ತುಲಾ ರಾಶಿ ಸ್ವಾತಿ ನಕ್ಷತ್ರದವರ ಸ್ವಭಾವಗಳು

0

ತುಲಾ ರಾಶಿಯವರು ಇರೋದೇ ಹೀಗೆ. ತುಲಾ ರಾಶಿಯವರ ಅಚ್ಚರಿಯ ಗುಣ ಸ್ವಭಾವಗಳು. ತುಲಾ ರಾಶಿಯವರ ವಿಶೇಷತೆಗಳು, ಗುಣ ಸ್ವಭಾವಗಳು ನಿಮಗೆ ಖಂಡಿತ ಅಚ್ಚರಿ ಮೂಡಿಸುತ್ತದೆ ಮತ್ತು ಬೆರಗಾಗುವಂತೆ ಮಾಡುತ್ತವೆ ಅನ್ನೋ ಸಂಗತಿಗಳನ್ನು ಇಲ್ಲಿ ನಾವು ತಿಳಿಸಿಕೊಡುತ್ತೇವೆ. 12 ರಾಶಿ ಚಕ್ರಗಳಲ್ಲಿ ಗಾಳಿಯ ಅಂಶದ 7ನೇ ರಾಶಿ ಚಕ್ರ ತುಲಾ ರಾಶಿಯು ಸಾಕಷ್ಟು ವಿಚಾರಗಳಿಂದ ಇತರೆ ರಾಶಿಗಳಿಗಿಂತ ಭಿನ್ನವಾಗಿದೆ. ತನ್ನ ರಾಶಿಚಕ್ರದ ತಕ್ಕಡಿಯ ಚಿಹ್ನೆಯಂತೆ ನ್ಯಾಯ ಸಮ್ಮತ ಮನಸ್ಥಿತಿಯ,

ಇತರರಿಗೆ ಸಹಾಯ ಹಸ್ತ ಚಾಚೋ ಸಹಕಾರಿ ಗುಣದ, ಒಂಟಿಯಾಗಿ ಇರೋದನ್ನ ಎಂದಿಗೂ ಇಷ್ಟಪಡದ, ಶಾಂತ ಸ್ವಭಾವದ, ಹಸನ್ಮುಖಿ, ಸದಾ ಸುಖಿ ಅಂತಿರುವ ರಾಶಿ ಚಕ್ರವೇ ತುಲಾ ರಾಶಿ. ಇನ್ನು ಹಲವಾರು ವಿಚಾರಗಳಿಗಾಗಿ ಇತರೆ ರಾಶಿಗಳಿಗಿಂತ ತುಲಾ ರಾಶಿ ವಿಶಿಷ್ಟವಾಗಿದೆ. ತುಲಾ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿಯಬೇಕಾದಂತಹ ಅಂಶಗಳು ವರ್ತನೆ, ಗುಣ ಸ್ವಭಾವ,

ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಕೆ ಆಗುತ್ತೆ ಹಾಗೂ ಆಗೋದಿಲ್ಲ, ರಾಶಿಯ ಸಂಕೇತ ಅರ್ಥ ಏನು, ಪ್ರೀತಿ ಜೀವನ, ವೃತ್ತಿ ಜೀವನ ಮತ್ತು ಆರ್ಥಿಕ ಸ್ಥಿತಿ, ಇತರೆ ಆಸಕ್ತಿಕರ ಸಂಗತಿಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಲಾ ರಾಶಿಯ ಅಂಶ ಗಾಳಿ ಅಥವಾ ವಾಯು. ಆಳುವ ಗ್ರಹ ಶುಕ್ರ. ಬಣ್ಣ ಪಿಂಕ್, ಹಸಿರು. ಗುಣ ಪ್ರಧಾನ. ದಿನ ಶುಕ್ರವಾರ.

ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ಮೇಷ, ಧನು. ಅದೃಷ್ಟ ಸಂಖ್ಯೆ 4, 6, 13, 15, 24. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯ ಎರಡು ತಕ್ಕಡಿಯ ಚಿಹ್ನೆಯು ನ್ಯಾಯ ಮತ್ತು ಕಾನೂನನ್ನ ಆಳುವ ದೇವತೆಗೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಶುಕ್ರ. ಈ ಚಿಹ್ನೆಯಲ್ಲಿ ಗಾಳಿಯ ಅಂಶವು ಹೆಚ್ಚು ಪ್ರಮುಖವಾಗಿದೆ. ಇದು ಚಲಿಸಬಲ್ಲ ಚಿಹ್ನೆ.

ಈ ರಾಶಿಯಲ್ಲಿ ಶನಿಯು ಉತ್ಕೃಷ್ಟನಾಗಿರುತ್ತಾನೆ ಮತ್ತು ಸೂರ್ಯನು ದುರ್ಬಲನಾಗಿರುತ್ತಾನೆ. ತುಲಾ ರಾಶಿಯಲ್ಲಿ ಜನಿಸಿದವರು ಬಹಳ ಮಹತ್ವಕಾಂಕ್ಷೆ ಉಳ್ಳವರು ಮತ್ತು ತಮ್ಮ ಮಹತ್ವಾಕಾಂಕ್ಷೆಗಳನ್ನ ಸಾಧಿಸೋಕೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನ ಮಾಡುತ್ತಾರೆ. ಇವರು ಉತ್ತಮ ಕೇಳುಗರು. ಆದರೆ ಅಂತಿಮವಾಗಿ ಅವರ ಮನಸ್ಸಿನ ಧ್ವನಿಯನ್ನೇ ಕೇಳ್ತಾರೆ. ಇವರು ನಿಷ್ಪಕ್ಷಪಾತ ಮತ್ತು ಸಮಚಿತ್ತದಿಂದ ಕೂಡಿರುತ್ತಾರೆ. ಸ್ವತಂತ್ರ್ಯ ಸಿದ್ಧಾಂತವನ್ನು ಹೊಂದಿರುತ್ತಾರೆ.

ಹಾಗಾಗಿ ಯಾರ ಅಡಿಯಲ್ಲಿಯೂ ಕೆಲಸ ಮಾಡೋದಕ್ಕೆ ಇಷ್ಟಪಡುವುದಿಲ್ಲ. ಇನ್ನು ತುಲಾ ರಾಶಿಯವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ಮತ್ತು ಒಂದೇ ಆಲೋಚನೆಗೆ ಅಂಟಿಕೊಳ್ಳುವುದಿಲ್ಲ. ಅವರು ವಿಮರ್ಶಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ತುಲಾ ರಾಶಿಯವರು ಇತರರ ಕೆಲಸವನ್ನು ಮೆಚ್ಚುವುದಿಲ್ಲ. ಇವರು ಮೇಲ್ನೋಟಕ್ಕೆ ನಿರ್ಲಪ್ತವಾಗಿ,

ಕೆಲವೊಮ್ಮೆ ನಿರ್ಣಯಿಸಿದ ಸ್ವಯಂಭೋಗದಿಂದ ಕೂಡಿದ ವ್ಯಕ್ತಿಗಳಾಗಿರುತ್ತಾರೆ. ಆದರೆ ತುಲಾ ರಾಶಿ ಗಾಳಿಯ ಸಂಕೇತವಾಗಿರುವುದರಿಂದ ಇವರನ್ನು ಪ್ರಾಯೋಗಿಕವಾಗಿ ನೋಡಿದಾಗ ನಿಜ ವಾಸ್ತವವನ್ನು ಮೀರಿದ ರೀತಿಯಲ್ಲಿ ಅತಿರೇಕವಾಗಿ ಯೋಚಿಸುತ್ತಾರೆ. ಇವರು ಜೋರಾಗಿ ಮಾತನಾಡೋ ಜನರಿಂದ ದೂರ ಹೋಗ್ತಾರೆ. ಯಾವುದೇ ಬಾಹ್ಯ ಸವಾಲನ್ನ ಎದುರಿಸೋ ಸ್ವಾಭಾವಿಕ ಶಕ್ತಿ ಇವರಲ್ಲಿ ಇರುತ್ತೆ.

ಇನ್ನು ತುಲಾ ರಾಶಿಯವರು ಎಲ್ಲಾ ರೀತಿಯ ಭೌತಿಕ ಸೌಕರ್ಯಗಳನ್ನು ಆನಂದಿಸುವುದಕ್ಕೆ ಬಯಸುತ್ತಾರೆ ಮತ್ತು ಸಾಮಾನ್ಯವಾಗಿ ತಮ್ಮ ಕಠಿಣ ಪರಿಶ್ರಮದಿಂದಾಗಿ ಯಾವುದೇ ಕೊರತೆಯನ್ನು ಅನುಭವಿಸುವುದಿಲ್ಲ. ಇವರು ಸಕ್ರಿಯ ವ್ಯಕ್ತಿಗಳಾಗಿರುತ್ತಾರೆ. ಮತ್ತು ನಿರಂತರವಾಗಿ ಒಂದಲ್ಲ ಒಂದು ಸೃಜನಾತ್ಮಕ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಅವರ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇವರು ತಮ್ಮ ಸೋಮಾರಿತನವನ್ನು ಬದಿಗಿಡ್ತಾರೆ. ತುಲಾ ರಾಶಿಯವರು ಎಷ್ಟು ಬುದ್ಧಿವಂತರು ಅಂದ್ರೆ ಅವರು ತಮ್ಮ ಉದ್ದೇಶವನ್ನು ಯಾವುದೇ ವಿಧಾನದಿಂದ ಪರಿಹರಿಸಬಲ್ಲರು. ಇವರು ಆಶಾವಾದಿಗಳು ಮತ್ತು ತಟಸ್ಥವಾಗಿರೋಕೆ ಪ್ರಯತ್ನ ಪಡುತ್ತಾರೆ. ಇವರು ಹಲವಾರು ಸ್ನೇಹಿತರನ್ನು ಹೊಂದಿರುತ್ತಾರೆ. ಮತ್ತು ಅವರ ಸ್ನೇಹಿತರಿಗಾಗಿ ಹಣ ಮತ್ತು ಸಮಯವನ್ನು ವ್ಯಯಿಸೋಕೆ ಹಿಂದೆ ಮುಂದೆ ನೋಡೋದಿಲ್ಲ.

ಅದೇ ರೀತಿ ತುಲಾ ರಾಶಿಯನ್ನು ಅತ್ಯಂತ ಆಕರ್ಷಕ ರಾಶಿ ಅಂತ ಪರಿಗಣಿಸಲಾಗುತ್ತೆ. ಇವರು ಸಾಮಾನ್ಯವಾಗಿ ಸಾಮಾಜಿಕವಾಗಿ ಬೆರೆಯುವವರು ಹಾಗೂ ಸ್ನೇಹಪರರು. ತಮ್ಮ ಪ್ರೀತಿಪಾತ್ರದೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಇವರು ಬಹಳ ಸಹಕಾರಿ ಮನೋಭಾವ ಹಾಗೂ ನ್ಯಾಯತವಾಗಿರೋರು. ಇತರರ ಆಂತರಿಕ ಸೌಂದರ್ಯವನ್ನು ಪ್ರಶಂಸಿಸುವುದು ಇವರ ಒಳ್ಳೆಯ ಗುಣಕ್ಕೆ ಉದಾಹರಣೆ.

ಇವ್ರು ವ್ಯಕ್ತಿಗಳ ನಕಾರಾತ್ಮಕ ಗುಣಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಸಕಾರಾತ್ಮಕ ಅಂಶಗಳನ್ನು ಒಪ್ಪಿಕೊಳ್ಳುತ್ತಾರೆ. ಪ್ರತಿಯೊಂದು ಸನ್ನಿವೇಶ ಸಂದರ್ಭಗಳ ಹಿಂದಿನ ಸತ್ಯವನ್ನ ತಿಳ್ಕೊಂಡಿದ್ರು ಅದನ್ನ ಎದುರಿಸೋಕೆ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ನನಗೇನು ಆಗಬೇಕಾಗಿಲ್ಲ ಅನ್ನೋ ಮನೋಭಾವ ಇವರದ್ದು. ಅಲ್ಲದೆ ಇವ್ರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಕೆ ಪ್ರಯತ್ನ ಮಾಡಬೇಕಾಗುತ್ತೆ.

ಇನ್ನು ಸಾಮರಸ್ಯವನ್ನು ಇಷ್ಟಪಡುವ ತುಲಾ ರಾಶಿಯವರು ಹೆಚ್ಚು ಕಾರ್ಯನಿರತವಾಗಿರುವ ಸ್ಥಳ, ಜನದಟ್ಟಣೆ ಇರುವ ಸ್ಥಳವನ್ನು ಇಷ್ಟಪಡುವುದಿಲ್ಲ. ಇವುಗಳಿಂದ ದೂರ ಇರೋದಕ್ಕೆ ಬಯಸುತ್ತಾರೆ. ಇದನ್ನು ಹೊರತುಪಡಿಸಿದರೆ ತಮ್ಮ ಭಾವನೆಗಳನ್ನ ನಿರಾಳವಾಗಿ ಎಲ್ಲರೊಂದಿಗೂ ಹಂಚಿಕೊಳ್ಳೋಕೆ ಬಯಸುವ ವ್ಯಕ್ತಿಗಳಾಗಿರುತ್ತಾರೆ. ಹೆಚ್ಚು ವಿಶ್ರಾಂತಿ ಪಡೆಯೋದು ಇವರಿಗೆ ತುಂಬಾ ಇಷ್ಟ.

ಇದು ಮನಸ್ಥಿತಿಯನ್ನು ಹಗುರಗೊಳಿಸುತ್ತೆ ಅನ್ನೋದು ಇವರ ಭಾವನೆ. ತುಲಾ ರಾಶಿಯವರು ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡೋಕೆ ಇಷ್ಟ ಪಡ್ತಾರೆ. ಹೊಸ ಹೊಸ ಸಂಗತಿಗಳನ್ನು ಸಂಶೋಧಿಸೋಕೆ ಇಷ್ಟಪಡುತ್ತಾರೆ. ಅದೇ ರೀತಿ ತಮ್ಮನ್ನ ತಾವು ಹೊಗಳಿಕೊಳ್ಳುವ ಸ್ವಯಂ ಗೀಳು ಹೊಂದಿರುವ ಜನರನ್ನ ಇವರು ದ್ವೇಷಿಸುತ್ತಾರೆ. ತಾವು ತಮ್ಮನ್ನ ಇತರರಿಗಿಂತ ಕಡಿಮೆ ಅಂತ ಭಾವಿಸಿದಂತೆ,

ಅವರಿಗೆ ವಿರುದ್ಧವಾಗಿರೋ ಯಾರಾದ್ರೂ ಅವರೊಂದಿಗೆ ಇರೋದು ಇವರಿಗೆ ಸಹಜವಾಗಿಯೇ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅಲ್ಲದೆ ಇವರು ಹೆಚ್ಚು ಸಮಯ ಒಂದೇ ಸ್ಥಳದಲ್ಲಿರೋಕೆ ಇಷ್ಟಪಡುವುದಿಲ್ಲ. ತಮ್ಮ ಮನಸ್ಥಿತಿಯನ್ನ ಹಗುರಗೊಳಿಸೋಕೆ ಸ್ನೇಹಿತರೊಂದಿಗೆ ಆಗಾಗ ಸುತ್ತಾಡೋದನ್ನ ಇಷ್ಟಪಡುವ ಇವರು ಹಿಂಸೆಯನ್ನ ಖಂಡಿಸೋ ಮನಸ್ಥಿತಿಯವರಾಗಿರುತ್ತಾರೆ. ಅದೇ ರೀತಿ ತುಲಾ ರಾಶಿಯವರು ಉತ್ತಮ ಮತ್ತು ಸಾಮರಸ್ಯದ ಕುಟುಂಬ ಸಂಬಂಧಗಳನ್ನ ಹೊಂದೋದಕ್ಕೆ ಇಷ್ಟಪಡುತ್ತಾರೆ.

ಮತ್ತು ಅವರೊಂದಿಗೆ ಪ್ರಯಾಣಿಸುವುದಕ್ಕೆ ಬಯಸುತ್ತಾರೆ. ಸಾಮಾನ್ಯವಾಗಿ ತುಲಾ ರಾಶಿಯವರು ಸುಲಭವಾಗಿ ಸ್ನೇಹಿತರನ್ನ ಮಾಡಿಕೊಳ್ಳೋದು ಹೇಗೆ ಮತ್ತು ಇತರರ ಜೊತೆ ಬೆರೆಯುವುದು ಹೇಗೆ ಅಂತ ತಿಳಿದಿರುತ್ತಾರೆ. ಇವರು ಬೇರೆಯವರ ಕಡೆಗಿನ ತಮ್ಮ ಭಾವನೆಗಳಲ್ಲಿ ಪ್ರಾಮಾಣಿಕರು ಮತ್ತು ಶುದ್ಧರಾಗಿರುತ್ತಾರೆ. ಪ್ರೀತಿಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಇವರು ಯಾವಾಗಲೂ ಹಸನ್ಮುಖಿಗಳಾಗಿದ್ದು, ಹೃದಯದಲ್ಲಿ ಪ್ರೀತಿಯನ್ನು ಹೊಂದಿರುತ್ತಾರೆ. ಇವರು ಐಶಾರಾಮಿ ಜೀವನ ಮತ್ತು ಸುಗಂಧದ್ರವ್ಯಗಳನ್ನ ಇಷ್ಟಪಡುತ್ತಾರೆ. ಒಳ್ಳೆಯ ಬಟ್ಟೆಗಳು ಮತ್ತು ತಮ್ಮ ದೈಹಿಕ ನೋಟದ ಬಗ್ಗೆ ಬಹಳ ಗಮನ ಹರಿಸುತ್ತಾರೆ. ಹಾಗೆ ಇವರು ಕಲಾಕೃತಿಗಳ ಅಭಿಜ್ಞರು ಹೌದು. ಇನ್ನು ಸಾಮಾನ್ಯವಾಗಿ ತುಲಾ ರಾಶಿಯ ಪುರುಷರಿಗೆ ಕಾದಂಬರಿಗಳು, ಸ್ಟೈಲಿಶ್ ಬ್ಯಾಗ್ ಗಳು ಅದರಲ್ಲೂ ಟ್ರಾವೆಲ್ ಬ್ಯಾಗ್,

ಸಂಗೀತ ಪ್ರಿಯರಾಗಿರೋದ್ರಿಂದ ಹೆಡ್ಫೋನ್, ಗೇಮಿಂಗ್, ಸುಧಾರಿತ ತಂತ್ರಜ್ಞಾನಗಳು ಅಂದ್ರೆ ಬದಲಾಗುತ್ತಿರುವ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಬಟ್ಟೆ, ಕೈಗಡಿಯಾರಗಳು ಬಹು ಪ್ರಿಯವಾಗಿರುತ್ತದೆ. ಆದರೆ ಬಹಳ ದುಬಾರಿ ಉಡುಗೊರೆಗಳು ಇವರಿಗೆ ಅಷ್ಟೇನೂ ಇಷ್ಟ ಆಗೋದಿಲ್ಲ. ಇನ್ನು ತುಲಾ ರಾಶಿಯ ಸ್ತ್ರೀಯರಿಗೆ ಮುದ್ದಾದ ಸಣ್ಣ ಆಭರಣಗಳು, ಕೈ ಚೀಲ,

ಪಾದರಕ್ಷೆ, ಕೈ ಗಡಿಯಾರ, ನೈಲ್ ಪಾಲಿಶ್, ಲೈನರ್, ಲಿಪ್ಸ್ಟಿಕ್ ಗಳು ತುಂಬಾ ಇಷ್ಟವಾಗುತ್ತವೆ. ಆದರೆ ಗಾಢವಾದ ಮೇಕಪ್ ಸೆಟ್ಗಳು ಇವರಿಗೆ ಇಷ್ಟ ಆಗಲ್ಲ. ಅದನ್ನ ಇವರು ಧರಿಸುವುದು ಇಲ್ಲ. ಹಾಗಾಗಿ ಈ ರಾಶಿಯವರಿಗೆ ಉಡುಗೊರೆಗಳನ್ನು ಕೊಡುವಾಗ ಈ ಸಂಗತಿಗಳನ್ನು ಗಮನಿಸಿ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯುರ್ವೇದ, ಕೃಷಿ ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಪತ್ರಿಕೋದ್ಯಮ, ಹೋಮಿಯೋಪತಿ, ರೇಡಿಯೋಲಜಿ, ಸೌಂದರ್ಯಶಾಸ್ತ್ರ, ಜವಳಿ,

ಇಂಜಿನಿಯರಿಂಗ್ ವೃತ್ತಿ ತುಲಾ ರಾಶಿಯವರಿಗೆ ಲಾಭದಾಯಕ ಅಂತ ಹೇಳಲಾಗುತ್ತೆ. ಇದು ಇವರ ವೃತ್ತಿಪರ ವಲಯದಲ್ಲಿ ಸಹಾಯಕವಾಗಿದೆ ಅಂತ ಸಾಬೀತಾಗಿದೆ. ಇವರು ಸಾಕಷ್ಟು ಜ್ಞಾನ ಹಾಗೂ ಭೌತಿಕತೆ ಉಳ್ಳವರು. ಹಾಗಾಗಿ ಈ ವಿಷಯದ ಬಗ್ಗೆ ಸೂಕ್ತವಾದ ಜೊತೆಗಾರರಾಗಬಲ್ಲ ವ್ಯಕ್ತಿಗಳ ಸಹವಾಸವನ್ನು ತುಂಬಾ ಇಷ್ಟಪಡುತ್ತಾರೆ. ಇವರು ಟೀಮ್ ವರ್ಕ್ ಗೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ನಿರ್ಣಾಯಕ ನಿರ್ಧಾರವನ್ನ ತೆಗೆದುಕೊಳ್ಳುವ ಸಂದರ್ಭದಲ್ಲಿ ಇವರು ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

ಅದೇ ರೀತಿ ತುಲಾ ರಾಶಿಯವರು ಔಷಧ, ಕಲಾಕೃತಿಗಳು, ಜವಳಿ, ವಜ್ರ ಮತ್ತು ಮನರಂಜನೆಯಲ್ಲಿ ಉದ್ಯಮಶೀಲತೆಯಿಂದ ಪ್ರಯೋಜನಗಳನ್ನು ಪಡೆಯಬಹುದು. ಡೈರಿ ಸಾಕಾಣಿಕೆ ಮತ್ತು ಆಹಾರ ಸಂಬಂಧಿತ ವ್ಯಾಪಾರ ಕೂಡ ಇವರಿಗೆ ಪ್ರಯೋಜನಕಾರಿಯಾಗಿದೆ.

ಇವ್ರು ಅತ್ಯುತ್ತಮ ವಿನ್ಯಾಸಕರು, ಅಲಂಕಾರಕರು, ವಿಮರ್ಶಕರಾಗಿರುತ್ತಾರೆ. ಜೊತೆಗೆ ಉತ್ತಮ ರಾಜಕೀಯ ಕೌಶಲ್ಯಗಳನ್ನು ಸಹ ಹೊಂದಿರುತ್ತಾರೆ. ಇನ್ನು ಇವರ ಆರೋಗ್ಯದ ಬಗ್ಗೆ ನೋಡೋದಾದ್ರೆ ತುಲಾ ರಾಶಿಯವರು ಮೂತ್ರದ ಸೋಂಕು, ಚರ್ಮದ ಸೋಂಕು ಅಥವಾ ಅಂಡವಾಯು ಮುಂತಾದ ಆರೋಗ್ಯ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ತುಲಾ ರಾಶಿಯವರು ಇಂತಹ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಉತ್ತಮ. ಇವರು ಸ್ವಂತ ಆರೋಗ್ಯದ ಬಗ್ಗೆ ಮತ್ತು ಸಂಗಾತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಇವೆಲ್ಲ ತುಲಾ ರಾಶಿಯವರ ಅಚ್ಚರಿಯ ಗುಣ ಸ್ವಭಾವಗಳು.

Leave A Reply

Your email address will not be published.