ನಾವು ಈ ಲೇಖನದಲ್ಲಿ ಮೀನ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಮೀನ ರಾಶಿಗೆ ಸಾಡೇ ಸಾತಿ ಶುರುವಾಗಿರುವುದರಿಂದ ಅದರ ಪ್ರಭಾವದ ಅರಿವು ಈಗಾಗಲೇ ನಿಮಗೆ ಗೊತ್ತಿರುತ್ತದೆ. ಇಂತಹ ಇಕಟ್ಟಾದಂತಹ ಪರಿಸ್ಥಿತಿಯಲ್ಲಿ ಗುರು ಬಲವು ನಿಮಗೆ ಇರುವುದಿಲ್ಲ. ಮೇ 1 ನೇ ತಾರೀಕು ,2024 ರಲ್ಲಿ ವೃಷಭ ರಾಶಿಯಲ್ಲಿ ಗುರು ಪರಿವರ್ತನೆ ಆಗುತ್ತದೆ. ಮೀನ ರಾಶಿಯಿಂದ ವೃಷಭ ರಾಶಿಯು ಮೂರನೇ ಮನೆಯಾಗಿರುತ್ತದೆ. ಅಂದರೆ ತೃತೀಯ ಭಾವವಾಗಿರುತ್ತದೆ .
ಈ ಪರಿವರ್ತನೆಯಿಂದ ಒಳ್ಳೆಯ ಬದಲಾವಣೆಗಳು ಇರುವುದಿಲ್ಲ. ನೀವು ತುಂಬಾ ಎಚ್ಚರಿಕೆಯನ್ನು ಅನುಸರಿಸಬೇಕಾಗುತ್ತದೆ . ನಿಮಗೆ ಯಾವ ರೀತಿಯ ಫಲಗಳು ಇದೆ ಎಂಬುದನ್ನು ತಿಳಿದುಕೊಳ್ಳೋಣ. ಮೂರನೇ ಮನೆ ಎನ್ನುವುದು ಧೈರ್ಯ ಪರಾಕ್ರಮ ಶೌರ್ಯಕ್ಕೆ ಸಂಬಂಧಪಟ್ಟಿರುತ್ತದೆ . ಕೆಲವೊಂದು ಗ್ರಹಗಳು ಈ ಮನೆಯಲ್ಲಿದ್ದಾಗ ಈ ಗುಣಗಳನ್ನು ಹೆಚ್ಚು ಮಾಡಿದರೆ ಇನ್ನು ಕೆಲವು ಗ್ರಹಗಳು ಕಡಿಮೆ ಮಾಡುತ್ತದೆ . ಈ ನಿಮ್ಮ ಧೈರ್ಯ ಸಾಹಸವನ್ನು ಕಡಿಮೆ ಮಾಡುವಲ್ಲಿ ಗುರುಗ್ರಹವು ಮುಂದಾಗುತ್ತದೆ.
ಸಣ್ಣ ಪುಟ್ಟ ಕೆಲಸ ಮಾಡುವಾಗಲೂ ಸಹ ಸೋಲಿನ ಭಯವೂ ನಿಮ್ಮನ್ನು ಕಾಡುತ್ತದೆ. ಸಂಬಂಧದ ವಿಚಾರಕ್ಕೆ ಬಂದರೆ ಬೇರೆಯವರ ಜೊತೆ ತಮ್ಮನ್ನು ತಾವೇ ಹೋಲಿಸಿಕೊಂಡು ಕೀಳರಿಮೆಯನ್ನು ಸಹ ಉಂಟು ಮಾಡಿಕೊಳ್ಳುತ್ತಾರೆ. ಹಣಕಾಸಿನ ವಿಚಾರಕ್ಕೆ ಬಂದರೆ ತುಂಬಾ ನಷ್ಟವಾಗುವ ಸಾಧ್ಯತೆ ಹೆಚ್ಚು. ಯಾವ ಮೂಲದಿಂದ ದುಡ್ಡು ಬರುತ್ತದೆ ಎಂದು ಕಾಯುವ ಪರಿಸ್ಥಿತಿಯೂ ಸಹ ಉಂಟಾಗುತ್ತದೆ. ಸಾಲ ಮಾಡುವ ಗೋಜಿಗಂತೂ ಹೋಗಲೇಬೇಡಿ.
ಸಾಲ ತೆಗೆದುಕೊಂಡು ಬಂದರು ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯವು ಸಹ ಕಡಿಮೆಯಾಗಬಹುದು. ನಿಮ್ಮ ಹತ್ತಿರ ಉಳಿತಾಯವಿದ್ದರೆ ಅದನ್ನು ಕಾಪಾಡಿಕೊಳ್ಳಿ. ಬೇಡದ ವಿಚಾರಗಳಿಗೆ ಅದನ್ನು ವ್ಯರ್ಥವಾಗಿ ದುಂದು ವೆಚ್ಚ ಮಾಡಬೇಡಿ. ನಂಬಿಕೆ ವಿಚಾರದಲ್ಲಿ ತುಂಬಾ ಜಾಗರೂಕರಾಗಿ ಇರಬೇಕು ಯಾರನ್ನು ಸಹ ನಂಬಲು ಹೋಗಬೇಡಿ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬಲು ಹೋಗಬೇಡಿ . ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ. ನೀವು ನಂಬಿದವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು.
ಶನಿ ಮತ್ತು ರಾಹು ಗ್ರಹದ ಪ್ರಭಾವವು ನಿಮಗೆ ಚೆನ್ನಾಗಿರುವುದಿಲ್ಲ. ತೃತಿಯ ಭಾವಕ್ಕೆ ನಾವು ಬಾತೃ ಸ್ಥಾನ ಎಂದು ಕರೆಯುತ್ತೇವೆ. ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಮೀನ ರಾಶಿಯವರಿಗೆ ತುಂಬಾ ಅತಿ ಯೋಚನೆ ಮಾಡುವ ಗುಣವಿರುತ್ತದೆ. ಮಾತನಾಡಿ ಸಂಬಂಧ ಹಾಳು ಮಾಡಿಕೊಳ್ಳುವುದರ ಬದಲು ತಾಳ್ಮೆಯಿಂದ ವರ್ತಿಸಿ. ಹಿರಿಯರು ಹೇಳುವ ಮಾತಿಗೆ ಮಹತ್ವವನ್ನು ಕೊಡಿ. ಹಿರಿಯರನ್ನು ಗೌರವಿಸದರೆ ಮಾತ್ರ ಗುರುವಿನ ಬೆಂಬಲ ನಿಮಗೆ ದೊರೆಯುತ್ತದೆ.
ಮೇ 14 2025ರ ವರೆಗೆ ಆರೋಗ್ಯದ ವಿಚಾರದಲ್ಲಿ ನೀವು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಗಂಟಲಿಗೆ ಸಂಬಂಧಪಟ್ಟಂತಹ ತೊಂದರೆಗಳು ನಿಮ್ಮನ್ನು ಕಾಡಬಹುದು. ಇನ್ನು ಕೆಲವರಿಗೆ ನರಗಳು ಅಥವಾ ಭುಜಕ್ಕೆ ಸಂಬಂಧಪಟ್ಟಂತಹ ತೊಂದರೆಗಳು ಸಹ ಕಾಣಿಸಿಕೊಳ್ಳಬಹುದು. ಮಾನಸಿಕವಾಗಿ ನೀವು ಬಲಹೀನರಾಗಬಹುದು. ಪ್ರೀತಿ ಪ್ರೇಮದ ವಿಚಾರದಲ್ಲಿ ಮೋಸ ಹೋಗಬಹುದು.
ಗುರುವು ಬುದ್ಧಿ ಕಾರಕ ಆಗಿರುವುದರಿಂದ ಬಹಳಷ್ಟು ಜನರಿಗೆ ಮಾನಸಿಕ ಒತ್ತಡ ಕಿರಿಕಿರಿ ಹಿಂಸೆಗಳು ಉಂಟಾಗುತ್ತದೆ. ಇದೆಲ್ಲವೂ ಒಂದು ಮಟ್ಟಿಗೆ ಕಡಿಮೆಯಾಗುವುದು . ಮೇ 14 .2025 ರ ನಂತರ ಗುರುವು ವೃಷಭ ರಾಶಿಯನ್ನು ಬಿಟ್ಟು ಮುಂದಿನ ರಾಶಿಗೆ ಹೋದ ನಂತರ ಒಳ್ಳೆಯ ದಿನಗಳು ಬರಲಿದೆ. ಅಭಿಷ್ಟಾ ಫಲದಂ ವಂದೇ ಸರ್ವಜ್ಞ ಸುರಪೂಜಿತಂ ಅಕ್ಷಮಾಲಾಧರಂ ಶಾಂತಂ ಪ್ರಣಮಾಮಿ ಬೃಹಸ್ಪತಿಂ ಈ ಗುರು ಮಂತ್ರವನ್ನು ಪಠಿಸಿಕೊಳ್ಳಿ.