ಸೋಮವಾರ ರಾತ್ರಿ ಈ ಕೆಲಸ ಮಾಡಿದರೆ ಬೇಡವೆಂದರೂ ಬರುವುದು ಅದೃಷ್ಟ. ಸೋಮವಾರದ ದಿನದಂದು ರಾತ್ರಿ ನಾವು ಈ ಕೆಲಸಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿನ ದುರಾದೃಷ್ಟಗಳು ದೂರಾಗಿ ಅದೃಷ್ಟ ಎನ್ನುವಂತಹದ್ದು ನಮ್ಮ ಕೈಹಿಡಿಯುತ್ತದೆ. ಸೋಮವಾರದ ರಾತ್ರಿ ನಾವು ಏನು ಮಾಡಬೇಕು? ಸೋಮವಾರ ರಾತ್ರಿ ಏನು ಮಾಡಿದರೆ ಅದೃಷ್ಟ?
ಹಿಂದೂ ಧರ್ಮದಲ್ಲಿ ಸೋಮವಾರವನ್ನು ಭಗವಾನ್ ಶಿವನಿಗೆ ಸಮರ್ಪಿಸಲಾಗುತ್ತದೆ. ಮತ್ತು ಈ ದಿನದಂದು ಶಿವನನ್ನು ವಿಧಿ ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ದೇವಾದಿದೇವನಾದ ಮಹಾದೇವನು ತನ್ನ ಭಕ್ತರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಮತ್ತು ಅವರ ಎಲ್ಲಾ ಇಷ್ಟಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶಿವನ ಭಕ್ತರು ಸೋಮವಾರದಂದು ಉಪವಾಸವನ್ನು ಆಚರಿಸುತ್ತಾರೆ
ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸುತ್ತಾರೆ. ಇದರಿಂದಾಗಿ ಶಿವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಜೀವನದಿಂದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕುತ್ತಾನೆ. ಹಾಗೂ ಅವರಿಗೆ ಸಂತೋಷ, ಸಮೃದ್ಧಿ ಮತ್ತು ಐಶ್ವರ್ಯವನ್ನು ಅನುಗ್ರಹಿಸುತ್ತಾನೆ. ಸೋಮವಾರ ಈ ಕೆಲಸವನ್ನು ಮಾಡುವುದರಿಂದ ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಹಣದ ಸಮಸ್ಯೆಯೂ ದೂರಾಗುವುದು. ಆದರೆ ಇವುಗಳನ್ನು ನೀವು ಸೋಮವಾರದಂದು ರಾತ್ರಿ ಮಾಡಬೇಕು.
ಮಲಗುವ ಮುನ್ನ ಹೀಗೆ ಮಾಡಿ. ಧಾರ್ಮಿಕ ಪುರಾಣಗಳ ಪ್ರಕಾರ ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಕೂರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಚಂದ್ರನನ್ನು ಪೂಜಿಸುವುದರಿಂದ ಶಿವನು ಸಂತೋಷಪಡುತ್ತಾನೆ. ಸೋಮವಾರದಿಂದ ರಾತ್ರಿ ಚಂದ್ರನು ಆಕಾಶದಲ್ಲಿ ಉದಯಿಸಿದ ನಂತರ ನೀವು ಮಲಗುವ ಮಂಚ ಅಥವಾ ಹಾಸಿಗೆಯ ನಾಲ್ಕು ಮೂಲೆಗಳಲ್ಲಿ ಬೆಳ್ಳಿಯ ಮೊಳೆಯನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ದುರಾದೃಷ್ಟವು ದೂರಾಗಿ ಅದೃಷ್ಟವು ಸಿಗುತ್ತದೆ. ಹಾಗೂ ವ್ಯಕ್ತಿಯ ಆರ್ಥಿಕ ಸ್ಥಿತಿಯು ದೃಢವಾಗುತ್ತದೆ.
ಇದನ್ನು ಪಠಿಸಿ.ಇದರ ಹೊರತಾಗಿ ಒಬ್ಬ ವ್ಯಕ್ತಿಯು ಆರ್ಥಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ ಅವನು ಸೋಮವಾರದ ದಿನದಂದು ವಿಧಿ ವಿಧಾನಗಳ ಪ್ರಕಾರ ಭಗವಾನ್ ಶಿವನನ್ನು ಪೂಜಿಸಬೇಕು. ಇದರೊಂದಿಗೆ ನೀವು ಶಿವ ದೇವಾಲಯದಲ್ಲಿ ಕುಳಿತುಕೊಂಡು ದಾರಿದ್ರ ದಹನ ಸ್ತೋತ್ರವನ್ನೂ ಪಠಿಸಬೇಕು. ಇದರಿಂದ ಶಿವನು ನಿಮ್ಮ ದಾರಿದ್ರ್ಯಗಳನ್ನೆಲ್ಲ ದೂರಾಗಿಸುತ್ತಾನೆ.
ಇದರ ನೈವೇದ್ಯ ಮಾಡಿ. ಸೋಮವಾರದ ದಿನದಂದು ಶಿವಲಿಂಗವನ್ನು ಪೂಜಿಸುವಾಗ ನೀರು ಮತ್ತು ಹಾಲು ಹೊರತುಪಡಿಸಿ, ಎಳ್ಳು ಮತ್ತು ಬಾರ್ಲಿಯನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ.
ಈ ಸ್ತೋತ್ರ ಪಠಿಸಿ.
ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಚಂದ್ರ ದೋಷವನ್ನು ಹೊಂದಿದ್ದರೆ, ಅವನು ಚಂದ್ರದೇವನನ್ನು ಮೆಚ್ಚಿಸಲು ಸೋಮವಾರದಂದು ಬೋಲೆನಾಥನನ್ನು ಪೂಜಿಸಿದ ನಂತರ ಚಂದ್ರಶೇಖರ ಸ್ತೋತ್ರವನ್ನೂ ಸಹ ಪಠಿಸಬೇಕು. ಇದು ಜಾತಕದಲ್ಲಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಹಾಗೂ ಚಂದ್ರದೋಷದಿಂದ ಆ ವ್ಯಕ್ತಿಗೆ ಮುಕ್ತಿಯನ್ನು ನೀಡುತ್ತದೆ.
ಇವರಿಗೆ ಆಹಾರವನ್ನು ನೀಡಿ.
ಶಾಸ್ತ್ರದ ಪ್ರಕಾರ ಬಡವರಿಗೆ ಆಹಾರ ನೀಡುವುದು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗಿದೆ. ಮತ್ತು ಸೋಮವಾರದ ದಿನ ಮುಸ್ಸಂಜೆ ಸಮಯದಲ್ಲಿ ನೀವು ಯಾವುದೇ ಬಡವರಿಗೆ ಅಥವಾ ನಿರ್ಗತಿಕರಿಗೆ ಆಹಾರವನ್ನು ನೀಡಿದರೆ ಆ ಮನೆಯಲ್ಲಿ ಅನ್ನಪೂರ್ಣ ದೇವಿ ನೆಲೆಸುತ್ತಾಳೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಒಂದು ಲೈಕ್ ಮಾಡಿ, ಶೇರ್ ಮಾಡಿ, ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ. ಇದೇ ರೀತಿಯ ಉಪಯುಕ್ತವಾದ ಮಾಹಿತಿಗಳೊಂದಿಗೆ ಮತ್ತೆ ಭೇಟಿಯಾಗೋಣ. ಧನ್ಯವಾದಗಳು.