ಪಿತ್ರಪಕ್ಷ ಶ್ರಾದ್ದ: ಪಿತ್ರ ಪಕ್ಷದಲ್ಲಿ ಮರೆತರು ಈ 8 ತಪ್ಪುಗಳನ್ನ ಮಾಡಬೇಡಿ ಪಿತ್ರ ದೋಷ ಅಂಟುತ್ತದೆ

ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ ಭಾದ್ರಪದ ಮಾಸದ ಚೌತಿಯಿಂದ ಪಿತೃ ಪಕ್ಷವು ಶುರುವಾಗುತ್ತದೆ. ಇದು ಅಶ್ವಿನಿ ಮಾಸದ ಅಮಾವಾಸ್ಯೆಯ ದಿನ ಮುಕ್ತಾಯವಾಗುತ್ತದೆ. ಪಿತೃಪಕ್ಷದಲ್ಲಿ ಪೂರ್ವಜರಿಗೋಸ್ಕರ ಶ್ರಾದ್ಧ ತರ್ಪಣ ಕರ್ಮಗಳನ್ನು ಮಾಡಲಾಗುತ್ತದೆ. ಈ ದಿನಗಳಲ್ಲಿ ಪಿಂಡದಾನ ತರ್ಪಣ ಹವನ ಮತ್ತು ಅನ್ನದಾನಗಳು ಶ್ರೇಷ್ಠವಾದವು ಇದು ಪಿತ್ರರಿಗೆ ಸಮರ್ಪಣೆಯಾಗಿರುತ್ತದೆ. ಒಂದು ನಂಬಿಕೆಯ ಅನುಸಾರವಾಗಿ ಯಾರು ಪಿತೃ ಪಕ್ಷದಲ್ಲಿ ತಮ್ಮ ಪೂರ್ವಜರಿಗೆ ತರ್ಪಣ ನೀಡುವುದಿಲ್ಲವೋ ಅವರಿಗೆ ಪಿತೃ ದೋಷಗಳು ಅಂಟುತ್ತವೆ.

ಶ್ರಾದ್ಧದ ನಂತರವೇ ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ. ಶ್ರಾದ್ಧದಿಂದ ಪಿತೃ ದೇವರಿಗೆ ಶಾಂತಿ ಸಿಗುತ್ತದೆ. ಅವರು ನಿಮಗೆ ಒಲಿಯುತ್ತಾರೆ. ಮತ್ತು ಆಶೀರ್ವಾದ ನೀಡುತ್ತಾರೆ. ಇಲ್ಲಿ ಆ ಜನರು ಮದುವೆಯಾಗದಿರಲಿ, ಮಕ್ಕಳಿರಬಹುದು ಅಥವಾ ಹಿರಿಯವರು ಇರಬಹುದು ಸ್ತ್ರೀಯರೇ ಆಗಿರಬಹುದು ಅಥವಾ ಪುರುಷರಾಗಿರಬಹುದು ಇಲ್ಲಿ ಯಾವ ವ್ಯಕ್ತಿಯ ಮರಣವಾಗಿರುತ್ತದೆಯೋ

ಅವರನ್ನು ಪಿತೃಗಳು ಎಂದು ಕರೆಯಲಾಗುತ್ತದೆ. ಪಿತೃಪಕ್ಷದಲ್ಲಿ ಮೃತ್ಯು ಲೋಕದಿಂದ ಭೂಮಿಗೆ ಪಿತೃಗಳು ಬರುತ್ತಾರೆ. ತಮ್ಮ ಕುಟುಂಬದ ಜನರಿಗೆಲ್ಲಾ ಆಶೀರ್ವಾದವನ್ನು ಕೊಡುತ್ತಾರೆ. ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮ ಶಾಂತಿಗಾಗಿ. ದರ್ಪಣ ಮಾಡಲಾಗುತ್ತದೆ. ಪಿತೃಗಳು ಖುಷಿಯಾಗಿದ್ದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ. ಒಂದು ಮಾಹಿತಿ ಅನುಸಾರವಾಗಿ ಪಿತೃಪಕ್ಷದಲ್ಲಿ ಯಮರಾಜರು ಮೃತಜೀವಿಗಳನ್ನ ಬಿಡುತ್ತಾರೆ ಏಕೆಂದರೆ ಅವರು ತಮ್ಮ ಕುಟುಂಬದವರು ನೀಡಿದ ತರ್ಪಣವನ್ನು ಗ್ರಹಣ ಮಾಡಲಿ ಎಂದು ಬಿಟ್ಟಿರುತ್ತಾರೆ.

ಇಡೀ ಕುಟುಂಬಕ್ಕೆ ಅವರು ಆಶೀರ್ವಾದವನ್ನು ಕೊಟ್ಟು ಮರಳುತ್ತಾರೆ. ಶ್ರಾದ್ಧದ ಉತ್ಪತ್ತಿಯು ಶ್ರದ್ಧೆಯಿಂದ ಆಗಿದೆ. ತಮ್ಮ ಪೂರ್ವಜರಿಗೋಸ್ಕರ ಶ್ರದ್ಧೆಯಿಂದ ಆಚರಿಸುವ ಹಬ್ಬವನ್ನು ಶ್ರಾದ್ಧ ಎನ್ನುವರು. ಜಗತ್ತಿಗೆ ವಿದಾಯ ಹೇಳಿ ಹೋದಂತಹ ಆತ್ಮಗಳ ತೃಪ್ತಿಗೆ ಒಳ್ಳೆಯ ಭಾವನೆಯಿಂದ ಯಾರು ತರ್ಪಣವನ್ನು ಮಾಡುತ್ತಾರೋ, ಕೇವಲ ಅದನ್ನೇ ಶ್ರಾದ್ಧ ಎನ್ನುವರು.

ಪಿತೃ ಪಕ್ಷದಲ್ಲಿ ಯಾವಾಗ ಯಾರ ಶ್ರದ್ಧವನ್ನು ಮಾಡಬೇಕು. ಪಿತೃ ಪಕ್ಷದಲ್ಲಿ ತಮ್ಮ ಮನೆಯಲ್ಲಿರುವ ಎಲ್ಲಾ ದಿವಂಗತ ಜನರಿಗಾಗಿ, ಅವರ ಮೃತ್ಯುತಿತಿಯಂತೆ ಶ್ರದ್ದ ತರ್ಪಣಗಳನ್ನು ಮಾಡಬೇಕು. ಮೃತ್ಯುತಿತಿ ಎಂದರೆ ವ್ಯಕ್ತಿಯು ಕೊನೆ ಉಸಿರು ಎಳೆದಂತಹ ದಿನದ ತಿಥಿ ಆಗಿರುತ್ತದೆ. ಈ ತಿಥಿಯನ್ನು ಶ್ರಾದ್ಧಪಕ್ಷದಲ್ಲಿ ಮಧ್ಯಾಹ್ನದ ಸಮಯದಲ್ಲಿ, ಮಧ್ಯಾಹ್ನ 12 ಗಂಟೆ 30 ನಿಮಿಷ ಹಿಡಿದುಕೊಂಡು ಒಂದು ಗಂಟೆಯ ಮಧ್ಯೆಯ ಸಮಯದಲ್ಲಿ ಶ್ರದ್ಧ ಧರ್ಮವನ್ನು ಮಾಡಬೇಕು.

ಒಂದು ವೇಳೆ ನೀವು ನಿಮ್ಮ ದಿವಂಗತ ಜನರ ಮೃತ್ಯುತಿತಿಯನ್ನು ತಿಳಿದುಕೊಂಡಿಲ್ಲ ಎಂದರೆ ಅವರ ಶ್ರಾದ್ಧವನ್ನು ನೀವು ಸರ್ವ ಪಿತೃ ಅಮಾವಾಸ್ಯೆಯ ದಿನವೇ ಮಾಡಬೇಕು. ನಿಮ್ಮ ಕುಟುಂಬದಲ್ಲಿ ಯಾವ ವ್ಯಕ್ತಿಯ ಮೃತ್ಯು ಚತುರ್ದಶಿ ತಿಥಿಯoದು ಆಗಿದ್ದರೆ, ನೀವು ಚತುರ್ದಶಿ ತಿಥಿಯಲ್ಲಿ ಅವರ ಶ್ರದ್ಧವನ್ನು ಮಾಡಬಾರದು. ಮೊದಲಿಗೆ ತ್ರಯೋದಶಿ ಅಥವಾ ಅಮಾವಾಸ್ಯೆಯ ತಿಥಿಯಂದು ಮಾಡಬೇಕು. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ವ್ಯಕ್ತಿಯ ಅಕಾಲಿಕ ಮೃತ್ಯು ವಾಗಿದ್ದರೆ

ಅವರ ಶ್ರದ್ಧವನ್ನು ಮೃತ್ಯುತಿತಿಯೆಂದು ಯಾವತ್ತಿಗೂ ಮಾಡಬಾರದು. ಅವರ ಶ್ರಾದ್ಧವನ್ನು ಚತುರ್ದಶಿ ತಿಥಿಯಂದು ಮಾಡಬೇಕು. ಯಾವ ಸ್ತ್ರೀಯರು ಸೌಭಾಗ್ಯ ವತಿಯಾಗಿ ಮರಣವನ್ನು ಹೊಂದಿರುತ್ತಾರೆಯೋ ಅವರ ತಿಥಿಯನ್ನು ನವಮಿಯಂದು ಮಾಡಬೇಕು. ಅಜ್ಜ ಅಜ್ಜಿಯರ ತಿಥಿಯನ್ನು ಪ್ರತಿಪದ ತಿಥಿಯಂದೆ ಮಾಡಲಾಗುತ್ತದೆ. ಪಿತೃಪಕ್ಷದಲ್ಲಿ ಶ್ರದ್ಧಾ ಮತ್ತು ದರ್ಪಣವನ್ನು ವಿಧಿ ವಿಧಾನದಲ್ಲಿಯೇ ಮಾಡಬೇಕು.

ಶಾಸ್ತ್ರದಲ್ಲಿ ಹೇಳಿರುವ ಈ ಕೆಲವು ಕಾರ್ಯಗಳನ್ನು ಮರೆತು ಕೂಡ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ನಿಮ್ಮ ಪಿತೃ ನಿಮ್ಮ ಮೇಲೆ ಸಿಟ್ಟಾಗುವರು ನಿಮ್ಮ ತರ್ಪಣವನ್ನು ಸ್ವೀಕರಿಸುವುದಿಲ್ಲ. ಪೂಜೆಯಲ್ಲಿ ಕಬ್ಬಿಣದಿಂದ ತಯಾರಾದ ವಸ್ತುವಿನ ಬಳಕೆಯನ್ನು ಮಾಡಬಾರದು. ಇದರಿಂದ ಕುಟುಂಬದ ಮೇಲೆ ಅಶುಭ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ನೀವು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಯನ್ನು ಬಳಸುವುದು ಉತ್ತಮವಾಗಿರುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರ ಶ್ರಾದ್ಧವನ್ನು ಮಾಡುತ್ತಿದ್ದರೆ ಮೈ ಮೇಲೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.

ಇಲ್ಲಿ ವೀಳ್ಯದ ಎಲೆಗಳನ್ನು ಸಹ ತಿನ್ನಬಾರದು ಬೇರೆಯವರ ಮನೆಯಲ್ಲಿ ಊಟವನ್ನು ಮಾಡುವುದು ಸಹ ನಿಷೇಧಿಸಲಾಗಿದೆ. ಪಿತೃಪಕ್ಷದಲ್ಲಿ ಪೂರ್ವಜರ ಆತ್ಮ ಶುದ್ಧಿಗಾಗಿ ಪೂಜೆಯನ್ನು ಮಾಡಲಾಗುತ್ತದೆ. ಈ ಸಮಯ ಅವರನ್ನು ನೆನೆಯಲು ಶೋಕವನ್ನು ಮಾಡುವುದು ಆಗಿರುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡಲಾಗುವುದಿಲ್ಲ.

ಯಾವುದೇ ರೀತಿಯ ಹೊಸ ವಸ್ತುಗಳ ಖರೀದಿ ಕೂಡ ಅಶುಭ ಆಗಿರುತ್ತದೆ. ಮನೆಯ ಬಾಗಿಲಿಗೆ ಬಂದವರಿಗೆ ಊಟ ಹಾಕಬೇಕು. ಮನೆಯ ಮಾಳಿಗೆಯ ಮೇಲೆ ಪಶು ಪಕ್ಷಿಗಳಿಗಾಗಿ ತಿನ್ನಲು ಏನನ್ನಾದರೂ ಇಡಬೇಕು ಏಕೆಂದರೆ ಪೂರ್ವಜರು ಯಾವುದಾದರೂ ಪ್ರಾಣಿ ಪಕ್ಷಿಗಳ ರೂಪದಲ್ಲಿ ನಿಮ್ಮ ಮನೆಗೆ ಬರುತ್ತಾರೆ. ವಿಶೇಷವಾಗಿ ಯಾವ ಪುರುಷರು ಈ ಸಮಯದಲ್ಲಿ ಪೂರ್ವಜರ ಶ್ರದ್ಧವನ್ನು ಮಾಡುತ್ತಾರೋ

ಈ ಮಾತನ್ನು ಅವರು ನೆನಪಿಟ್ಟುಕೊಳ್ಳಬೇಕು ಈ ಸಮಯದಲ್ಲಿ ಅವರು ದಾಡಿಯನ್ನು ಮಾಡಬಾರದು. ಕೂದಲನ್ನು ಕತ್ತರಿಸಬಾರದು. ಹಾಗೆ ಮಾಡಿದರೆ ಪಿತೃಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಜೊತೆಗೆ ನಿಮಗೆ ಧನ ಹಾನಿ ಸಹ ಆಗಬಹುದು. ಮನೆಯಲ್ಲಿಯೇ ತಯಾರಿಸಿದ ಸಾತ್ವಿಕ ಆಹಾರವನ್ನು ನೈವೇದ್ಯ ಅರ್ಪಿಸಬೇಕು. ನಿಮ್ಮ ಪೂರ್ವಜರ ಮೃತ್ಯುತಿತಿ ನೆನಪಿದ್ದರೆ

ಆ ದಿನವೇ ಪಿಂಡದಾನವನ್ನು ಮಾಡಬೇಕು. ಇಲ್ಲವಾದರೆ ಪಿತೃಪಕ್ಷದ ಕೊನೆಯ ದಿನ ಪಿಂಡದಾನವನ್ನು ಮಾಡಬೇಕು. ಶ್ರದ್ಧಾದ ಸಮಯದಲ್ಲಿ ಕಪ್ಪು ಎಳ್ಳಿನ ಪ್ರಯೋಗವನ್ನು ಮಾಡಬೇಕು. ಬಿಳಿ ಬಣ್ಣದ ಎಳ್ಳುಗಳನ್ನು ಬಳಸಬಾರದು. ಪಿಂಡ ದಾನ ಮಾಡುವಾಗ ಖಂಡಿತವಾಗಿಯೂ ತುಳಸಿಯನ್ನು ಇಟ್ಟುಬಿಡಬೇಕು. ಶ್ರದ್ಧಾದ ಕಾರ್ಯವನ್ನು ಮಧ್ಯಾಹ್ನ ಮಾಡಬೇಕೆ ಹೊರತು ಯಾವತ್ತಿಗೂ ಮುಂಜಾನೆ ಸಾಯಂಕಾಲ ಅಥವಾ ರಾತ್ರಿ ಮಾಡಬಾರದು.

ಈ ದಿನ ಬ್ರಾಹ್ಮಣರಿಗೆ ಹಸುಗಳಿಗೆ ಇರುವೆಗಳಿಗೆ ಏನನ್ನಾದರೂ ತಿನ್ನಿಸಿರಿ. ಈ ಸಮಯ ಯಾವುದೇ ಶುಭ ಕಾರ್ಯ ಮಾಡಬಾರದು. ಉದಾಹರಣೆಗೆ ಗೃಹಪ್ರವೇಶ ಅಡುಗೆಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಬಹುದು ಈ ಸಮಯ ಮಾಂಸಹಾರವನ್ನು ಸಹ ಸೇವನೆ ಮಾಡಬಾರದು. ಈರುಳ್ಳಿ ಬೆಳ್ಳುಳ್ಳಿ ಇಂದ ರೆಡಿಯಾದ ವಸ್ತುಗಳ ಸೇವನೆಯನ್ನು ಸಹ ಮಾಡಬಾರದು. ನೀವು ಜನಿವಾರವನ್ನು ಹಾಕಿದ್ದರೆ ಎಡಬೂಜದಿಂದ ತೆಗೆದು ಬಲಭುಜಕ್ಕೆ ಹಾಕಿಕೊಳ್ಳಬೇಕು.

ಈ ಸಮಯದಲ್ಲಿ ಉಗುರುಗಳನ್ನು ಸಹ ಕತ್ತರಿಸಬಾರದು. ಮನೆಯಲ್ಲಿ ಚಪ್ಪಲಿಯನ್ನು ಧರಿಸಿಕೊಂಡು ಓಡಾಡಬಾರದು. ಹೊಸ ಬಟ್ಟೆಯ ಖರೀದಿ ಮಾಡಬಾರದು. ಒಂದು ವೇಳೆ ಖರೀದಿಸಿದ ಹೊಸ ಬಟ್ಟೆಗಳಿದ್ದರೆ ಅವುಗಳನ್ನು ನೀವು ಮೊದಲು ಒಮ್ಮೆ ಧರಿಸಿ ಇರಬೇಕಾಗುತ್ತದೆ. ಏಕೆಂದರೆ ಶ್ರದ್ದಪಕ್ಷದಲ್ಲಿ ಇದುವರೆಗೆ ಬಳಸದ ವಸ್ತುಗಳನ್ನು ಬಳಸಬಾರದು.

ಈ ಸಮಯದಲ್ಲಿ ಬ್ರಹ್ಮಚರ್ಯದ ಪಾಲನೆಯನ್ನು ಮಾಡಬೇಕು. ಈ ಸಮಯದಲ್ಲಿ ಕೆಲವು ವಸ್ತುಗಳ ತಿನ್ನುವುದನ್ನು ನಿಷೇಧಿಸಿದೆ ಅವುಗಳೆಂದರೆ ಚೆನ್ನಂಗಿ ಬೇಳೆ, ತೊಗರಿಬೇಳೆ, ಜೀರಿಗೆ ಕಪ್ಪು ಕುಂಬಳಕಾಯಿ ಮೊಟ್ಟೆ ಇತ್ಯಾದಿ ತಮಾಸಿಕ ಪದಾರ್ಥಗಳನ್ನು ತಿನ್ನಬಾರದು. ಈ ಸಮಯದ ವಸ್ತುಗಳನ್ನು ಬಳಸಬಾರದು. ಸಾಬೂನನ್ನು ಸಹ ಬಳಸಬಾರದು. ಕ್ರೀಮ್ ಪೌಡರ್ ಗಳನ್ನು ಸಹ ಬಳಸಬಾರದು.

ಈ ಸಮಯದಲ್ಲಿ ಬಟ್ಟೆ ಒಗೆಯುವ ಮತ್ತು ಬಟ್ಟೆಯನ್ನು ಹೊಲೆಯುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಬೇರೆಯವರು ಕೊಟ್ಟಂತಹ ಅನ್ನವನ್ನು ತಿನ್ನಬಾರದು. ಬೇರೆಯವರ ಮನೆಯಲ್ಲಿ ಕುಳಿತುಕೊಂಡು ಶ್ರದ್ಧಕರ್ಮಗಳನ್ನು ಮಾಡಬಾರದು. ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ಮಾಡಬೇಕು. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಹೋಗಿ ಅಥವಾ ಸಾರ್ವಜನಿಕ ದೇವಸ್ಥಾನಗಳಲ್ಲಿ ಮಾಡಬಹುದು.

ಈ ನಿಯಮಗಳನ್ನು ಪಾಲಿಸದಿದ್ದರೆ ಹಲವಾರು ಕಷ್ಟ ದುಃಖಗಳು ಬರುತ್ತವೆ. ಇವರ ಪೂರ್ವಜರಿಗೆ ಶಾಂತಿ ಸಿಗುವುದಿಲ್ಲ. ಈ ಕೆಳಗಿನ ಕಾರ್ಯಗಳನ್ನು ಮಾಡಿದರೆ ಖಂಡಿತವಾಗಿಯೂ ನಿಮಗೆ ಪಿತೃಗಳ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಪೂರ್ವಜರ ಮುಗುಳ್ನಗುವ ಫೋಟೋವನ್ನು ಅಂಟಿಸಬೇಕು.

ಆ ಫೋಟೋಗಳನ್ನು ದಕ್ಷಿಣ ಪಶ್ಚಿಮ ದಿಕ್ಕಿನ ಗೋಡೆಗಳಲ್ಲಿ ಅಂಟಿಸಬೇಕು. ದಿನದ ಕೆಲಸಗಳನ್ನು ಆರಂಭಿಸುವ ಮುನ್ನ ನಿಮ್ಮ ಹಿರಿಯರಿಗೆ ನಮಸ್ಕಾರ ಮಾಡಬೇಕು. ಆ ಫೋಟೋವಿನ ಮೇಲೆ ಹೂಮಾಲೆಯನ್ನು ಹಾಕಿ ದೂಪವನ್ನು ಹಚ್ಚಿರಿ. ಸಿಹಿಯನ್ನು ಹಂಚಬೇಕು. ಪೂರ್ವಜರನ ವಹಿಸಿಕೊಳ್ಳಲು ನೀವು ಅಧಿಕ ದಾನ ಧರ್ಮಗಳನ್ನು ಮಾಡಬೇಕು.

ಅವಶ್ಯಕತೆ ಇರುವವರಿಗೆ ಅವಶ್ಯಕತೆಗಳನ್ನು ಕೊಡಬೇಕು ಇದರಿಂದ ಪೂರ್ವಜರಿಗೆ ಶಾಂತಿ ಸಿಗುತ್ತದೆ. ಪಿತೃಪಕ್ಷದ ಸಮಯದಲ್ಲಿ ನಿಮ್ಮ ಪಿತೃಗಳ ಹೆಸರಿನಲ್ಲಿ ಗರುಡ ಪುರಾಣ ಭಗವದ್ಗೀತೆ ಓದುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃಪಕ್ಷದ ದಿನ ಸ್ಥಾನದ ನಂತರ ಓಂ ಪಿತೃಭ್ಯೋ ನಮಹ ಈ ಮಂತ್ರವನ್ನು ಧ್ಯಾನ ಮಾಡಿ. ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ.

Leave a Comment