ತುಲಾ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಅಕ್ಟೋಬರ್ ತಿಂಗಳಲ್ಲಿ ತುಲಾ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಗೊಂದಲ, ಚಿಂತೆಗಳು ದೂರವಾಗಿ ಪರಿವರ್ತನೆಯಾಗುತ್ತದೆ. ದಾಂಪತ್ಯದಲ್ಲಿ ಸಮಸ್ಯೆಗಳಿದ್ದರೆ ನಿವಾರಣೆ ಆಗುತ್ತದೆ. ನಿಮ್ಮ ಸಂಸಾರ ಉತ್ತಮವಾಗಿ ನಡೆದುಕೊಂಡು ಹೋಗಲೆಂದು ಗುರು ಗ್ರಹಕ್ಕೆ ನಮಸ್ಕಾರ ಮಾಡಿ, ದೇವರಿಗೆ ತುಪ್ಪದ ದೀಪವನ್ನು ಹಚ್ಚಿ. ಗುರು ಗ್ರಹದ ಪ್ರಭಾವ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗುತ್ತದೆ.

ಆ ವಿವಾಹಿತರಿಗೆ ಕಂಕಣ ಬಗ್ಗೆ ಕೂಡಿ ಬರುತ್ತದೆ. ಚತುರ್ಗ್ರಹ ಯೋಗವಾಗುತ್ತದೆ. ಕೇತು ರಾಹು ,ಬುಧ, ರವಿ, ನಾಲ್ಕು ಗ್ರಹಗಳು ಒಂದೇ ಕಡೆ ಇರುತ್ತದೆ. ಅಕ್ಟೋಬರ್ 18ರ ನಂತರ ಚತುರ್ ಗ್ರಹ ಉಂಟಾಗುತ್ತದೆ. ಮಿಶ್ರಫಲಗಳನ್ನು ಕೊಡುವುದರಿಂದ ಇಲ್ಲಿ ಬುಧ ಗ್ರಹ ಮಾತ್ರ ಧನಾತ್ಮಕ ವಾಗಿರುತ್ತದೆ. ಮತ್ತು ಉಳಿದ ಗ್ರಹಗಳು ಋಣಾತ್ಮಕವಾಗಿರುತ್ತದೆ.

ಪಿತೃಸ್ಥಾನದಲ್ಲೂ ಭಾದೆ ಇರುತ್ತದೆ. ಎಲ್ಲ ವಿಚಾರಗಳನ್ನು ಅರ್ಥ ಮಾಡಿಕೊಂಡು ನಿಮಗೆ ನೀವು ಧೈರ್ಯವನ್ನು ತಗೊಂಡು ಮಾನಸಿಕ ಸ್ಥರ್ಯವನ್ನು ತೆಗೆದುಕೊಳ್ಳಬೇಕು. ಇಂತಹ ಸಮಯದಲ್ಲಿ ನಿಮಗೆ ಧೈರ್ಯ ಕೊಡುವ ಶಕ್ತಿ ಎಂದರೆ ಅದು ಸೂರ್ಯನಾರಾಯಣ, ಆದಿತ್ಯ ಹೃದಯ ಸೋತ್ರವನ್ನು ಕೇಳಬಹುದು ಅಥವಾ ಹೇಳಿಕೊಳ್ಳಬಹುದು. ಸೂರ್ಯ ನಮಸ್ಕಾರ ಮಾಡಬಹುದು.

Leave A Reply

Your email address will not be published.