ಹೆಣ್ಣು ಹೇಗಿರಬೇಕು?ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ.

0

ಹೆಣ್ಣು ಹೇಗಿರಬೇಕು…..?…… ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ. ವಾದ ಮಾಡಿದರೆ ವಾಚಾಳಿ ಎಂದು ಹೇಳುತ್ತಾರೆ. ನಗುನಗುತ್ತ ಇದ್ದರೆ ನಂಬ ಬೇಡ ಎಂದು ಹೇಳುತ್ತಾರೆ. ಅತ್ತರೆ ಊರು ಹಾಳು ಮಾಡುವವಳು ಎಂದು ಹೇಳುತ್ತಾರೆ ಹೊಂದಿಕೊಂಡು ಹೋದರೆ ಇವಳು ನಾಟಕವನ್ನು ಮಾಡುತ್ತಿದ್ದಾಳೆ.

ಎಂದು ಹೇಳುತ್ತಾರೆ ಹೊಂದದಿದ್ದರೆ ಮನೆಹಾಳುಮಾಡುತ್ತಾಳೆ ಎಂದು ಆಪಾದನೆ ಮಾಡುತ್ತಾರೆ ಬಾಯಿ ಮಾಡಿದರೆ ಜಗಳಗಂಟಿ ಎಂದು ಹೇಳುತ್ತಾರೆ. ನಿಧಾನವಾಗಿ ಮಾತನಾಡಿದರೆ ಉಸಿರಿಲ್ಲದವಳು ಎಂದು ಹೇಳುತ್ತಾರೆ .ಒಬ್ಬಳೇ ಕೆಲಸ ಮಾಡಿದರೆ ಯಾರನ್ನು ಕರೆಯುವುದಿಲ್ಲ ಎಂದು ನಿಂದಿಸುತ್ತಾರೆ

ಕೆಲಸಕ್ಕೆ ಕರೆದರೆ ಸರಿ ಗಟ್ಟುವಗಳು ಎನ್ನುವರು ಕೇಳಿ ಮಾಡಿದರೆ ಏನೂ ಗೊತ್ತಿಲ್ಲವೆಂದು ಹೇಳುವರು ಕೇಳದೆ ಮಾಡಿದರೆ ಕಾರುಬಾರು ನಡೆಸುವವಳು ಎಂದು ಹೇಳುತ್ತಾರೆ. ಸಿಂಪಲ್ ಆಗಿದ್ದರೆ ಅಂದವಿಲ್ಲ ಎನ್ನುವರು. ಸಿಂಗರಿಸಿಕೊಂಡರೆ ಆಡಂಬರದವಳು ಎಂದು ಹೇಳುತ್ತಾರೆ.

ಮನೆತನದ ಕಾಳಜಿ ಮಾಡಿದರೆ ಇವಳೊಬ್ಬಳಿಗೆ ತಿಳಿದಿದೆಯೋ ಎಂದು ಹೇಳುತ್ತಾರೆ. ಕಾಳಜಿ ಮಾಡಿದರೆ ನಿರ್ಲಕ್ಷಿಸುತ್ತಿದ್ದಾಳೆ ಎಂದು ಹೇಳುತ್ತಾರೆ ರಥಪೂಜೆ ಮಾಡಿದರೆ ಗೌರಮ್ಮ ಎಂದು ಹೇಳುತ್ತಾರೆ ಏನು ಮಾಡದಿದ್ದರೆ ಸಂಸ್ಕೃತಿ ಇಲ್ಲದವಳು ಎಂದು ಹೇಳುತ್ತಾರೆ ಹೆಣ್ಣನ್ನು ಹೇಗೆ ಇದ್ದರೂ.. ಹೇಗಿದ್ದರೆ ಹೊಗಳುವವರು… ಹೇಗಿದ್ದರೆ ಇಷ್ಟಪಡುವವರು …ಹೇಗಿದ್ದರೆ ಗೌರವಿಸುವವರು …ತಿಳಿಯದಾಗಿದೆ ..

Leave A Reply

Your email address will not be published.