S ಎಂಬ ಅಕ್ಷರದಿಂದ ಹೆಸರು ಶುರುವಾದರೆ ನೀವೇ ಅದೃಷ್ಟವಂತರು.

ವ್ಯಕ್ತಿಯ ಜೀವನದಲ್ಲಿ ಆತನ ಹೆಸರು ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲಿಯೂ ಪ್ರಾರಂಭದ ಅಕ್ಷರಕ್ಕೆ ಹೆಚ್ಚಿನ ಮಹತ್ವವಿದೆ. ಏಕೆಂದರೆ ಹೆಸರು ಕರೆಯಲು ಈ ಅಕ್ಷರವನ್ನೇ ಮೊದಲಾಗಿ ಉಚ್ಚರಿಸಲಾಗುತ್ತದೆ. ಕೆಲವು ಅಕ್ಷರಗಳು ಹೆಚ್ಚಿನ ಮಹತ್ವವುಳ್ಳದಾಗಿದೆ. ಅವೆಂದರೆ A, J, O ಮತ್ತು S. ಅದರಲ್ಲೂ S ಅಕ್ಷರ ಅತಿ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಒಂದು ವೇಳೆ ನಿಮ್ಮ ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾಗುತ್ತಿದ್ದರೆ ಇದನ್ನು ಪೂರ್ತಿಯಾಗಿ ಓದಿ. ಸಂಖ್ಯಾ ಭವಿಷ್ಯದ ಪ್ರಕಾರ ಈ ಅಕ್ಷರ ಒಂದು ಅಂಕೆಗೆ ಸಮನಾಗಿದ್ದು, ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ಜನ್ಮತಾ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಸಾಧಿಸುತ್ತಾರೆ. ಇವರ ಬಗ್ಗೆ ಕುತೂಹಲಕಾರಿಯಾದ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ನಿಮ್ಮ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಲಿದೆ.

ಇವರು ನಿಷ್ಠಾವಂತರಾಗಿರುತ್ತಾರೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಅತಿ ನಿಷ್ಠಾವಂತರೆಂದು ಸಂಖ್ಯಾಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಇವರು ಹೆಚ್ಚು ರಸಿಕರಲ್ಲದೆ ಹೋದರು ಮಾತು ಕಡಿಮೆ ಕೆಲಸ ಹೆಚ್ಚು ಎಂಬ ತತ್ವವನ್ನು ಅನುಸರಿಸುತ್ತಾರೆ. ಇವರು ತಮ್ಮ ಪ್ರೀತಿಯನ್ನು ಬಾಯಿಯಲ್ಲಿ ಹೇಳುವ ಬದಲು, ತಮ್ಮ ಕಾರ್ಯಗಳು ಹಾಗೂ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ವ್ಯಕ್ತಪಡಿಸುತ್ತಾರೆ.

ಇವರು ಸಹನಭೂತಿ ಉಳ್ಳ ವ್ಯಕ್ತಿಗಳಾಗಿದ್ದಾರೆ. ಇವರ ಹೆಸರಿನ ಅಕ್ಷರ ಪ್ರಥಮ ಸ್ಥಾನದಲ್ಲಿರುವ ಪ್ರಕಾರ ಇವರ ವ್ಯಕ್ತಿತ್ವ ಎಲ್ಲರೂ ಇಷ್ಟಪಡುವಂತಿರುತ್ತದೆ. ಇವರಲ್ಲಿ ಪ್ರೇಮ, ಸಹಾನುಭೂತಿ, ತಮ್ಮತನದ ಭಾವನೆ ಮತ್ತು ಆತ್ಮೀಯತೆ ತುಂಬಿರುತ್ತದೆ. ಯಾವುದೇ ವ್ಯಕ್ತಿ ತೊಂದರೆಯಲ್ಲಿರುವುದು ಕಂಡು ಬಂದರೆ ಇವರು ಸಹಾಯ ನೀಡುವಲ್ಲಿ ಧಾವಿಸುವವರಲ್ಲಿ ಮೊದಲಿಗರಾಗಿರುತ್ತಾರೆ.

ಇವರು ನಂಬಿಕಸ್ತರಾಗಿರುತ್ತಾರೆ. ಪ್ರಾಮಾಣಿಕತೆ ಇವರ ರಕ್ತದಲ್ಲಿದ್ದು ಇವರನ್ನು ನಂಬಬಹುದು. ಆದರೆ ಸಿಟ್ಟಿನ ಅಥವಾ ಆ ರೋಷ ಉಕ್ಕಿಸುವ ಸಂದರ್ಭದಲ್ಲಿ ಮಾತ್ರ ಇವರು ಹಿಂದು ಮುಂದು ನೋಡದೆ ನುಗ್ಗುವ ಪ್ರವೃತ್ತಿ ಉಳ್ಳವರಾಗಿರುತ್ತಾರೆ. ಈ ಕಾರಣದಿಂದಲೇ ಕೆಲವೊಮ್ಮೆ ಇವರನ್ನು ಅರ್ಥಮಾಡಿಕೊಳ್ಳುವುದು ಇತರರಿಗೆ ದೊಡ್ಡ ಸವಾಲು ಆಗಿರುತ್ತದೆ.

ಇವರು ತಮ್ಮ ಭಾವನೆಗಳನ್ನು ಮುಚ್ಚಿಡಲು ಸಮರ್ಥರಾಗಿರುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಆಂತರಿಕ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಇದೇ ಕಾರಣಕ್ಕೆ ಇವರನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಪರಿಣಾಮವಾಗಿ ಇತರರು ಇವರಲ್ಲಿರುವ ಅರ್ಹತೆಯನ್ನು ಗಮನಿಸಲು ವಿಫಲರಾಗಿ ಇವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಸವಲತ್ತುಗಳನ್ನು ಇತರರಿಗೆ ನೀಡಿದಾಗ ಇವರು ಸ್ವಾಭಾವಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ.

ಇವರು ಅತ್ಯಂತ ಮನಮೋಹಕ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಬಾಹ್ಯ ಸೌಂದರ್ಯವನ್ನು ಹೊಂದಿದ್ದರೂ ಇದಕ್ಕಿಂತಲೂ ಇವರ ಅಂತರಿಕ ಸೌಂದರ್ಯ ಹೆಚ್ಚು ಜನರನ್ನು ಸೆಳೆಯುತ್ತದೆ. ಇವರು ತಮ್ಮ ಸುತ್ತಮುತ್ತಲಿನಲ್ಲಿರುವ ಸಂತೋಷದ ಮತ್ತು ದುಃಖದ ಸಮಯಗಳಲ್ಲಿ ಇತರರಿಗಿಂತಲೂ ಹೆಚ್ಚು ಭಾಗಿಯಾಗಿ ಆತ್ಮ ತೃಪ್ತಿಯನ್ನು ಪಡೆಯುತ್ತಾರೆ. ಇದೇ ಕಾರಣಕ್ಕೆ ಇವರನ್ನು ಸುತ್ತಮುತ್ತಲ ಜನರು ಹೆಚ್ಚು ಗೌರವಿಸುತ್ತಾರೆ ಹಾಗೂ ಇಷ್ಟಪಡುತ್ತಾರೆ. ಉದ್ಯೋಗದಲ್ಲಿಯೂ ಇವರು ಹೆಚ್ಚು ಯಶಸ್ವಿಯಾಗಿರುತ್ತಾರೆ.

ಸಾಮಾನ್ಯವಾಗಿ ಈ ವ್ಯಕ್ತಿಗಳು ತಮ್ಮ ಉದ್ಯೋಗ ಹಾಗೂ ಹಣಕಾಸಿನ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುವ ಕಾರಣ ಇವರು ಯಶಸ್ವಿ ಉದ್ಯಮಿ, ರಾಜಕಾರಣಿ, ಸಿನಿಮಾ ನಟ, ನಟಿ ಹಾಗೂ ಉದ್ಯೋಗಸ್ಥರಾಗಿರುತ್ತಾರೆ. ಹಣಕಾಸಿನ ವಿಷಯದಲ್ಲಿ ಸದೃಢರಾಗಿರುವುದು ಇವರಿಗೆ ಪ್ರಮುಖ ವಿಷಯವಾಗಿದೆ.

ಇವರು ತಮ್ಮ ಸಂಬಂಧದಲ್ಲಿ ಅತಿ ನಿಷ್ಠಾವಂತರಾಗಿರುತ್ತಾರೆ. ಇವರ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆಂಬ ಬಯಕೆ ಹೊಂದಿರುವ ಜೊತೆಗೆ ತಮ್ಮ ಜೀವನ ಸಂಗಾತಿಯೊಂದಿಗೆ ಸಂಬಂಧದ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಾಗಿರುತ್ತಾರೆ. ತಮ್ಮ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಬಾಂಧವ್ಯಕ್ಕೆ ಇವರು ಹೆಚ್ಚಿನ ಮಹತ್ವ ನೀಡುವವರಾಗಿದ್ದು, ಸ್ನೇಹವನ್ನು ಸದಾ ಉಳಿಸಿಕೊಂಡು ಹೋಗುವವರಾಗಿರುತ್ತಾರೆ.

Leave a Comment