ಹೆಂಡತಿಗೆ ಗಂಡ ಹೇಳಿದ ಗುಣಪಾಠ

ಹೆಂಡತಿಗೆ ಗಂಡ ಹೇಳಿದ ಗುಣಪಾಠ ಒಂದು ದಿನ ಗಂಡ ತನ್ನ ಹೆಂಡತಿ ಹತ್ತಿರ ಹೇಳುತ್ತಾನೆ. ಅಕ್ಕನನ್ನು ಅಣ್ಣನ್ನನ ಮತ್ತೆ ಅವರ ಮಕ್ಕಳನ್ನ ಮನೆಯ ಎಲ್ಲಾ ಕುಟುಂಬ ಸದಸ್ಯರನ್ನ ನೋಡದೇ ಮಾತಾಡದೇ ತುಂಬಾ ದಿನಗಳಾಗಿ ಹೋಯಿತು ಅಲ್ವಾ? ನಾಳೆ ಎಲ್ಲರನ್ನು ಮನೆಗೆ ಊಟಕ್ಕೆ ಬರೋದಕ್ಕೆ ಹೇಳೋಣ. ಅಂತ ಅಂದ್ಕೊಳ್ತಾ ಇದ್ದೀನಿ. ಆಯ್ತು ನೋಡೋಣ ಬಿಡಿ ಅಂತ ಮನಸ್ಸಿಲ್ಲದ ಮನಸ್ಸಿನಲ್ಲಿ ಹೆಂಡತಿ ಹೇಳುತ್ತಾಳೆ

ಸರಿ ಹಾಗಾದ್ರೆ ನಾಳೆ ಮಧ್ಯಾಹ್ನಕ್ಕೆ ಒಳ್ಳೆಯ ಅಡುಗೆ ಮಾಡು ಅಂತ ಗಂಡ ಹೇಳಿ ಹೋಗುತ್ತಾನೆ. ಮರುದಿನ ಗಂಡ ಬೆಳಿಗ್ಗೆ ಆಫೀಸಿಗೆ ಹೋಗಿ ಮಧ್ಯಾಹ್ನ ತಿರುಗಿ ಮನೆಗೆ ಬರುತ್ತಾನೆ. ಇನ್ನೊಂದು ಗಂಟೆ ಒಳಗಡೆ ಎಲ್ಲರೂ ಬಂದು ಬಿಡ್ತಾರೆ ಅಡುಗೆ ರೆಡಿ ಆಯ್ತಾ?

ಅಂತ ಹೆಂಡತಿ ಅತ್ರ ಕೇಳುತ್ತಾನೆ. ಇಲ್ಲ ನಾ ನಿನ್ನ ಅಡುಗೆ ಏನು ಮಾಡಿಲ್ಲ ಅಂತ ಹೆಂಡತಿ ಹೇಳುತ್ತಾಳೆ. ಅವರು ಬೇರೆ ಯಾರು ಅಲ್ವಾ ನಮ್ಮನೆಯವರೇ ಅಲ್ವ ಅವರಿಗೋಸ್ಕರ ಸ್ಪೆಷಲ್ ಆಗಿ ಏನು ಮಾಡಬೇಕು ಅಂತ ಇಲ್ಲ ಅಂತ ಅಂತಾಳೆ ಹೆಂಡತಿ. ಹೆಂಡತಿ ಮಾತು ಕೇಳಿ ಗಂಡನಿಗೆ ತುಂಬಾ ಸಿಟ್ಟು ಬರುತ್ತದೆ ಹಾಗಿದ್ರೆ ನೀನು ನೆನ್ನೆನ್ನೇ ಹೇಳಬೇಕಾಗಿತ್ತಲ್ವಾ, ಇನ್ನೊಂದು ಗಂಟೆ ಒಳಗಡೆ ಎಲ್ಲರೂ ಮನೆಗೆ ಬಂದು

ಬಿಡ್ತಾರೆ ನಾನು ಏನು ಮಾಡಲಿ ಈಗ ಅಂತ ಕೇಳುತ್ತಾನೆ. ಅವರನ್ನು ಈಗ ಬರಬೇಡ ಅಂತ ಹೇಳಿ ಫೋನ್ ಮಾಡಿ ಅಂತಾಳೆ ಅದರಲ್ಲೇನಿದೆ ಅವರೇನು ಬೇರೆಯವರೇನಲ್ವಲ್ಲ ಫೋನ್ ಮಾಡಿ ಹೇಳಿಬಿಡಿ.
ಮೂಗು ಮುರಿತ ಗಂಡನ ಹತ್ತಿರ ಹೇಳುತ್ತಾಳೆ ಹೆಂಡತಿ ಗಂಡ ಸಿಟ್ಟಾಗಿ ಮನೆಯಿಂದ ಹೋಗಿಬಿಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಬೆಲ್ ಹೊಡಿಯೋ ಶಬ್ಧ ಕೇಳುತ್ತದೆ.

ಹೆಂಡತಿ ಬಾಗಿಲು ತೆಗೆದ ಕೂಡಲೇ ಅವರ ತವರು ಮನೆಯವರು ಬಂದಿರುತ್ತಾರೆ. ಅಪ್ಪ ಅಮ್ಮನನ್ನು ನೋಡಿ ಶಾಕ್ ಆಗುತ್ತಾಳೆ. ತಂದೆ ಮನೆ ಒಳಗಡೆ ಬಂದ ಕೂಡಲೇ ನಿನ್ನ ಗಂಡ ಎಲ್ಲಿದ್ದಾನಮ್ಮ ಎಂದು ಕೇಳುತ್ತಾರೆ. ಸ್ವಲ್ಪ ಹೊತ್ತಿನ ಮುಂಚೆ ಹೊರಗಡೆ ಹೋಗಿದ್ದಾರಪ್ಪ, ಅಳಿಯ ನಿನ್ನೆ ಫೋನ್ ಮಾಡಿ ಎಲ್ಲರನ್ನು ಮನೆಗೆ ಬನ್ನಿ ಊಟಕ್ಕೆ ಅಂತ ಹೇಳಿದ್ದರು ಆದರೆ ನಮ್ಮನ್ನ ಕರೆದು ನಿನ್ನ ಗಂಡ ಎಲ್ಲಿಗೆ ಹೋಗಿರಬಹುದು, ಅಂತ ಮಗಳ ಹತ್ತಿರ ಹೇಳುತ್ತಾನೆ ಅಪ್ಪ ಮಗಳಿಗೆ ತುಂಬಾ ಗೊಂದಲ ಶುರುವಾಗುತ್ತದೆ.

ಈಗ ನಾನು ಎಲ್ಲರಿಗೂ ಊಟ ಹೇಗೆ ನೀಡಲಿ ಎಂದ ಚಿಂತಿಸುತ್ತಾಳೆ. ಗಂಡನಿಗೆ ಪೋನ್ ಮಾಡಿ ಕೇಳುತ್ತಾಳೆ ನನ್ನ ತವರು ಮನೆಯವರನ್ನ ಬರುವುದಕ್ಕೆ ಹೇಳಿದ್ದೀನಿ ಅಂತ ನನ್ನ ಹತ್ತಿರ ಯಾಕೆ ಹೇಳಲಿಲ್ಲ ಎಂದು ಕೇಳುತ್ತಾಳೆ. ಯಾಕೆ ಎಂದರೆ ನಾನು ನಿನ್ನ ತವರು ಮನೆಯವರನ್ನ ನನ್ನ ಮನೆಯವರನ್ನ ಎಲ್ಲರನ್ನೂ ಕೂಡ ಒಂದೇ ಹಾಗೆ ಅಂದುಕೊಂಡಿದ್ದೀನಿ ಅಂತ ಹೆಂಡತಿ ಹತ್ತಿರ ಹೇಳುತ್ತಾನೆ.

ಹೆಂಡತಿ ಅದನ್ನು ಕೇಳಿ ನನ್ನ ಕ್ಷಮಿಸಿರಿ ಅಂತ ಗಂಡನ ಹತ್ತಿರ ಕ್ಷಮೆ ಕೇಳುತ್ತಾಳೆ. ಮತ್ತೆ ಗಂಡನ ಹತ್ತಿರ ಹೇಳುತ್ತಾಳೆ ನೀವು ಹೇಗಾದರೂ ಹೊರಗಡೆ ಇದ್ದೀರಲ್ವಾ ಮನೇಲಿ ನಾನು ಏನು ಮಾಡಿಲ್ಲ ಅಡುಗೆ ನೀವು ಬರುವಾಗ ಏನಾದರೂ ಪಾರ್ಸೆಲ್ ತೆಗೆದುಕೊಂಡು ಬನ್ನಿ ಅಂತ ಹೇಳುತ್ತಾಳೆ. ಗಂಡ ಹೇಳುತ್ತಾನೆ ಅವರು ಬೇರೆ ಯಾರು ಹೊರಗಿನವರಲ್ವಲ್ಲ ನಿಮ್ಮ ಮನೆಯವರೇ ಅಲ್ವಾ ಮನೇಲೇ ಮಾಡಿ ಏನಾದರೂ ಊಟ ಹಾಕು ನೀನು ಕೂಡ ಗುಣಪಾಠ ಕಲಿಯಬೇಕು ಇದರಿಂದ ಎಂದು ಗಂಡ ಹೇಳುತ್ತಾನೆ.

Leave a Comment