ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಅನ ಲಾಭ

0

ನಾವು ಈ ಲೇಖನದಲ್ಲಿ ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಯಾವ ರೀತಿಯ ಲಾಭಗಳು ಆಗುತ್ತದೆ ಎಂಬುದನ್ನು ನೋಡೋಣ .ಲಕ್ಷ್ಮೀನಾರಾಯಣ ಯೋಗವು 2023ರ ಡಿಸೆಂಬರ್ 28ರಂದು ರೂಪುಗೊಳ್ಳುತ್ತಿದೆ . ಲಕ್ಷ್ಮೀನಾರಾಯಣ ಯೋಗವು ಅನೇಕ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಆದ್ದರಿಂದ ಈ ಯೋಗದಿಂದ ಯಾವ ಯಾವ ರಾಶಿಗಳು ಶ್ರೀಮಂತಿಕೆಯನ್ನು ಪಡೆಯುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. 2023 ಕೊನೆಯ ತಿಂಗಳು ಡಿಸೆಂಬರ್ ಪ್ರಾರಂಭವಾಗಿದೆ.

ಎಲ್ಲರೂ ಕೂಡ 2024 ಹೊಸ ವರ್ಷಕ್ಕೆ ಕಾಯುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಹೊಸ ವರ್ಷ ಕೆಲವು ರಾಶಿಯವರಿಗೆ ಅದೃಷ್ಟವನ್ನು ಮಾಡುತ್ತದೆ. ಡಿಸೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ . ಡಿಸೆಂಬರ್ 13 ರಂದು ಮಧ್ಯಾಹ್ನ 1. 50 ಕ್ಕೆ ಬುಧ ಗ್ರಹ ಧನು ರಾಶಿಯಲ್ಲಿ ಸೇರುತ್ತದೆ. ಡಿಸೆಂಬರ್ 16ನೇ ತಾರೀಖು ಮಧ್ಯಾಹ್ನ 1 .20 ಕ್ಕೆ ಸೂರ್ಯನು ಧನು ರಾಶಿಯನ್ನು ಪ್ರವೇಶ ಮಾಡುತ್ತಾನೆ. ಡಿಸೆಂಬರ್ 25ನೇ ತಾರೀಖು ಶುಕ್ರನು ವೃಶ್ಚಿಕ ರಾಶಿಯನ್ನು ಬೆಳಿಗ್ಗೆ 9.5 ಕ್ಕೆ ಪ್ರವೇಶ ಮಾಡುತ್ತಾನೆ.

ಡಿಸೆಂಬರ್ 27 ನೇ ತಾರೀಖು ಮಧ್ಯಾಹ್ನ 12.15 ಕ್ಕೆ ಮಂಗಳನು ಧನು ರಾಶಿಯಲ್ಲಿ ನೆಲೆಸುತ್ತಾನೆ. ಡಿಸೆಂಬರ್ 31ನೇ ತಾರೀಖು ಗುರು ಗ್ರಹವು ಸಂಜೆ 6 ಗಂಟೆ 46 ನಿಮಿಷಕ್ಕೆ ಮೇಷ ರಾಶಿಯಲ್ಲಿ ಸಂಚಲಿಸಲಿದೆ.ಈ ರೀತಿಯಾಗಿ ಹಲವು ಗ್ರಹಗಳು ಬದಲಾವಣೆಯಾಗುವುದನ್ನು ಡಿಸೆಂಬರ್ ತಿಂಗಳಲ್ಲಿ ನಾವು ಕಾಣಬಹುದು. ಡಿಸೆಂಬರ್ 28ನೇ ತಾರೀಖು ಅಪರೂಪದ ಒಂದು ಯೋಗ ಉಂಟಾಗುತ್ತಿದೆ.

ಅದು ಲಕ್ಷ್ಮೀನಾರಾಯಣ ಯೋಗ. ಈ ಯೋಗ ಕೆಲವು ರಾಶಿಯವರಿಗೆ ಲಕ್ಷ್ಮಿಯ ಅಪಾರವಾದ ಕೃಪೆ ದೊರೆಯುವಂತೆ ಮಾಡುತ್ತದೆ. ಮಿಥುನ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗ ಶುಭಕರವಾಗಿರುತ್ತದೆ . ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸುವುದು ಬಹಳ ಒಳ್ಳೆಯದು. ಯಶಸ್ಸು ನಿಮಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮಗೆ ದೊರೆಯುತ್ತದೆ.

ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಇಲ್ಲಿಯವರೆಗೆ ನಡೆಯುತ್ತಿದ್ದರು ಇನ್ನು ಮುಂದೆ ಎಲ್ಲವೂ ಮಿಥುನ ರಾಶಿಯವರಿಗೆ ದೂರವಾಗುತ್ತದೆ. ಅಂದರೆ ಡಿಸೆಂಬರ್ 28ರ ನಂತರ ಅಂದರೆ, ಹೊಸ ವರ್ಷದಲ್ಲಿ ನಿಮಗೆ ಬಹಳ ಎಲ್ಲವೂ ಒಳ್ಳೆಯದಾಗುತ್ತದೆ.ಕೆಲಸದ ಸ್ಥಳದಲ್ಲಿರುವ ಎಲ್ಲಾ ರೀತಿಯ ಲೋಪ ದೋಷಗಳು ಮತ್ತು ಅಡೆತಡೆಗಳು ನಿವಾರಣೆ ಯಾಗುತ್ತದೆ. ಮಿಥುನ ರಾಶಿಯವರು ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ .ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಕೂಡ ಪರಿಹಾರವನ್ನು ಪಡೆಯುತ್ತಾರೆ.

ಮಿಥುನ ರಾಶಿಯವರಿಗೆ 2024ರ ಆರಂಭದಲ್ಲೇ ಲಕ್ಷ್ಮಿಯ ಕೃಪೆ ಸಿಗುತ್ತಿದೆ. ಇನ್ನು ವೃಶ್ಚಿಕ ರಾಶಿ. ವೃಶ್ಚಿಕ ರಾಶಿಯವರಿಗೆ ಕೂಡ ಲಕ್ಷ್ಮಿ ನಾರಾಯಣ ಯೋಗ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಯೋಗದ ಪರಿಣಾಮದಿಂದ ಅದೃಷ್ಟದ ಬೆಂಬಲ ಸಂಪೂರ್ಣವಾಗಿ ಸಿಗುತ್ತದೆ. ವೃಶ್ಚಿಕ ರಾಶಿಯವರು ಕೂಡ ಯಾವುದೇ ಕೆಲಸಗಳಿಗೆ ಕೈಹಾಕಿದರು ಅದೃಷ್ಟದ ಜೊತೆಗೆ ಯೋಗದ ಬೆಂಬಲವೂ ಕೂಡ ಸಿಗುತ್ತದೆ. ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರಿಗೆ ದೀರ್ಘಕಾಲದ ಕೆಲಸ ಯಾವುದಾದರೂ ಉಳಿದುಕೊಂಡಿದ್ದರೆ ,

ಈ ಸಂದರ್ಭದಲ್ಲಿ ನೀವು ಆ ಕೆಲಸವನ್ನು ನಿರಾಶಾಯವಾಗಿ ಸಂಪೂರ್ಣಗೊಳಿಸುತ್ತೀರಿ . ಮತ್ತು ಆ ಕೆಲಸದಿಂದ ಯಶಸ್ಸನ್ನು ಪಡೆಯಬಹುದು. ಮನೆ ಖರೀದಿಸಲು ಕೂಡ ಈ ಸಮಯದಲ್ಲಿ ಯೋಚಿಸುವ ಸಾಧ್ಯತೆ ಇರುತ್ತದೆ. ಡಿಸೆಂಬರ್ 28ರ ನಂತರ ವೃಶ್ಚಿಕ ರಾಶಿಯವರಿಗೆ ಒಂದು ಒಳ್ಳೆಯ ಸಮಯ ಬರುತ್ತದೆ. ಇನ್ನು ಕುಂಭ ರಾಶಿ. ಕುಂಭ ರಾಶಿಗೆ ಸೇರಿದ ಜನರು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಂಭ ರಾಶಿಯ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸು ಪಡೆಯುತ್ತಾರೆ .

ವೃತ್ತಿ ಪರ ಜೀವನದಲ್ಲಿನ ಕಷ್ಟಗಳು ಕಡಿಮೆಯಾಗುತ್ತದೆ . ನಿಮ್ಮ ಕೆಲಸ ಮಾಡುವ ಸ್ಥಳದಲ್ಲಿನ ಸುತ್ತಮುತ್ತಲಿನ ಅಡೆ-ತಡೆಗಳು ಎಲ್ಲವೂ ಸಮಸ್ಯೆಗಳು ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಹೊಸತನ್ನು ಸಾಧನೆ ಮಾಡಬೇಕು ಎಂಬುದು ಯೋಚನೆಗೆ ಬರುತ್ತದೆ. ಅದರಲ್ಲಿ ಉತ್ಸಾಹ ಕೂಡ ಇರುತ್ತದೆ. ನಿಮಗೆ ಬಹಳಷ್ಟು ಆರ್ಥಿಕ ಪ್ರಗತಿಯಾಗಲು ಬಹಳಷ್ಟು ಅವಕಾಶಗಳು ಕುಂಭ ರಾಶಿಯವರಿಗೆ ಇರುತ್ತದೆ.

ನಿಮ್ಮ ಪ್ರಯತ್ನ ಹೆಚ್ಚಿನದಾಗಿರಬೇಕು .ನಿರುದ್ಯೋಗಿಗಳಿಗೂ ಸಹ ಈ ಸಮಯದಲ್ಲಿ ಕೆಲಸ ಸಿಗುವ ಸಾಧ್ಯತೆ ಹೆಚ್ಚು ಇರುತ್ತದೆ. ಉತ್ತಮ ಉದ್ಯೋಗ ಪಡೆಯುವಿರಿ . ಈ ಮೂರು ರಾಶಿ ಅಂದರೆ ಮಿಥನರಾಶಿ , ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ ಅವರಿಗೂ ಲಕ್ಷ್ಮೀನಾರಾಯಣ ಯೋಗ ಇರುವುದರಿಂದ ಅಂದುಕೊಂಡ ಕಾರ್ಯಗಳೆಲ್ಲಾ 2024ರಲ್ಲಿ ಅಂದರೆ ಹೊಸ ವರ್ಷದಲ್ಲಿ ಎಲ್ಲವೂ ನಡೆಯುತ್ತದೆ ಎಂದು ಹೇಳಲಾಗಿದೆ .

Leave A Reply

Your email address will not be published.