ನಾವು ಈ ಲೇಖನದಲ್ಲಿ ಈ ಒಂದು ಗಿಡವನ್ನು ಮನೆಯಲ್ಲಿ ಬೆಳೆಸಿದ ನಂತರ ಆಗುವ ಚಮತ್ಕಾರಿ ವಿಷಯದ ಬಗ್ಗೆ ತಿಳಿಯೋಣ .ಮೊದಲಿಗಿಂತ ಚೆನ್ನಾಗಿ ಬದುಕಲು ಸಾಧ್ಯವಾಗುತ್ತಿಲ್ಲಾ , ಇದ್ದಕ್ಕಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ನಷ್ಟ ಆಗುತ್ತಿರುತ್ತದೆ. ಯಾವ ಕೆಲಸಕ್ಕೂ ಕೈ ಹಾಕಿದರೂ ಏಳಿಗೆ ಆಗುವುದಿಲ್ಲ . ಸಂಪಾದನೆ ಕೂಡ ಇರುವುದಿಲ್ಲ. ಕೆಲಸಕ್ಕೆ ಹೋಗುತ್ತಿದ್ದರೂ , ಏಕೆ ದುಡಿಯುತ್ತೇವೆ ಎ೦ದು ತಿಳಿಯುವುದಿಲ್ಲ, ಬಂದಂತಹ ಸಂಬಳ ಹೇಗೆ ಖರ್ಚಾಗುತ್ತದೆ ಎಂದು ತಿಳಿಯುವುದಿಲ್ಲ.
ಕುಟುಂಬಕ್ಕೆ ಹಣದ ಬಲ ಎಂಬುದು ಇರುವುದಿಲ್ಲ . ಅಭಿವೃದ್ಧಿ ಕ್ಷೀಣಿಸಿ ಬದುಕಲು ಆಸೆ ಕೂಡ ಇಲ್ಲ. ಎಂದು ನೊಂದವರಿಗೆ ಈ ಒಂದು ಪರಿಹಾರ ಅತೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೀವನದಲ್ಲಿ ಕಳೆದುಕೊಂಡಂತಹ ನೆಮ್ಮದಿ, ಪ್ರೀತಿ , ಹಣ , ಖುಷಿ , ಎಲ್ಲವನ್ನು ಮರಳಿ ಪಡೆಯುವುದಕ್ಕೆ ಮನೆಯಲ್ಲಿ ಯಾವ ಗಿಡವನ್ನು ತಪ್ಪದೇ ಬೆಳೆಸಬೇಕು, ಯಾವ ದೇವರ ದರ್ಶನವನ್ನು ಮಾಡಬೇಕು. ಯಾವೆಲ್ಲಾ ಪರಿಹಾರಗಳನ್ನು ಪಾಲಿಸಬೇಕು ಎ೦ದು ಇಲ್ಲಿ ಸಂಪೂರ್ಣವಾಗಿ ತಿಳಿಯೋಣ .
ಜೀವನದಲ್ಲಿ ನಿಂತು ಹೋದ ಅಭಿವೃದ್ಧಿಯನ್ನು ಅಥವಾ ಏಳಿಗೆಯನ್ನು ಮತ್ತೇ ಪಡೆಯುವುದಕ್ಕೆ ವಿಶೇಷ ಧನ ಲಾಭವನ್ನು ಹೊಂದುವುದಕ್ಕೆ , ಸಂಪಾದನೆ ಹೆಚ್ಚು ಮಾಡಿಕೊಳ್ಳಲು, ಆದಾಯದ ಮಾರ್ಗವನ್ನು ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ನದಿ ತೀರದಲ್ಲಿ ಇರುವಂತಹ ಯಾವುದೇ ದೇವರ ಕ್ಷೇತ್ರಗಳಿಗೆ ಭೇಟಿ ನೀಡಿ , ಅಲ್ಲಿರುವ ದೇವರ ದರ್ಶನವನ್ನು ಮಾಡಿ ಬರಬೇಕು . ಮನೆಯಲ್ಲಿ ದುಡಿಯುವ ಕೈ ಯಾರು ಇರುತ್ತಾರೋ , ಅಥವಾ ಕುಟುಂಬ ಸಮೇತರಾಗಿ ತೆರಳಿ
ನದಿ ತೀರದಲ್ಲಿ ಇರುವಂತಹ ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡಿ, ಮನೆಗೆ ಬರಬೇಕಾಗುತ್ತದೆ. ಜೀವನದಲ್ಲಿ ಯಾವಾಗ ಅಭಿವೃದ್ಧಿ ಕುಂಠಿತವಾದರೂ ಕಷ್ಟದ ಮೇಲೆ ಕಷ್ಟ ಬರಲು ಆರಂಭಿಸಿದಾಗ ತಕ್ಷಣ ಮಾಡಬೇಕಾದ ಕೆಲಸ ಎಂದರೆ, ನದಿ ತೀರದ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ದೇವರು ಮತ್ತು ದೇವತೆಗಳ ದರ್ಶನ ಮಾಡಿ ಬರುವುದು , ಒಂದು ರೂಪಾಯಿಗೂ ಕೂಡ ಕಷ್ಟವಾಗುತ್ತಿದ್ದರೆ, ಸಾಲದ ಮೇಲೆ ಸಾಲ , ಆರೋಗ್ಯ ಕೂಡ ಸರಿ ಇರುವುದಿಲ್ಲ., ನಿತ್ಯ ಕಲಹ, ವ್ಯಾಪಾರದಲ್ಲಿ ನಷ್ಟ , ರಾಜನಂತೆ ಬದುಕಿ ಈಗ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ನೀವು ಜನಿಸಿದ ದಿನ ಆಗಿರಬಹುದು ,
ನಿಮ್ಮ ಜನ್ಮ ನಕ್ಷತ್ರ ಬರುವ ದಿನ ಆಗಿರಬಹುದು , ಅಂತಹ ವಿಶೇಷ ದಿನಗಳಲ್ಲಿ ನದಿ ತೀರಿದ ಕ್ಷೇತ್ರ ದರ್ಶನ ಮಾಡುವುದನ್ನು ಮಾತ್ರ ಮರೆಯಬಾರದು. ನಿಮ್ಮ ಮನೆಯ ಅವರಣದಲ್ಲಿ ಮರೆಯದೆ ಕರಿಬೇವಿನ ಗಿಡವನ್ನು ನೆಟ್ಟು ಬೆಳೆಸುತ್ತಾ , ಪೋಷಿಸುತ್ತಾ ಬರಬೇಕು . ಆ ಕರಿ ಬೇವಿನ ಗಿಡ ಹೇಗೆ ಬೆಳೆಯುತ್ತದೆಯೋ , ಹಾಗೆಯೇ ನಿಮ್ಮ ಮನೆಗೆ ಅಭಿವೃದ್ಧಿ ಅನ್ನುವುದು ಆಗುತ್ತಾ ಹೋಗುತ್ತದೆ.
ನಿಂತು ಹೋದ ಅದೃಷ್ಟ ಮತ್ತೇ ಮರಳಿ ಪ್ರಾಪ್ತಿಯಾಗುತ್ತದೆ. ಕಳೆದುಕೊಂಡಂತಹ ನೆಮ್ಮದಿ, ಹಣ , ಐಶ್ವರ್ಯ , ನಿಮ್ಮದಾಗುತ್ತದೆ . ಇನ್ನು ಹೆಚ್ಚಾಗಿ ವೃದ್ಧಿಯಾಗುತ್ತಾ ಹೋಗುತ್ತದೆ . ಕ್ರಮ ಕ್ರಮವಾಗಿ ಮನೆಯ ಕಷ್ಟಗಳೆಲ್ಲವೂ ಸಹ ದೂರವಾಗುತ್ತದೆ . ಹಾಗೆಯೇ ಮನೆಯಲ್ಲಿ ತುಳಸಿ ಗಿಡ ಇಡುವಾಗ ಲಕ್ಷ್ಮಿ ತುಳಸಿ , ಕೃಷ್ಣ ತುಳಸಿ ಎರಡು ತುಳಸಿಗಳು ಇರುವಂತೆ ನೋಡಿಕೊಳ್ಳಿ . ತುಳಸಿ ಗಿಡದ ಮುಂದೆ ಸಂಜೆ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ . ಸಾಮ್ರಾಣಿ ಧೂಪವನ್ನು ಹಾಕಬೇಕು .
ಈ ಪರಿಹಾರವನ್ನು ಪಾಲಿಸಿದರೆ ಮನೆಗೆ ವಿಶೇಷವಾಗಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ . ನಿಂತು ಹೋದ ಕೆಲಸಗಳು ಪೂರ್ಣಗೊಳ್ಳುತ್ತವೆ . ಜೊತೆಗೆ ಲಕ್ಷ್ಮಿ ಕೃಪೆಯ ಪ್ರಾಪ್ತಿಯಾಗಿ ಅನೇಕ ರೀತಿಯಾಗಿ ಆದಾಯ ಗಳು ಹೆಚ್ಚಾಗುತ್ತದೆ . ಮನೆಯಲ್ಲಿ ಹಣ ಚೆನ್ನಾಗಿ ಓಡಾಡುತ್ತದೆ . ಹಾಗೆಯೇ ನಿಮ್ಮ ಜನ್ಮ ನಕ್ಷತ್ರ ನಾಮ ನಕ್ಷತ್ರ ಅಥವಾ ಜನುಮ ದಿನದಂದು ಯಾರಿಗಾದರೂ ಪಂಡಿತರಿಗೆ ದಕ್ಷಿಣೆಯ ಸಮೇತವಾಗಿ ತುಳಸಿಯನ್ನು ದಾನವಾಗಿ ನೀಡಬೇಕು . ಇದರಿಂದ ನೀವು ಕಳೆದುಕೊಂಡಂತಹ ಅದೃಷ್ಟ ಮತ್ತೆ ಮರಳಿ ಪ್ರಾಪ್ತಿಯಾಗುತ್ತದೆ . ಹಣ ಆಸ್ತಿ ನೆಮ್ಮದಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ .
ಇನ್ನು ಮನೆಯಲ್ಲಿ ಸ್ತ್ರೀಯರು ಸಂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವಾಗ ಅಥವಾ ದೀಪ ಬೆಳಗಿಸಿದ ನಂತರ ಮಣಿ ದೀಪ ವರ್ಣನೆಯನ್ನು ಕೇಳಿದರೆ ಅಥವಾ ಹೇಳಿದರೆ, ನೆಮ್ಮದಿ , ಹಣ , ಏಳಿಗೆ ಮರಳಿ ಆ ಕುಟುಂಬಕ್ಕೆ ಪ್ರಾಪ್ತಿ ಆಗುತ್ತದೆ . ದೇವಸ್ಥಾನದಲ್ಲಿ ದೇವರಿಗಾಗಿ ದೇವಾಲಯಕ್ಕಾಗಿ ಕೆಲಸ ಮಾಡುವವರಿಗೆ , ಈ ಕೆಲಸ ಮಾಡುವ ಸೇವಕರಿಗೆ , ದೇವಸ್ಥಾನವನ್ನು ಶುದ್ಧ ಮಾಡಲು ಎಂದು ನೇಮಕವಾಗಿರುವ ಕಾರ್ಯಕರ್ತರಿಗೆ , ಮೆಣಸು ಹಾಕಿದ ಖಾರ ಪೊಂಗಲ್ ಅನ್ನು ಪ್ರಸಾದವಾಗಿ ನೀಡಬೇಕು .
ಹೀಗೆ ಮಾಡುವುದರಿಂದ ನಿಮಗೆ ಹಿಡಿದಂತಹ ಸರ್ವ ದಾರಿದ್ರಗಳು ದೂರವಾಗಿ ಅನೇಕ ಮಾರ್ಗಗಳಿಂದ ಅದೃಷ್ಟ ಮತ್ತು ಧನಾಗಮನ ಆಗುತ್ತಾ ಹೋಗುತ್ತದೆ . ನಿಂತು ಹೋದ ಅಭಿವೃದ್ದಿ ಮತ್ತೆ ಆಗಲು ಶುರುವಾಗುತ್ತದೆ . ಗೋಶಾಲೆಯಲ್ಲಿ ಗೋವುಗಳ ಸೇವೆ ಮಾಡುವ ಸೇವಕರಿಗೆ ಖಾರ ಪೊಂಗಲ್ ಅನ್ನು ತಿನ್ನಲು ಹಂಚಿದರೆ , ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ. ಹಲವಾರು ರೀತಿಯ ಸಮಸ್ಯೆಗಳು ನಿಮಗೆ ಉಂಟಾಗುತ್ತಿದ್ದರೆ, ಈ ಪರಿಹಾರಗಳನ್ನು ಪಾಲಿಸಿ ಎಂದು ಹೇಳಲಾಗಿದೆ.