಾರೆ. ಹಠ, ಅಸಹಿಷ್ಣತೆ, ದೃಢತೆ ಈ ಗುಣಗಳನ್ನು ಕುಂಭರಾಶಿಯ ಪುರುಷರಲ್ಲಿ ನೋಡಬಹುದು. ಇವರು ತಮ್ಮ ಸಂಗಾತಿಯ ವಿಷಯದಲ್ಲಿ ತುಂಬಾ ಸುಖ, ದುಃಖಗಳನ್ನ ಎಲ್ಲಾ ರೀತಿಯಲ್ಲಿ ಹಂಚಿಕೊಳ್ಳುವಂತಹವರು ಸಿಗಬೇಕೆಂದು ಬಯಸುತ್ತಾರೆ. ಕುಂಭರಾಶಿಯ ಸ್ತ್ರೀಯರಲ್ಲಿ ಹಾಸ್ಯ, ಗುಟ್ಟು ಮಾಡುವಿಕೆ, ಸ್ವತಂತ್ರತೆ, ಕ್ರಿಯೆಟಿವಿಟಿ ಈ ಲಕ್ಷಣಗಳು ಕಂಡುಬರುತ್ತದೆ.
ಇವರ ತಮ್ಮ ಜೀವನಕ್ಕೆ ಸಂಬಂಧಪಟ್ಟಂತೆ ಒಂದು ದೃಷ್ಟಿಕೋನವನ್ನು ಇಟ್ಟುಕೊಂಡಿರುತ್ತಾರೆ. ಈ ರಾಶಿಯ ಸ್ತ್ರೀಯರು ಯಾರಾದರೂ ಪುರುಷರು ತುಂಬಾ ಇಷ್ಟಪಡುತ್ತಿದ್ದರೇ ಮತ್ತು ಇವರಿಗೋಸ್ಕರ ಏನಾದರೂ ಸರಿ ಮಾಡುತ್ತಾರೆಂದು ತಿಳಿದರೇ ಅವರ ಜೊತೆ ರಿಲೆಷನ್ ಶಿಪ್ ಅನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಕುಂಭರಾಶಿಯ ಪುರುಷರು ಯಾರ ಜೊತೆಯೂ ರಿಲೇಷನ್ ಶಿಪ್ ಅನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಕುಂಭರಾಶಿಯ ವ್ಯಕ್ತಿಗಳು ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡಲು ಇಷ್ಟಪಡುತ್ತಾರೆ. ತಮ್ಮ ಗುರಿಯನ್ನು ತೀಕ್ಷ್ಣಬುದ್ಧಿಯಿಂದ ತಲುಪಲು ಪ್ರಯತ್ನಿಸುತ್ತಾರೆ.
ಇವರು ಪ್ರತೀ ಕೆಲಸವನ್ನು ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಡಿ ಮುಗಿಸುತ್ತಾರೆ. ಇಂಜಿನಿಯರಿಂಗ್, ನಟನೆ, ಶಿಕ್ಷಣ,ಸಾಹಿತ್ಯ, ಫೋಟೋಗ್ರಾಫಿ,ಪೈಲೆಟ್ ಈ ಕ್ಷೇತ್ರಗಳು ಚೆನ್ನಾಗಿ ಆಗಿ ಬರುತ್ತದೆ. ಇವರು ಸ್ವತಂತ್ರವನ್ನು ತುಂಬಾ ಇಷ್ಟಪಡುತ್ತಾರೆ. ಹಣಕಾಸಿನ ವಿಷಯಕ್ಕೆ ಬಂದರೆ ಹಣಕಾಸಿನ ವ್ಯವಹಾರಗಳನ್ನು ಸಮತೋಲನವಾಗಿ ಇಟ್ಟುಕೊಂಡಿರುತ್ತಾರೆ. ಉಳಿತಾಯ ಮತ್ತು ಖರ್ಚನ್ನು ಸಮತೋಲನ ರೀತಿಯಲ್ಲಿ ನಿಭಾಯಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಫ್ಯಾಷನ್ ಆಗಿ ಇರಲು ಇಷ್ಟಪಡುತ್ತಾರೆ. ಕುಂಭರಾಶಿಯ ವ್ಯಕ್ತಿಗಳ ಆರೋಗ್ಯದ ವಿಚಾರದ ಬಗ್ಗೆ ನೋಡುವುದಾದರೇ ತಲೆ, ಕಣ್ಣು, ಹೊಟ್ಟೆ, ಉಸಿರಾಟದ ತೊಂದರೆ ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿರಿ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಕೇರ್ ತೆಗೆದುಕೊಂಡರೇ ಉತ್ತಮ.