ಶನಿ ಪರಮಾತ್ಮನ ವಕ್ರದೃಷ್ಟಿಯಿಂದ ಬಚಾವ್ ಆಗಲು ಈ ಏಳು ಕೆಲಸವನ್ನು ಮಾಡಲೇಬೇಕು

ಶನಿ ಪರಮಾತ್ಮನ ವಕ್ರದೃಷ್ಟಿಯಿಂದ ಬಚಾವ್ ಆಗಲು ಈ ಏಳು ಕೆಲಸವನ್ನು ಮಾಡಲೇಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮನುಷ್ಯನ ಜೀವನದಲ್ಲಿ ನವಗ್ರಹಗಳ ಪಾತ್ರ ಮುಖ್ಯವಾಗಿದೆ. ಮಗು ಜನಿಸಿದ ಸಮಯದಲ್ಲಿ ಗ್ರಹಗಳ ಸ್ಥಿತಿ ಯಾವ ರೀತಿಯಾಗಿರುತ್ತದೆ ಅದರ ಮೇಲೆ ಮಗುವಿನ ಜಾತಕವನ್ನು ಬರೆಯಲಾಗುತ್ತದೆ. ಇದೇ ಜಾತಕದಿಂದ ಮನುಷ್ಯನ ಭವಿಷ್ಯ ಹೇಗಿರುತ್ತದೆಂಬುದು ನಿರ್ಧಾರವಾಗುತ್ತದೆ. ಪ್ರತಿಯೊಂದು ಗ್ರಹಗಳು ವ್ಯಕ್ತಿಗಳ ಮೇಲೆ ಬೇರೆ ರೀತಿಯಾದ ಪ್ರಭಾವವನ್ನು ಬೀರುತ್ತದೆ. ಆದರೇ ಶನಿಗ್ರಹದ ಪ್ರಭಾವ ಮಾತ್ರ ಹೆಚ್ಚಾಗಿರುತ್ತದೆ.

ಬಹಳಷ್ಟು ಜನರು ಶನಿಗ್ರಹವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಅದು ತಪ್ಪು ಶನಿದೇವರು ನ್ಯಾಯದ ದೇವರು. ಒಂದು ವೇಳೆ ಮನುಷ್ಯ ಕೆಟ್ಟದ್ದನ್ನು ಮಾಡಿದರೇ ಶನಿದೇವರು ಸಾಡೇಸಾತ್ ಸಮಯದಲ್ಲಿ ಕೊಡಬಾರದ ಕಷ್ಟಗಳನ್ನು ಕೊಡುತ್ತಾರೆ. ಒಳ್ಳೆಯದ್ದನ್ನ ಮಾಡಿದರೇ ಮೂರು ಪಟ್ಟು ಒಳ್ಳೆಯ ಫಲವನ್ನು ಕೊಡುತ್ತಾರೆ. ಶನಿದೇವರ ಕೆಟ್ಟ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಕಷ್ಟಗಳನ್ನ ಅನುಭವಿಸುವ ಸಮಯ ಬಂದಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ನಿಮ್ಮ ಒಳ್ಳೆಯ ಕೆಲಸಗಳು ನಿಮ್ಮನ್ನು ರಕ್ಷಣೆ ಮಾಡುತ್ತವೆ. ಕೆಟ್ಟ ಕೆಲಸಗಳು ಆ ಜನ್ಮದಲ್ಲಿಯೇ ಪಾಠವನ್ನು ಕಲಿಸುತ್ತವೆ. ಶನಿದೇವರ ಒಳ್ಳೆಯ ದೃಷ್ಟಿ ಮನುಷ್ಯನನ್ನ ಬಿಕಾರಿಯನ್ನ ರಾಜನನ್ನಾಗಿ ಮಾಡುತ್ತದೆ. ಅದೇ ಕೆಟ್ಟ ದೃಷ್ಟಿ ರಾಜನನ್ನು ಬಿಕಾರಿಯನ್ನಾಗಿ ಮಾಡುತ್ತದೆ. ಆದ್ದರಿಂದ ಶನಿದೇವರ ಕೃಪೆಗೆ ಪಾತ್ರವಾಗಲು ಹಲವು ದಾರಿಗಳನ್ನು ಹುಡುಕುತ್ತೇವೆ. ಶನಿವಾರ ಸಾಸಿವೆ ಎಣ್ಣೆ ಮತ್ತು ಕರಿಎಳ್ಳನ್ನು ದಾನ ಮಾಡಿದರೇ ಅದು ಶ್ರೇಷ್ಠ. ಶನಿವಾರ ಅಂದರೆ ಶನಿದೇವರ ವಾರವಾಗಿರುತ್ತದೆ.

ಕೆಲವೊಂದು ವಸ್ತುಗಳನ್ನು ಶನಿವಾರದಂದು ಖರೀದಿ ಮಾಡಿದರೇ ಶನಿದೇವರ ವಕ್ರದೃಷ್ಠಿ ನಿಮ್ಮ ಮೇಲೆ ಬೀಳುತ್ತದೆ. ಶನಿದೇವರಿಗೆ ಕೋಪ ಹೆಚ್ಚಾಗಿ ಬರುತ್ತದೆ. ಪ್ರತಿಯೊಬ್ಬರ ಕರ್ಮಕ್ಕೆ ಅನುಸಾರವಾಗಿ ಯಾರಿಗೆ ಏನು ಕೊಡಬೇಕೋ ಅದನ್ನ ಕೊಟ್ಟೇ ಕೊಡುತ್ತಾರೆ. ಶನಿವಾರದಂದು ಲೋಹ ಖರೀದಿಸಿ ತರಬಾರದು. ಲೋಹದ ಯಾವುದೇ ವಸ್ತುವಾದರೂ ಅಪ್ಪಿತಪ್ಪಿಯೂ ಮನೆಗೆ ಖರೀದಿ ಮಾಡಿಕೊಂಡು ತರಬೇಡಿ. ಹೊಸದಾಗಿ ಮನೆಯನ್ನು ಕಟ್ಟುವವರಿಗೆ

ಈ ನಿಯಮ ಅನ್ವಯವಾಗುವುದಿಲ್ಲ. ಲೋಹದ ವಸ್ತುಗಳನ್ನ ಮನೆಗೆ ತರುವುದನ್ನ ಅಶುಭವೆಂದು ಹೇಳಲಾಗುತ್ತದೆ. ಲೋಹ ಶನಿದೇವರಿಗೆ ಇಷ್ಟವಾಗಿರುವುದಿಂದ ಶನಿವಾರ ತಂದರೇ ಶನಿದೇವರ ಪ್ರಭಾವ ತಂದವರ ಮೇಲೆ ಬೀಳುತ್ತದೆ. ಶನಿವಾರ ಲೋಹವನ್ನು ದಾನ ಮಾಡುವುದರಿಂದ ಶನಿದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ಅಡುಗೆ ಮಾಡಲು ಬಹಳ ಪ್ರಮುಖವಾದ ಉಪ್ಪನ್ನು ಮನೆಗೆ ಶನಿವಾರ ಖರೀದಿ ಮಾಡಿ ತರಬೇಡಿ. ಇದರಿಂದ ಮನೆಯಲ್ಲಿ ದರಿದ್ರತೆ ಹೆಚ್ಚಾಗುತ್ತದೆ.

ಮನೆಯಲ್ಲಿ ಸಾಲದ ಸಮಸ್ಯೆ, ರೋಗರುಜಿನಗಳು ಹೆಚ್ಚಾಗುತ್ತದೆ. ಶನಿದೇವರ ಸಾಡೇಸಾತಿ ಇದ್ದರೇ ಅಥವಾ ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಇದ್ದರೇ ಅಂತವರ ಮನೆಯಲ್ಲಿ ಉಪ್ಪನ್ನು ತರುವುದನ್ನ ನಿಲ್ಲಿಸಬೇಕು.
ಕತ್ತರಿಯನ್ನು ಶನಿವಾರದಂದು ಖರೀದಿ ಮಾಡಬಾರದು. ಒಂದು ವೇಳೆ ಖರೀದಿಸಿ ಮನೆಗೆ ತಂದರೇ ಮನೆಯಲ್ಲಿರುವ ಸದಸ್ಯರ ನಡುವೆ ಬಿರುಕು ಮೂಡಲು ಪ್ರಾರಂಭವಾಗುತ್ತದೆ. ಶನಿವಾರದಂದು ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಶುಭವೆಂದು ಹೇಳಲಾಗುತ್ತದೆ.

ಯಾವುದಾದರೂ ಲೋಹದ ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಯಾರಿಗೆ ಹೆಚ್ಚು ಕಷ್ಟಗಳು, ದುಃಖಗಳು ಇರುತ್ತದೆಯೋ ಅಂತಹವರು ಅದರಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಬೇಕು. ನಂತರ ಆ ಎಣ್ಣೆಯನ್ನು ಬಡವರಿಗೆ, ನಿರ್ಗತಿಕರಿಗೆ, ಅಗತ್ಯವಿರುವವರಿಗೆ ಶನಿದೇವರ ಮಂದಿರದಲ್ಲಿ ದಾನ ಮಾಡಬೇಕು. ಆದರೇ ನಿಮ್ಮ ಮನೆಯಲ್ಲಿ ಎಣ್ಣೆಯನ್ನು ಬಳಸಲು ಶನಿವಾರ ಖರೀದಿ ಮಾಡಬಾರದು. ಶನಿದೇವರ ವಕ್ರದೃಷ್ಟಿಯನ್ನು ಪರಿಹರಿಸಿಕೊಳ್ಳಬೇಕೆಂದರೆ ಶನಿವಾರದ ದಿನ ಕಪ್ಪು ಎಳ್ಳನ್ನು ದಾನಮಾಡಬೇಕು.

ನೀರಿನ ಜೊತೆಗೆ ಅಥವಾ ಹಸಿಹಾಲಿನ ಜೊತೆಗೆ ಕರಿಎಳ್ಳನ್ನು ಸೇರಿಸಿ ಅಶ್ವಥ ವೃಕ್ಷಕ್ಕೆ ಅರ್ಪಿಸಬೇಕು. ಆದರೇಶನಿವಾರದಂದು ಕರಿಎಳ್ಳನ್ನು ಖರೀದಿಸಬಾರದು ಅದರ ಬದಲು ಮುಂಚಿತವಾಗಿ ಖರೀದಿಸಿ ಇಟ್ಟುಕೊಂಡು ಶನಿವಾರ ದಾನ ಮಾಡಬಹುದು. ಶನಿವಾರದಂದು ಕಟ್ಟಿಗೆ ಅಥವಾ ಕಟ್ಟಿಗೆಯಿಂದ ತಯಾರಿಸಿದ ವಸ್ತುಗಳನ್ನಾಗಿರಬಹುದು ಯಾವುದನ್ನ ಖರೀದಿ ಮಾಡಬಾರದು.

ಇದರಿಂದ ಮನೆಯಲ್ಲಿ ಕಲಹಗಳು ನಡೆಯುತ್ತವೆ. ಸಂತಾನೋತ್ಪತ್ತಿಗೆ ಕಷ್ಟವಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ಜೀವನದಲ್ಲಿ ಶುಭ ಕಾರ್ಯಗಳು ಆಗುವುದನ್ನ ತಡೆಯುತ್ತದೆ. ಅಶುಭ ತಾಂಡವವಾಡುತ್ತದೆ. ಒಲೆಯನ್ನು ಹಚ್ಚಲು ಸೀಮೆ ಎಣ್ಣೆ ಮತ್ತು ಕಲ್ಲಿದ್ದಲನ್ನು ಶನಿವಾರ ಖರೀದಿ ಮಾಡಬಾರದು. ಇದರಿಂದ ಮನೆಯಲ್ಲಿ ಸಂಕಷ್ಟಗಳು ಹೆಚ್ಚಾಗುತ್ತದೆ. ಶನಿವಾರದಂದು ನಿಮ್ಮ ಮನೆಯಲ್ಲಿ ಸ್ವಚ್ಛಗೊಳಿಸಬೇಕು. ಇದರಿಂದ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶ ಮಾಡುವುದಿಲ್ಲ. ಶನಿದೇವರ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.

Leave a Comment