ನಾವು ಈ ಲೇಖನದಲ್ಲಿ ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳು ಬಳಸಬಾರದು ಎಂಬ ವಿಷಯದ ಬಗ್ಗೆ ತಿಳಿಸಲಾಗಿದೆ. ಮಾತು ಆಡಿದರೆ ಹೋಯಿತು . ಮುತ್ತು ಒಡೆದರೆ ಹೋಯಿತು . ಎಂಬ ಗಾದೆ ಮಾತಿನಂತೆ, ಬೈಗುಳ ದ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು, ಆಡಿಸಿಕೊಂಡವನಿಗೂ ಕೇಡು, ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತದೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ
ಮಾಡುವವನಿಗೆ ಸ್ವತಃ ಹಾನಿ . ಅವುಗಳನ್ನು ನಾವು ಗಟ್ಟಿಯಾಗಿ ಉಚ್ಚರಿಸಬಾರದು . ಕೆಲವು ಪದಗಳನ್ನು ಹೇಳಲು ಬಾರದು . ಹಾಗೇ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ , ಹಾಗೆ ಆಗಿಬಿಡುತ್ತದೆ. ಎಂಬ ನಂಬಿಕೆ ಇದೆ. ಇದು ಸುಳ್ಳಲ್ಲ , ಎಂದು ಚಾಣಕ್ಯನು ಸಮರ್ಥಿಸುತ್ತಾನೆ. ಹಾಗಿದ್ದರೆ ಆ ಮಾತುಗಳು ಯಾವುದು ಎಂದು ನೋಡೋಣ .
1 . ಥೂ ದರಿದ್ರ :- ನಾವು ಕೆಲವೊಮ್ಮೆ ನಮಗೆ ಏನಾದರೂ ಕೆಟ್ಟದಾದರೆ, ನಮಗೆ ಇಷ್ಟವಾಗದವರು ಯಾರಾದರೂ ಬಂದರೆ, ನಮಗೆ ಬೇಡದೆ ಇದ್ದದ್ದು ದೊರೆತರೆ, ಬೇಕಾಗಿದ್ದು ಸಿಗದೇ ಹೋದರೆ ಹೀಗೆ ಬೈದುಕೊಳ್ಳುತ್ತೇವೆ. ದರಿದ್ರ ಎಂಬ ಪದದ ಅರ್ಥ ಬಡತನ ಎಂದು . ದರಿದ್ರ ಎ೦ದು ಬೈದುಕೊಳ್ಳುವವನ ಮೇಲೆ ಬಡತನಕ್ಕೆ ಪ್ರೀತಿ ಉಂಟಾಗುತ್ತದೆ. ಆದ್ದರಿಂದ
ತಪ್ಪಿಯು ಈ ಪದವನ್ನು ಹೇಳಬೇಡಿ .
2 . ಗ್ರಹಚಾರ :- ಜಾತಕದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ. ಆದರೆ ನಾವು ಗ್ರಹಚಾರ ಎಂದು ಉಚ್ಚರಿಸುವುದು ನಮಗೆ ಏನಾದರೂ ಕೆಟ್ಟದ್ದು ಸಂಭವಿಸಿದಾಗ ನಾವು ಆಡುವ ಮಾತಿನ ಧ್ವನಿಯಲ್ಲಿ ಕೆಟ್ಟದ್ದು ಎಂಬುದು ಹೊರ ಸೂಸುತ್ತಾ ಇರುತ್ತದೆ. ಇದು ನಿಮ್ಮ ಜಾತಕದಲ್ಲಿ ಇರುವ ಕೆಲವು ಗ್ರಹಗಳಿಗೆ ಇಷ್ಟವಾಗದು . ಹೀಗಾಗಿ ಗ್ರಹಗಳಿಗೆ ಕೋಪ ತರಿಸಬೇಡಿ ….