ಯಾವ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ಮಾರುತ್ತಾರೋ ಅಥವಾ ಎಸೆಯುತ್ತರೋ ಕಂಡಿತಾ 

ಯಾವ ಮಹಿಳೆಯರು ತಮ್ಮ ಕೂದಲುಗಳನ್ನು ಮಾರುತ್ತಾರೋ ಅಥವಾ ಎಸಯುತ್ತಾರೋ ಅಂತವರು ಇದನ್ನು ಖಂಡಿತವಾಗಿಯೂ ಓದಿ. ಮಹಿಳೆಯರ ಉದ್ದವಾದ ತಲೆ ಕೂದಲುಗಳು ಅವರ ಸೌಂದರ್ಯ, ಅವರ ಸೌಭಾಗ್ಯದ ಪ್ರತೀಕ ಆಗಿರುತ್ತವೆ. ಉದ್ದವಾದ ತಲೆ ಕೂದಲುಗಳಿರೋದು ಸ್ತ್ರೀಯರಿಗೆ ಒಂದು ಪ್ರಕಾರದ ಆಭರಣವೇ ಆಗಿದೆ. ಇದು ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವೂ ಹೌದು. ಈ ಒಂದು ಕಾರಣದಿಂದಾಗಿ ಉದ್ದವಾದ ತಲೆ ಕೂದಲುಗಳು ಮಹಿಳೆಯರಿಗೆ ಅತ್ಯಂತ ಮಹತ್ವಪೂರ್ಣವಾಗಿರುತ್ತವೆ.

ಆದ್ರೆ ನಿಮಗೇನಾದ್ರೂ ಈ ಒಂದು ವಿಷಯ ಗೊತ್ತಿದೆಯಾ? ಯಾವಾಗ ನೀವು ನಿಮ್ಮ ತಲೆ ಕೂದಲುಗಳನ್ನು ಬಾಚುತ್ತೀರಾ, ಆಗ ನಿಮ್ಮ ತಲೆ ಕೂದಲುಗಳು ಕೆಲವು ಉದುರಿ ಬೀಳುತ್ತವೆ. ಇಂಥ ಸ್ಥಿತಿಯಲ್ಲಿ ಆ ತಲೆ ಕೂದಲುಗಳನ್ನು ನೀವು ಏನ್ ಮಾಡ್ತೀರಾ, ಉಳಿದ ಮಹಿಳೆಯರ ರೀತಿ ನೀವು ಕೂಡ ಆ ತಲೆ ಕೂದಲುಗಳನ್ನು ಅಲ್ಲಿ ಇಲ್ಲಿ ಎಸೆದು ಬಿಡ್ತೀರಾ ಅಥವಾ ಏನನ್ನೂ ಯೋಚಿಸದೆ ಕಸದ ಡಬ್ಬಿಯಲ್ಲಿ ಹಾಕಿ ಬಿಡ್ತೀರಾ.

ಒಂದು ವೇಳೆ ನೀವು ಸಹ ಇಂಥ ತಪ್ಪನ್ನು ಮಾಡ್ತಾ ಇದ್ರೆ ಎಚ್ಚರದಿಂದ ಇರಿ. ಈ ತಪ್ಪು ನಿಮ್ಮನ್ನ ದೊಡ್ಡದಾಗಿರುವ ಕಷ್ಟಕ್ಕೆ ಸಿಲುಕಿಸಬಹುದು. ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹುಟ್ಟಬಹುದು. ಶಾರೀರಿಕವಾಗಿ ನೀವು ಸಮಸ್ಯೆಗಳನ್ನು ಎದುರಿಸುತ್ತಾ ಇರಬಹುದು. ಅಥವಾ ನಿಮಗೆ ಯಾವತ್ತಾದರೂ ಈ ರೀತಿಯ ಅನುಭವ ಆಗಿದೆಯಾ? ಅದು ನಿಮ್ಮ ಮೇಲೆ ಯಾರಾದ್ರೂ ತಂತ್ರ ಮಂತ್ರ ಕ್ರಿಯೆಗಳನ್ನು ಮಾಡಿರಬಹುದು. ನೀವು ಸಹ ನಕಾರಾತ್ಮಕ ಶಕ್ತಿಗಳ ವಶದಲ್ಲಿ ಇರುತ್ತೀರ.

ಒಂದು ವೇಳೆ ನಿಮಗೆ ಪದೇ ಪದೇ ಸಿಟ್ಟು ಬರ್ತಾ ಇದ್ರೆ, ಯಾವತ್ತಿಗೂ ನೀವು ಸಿಟ್ಟಿನಲ್ಲಿ ಇರ್ತಾ ಇದ್ರೆ, ಕಿರಿಕಿರಿ ನಿಮಗೆ ಉಂಟಾಗ್ತಿದ್ರೆ, ಹೊಟ್ಟೆಗೆ ಸಂಬಂಧಪಟ್ಟಂತ ಸಮಸ್ಯೆಗಳಿದ್ರೆ ಅಥವಾ ಮಾನಸಿಕ ಸಮಸ್ಯೆಗಳಿಂದ ನೀವು ಬಳಲ್ತಾ ಇದ್ರೆ ಇವುಗಳಿಗೆಲ್ಲ ಕಾರಣ ನಿಮ್ಮ ತಲೆಕೂದಲಿನ ಗುಂಪು ಆಗಿರಬಹುದು. ಇವುಗಳನ್ನು ನೀವು ಸುಮ್ಮನೆ ಎಲ್ಲಿ ಬೇಕೋ ಅಲ್ಲಿ ಎಸೆದು ಬಿಟ್ಟಿರುತ್ತೀರಾ. ಅಷ್ಟೇ ಅಲ್ಲದೆ ಇವು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಯನ್ನು ಸಹ ಉಂಟುಮಾಡುತ್ತವೆ.

ಪರಂ ಪೂಜ್ಯ ಪಂಡಿತ್ ಮಿಶ್ರರವರು ಹೇಳುವ ಪ್ರಕಾರ ಯಾವ ಮಹಿಳೆಯರು ತಮ್ಮ ಉದುರಿದ ತಲೆ ಕೂದಲುಗಳ ಗುಂಪನ್ನು ಅಲ್ಲಿ ಇಲ್ಲಿ ಎಸೆಯುತ್ತಾರೋ ಅಂತಹ ಮಹಿಳೆಯರ ಜೀವನದಲ್ಲಿ ಹಲವಾರು ಪ್ರಕಾರದ ಸಮಸ್ಯೆಗಳು ಯಾವಾಗ ಬೇಕಾದರೂ ಬಂದು ಬಿಡುತ್ತವೆ. ಇಂಥ ಮಹಿಳೆಯರು ಯಾವತ್ತಿಗೂ ನಕಾರಾತ್ಮಕ ಶಕ್ತಿಗಳ ಪ್ರಭಾವದಲ್ಲಿಯೇ ಇರ್ತಾರೆ. ಹಾಗಾದ್ರೆ ಸ್ನೇಹಿತರೆ ಈ ತಲೆ ಕೂದಲುಗಳನ್ನಾದರೂ ಏನು ಮಾಡಬೇಕು? ಖಂಡಿತವಾಗಿ ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿರುತ್ತೆ.

ಇದರ ಬಗ್ಗೆ ಇಲ್ಲಿ ವಿಸ್ತಾರವಾಗಿಯೇ ತಿಳಿಸಿಕೊಡ್ತೀವಿ. ಇಲ್ಲಿ ಉದುರಿದ ತಲೆ ಕೂದಲುಗಳನ್ನು ನಾವು ಏನು ಮಾಡಬೇಕು? ಇವುಗಳನ್ನ ಯಾವ ಸ್ಥಾನದಲ್ಲಿ ಎಸೆಯಬೇಕು? ಇವುಗಳನ್ನ ಬೇರೆಯವರಿಗೆ ಕೊಡೋದು ಸರಿ ಇರುತ್ತಾ? ಇವುಗಳನ್ನ ದಾನ ಮಾಡೋದು ಸರೀನಾ? ಎಲ್ಲಾ ಪ್ರಶ್ನೆಗಳಿಗೆ ಇರುವಂತ ಉತ್ತರವನ್ನ ತಿಳಿಸಿ ಕೊಡ್ತೀವಿ. ಹಾಗಾಗಿ ಮಿಸ್ ಮಾಡದೆ ಇದನ್ನು ಪೂರ್ತಿಯಾಗಿ ಓದಿ.

ನಮ್ಮ ಹಿಂದೂ ಧರ್ಮದ ಪ್ರಾಚೀನ ಗ್ರಂಥವಾದ ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ತಲೆ ಕೂದಲಿಗೆ ಸಂಬಂಧಪಟ್ಟಂತ ತುಂಬಾನೇ ಮಹತ್ವಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದಾರೆ. ಮಹಿಳೆಯರ ತಲೆ ಕೂದಲುಗಳ ಮೂಲಕವೇ ಇವರ ಸ್ವಭಾವ ಆಗಲಿ, ಇವರ ಗುಣ ಆಗಲಿ, ಇವರ ವ್ಯವಹಾರದ ಜೊತೆಗೆ ಭಾಗ್ಯದ ಬಗ್ಗೆಯೂ ತಿಳಿಯುತ್ತದೆ.

ಸ್ತ್ರೀಯರ ತಲೆ ಕೂದಲುಗಳನ್ನು ನೋಡಿಯೇ ಅವರ ಆಚರಣೆ ಹೇಗಿದೆ ಅಂತ ತಿಳಿಯಬಹುದು. ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಮಹಿಳೆಯರ ಹಣೆ ಅಗಲವಾಗಿದ್ದರೆ, ದೊಡ್ಡದಾಗಿದ್ದರೆ ಇವರು ಭಾಗ್ಯಶಾಲಿಗಳಾಗಿರುತ್ತಾರೆ. ಜೊತೆಗೆ ಇವರ ತಲೆ ಕೂದಲುಗಳೇನಾದರೂ ತುಂಬಾ ಉದ್ದವಾಗಿದ್ದರೆ ಇವರು ಸಾಕ್ಷಾತ್ ಶ್ರೀ ಲಕ್ಷ್ಮಿ ದೇವಿಯ ರೂಪವೇ ಆಗಿರ್ತಾರೆ. ಮಹಿಳೆಯರ ಉದ್ದವಾದ ತಲೆ ಕೂದಲುಗಳು ಇವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತವೆ.

ಯಾವ ಮಹಿಳೆಯರ ತಲೆ ಕೂದಲುಗಳು ಕಪ್ಪಾಗಿ, ದಟ್ಟವಾಗಿ, ಉದ್ದವಾಗಿ ಇರುತ್ತವೆಯೋ ಅವರ ಮೇಲೆ ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ ಕೃಪೆ ಇರುತ್ತದೆ. ಇಂತಹ ಮಹಿಳೆಯರು ತಮ್ಮ ಜೀವನದಲ್ಲಿ ಎಲ್ಲಾ ಪ್ರಕಾರದ ಸುಖವನ್ನ ಪಡೆದುಕೊಳ್ಳುತ್ತಾರೆ. ಆದರೆ ಮಹಿಳೆಯರು ತಮ್ಮ ತಲೆ ಕೂದಲಿಗೆ ಸಂಬಂಧ ಪಟ್ಟಂತ ತುಂಬಾನೇ ಮಹತ್ವಪೂರ್ಣವಾದ ವಿಷಯಗಳನ್ನ ಖಂಡಿತವಾಗಿ ತಿಳಿದುಕೊಂಡಿರಬೇಕು.

ಗುರುಗಳ ಅನುಸಾರವಾಗಿ ಮಹಿಳೆಯರು ತಮ್ಮ ತಲೆ ಕೂದಲುಗಳಿಗೆ ಸಂಬಂಧಪಟ್ಟಂತ ಕೆಲವು ತಪ್ಪುಗಳನ್ನು ಮಾಡಿರುತ್ತಾರೆ. ಇವುಗಳ ಅಶುಭ ಪರಿಣಾಮ ಅವರು ಅನುಭವಸ್ಥ ಇರುತ್ತಾರೆ. ಉದಾಹರಣೆಗಾಗಿ ಮಹಿಳೆಯರಿಗೆ ಈ ಒಂದು ಮಾತು ಗೊತ್ತೇ ಇರೋದಿಲ್ಲ. ಅದು ತಮ್ಮ ತಲೆ ಕೂದಲುಗಳನ್ನು ಅವರು ಯಾವ ದಿನ ತೊಳೆದುಕೊಳ್ಳಬೇಕು ಮತ್ತು ಯಾವ ದಿನ ತೊಳೆದುಕೊಳ್ಳಬಾರದು ಅನ್ನೋದರ ಬಗ್ಗೆ ಅವರಿಗೆ ಗೊತ್ತಿರಲ್ಲ. ಜೊತೆಗೆ ಮಹಿಳೆಯರ

ತಲೆ ಕೂದಲುಗಳನ್ನು ಕತ್ತರಿಸುವುದಕ್ಕೆ ಇರುವಂತಹ ವಿಷಯಗಳನ್ನು ಸಹ ತಿಳಿಸಿದ್ದಾರೆ. ಅದು ಅವರ ತಲೆ ಕೂದಲುಗಳನ್ನು ಯಾವಾಗ ಕತ್ತರಿಸಬೇಕು? ಯಾವಾಗ ಕತ್ತರಿಸಬಾರದು ಅನ್ನೋದನ್ನ ಕೂಡ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತ ನಿಯಮಗಳನ್ನು ಸಹ ಮಹಿಳೆಯರು ಪಾಲಿಸಬೇಕು. ಇಲ್ಲವಾದರೆ ಇವುಗಳ ಅಶುಭ ಪ್ರಭಾವ ಬೀಳುತ್ತದೆ. ನಮ್ಮ ಶಾಸ್ತ್ರದಲ್ಲಿ ಒಂದು ಈ ರೀತಿ ಮಾಹಿತಿ ಇದೆ. ವಾರದ ಕೆಲವು ದಿನಗಳಲ್ಲಿ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ತೊಳೆಯಬಾರದು ಮತ್ತು ಕತ್ತರಿಸಲುಬಾರದು.

ಇದು ಇವರಿಗೋಸ್ಕರ ಮತ್ತು ಇವರ ಕುಟುಂಬದವರಿಗೋಸ್ಕರ ಒಳ್ಳೆಯದಾಗಿರುವುದಿಲ್ಲ. ಜನರು ಈ ರೀತಿ ಮಾತನಾಡೋದನ್ನ ನೀವು ಸಹ ಕೇಳಿರ್ತೀರ. ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರ ತಮ್ಮ ತಲೆ ಕೂದಲುಗಳನ್ನು ತೊಳೆಯಬಾರದು ಮತ್ತು ಅವುಗಳನ್ನು ಕತ್ತರಿಸಬಾರದು. ಇದಷ್ಟೇ ಅಲ್ಲದೆ ಕೆಲವು ಜನರ ನಂಬಿಕೆ ಈ ರೀತಿಯೂ ಇದೆ.

ಸೋಮವಾರದ ದಿನವೇ ತಲೆ ಕೂದಲು ತೊಳೆಯಬಾರದು. ಇವುಗಳಷ್ಟೇ ಅಲ್ಲದೆ ತಿಂಗಳಿನ ಕೆಲವು ವಿಶೇಷವಾದ ತಿಥಿಗಳಲ್ಲಿ ತಲೆಕೂದಲುಗಳನ್ನು ತೊಳೆಯಬಾರದು ಅಂತ ಹೇಳ್ತಾರೆ. ಉದಾಹರಣೆಗಾಗಿ ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ ಇತ್ಯಾದಿ ದಿನಗಳಲ್ಲಿ ಮಹಿಳೆಯರ ತಲೆ ಕೂದಲುಗಳನ್ನು ತೊಳೆಯುವುದಾಗಲಿ ಅಥವಾ ಕತ್ತರಿಸುವುದಾಗಲಿ ನಿಷೇಧಿಸಲಾಗಿದೆ. ಯಾಕಂದ್ರೆ ಈ ದಿನಗಳಲ್ಲಿ ಚಂದ್ರನು ಎತ್ತರದ ಸ್ಥಾನ ಅಥವಾ ಕೆಳಗಿನ ಸ್ಥಾನದಲ್ಲಿ ಇರ್ತಾರೆ.

ಇದರ ಪ್ರಭಾವ ಮಹಿಳೆಯರ ಹಣೆಯ ಮೇಲೆ, ತಲೆಯ ಮೇಲೆ ಬೀಳುತ್ತದೆ. ಇದು ಕೇವಲ ಇವರ ಆರೋಗ್ಯದ ಮೇಲೆ ಪರಿಣಾಮ ಬೀಳುವುದಷ್ಟೇ ಅಲ್ಲದೆ ಇದರ ಅಶುಭ ಪ್ರಭಾವ ಇವರ ಸಾಂಸಾರಿಕ ಜೀವನದ ಮೇಲೆ ಸಹ ಬೀಳುತ್ತದೆ. ಗುರುಗಳ ಅನುಸಾರವಾಗಿ ಸೋಮವಾರದ ದಿನ ಮದುವೆ ಆದಂತಹ ಮಹಿಳೆಯರು ತಲೆ ಕೂದಲುಗಳನ್ನು ತೊಳೆಯುವುದಾಗಲಿ, ಕತ್ತರಿಸುವುದರಿಂದ ದೂರ ಇರಬೇಕು.

ಯಾಕೆಂದರೆ ಇವುಗಳ ಕಾರಣದಿಂದಾಗಿ ತನ್ನ ಗಂಡನ ಉನ್ನತಿಯಲ್ಲಿ ಅಡಚಣೆಗಳು ಬರುತ್ತವೆ. ಒಂದು ವೇಳೆ ಮಂಗಳವಾರದ ದಿನ ಮದುವೆಯಾದಂತಹ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ತೊಳೆದರೆ ಕುಂಡಲಿಯಲ್ಲಿ ಮಂಗಳ ಗ್ರಹ ದುರ್ಬಲಾಗುತ್ತದೆ. ಇದರಿಂದ ಇವರು ಮಂಗಳ ಗೃಹಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ.

ಉದಾಹರಣೆಗೆ ಮನೇಲಿ ಜಗಳ ಆಗುವುದು. ಆದ್ದರಿಂದ ಮಂಗಳವಾರ ತಲೆ ಕೂದಲುಗಳನ್ನು ತೊಳೆಯುವುದಾಗಲಿ ತಮ್ಮ ಉದುರಿದ ತಲೆ ಕೂದಲುಗಳನ್ನು ಅಲ್ಲಿ ಇಲ್ಲಿ ಎಸೆಯುವುದರಿಂದ ದೂರ ಉಳಿದುಕೊಳ್ಳಬೇಕು. ಇವುಗಳ ಜೊತೆಗೆ ಯಾವ ಮಹಿಳೆಯರಿಗೆ ಅಣ್ಣ ತಮ್ಮಂದಿರು ಇರ್ತಾರೋ ಅಂತ ಸ್ತ್ರೀಯರು ಮಂಗಳವಾರದ ದಿನ ತಮ್ಮ ತಲೆ ಕೂದಲುಗಳನ್ನು ತೊಳೆಯುವುದರಿಂದ ದೂರ ಇರಬೇಕು. ಯಾಕಂದ್ರೆ ಮಂಗಳ ಗ್ರಹದ ಪ್ರಭಾವ ಅಣ್ಣ ತಂಗಿಯರ ಜೀವನದಲ್ಲೂ ಸಹ ಬೀಳುತ್ತದೆ.

ಯಾವ ಮಹಿಳೆಯರು ಸೋಮವಾರ ಅಥವಾ ಮಂಗಳವಾರದ ದಿನ ತಮ್ಮ ತಲೆ ಕೂದಲುಗಳನ್ನು ತೊಳೆಯುತ್ತಾರೋ ಇಂತಹ ಮಹಿಳೆಯರ ಅಣ್ಣ-ತಮ್ಮಂದಿರ ಜೀವನದಲ್ಲಿ ಸಮಸ್ಯೆಗಳು ಬರುತ್ತವೆ. ಬುಧವಾರದ ದಿನ ತಲೆ ಕೂದಲುಗಳನ್ನು ತೊಳೆದುಕೊಳ್ಳುವುದು ಶುಭ ಅಂತ ತಿಳಿಯಲಾಗಿದೆ. ಇದರಿಂದ ಧನಸಂಪತ್ತಿನಲ್ಲಿ ವೃದ್ಧಿಯನ್ನು ಕಾಣುತ್ತಾರೆ. ಮನೆಯಲ್ಲಿ ಸುಖ ಸಮೃದ್ಧಿ, ವ್ಯಾಪಾರದಲ್ಲಿ ವೃದ್ಧಿ ಆಗುತ್ತೆ. ಇನ್ನೊಂದೆಡೆ ಗುರುವಾರದ ದಿನ ಕೇವಲ ಸ್ತ್ರೀಯರಷ್ಟೇ ಅಲ್ಲ,

ಪುರುಷರು ಸಹ ತಮ್ಮ ತಲೆ ಕೂದಲುಗಳನ್ನು ಕತ್ತರಿಸಬಾರದು. ಮಾಹಿತಿ ಅನುಸಾರವಾಗಿ ಗುರುವಾರದ ದಿನ ತಲೆಕೂದಲುಗಳನ್ನು ತೊಳೆದುಕೊಂಡರೆ ಮನೆಗೆ ದರಿದ್ರತೆ ಪ್ರವೇಶ ಮಾಡುತ್ತದೆ. ಆರ್ಥಿಕ ಸಮಸ್ಯೆಗಳು ಹುಟ್ಟುತ್ತವೆ. ಹಣಕಾಸಿನ ಹಾನಿ ಎದುರಾಗುತ್ತದೆ. ಗುರು ದುರ್ಬಲ ಆದರೆ ನಿಮ್ಮ ಸಿರಿ ಸಂಪತ್ತು ದುರ್ಬಲ ಆಗುತ್ತದೆ. ಯಾವಾಗ ಗುರು ದುರ್ಬಲನಾಗುತ್ತಾನೆ ಆಗ ರಾಜನೂ ಸಹ ಬಡವನಾಗಿ ಬಿಡ್ತಾನೆ.

ಇವುಗಳ ಜೊತೆಗೆ ಶುಕ್ರವಾರದ ದಿನ ತಲೆ ಕೂದಲುಗಳನ್ನು ತೊಳೆದುಕೊಳ್ಳೋದಾಗಲಿ, ತಲೆಕೂದಲುಗಳನ್ನು ಕತ್ತರಿಸುವುದಕ್ಕೆ ಅತ್ಯಂತ ಶುಭದಿನ ಅಂತ ತಿಳಿಯಲಾಗಿದೆ. ಇದು ತಾಯಿ ಲಕ್ಷ್ಮಿ ದೇವಿಯ ದಿನ ಆಗಿದೆ. ಈ ದಿನ ತಲೆ ಕೂದಲುಗಳನ್ನು ತೊಳೆದುಕೊಂಡರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ಸಿಗುತ್ತದೆ. ಈ ದಿನ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ಕತ್ತರಿಸಿಕೊಂಡ್ರೆ ಅವುಗಳನ್ನ ಅಲ್ಲಿ ಇಲ್ಲಿ ಎಸೆಯಬಾರದು.

ಇಲ್ಲವಾದರೆ ಧನ ಸಂಪತ್ತಿನ ಹಾನಿಯಾಗುತ್ತದೆ. ಶುಕ್ರವಾರ ತಲೆ ಕೂದಲುಗಳನ್ನ ತೊಳೆದುಕೊಂಡರೆ ಶುಕ್ರ ದೇವರು ಕೂಡ ಒಲಿಯುತ್ತಾರೆ. ಇದರಿಂದ ಮನೆಯಲ್ಲಿ ಧನ ಸಂಪತ್ತಾಗಲಿ, ಗೌರವ ಘನತೆ ವೃದ್ಧಿಯಾಗುತ್ತದೆ. ಆದ್ರೆ ಶನಿವಾರ ಅಥವಾ ರವಿವಾರದ ದಿನ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ತೊಳೆಯುವುದರಿಂದ ದೂರ ಉಳಿದುಕೊಳ್ಳಬೇಕು. ರಜೆ ಸಿಗುವ ಕಾರಣ ಕೆಲವು ಮಹಿಳೆಯರು ರವಿವಾರ ತಮ್ಮ ತಲೆ ಕೂದಲುಗಳನ್ನು ತೊಳೆದುಕೊಳ್ಳುತ್ತಾರೆ.

ಆದರೆ ಇಂಥ ತಪ್ಪನ್ನ ಮಾಡಬಾರದು ಯಾಕಂದ್ರೆ ಇದರಿಂದ ಕುಂಡಲಿಯಲ್ಲಿರುವಂತ ರಾಹು, ಕೇತು, ಶನಿ ದುರ್ಬಲ ಆಗ್ತಾರೆ. ಇದರಿಂದ ನಿಮ್ಮ ಜೀವನದಲ್ಲಿ ಶಾರೀರಿಕ, ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಂತೂ ಒಂದು ಮಾತನ್ನ ಹೇಳ್ತಾರೆ. ಯಾವ ಕಾರಣಕ್ಕೂ ಮಹಿಳೆಯರು ತಮ್ಮ ತಲೆಕೂದಲುಗಳನ್ನು ಕತ್ತರಿಸಬಾರದು. ಯಾಕೆಂದರೆ ಮಹಿಳೆಯರ ತಲೆ ಕೂದಲಿನ ಸಂಬಂಧ ತಾಯಿ ಲಕ್ಷ್ಮೀದೇವಿಯೊಂದಿಗೆ ಇರುತ್ತದೆ. ಇಲ್ಲಿ ನಿಮ್ಮ ತಲೆ ಕೂದಲುಗಳು ಎಷ್ಟು ಹೆಚ್ಚಾಗಿ, ಉದ್ದವಾಗಿ ಇರುತ್ತವೆಯೋ ಅಷ್ಟೇ ಸುಖ,

ಸಮೃದ್ಧಿ, ಐಶ್ವರ್ಯ, ಸಿರಿ, ಸಂಪತ್ತು ನಿಮ್ಮ ಮನೆಗೆ ಬರುತ್ತದೆ. ಆದ್ರೆ ನಡೆದಾಡುವಾಗ ನೆಲಕ್ಕೆ ಸ್ಪರ್ಶ ಆಗುವಷ್ಟು ತಲೆ ಕೂದಲು ಉದ್ದವಾಗಿ ಇರಬಾರದು. ಒಂದು ವೇಳೆ ತಲೆ ಕೂದಲುಗಳು ನೆಲವನ್ನು ಸ್ಪರ್ಶ ಮಾಡಿದರೆ ನೆಲದಲ್ಲಿ ಇರುವಂತ ನಕಾರಾತ್ಮಕ ಶಕ್ತಿ ತಲೆ ಕೂದಲುಗಳ ಮೂಲಕ ನಿಮ್ಮ ದೇಹವನ್ನು ಸೇರಬಹುದು. ಹಾಗಾಗಿ ಅತಿಯಾಗಿ ಉದ್ದವಾಗಿಯೂ ಇರಬಾರದು.

ತಲೆ ಕೂದಲುಗಳನ್ನು ಕತ್ತರಿಸುವಾಗ ಕೆಲವು ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಿ. ಪ್ರತಿದಿನ ನೀವೇನಾದರೂ ನಿಮ್ಮ ತಲೆ ಕೂದಲು ಬಾಚುತ್ತಿದ್ದರೆ, ಉದುರಿದ ತಲೆ ಕೂದಲುಗಳ ಗುಂಪನ್ನು ಅಲ್ಲಿ ಇಲ್ಲಿ ಎಸೆಯಬೇಡಿ. ಬೇರೆಯವರು ಅದನ್ನು ತುಳಿದಾಡುವಂತೆ ಮಾಡಬೇಡಿ. ಪ್ರತಿದಿನ ತಲೆ ಕೂದಲುಗಳನ್ನು ಬಾಚುವಾಗ ತಲೆಕೂದಲುಗಳು ಉದುರಿ ಬೀಳುತ್ತವೆ. ಕೆಲವು ಮಹಿಳೆಯರು ಅದನ್ನು ಅಲ್ಲಿ ಇಲ್ಲಿ ಕೊಳಚೆಯಲ್ಲಿ, ಕಸದಲ್ಲಿ ಎಸೆದು ಬಿಡ್ತಾರೆ.

ಕೆಲವರು ಅವುಗಳನ್ನು ಕೂಡಿ ಹಾಕಿ ಇಟ್ಟುಕೊಳ್ಳುತ್ತಾರೆ. ಯಾವುದಾದರೂ ದಿನ ಇವುಗಳನ್ನು ಮಾರಿ ಬಿಡ್ತಾರೆ. ಆದರೆ ಇಂಥ ತಪ್ಪನ್ನ ಯಾವತ್ತಿಗೂ ಮಾಡಬಾರದು. ಮಹಿಳೆಯರು ಈ ಒಂದು ಮಾತನ್ನು ತಿಳಿದುಕೊಳ್ಳಬೇಕು. ಮಹಿಳೆಯರ ತಲೆ ಕೂದಲುಗಳ ಮೂಲಕ ತಂತ್ರ ಕ್ರಿಯೆಗಳನ್ನು ಮಾಡುತ್ತಾರೆ. ಯಾವ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ಅಲ್ಲಿ ಇಲ್ಲಿ ಎಸೆದು ಬಿಡ್ತಾರೋ,

ಒಂದು ವೇಳೆ ಆ ತಲೆ ಕೂದಲುಗಳು ಯಾವುದಾದರೂ ದುಷ್ಟ ಪಾಪಿ ವ್ಯಕ್ತಿಗಳಿಗೆ ಸಿಕ್ರೆ ಅವರು ಅವುಗಳನ್ನ ದುರುಪಯೋಗ ಮಾಡಬಹುದು. ಇವುಗಳ ಜೊತೆಗೆ ಇಂತಹ ತಲೆ ಕೂದಲುಗಳತ್ತ ನಕಾರಾತ್ಮಕ ಶಕ್ತಿಗಳು ಸಹ ಆಕರ್ಷಣೆಯಾಗುತ್ತವೆ. ಆ ನಕಾರಾತ್ಮಕ ಶಕ್ತಿಗಳ ಪ್ರಭಾವ ಆ ಮಹಿಳೆಯರ ಜೀವನದಲ್ಲಿ ಬೀಳಬಹುದು. ಇದರ ಜೊತೆಗೆ ಹಲವಾರು ತಾಂತ್ರಿಕರು ಆ ಕೂದಲುಗಳನ್ನು ಪ್ರಯೋಗ ಮಾಡಿ, ಮಹಿಳೆಯರ ಮೇಲೆ ವಶೀಕರಣ ಕ್ರಿಯೆಗಳನ್ನು ಮಾಡುತ್ತಾರೆ.

ಹಾಗಾಗಿ ಅದೇ ನೀವು ನಿಮ್ಮ ತಲೆ ಕೂದಲುಗಳನ್ನು ಬಾಚುತ್ತಿದ್ದರೆ, ಅವು ಉದುರಿ ಹೋಗಿದ್ದರೆ ಅಥವಾ ತಲೆ ಕೂದಲುಗಳನ್ನು ಕತ್ತರಿಸುವಾಗ ಬಂದಿರುವಂತಹ ತಲೆ ಕೂದಲುಗಳು ಆ ತಲೆ ಕೂದಲುಗಳನ್ನೆಲ್ಲ ಮಹಿಳೆಯರು ಸಾಧ್ಯವಾದಷ್ಟು ಮಣ್ಣನ್ನು ಅಗೆದು ಅದರ ಒಳಗಡೆ ಹಾಕಿ ಮುಚ್ಚಲು ಪ್ರಯತ್ನ ಮಾಡಬೇಕು. ಒಂದು ವೇಳೆ ನಿಮ್ಮಿಂದ ಈ ರೀತಿ ಮಾಡಲು ಸಾಧ್ಯವಾಗಿಲ್ಲ ಅಂದ್ರೆ ಯಾವಾಗ ಕಸಗಳಲ್ಲಿ ನಿಮ್ಮ ತಲೆ ಕೂದಲುಗಳನ್ನು ಎಸೆದು ಬಿಡ್ತಿರೋ ಅಥವಾ ಅಲ್ಲಿ ಇಲ್ಲಿ ಎಸೆದಿರ್ತಿರೋ ಅವುಗಳನ್ನು ಕೂಡಿ ಹಾಕಿ ಅವುಗಳ ಮೇಲೆ ಉಗಿದುಬಿಡಿ. ಈ ರೀತಿ ಮಾಡೋದ್ರಿಂದ ಯಾವುದೇ ರೀತಿಯ ತಾಂತ್ರಿಕ ಶಕ್ತಿಗಳಾಗಲಿ, ಕೆಟ್ಟ ಶಕ್ತಿಗಳಾಗಲಿ ನಿಮ್ಮ ತಲೆ ಕೂದಲುಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಸ್ನೇಹಿತರೆ ಈ ಪ್ರಕಾರ ಗುರುಗಳು ಮಹಿಳೆಯರಿಗೆ ಉಪದೇಶವನ್ನು ನೀಡಿದ್ದಾರೆ.

Leave a Comment