ತುಲಾ ರಾಶಿಯವರಿಗೆ ಕೇತು ಫಲ. ಬಹಳಷ್ಟು ಜನ ಇಷ್ಟು ದಿನ ಕೇತುವಿನ ಫಲದಿಂದ ಬಿಂದಾಸ್ ಲೈಫನ್ನು ಅನುಭವಿಸಿರಬಹುದು. ಹಣಕಾಸಿನ ಸಮಸ್ಯೆ ಬಗೆಹರಿದು ಉಳಿತಾಯ ಮಾಡಿಕೊಂಡಿರಬಹುದು. ಹೂಡಿಕೆ ಮಾಡಿ ಲಾಭವನ್ನು ಸಹ ಗಳಿಸುತ್ತಿರಬಹುದು. ಆದರೆ ಅಕ್ಟೋಬರ್ 31ಕ್ಕೆ ಆಗುವ ಕೇತು ಪರಿವರ್ತನೆಯಿಂದ ಲಾಸ್ ಆಗುವ ಸಾಧ್ಯತೆ ಎದ್ದು ಕಾಣುತ್ತಿದೆ.
ಉಂಡು ಹೋದ ಕೊಂಡು ಹೋದ ಎನ್ನುವ ಹಾಗೆ ಬಹಳಷ್ಟು ಜನ ನಿಮಗೆ ಮೋಸ ಮಾಡಬಹುದು ಅಥವಾ ಯಾಮಾರ್ಸಿ ದುಡ್ಡು ಹೊಡೆಯಬಹುದು. ನೀವು ನಂಬಿರುವ ಜನರೇ ನಿಮ್ಮ ಬೆನ್ನಿಗೆ ಚೂರಿ ಹಾಕಬಹುದು. ಸ್ವಲ್ಪ ಭಯದ ವಾತಾವರಣ ಕ್ರಿಯೇಟ್ ಆಗುತ್ತದೆ. ಇಷ್ಟ ಇಲ್ಲ ಇನ್ನು ತುಂಬಾ ವಿಚಾರದಲ್ಲಿ ನೀವು ಹುಷಾರಾಗಿರಬೇಕು.
ನಿಮ್ಮ ಬ್ಯಾಗಲ್ಲಿ
ಈ ಒಂದು ವಸ್ತುವನ್ನು ಇಟ್ಟುಕೊಂಡರೆ ನೀವು ಎಲ್ಲ ತೊಂದರೆಗಳಿಂದ ಪಾರಾಗಬಹುದು. ಕೇತು ಪರಿವರ್ತನೆ ನಿಮ್ಮ 12ನೇ ಮನೆಯಾಗಿರುವ ಕನ್ಯ ರಾಶಿಯಲ್ಲಿ ಆಗುತ್ತಿದೆ. 12ನೇ ಮನೆ ವ್ಯಯಸ್ಥಾನ. ಹೀಗಾಗಿ ತುಲಾ ರಾಶಿಯವರು ಲಾಸ್ಟ್ ಗೆ ಬೀಳುವ ಸಾಧ್ಯತೆ ಹೆಚ್ಚು. 2024 ಮೇ ವರೆಗೂ ನಿಮಗೆ ಗುರುಬಲ ಇದೆ. ಅಲ್ಲಿವರೆಗೆ ಹೆಚ್ಚಿನ ಲಾಸ್ ಆಗದೆಯೂ ಇರಬಹುದು.
ಆದರೆ 2024 ಮೇ ನಂತರ ಬಹಳಷ್ಟು ಜನ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ರಾಹುವಿನ ಹಾಗೆ ಕೇತು ಸಹ ಗೊಂದಲ ಸೃಷ್ಟಿ ಮಾಡಿ, ಕಂಡಿದ್ದನ್ನೆಲ್ಲ ತೆಗೆದುಕೊಳ್ಳುವ ಆಸೆಯನ್ನು ಸೃಷ್ಟಿಸಬಹುದು. ಬೇರೆ ಕಡೆ ಇನ್ವೆಸ್ಟ್ ಮಾಡಿ ಅಥವಾ ಸಾಲ ನೀಡಿ ನೀಡಿ ಹಣವನ್ನು ನೀವು ಕಳೆದುಕೊಳ್ಳಬಹುದು. ಪಬ್ಲಿಕ್ ಸಿಟಿ ಸ್ಟಂಟ್ ಮಾಡಿ ಹಣ ಕಳೆದುಕೊಳ್ಳಬಹುದು.
ಡ್ರಿಂಕ್ಸ್ ಮಾಡಿ ಹಣ ಕಳೆದುಕೊಳ್ಳಬಹುದು. ಭೂ ಗತ ಕೆಲಸದಿಂದ ಹಣ ಹಾಗೂ ಪ್ರತಿಷ್ಠೆಯನ್ನು ಕಳೆದುಕೊಳ್ಳಬಹುದು. ಕೇತು ದೆಸೆಯಿಂದ ನೀವು ತಪ್ಪು ಮಾಡದಿದ್ದರೂ ಮಿಸ್ ಅಂಡರ್ಸ್ಟ್ಯಾಂಡಿಂಗ್ ಇಂದ ತಪ್ಪಿತಸ್ಥರಾಗಿ ನಿಲ್ಲುವ ಸಾಧ್ಯತೆ ಇದೆ. ಕೆಲವರಿಗೆ ಕಳ್ಳ ಕಾಕರ ಭಯ ಹೆಚ್ಚು ಆಗುತ್ತದೆ. ರಾತ್ರೋರಾತ್ರಿ ನಿಮ್ಮ ಮನೆಯಲ್ಲಿ ಕಳ್ಳತನ ಆಗಬಹುದು.
ಬೆಲೆಬಾಳುವ ವಸ್ತುಗಳನ್ನು ನೀವು ಕಳೆದುಕೊಳ್ಳಬಹುದು . ನಿಮ್ಮ ಮನೆಗೆ ಬಂದವರ್ಯಾರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಹಳ ದಿನಗಳ ನಂತರ ತಿಳಿಯಬಹುದು. ಅಥವಾ ನಿಮ್ಮ ಮೇಲೆಯೇ ಆಪಾದನೆ ಮಾಡಬಹುದು. ಯಾವುದಾದರೂ ಇವೆಂಟ್ ಅಲ್ಲಿ ನಿಮ್ಮನ್ನು ಬ್ಯಾನ್ ಅಥವಾ ರಿಜೆಕ್ಟ್ ಮಾಡುವುದು. ಅಥವಾ ಯಾರೋ ಹೇಳಿದ ಮಾತಿನಿಂದ ನಿಮಗೆ ನೋವಾಗಬಹುದು.
ಅಡ್ಡ ದಿಡ್ಡಿ ಖರ್ಚನ್ನು ನೀವು ಮಾಡಬಹುದು. ಇತರರನ್ನು ನೋಡಿ ಅಸೂಯೆಪಡುವುದು. ಬಹಳಷ್ಟು ಜನರಿಗೆ ಪ್ರೀತಿ ಪ್ರೇಮ ಮದುವೆಯ ವಿಚಾರದಲ್ಲಿಯೂ ಮೋಸವಾಗುತ್ತದೆ. ಅಕ್ಟೋಬರ್ 31ಕ್ಕೆ ಕೇತು ಪರಿವರ್ತನೆ ಮಾತ್ರವಲ್ಲ ರಾಹು ಪರಿವರ್ತನೆ ಕೂಡ ಆಗುವುದಿದೆ. 2025 ರ ಮೇ 18 ರ ತನಕ, ಕೇತು ಇದೇ ಸ್ಥಾನದಲ್ಲಿರುತ್ತಾನೆ. ಕೇತು ಕೂಡ ರಾಹುವಿನ ಹಾಗೆಯ ಗೊಂದಲ ಹುಟ್ಟಿಸುತ್ತಾನೆ.
ಅಂದರೆ ನಾವು ಕೇಳಿದ್ದು ನೋಡಿದ್ದು ಕೆಲವೊಂದು ಸಲ ನಿಜಾನೇ ಆಗಿರುವುದಿಲ್ಲ. ಗೊಂದಲವನ್ನು ಹುಟ್ಟಿಸುತ್ತಾರೆ ಅಥವಾ ಜೊತೆಯಲ್ಲೇ ಇದ್ದುಕೊಂಡು ನಮ್ಮ ಎಲ್ಲಾ ಕೆಲಸಗಳಿಗೂ ಅಡ್ಡಿ ಉಂಟು ಮಾಡುತ್ತಾರೆ. ನಾಲ್ಕು ಜನರ ನಡುವೆ ಅವಮಾನ ಬೇಸರವಾದಾಗ ಬೇಸರವಾಗುತ್ತದೆ ನೋವಾಗುತ್ತದೆ.
ಕೆಲವರಿಗೆ ತುಂಬಾನೇ ಹರ್ಟ್ ಆಗಬಹುದು. ಮೆಂಟಲಿ ವೀಕ್ ಇರುವವರು ಡಿಪ್ರೆಶನ್ ಗೆ ಹೋಗಬಹುದು. ಆಸ್ಪತ್ರೆ ವಾಸಕ್ಕೆ ಹೋಗುವ ಹಾಗೆ ಏನಾದರೂ ಅನಾಹುತ ಮಾಡಿಕೊಳ್ಳ ಬಹುದು. ಬಣ್ಣ ಹಿಂದೆ ಚೂರಿ ಹಾಕುವವರನ್ನು ನಂಬಿಸಿ ಈ ತುಲಾ ರಾಶಿಯವರೇ ಮೋಸ ಮಾಡಬಹುದು. ಹೋದಲ್ಲಿ ಬಂದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದು.
ಸೇಡು ತೀರಿಸಿಕೊಳ್ಳಲು ಹೋಗಿ ಪಾಪದ ಕೆಲಸದಲ್ಲಿ ಭಾಗಿಯಾಗಬಹುದು. ಗಲಾಟೆ ಗೌಜು ಗದ್ದಲದಲ್ಲಿ ಇವರ ಹೆಸರು ಕೇಳಿ ಬರುವ ಸಾಧ್ಯತೆ ಇದೆ. ನಿಮಗೆ ಸ್ವಲ್ಪ ದೊಡ್ಡ ಮಟ್ಟಿಗೆ ಲಾಸ್ ಆಗಬಹುದು ಅಥವಾ ಹೆಸರು ಕೆಡಿಸಿಕೊಳ್ಳಬಹುದು. ಸ್ನೇಹಿತರ ಸಂಬಂಧಿಕರ ನಂಬಿಕೆಯನ್ನು ನೀವು ಮುರಿಯಬಹುದು. ಹೇಳುವುದೇ ಒಂದು ಮಾಡುವುದೇ ಇನ್ನೊಂದು. ಮಾತು ಕೊಡುವ ಮುಂಚೆ ಯೋಚನೆ ಮಾಡಿ.
ಕೆಲಸ ಮಾಡುವಾಗ ಅದರಲ್ಲೂ ಶಾರ್ಪ್ ಆಗಿರುವ ವಸ್ತುವನ್ನು ಬಳಸಿ ಕೆಲಸ ಮಾಡುವಾಗ, ಅದರಲ್ಲೂ ಕತ್ತಿ ಚಾಕು ಕೊಡಲಿ ಬಳಸಿ ಕೆಲಸ ಮಾಡುವಾಗ, ಫುಲ್ ಕಾನ್ಸನ್ಟ್ರೇಷನ್ನಿಂದ ಮಾಡಿ ಇಲ್ಲವಾದರೆ ಬೆರಳು ಕತ್ತರಿಸಬಹುದು. ಅಥವಾ ಹೆಚ್ಚು ನೋವಾಗುವ ಸಾಧ್ಯತೆ ಇದೆ. ಮಾಡುತ್ತಿರುವ ಕೆಲಸವನ್ನು ಪೂರ್ತಿ ಮಾಡಿ ಹೋಗಿ ಅರ್ಧಕ್ಕೆ ನಿಲ್ಲಿಸಿದರೆ ಇಂತಹ ಅವಗಡಗಳುಆಗಬಹುದು.
ದುಡ್ಡನ್ನು ನೋಡಿ ಫ್ರೆಂಡ್ಶಿಪ್ ಮಾಡುವುದು ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುವುದು. ಇಂತಹ ಗುಣಗಳನ್ನು ಅವಾಯ್ಡ್ ಮಾಡಿ. ಒಂದು ದಿನ ಎಂಜಾಯ್ ಮಾಡೋಣ ಎಂದು ಹೊರಟರು ಕೇತು ನಿಮಗೆ ಸರಿಯಾದ ಪಾಠವನ್ನು ಕಲಿಸುವ ಸಾಧ್ಯತೆ ಇದೆ. ಅಂತಹ ಸ್ವಭಾವದವರು ನೀವು ಆಗಿರದಿದ್ದರೂ ಕೇತು ನಿಮ್ಮನ್ನು ಬದಲಾಯಿಸಬಹುದು.