ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು

ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು. ದೇವರ ಮನೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿರುವ ದೇವರಿಗೆ ಸರಿಯಾದ ವಿಧಾನಗಳಿಂದ ಪೂಜೆ ಮಾಡಬೇಕು.

ಪ್ರತಿನಿತ್ಯ ಪೂಜೆ ಮಾಡುವಾಗ ನಾವು ನಮ್ಮ ಮನೆಗೆ ಕುಲದೇವರಿಗೆ ಮೊದಲು ಪೂಜೆ ಸಲ್ಲಿಸಬೇಕು ಕುಲದೇವಿದ ಆಶೀರ್ವಾದವಿರುವ ಮನೆಯು ಶಾಂತಿ ನೆಮ್ಮದಿ ಸಮೃದ್ಧಿಯಿಂದ ಕೂಡಿರುತ್ತದೆ.

ಬೆಳಗ್ಗೆ ಬೇಗನೆ ದೇವರ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಪೂಜೆಯ ಹೊತ್ತಿನಲ್ಲಿ ದೇವರ ಕೋಣೆಯಲ್ಲಿ ದೀಪ ಬೆಳಗುವುದು ಕಡ್ಡಾಯವೆಂದು ಹಿರಿಯರು ಹೇಳುತ್ತಾರೆ.

ಮನೆಯ ಸುಮಂಗಲಿಯರು ಪ್ರತಿನಿತ್ಯ ಹೊಸ್ತಿಲ ಪೂಜೆಯನ್ನು ತಪ್ಪದೇ ಮಾಡಬೇಕು ಕುಲದೇವರ ಪೂಜೆ ಸರಿ ಇದ್ದರೆ ಮಾತ್ರ ಎಲ್ಲಾ ದೇವರ ಪೂಜೆಯ ಪೂರ್ಣ ಫಲಗಳು ಸಿಗುತ್ತದೆ ಹಾಗಾಗಿ ಮನೆಯಲ್ಲಿ ಕುಲದೇವರ ಆಶೀರ್ವಾದ ತುಂಬಾನೇ ಮುಖ್ಯ.

ಹೊಸ ವಿಗ್ರಹವನ್ನು ತಂದಾಗ ಹಾಲು ಅರಿಶಿಣಗಳಿಂದ ವಿಗ್ರಹಗಳನ್ನು ಶುದ್ದಿ ಗೊಳಿಸಿ ನಂತರ ಪೂಜಿಸಬೇಕು. ಗಡ್ಡೆಯನ್ನು ಬಾರಿಸಿದೆ ದೇವರಿಗೆ ಆರತಿ ಅಥವಾ ದೂಪ ದೀಪ ಮಾಡಬಾರದು.

ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನು ಉಪಯೋಗಿಸಿ ಆಂಜನೇಯ ದೇವರ ಪಾದಗಳನ್ನು ಹಿಡಿದು ಗಂಟೆ ಬಾರಿಸಬೇಕು.ದೇವರ ಮನೆ ದೀಪಗಳು ದೇವರ ವಿಗ್ರಹಗಳು ಪೂಜಾ ಸಾಮಗ್ರಿಗಳು ಎಷ್ಟು ಸಿದ್ಧವಾಗಿದೆ ಅಷ್ಟು ಶುಭ ಫಲಗಳು ಸಿಗುತ್ತವೆ.

ದೇವರ ಮನೆಯಲ್ಲಿ ಒಡೆದಿರುವ ಭಿನ್ನಗೊಂಡಿರುವ ವಿಗ್ರಹ ಅಥವಾ ಫೋಟೋ ಇಟ್ಟು ಪೂಜಿಸಬಾರದು.ದೇವರ ಮನೆಯನ್ನು ಬದುಕೇಂದ ಗುಡಿಸದೆ ಬಟ್ಟೆಯಿಂದ ಸ್ವಚ್ಛ ಮಾಡುವುದು ಉತ್ತಮ. ದೇವರ ಮನೆಯನ್ನು ಅರಿಶಿಣ ಹಾಕಿದ ನೀರಿನಿಂದ ಶುದ್ಧ ಮಾಡಿ ಆ ಮನೆಯಲ್ಲಿ ದೈವ ಕಳೆ ಹೆಚ್ಚಾಗುತ್ತದೆ.

ದೇವರ ಮನೆಯಲ್ಲಿ ಜಾಸ್ತಿ ಆದರೆ ನೈವೇದ್ಯದ ಪ್ರಮಾಣವು ಜಾಸ್ತಿ ಮಾಡಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಕೆಲವೊಂದು ಸಂದರ್ಭದಲ್ಲಿ ಅಂದರೆ ಕುಟುಂಬದಲ್ಲಿ ಶೂತಕವಿದ್ದಾಗ ದೇವರ ಪೂಜೆ ಮಾಡಬಾರದು.

ಕೈ ಮುಷ್ಟಿಗಿಂತ ದೊಡ್ಡದಾದ ವಿಗ್ರಹಗಳು ಅಥವಾ ತುಂಬಾ ಎತ್ತರದ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡಬಾರದು ಒಂದು ವೇಳೆ ಇದ್ದರೆ ಅಭಿಷೇಕ ಮತ್ತು ನೈವೇದ್ಯ ತಪ್ಪದೇ ಮಾಡಬೇಕು.ದೇವರ ವಿಗ್ರಹಗಳನ್ನು ಶುಕ್ರವಾರದಂದು ಶುದ್ಧ ಮಾಡಬಾರದು ಅನಿವಾರ್ಯ ಪರಿಸ್ಥಿತಿ ಅಥವಾ ಗ್ರಹಣ ಇಂತಹ ಸಂದರ್ಭದಲ್ಲಿ ಮಾಡಬಹುದು.

ಪ್ರತಿ ಅಮಾವಾಸ್ಯೆ ಮತ್ತು ಪೂರ್ಣಿಮೆಯ ಮರುದಿನ ದೇವರ ವಿಗ್ರಹವನ್ನು ಅರಿಶಿನದ ನೀರಿನಿಂದ ಶುದ್ಧ ಮಾಡಬೇಕು.ದೇವರ ಪೂಜೆ ಮಾಡುವಾಗ ಆಕಳಿಕೆ ಕೋಪ ಮಾತು ಹರಟೆ ಇವೆಲ್ಲವರಿಂದ ದೂರವಿರಿ ಶ್ರದ್ಧಾ ಭಕ್ತಿಯಿಂದ ಮಾಡುವ ಪೂಜೆಗೆ ಮಾತ್ರ ಸಂಪೂರ್ಣ ಫಲ

ದೇವರ ಪೂಜೆಯ ಸಮಯದಲ್ಲಿ ಪುರುಷರು ಶಲ್ಯವನ್ನು ಧರಿಸಬೇಕು ಮತ್ತು ಮಹಿಳೆಯರು ನೈಟಿ ಧರಿಸಿ ಪೂಜಿಸಬಾರದು ಇಲ್ಲದಿದ್ದರೆ ಪೂಜಾಫಲ ದೊರಕುವುದಿಲ್ಲ ಎಂದು ಹೇಳುತ್ತಾರೆ.

ಗಂಡಸರು ಅಥವಾ ಹೆಂಗಸರು ಕಾಲಿ ಹಣೆಯಲ್ಲಿ ಕುಂಕುಮ ಅಥವಾ ಗಂಧ ಅಥವಾ ಭಸ್ಮ ಇತ್ಯಾದಿ ಯಾವುದನ್ನು ಧರಿಸಿದೆ ಪೂಜೆ ಮಾಡಬಾರದು.

ಶ್ರೀಚಕ್ರ ಬಲಮುರಿ ಶಂಕರ ಬಲಮುರಿ ಗಣೇಶ ಸಾಲಿಗ್ರಾಮ ಎರಡು ಪಾದ ಕಾಣಿಸುವ ಮಹಾಲಕ್ಷ್ಮಿ ಇತ್ಯಾದಿ ದೇವರು ಅಷ್ಟೈಶ್ವರ್ಯಗಳನ್ನು ಪ್ರಧಾನಿಸುವ ದೇವರುಗಳು ಈ ದೇಹಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ.

ದೇವರಿಗೆ ನೈವೇದ್ಯವಿಲ್ಲದೆ ಪೂಜಿಸುವುದರಿಂದ ಪೂರ್ಣ ಪೂಜಾಫಲ ದೊರೆಯುವುದಿಲ್ಲ.

ದೇವರ ನೈವೇದ್ಯ ಮಾಡುವಾಗ ವೀಳ್ಯದೆಲೆ ಅಡಿಕೆ, ಫಲ ತಾಂಬೂಲ ಇಲ್ಲದ ಪೂಜೆ ಪೂರ್ಣ ಫಲ ಕೊಡುವುದಿಲ್ಲ ಇದರ ಜೊತೆಗೆ ನೈವೇದ್ಯ ಮಾಡುವಾಗ ತುಳಸಿಪತ್ರ ಬಳಸಬೇಕು

ದೇವರ ಪೂಜೆಯನ್ನು ಸಂಕಲ್ಪವಿಲ್ಲದೆ ಮಾಡಬೇಡಿ ಸಂಕಲ್ಪ ಬಿದ್ದರೆ ನಿಮ್ಮ ಪ್ರಾರ್ಥನೆ ಬೇಗ ಈಡೇರುತ್ತದೆ.ಗಣಪತಿ ಪೂಜೆ ಕುಲದೇವರ ಪೂಜೆ ದೇವಿ ಪೂಜೆನ ಮಾತ್ರ ಪೂರ್ಣ ಫಲ ದೊರೆಯುವುದು. ಮನೆ ಹೊಸ್ಸಿಲನ್ನು ಕೊರತೆಯಿಂದ ಗುಡಿಸಬೇಡಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ.

ಎಲ್ಲದಿಕ್ಕಿಂತ ಹೆಚ್ಚಾಗಿ ಹಿರಿಯರು ವೇದ ಪುರಾಣಗಳು ಹೆಚ್ಚುವಂತೆ ಪ್ರತಿನಿತ್ಯ ಪೂಜೆಯನ್ನು ಮಾಡಲು ಶ್ರದ್ದೆ ದೇವರ ಮೇಲೆ ಭಕ್ತಿ ಮತ್ತು ಶುದ್ಧವಾದ ಮನಸ್ಸು ಅತ್ಯಗತ್ಯ.

Leave a Comment