ಮಂಚದ ಮೇಲೆ ಈ ವಸ್ತುಗಳನ್ನು ಇಟ್ಟರೆ ಹಣದ ಸಮಸ್ಯೆ ಹೆಚ್ಚುತ್ತೆ ದೈವಬಲ‌ ಕಡಿಮೆಯಾಗುತ್ತೆ

0

ಮಂಚದ ಮೇಲೆ ಮತ್ತು ಮಂಚದ ಕೆಳಗೆ ಈ ವಸ್ತುಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪುವುದಿಲ್ಲ. ಈ ಕಾರಣದಿಂದ ಮನೆಯಲ್ಲಿನ ಚಿನ್ನ ಗಿರವಿ ಅಂಗಡಿಗೆ ಸೇರುತ್ತದೆ. ಭಗವಂತನ ಅನುಗ್ರಹ ಕಡಿಮೆಯಾಗಿ ಅದೃಷ್ಟ ತಪ್ಪಿಹೋಗುತ್ತದೆ. ಮಲಗುವ ಮಂಚದ ಮೇಲೆ ಯಾವ ವಸ್ತುಗಳನ್ನು ಇಡಬಾರದು, ಮನೆಯಲ್ಲಿ ಯಾವ ರೀತಿಯ ದೋಷಗಳು ಉಂಟಾಗುತ್ತದೆ ಎಂಬ ಮಾಹಿತಿಯನ್ನು

ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗೊತ್ತೊದ್ದೋ ಗೊತ್ತಿಲ್ಲದೆಯೋ ಮಂಚದ ಮೇಲೆ ಕೆಲವು ವಸ್ತುಗಳನ್ನು ಇಡಬಾರದು. ದೇವರ ಕೋಣೆಯನ್ನು ಯೋಗಸ್ಥಾನವೆಂದು ಕರೆಯಲಾಗುತ್ತದೆ. ಮಲಗುವ ಕೋಣೆಯನ್ನ ಭೋಗಸ್ಥಾನವೆಂದು ಕರೆಯಲಾಗುತ್ತದೆ. ಭೋಗಸ್ಥಾನದಲ್ಲಿ ಯೋಗಸ್ಥಾನದ ವಸ್ತುಗಳನ್ನು ಇಡಬಾರದು. ಭಗವಂತನಿಗೆ ನೈವೇದ್ಯವನ್ನು ಮಾಡುವಾಗ ನೈವೇದ್ಯವನ್ನು ಎಂತಹದ್ದೇ ಪರಿಸ್ಥಿತಿಯಲ್ಲೂ ಮಂಚದ ಮೇಲೆ ಇಡಬಾರದು. ಮನೆಯಲ್ಲಿ ಗೊತ್ತಿಲ್ಲದೇ ಇಂತಹ ತಪ್ಪುಗಳು ಜರುಗುತ್ತವೆ.

ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ ಈ ವಿಚಾರವನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿ ಹೇಳಬೇಕು. ಜೊತೆಗೆ ಅರಿಶಿಣ ಕುಂಕುಮವನ್ನು ಮಂಚದ ಮೇಲೆ ಇಡಬಾರದು. ಭಗವಂತನ ಸೇವೆಗೆ ಬಳಸುವಂತಹ ಅರಿಶಿಣ, ಕುಂಕುಮವನ್ನು ಭೋಗಸ್ಥಾನದಲ್ಲಿಟ್ಟರೆ ಭಗವಂತನ ಅನುಗ್ರಹ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೂ ಪೂಜೆಗೆ ಬಳಸಿದ ವೀಳ್ಯೆದೆಲೆ ಹಾಗೂ ಅಡಿಕೆಯನ್ನು ಮಂಚದ

ಮೇಲೆ ಇಡಬಾರದು. ಸಾಲಿಗ್ರಾಮ, ಶಿವಲಿಂಗ, ಗೆಜ್ಜೆವಸ್ತ್ರ ಇವುಗಳನ್ನು ಸಹ ಭೋಗಸ್ಥಾನದಲ್ಲಿಡಬಾರದು. ಎಷ್ಟೋ ಜನ ಬೀರುವಿನಿಂದ ಚಿನ್ನ ಮತ್ತು ಬೆಳ್ಳಿಯನ್ನು ತೆಗೆದು ನೇರವಾಗಿ ಮಂಚದ ಮೇಲೆ ಇಡುತ್ತಾರೆ. ದುಡ್ಡನ್ನು ಸಹ ಮಂಚದ ಮೇಲೆ ಕುಳಿತುಕೊಂಡೆ ಲೆಕ್ಕವನ್ನು ಹಾಕುತ್ತಾರೆ, ಎಂತಹದ್ದೇ ಪರಿಸ್ಥಿತಿಯಲ್ಲಿಯೂ ಸಹ ಬಂಗಾರದ ಆಭರಣಗಳನ್ನು ಮಂಚದ ಮೇಲೆ ಇಡಬಾರದು ಇಂತಹ ತಪ್ಪುಗಳನ್ನು ಮಾಡಿದರೆ

ಆ ಮನೆಯಲ್ಲಿದ್ದಂತಹ ಬಂಗಾರ ಕ್ರಮ ಕ್ರಮವಾಗಿ ಗಿರವಿ ಅಂಗಡಿಗೆ ಸೇರುತ್ತದೆ. ಮನೆಯಲ್ಲಿ ಹಣದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಮನೆಯ ಸದಸ್ಯರಿಗೆ ದೈವಬಲ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಮಂಚದ ಕೆಳಗೂ ಕೂಡ ಕೆಲವು ವಸ್ತುಗಳನ್ನು ಇಡಬಾರದು. ಮಂಚದ ಕೆಳಗೆ ಪೊರಕೆಯನ್ನು ಇಡಬಾರದು. ಪೊರಕೆಯನ್ನು ಮಂಚದ ಕೆಳಗೆ ಇಟ್ಟರೆ

ಆ ಮನೆಗೆ ಲಕ್ಷ್ಮಿ ದೇವಿಯ ಅನುಗ್ರಹ ಆ ಮನೆಗೆ ಕಡಿಮೆಯಾಗುತ್ತ ಹೋಗುತ್ತದೆ. ಹಾಗೆಯೇ ಮಂಚದ ಕೆಳಗೆ ಮುರಿದು ಹೋದ, ಒಡೆದು ಹೋದ ಹಳೆಯ ವಸ್ತುಗಳನ್ನು ಇಡಬಾರದು ಮತ್ತು ಚೂಪಾದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಗಾಜಿನ ಸೀಸ ಅಥವಾ ಬಾಟಲುಗಳನ್ನು ಎಂತದ್ದೇ ಸಮಯದಲ್ಲೂ ಕೂಡ ಮಂಚದ ಕೆಳಗೆ ಇಡಬಾರದು.

ಇದರಿಂದ ಮನೆಗೆ ದರಿದ್ರ ಕಟ್ಟಿಟ್ಟ ಬುತ್ತಿ. ಹಣದ ಸಂಕಷ್ಟಗಳು ಮನೆಯಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಎಷ್ಟೋ ಜನ ಮಂಚದ ಕೆಳಗೆ ಎಣ್ಣೆಯನ್ನು ಇಟ್ಟಿರುತ್ತೀರಾ, ಈ ರೀತಿ ಇಡುವುದರಿಂದ ಮಾನಸಿಕ ಅಶಾಂತಿ ಹೆಚ್ಚಾಗುತ್ತಾ ಹೋಗುತ್ತದೆ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಎಲಾಟ್ರಾನಿಕ್ಸ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಂಚದ ಕೆಳಗೆ ಇಡಬಾರದು.

ರಿಪೇರಿಗೆ ಬಂದಿರುವ ಎಲಾಟ್ರಾನಿಕ್ಸ್ ವಸ್ತುಗಳನ್ನು ಮಂಚದ ಕೆಳಗೆ ಇಡಬಾರದು. ಹಾಗೆಯೇ ಎಷ್ಟೋ ಜನರು ನಿದ್ರೆಯನ್ನು ಮಾಡಬೇಕಾದರೆ ತಾವು ಮಲಗುವ ದಿಂಬಿನ ಕೆಳಗೆ ದೇವರ ಚಿತ್ರಪಟವನ್ನು ಇಟ್ಟುಕೊಂಡು ನಿದ್ರಿಸುತ್ತಾರೆ ಹಾಗೇ ಮಾಡಬಾರದು. ಈ ತಪ್ಪನ್ನು ಮಾಡಿದರೇ ಭಗವಂತನ ಅನುಗ್ರಹ ಕ್ರಮೇಣ ಕಡಿಮೆಯಾಗುತ್ತದೆ. ಆದ್ದರಿಂದ ದಿಂಬಿನ ಕೆಳಗೆ ದೇವರ ಫೋಟೋವನ್ನು ಇಟ್ಟುಕೊಂಡು ನಿದ್ರೆಯನ್ನು ಮಾಡಬಾರದು.

Leave A Reply

Your email address will not be published.