ಯಾರಿಗೆ ನಿಮ್ಮ ಮಾತಿನ ಮೌಲ್ಯ ಅರ್ಥವಾಗುವುದಿಲ್ಲವೋ ಅವರಿಗೆ

0

ನಾವು ಈ ಲೇಖನದಲ್ಲಿ ಯಾರಿಗೆ ನಿಮ್ಮ ಮಾತಿನ ಮೌಲ್ಯ ಅರ್ಥವಾಗುವುದಿಲ್ಲವೋ ಅವರಿಗೆ ಹೇಗೆ ತಿಳಿಯುತ್ತದೆ ಎಂದು ತಿಳಿಯೋಣ .ನಿಮ್ಮ ಹತ್ತಿರ ಹಣ ಒಂದಿದ್ದರೆ ಸಾಕು ಇಲ್ಲಿ ಭಾವನೆಗಳಿಗೆ ಯಾರು ಬೆಲೆ ಕೊಡುವುದಿಲ್ಲ . ಬೇರೆಯವರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುವವರಿಗೆ ಕೊಡಲು ಯಾವ ಮದ್ದು ಇಲ್ಲ .

ಹಾಗಲಕಾಯಿಯ ಹಾಗೆ ಕಹಿಯಾದವರು ಕಷ್ಟದಲ್ಲಿ ಸಹಾಯಕ್ಕೆ ಬರುತ್ತಾರೆ .ಆದರೆ ಸಕ್ಕರೆ ಹಾಗೆ ಸಿಹಿಯಾಗಿ ಮಾತನಾಡುವವರು ಸಮಯಕ್ಕೆ ಸರಿಯಾಗಿ ಮೋಸ ಮಾಡುತ್ತಾರೆ . ಪ್ರತಿ ಮನುಷ್ಯನ ಜೀವನದಲ್ಲಿ ಎರಡು ಕಥೆಗಳು ಇರುತ್ತದೆ. ಒಂದು ಎಲ್ಲರಿಗೂ ಹೇಳುತ್ತಾನೆ. ಇನ್ನೊಂದು ಎಲ್ಲರಿಂದ ಮುಚ್ಚಿಡುತ್ತಾನೆ.

ಯಾರು ನಿಮ್ಮ ಮಾತಿನ ಮೌಲ್ಯವನ್ನು ಅರ್ಥ ಮಾಡಿ ಕೊಳ್ಳುವುದಿಲ್ಲವೋ, ಅವರಿಗೆ ಮೌನದಿಂದಲೇ ಉತ್ತರಿಸಿ. ಜೀವನದಲ್ಲಿ ನಿಮ್ಮನ್ನು ನೀವು ಶಕ್ತಿ ಯುತರನ್ನಾಗಿಸಿ . ಬೇರೆಯವರ ವಿಶ್ವಾಸದ ಮೇಲೆ ಇದ್ದರೆ ಅದು ನಿಮ್ಮನ್ನು ನಾಶ ಮಾಡಿ ಬಿಡುತ್ತದೆ .

ನಿಮ್ಮ ಕೋಪ ಮತ್ತು ನಿಮ್ಮ ಪ್ರೀತಿ ನಿಮ್ಮವರು ಎನಿಸಿಕೊಂಡವರಿಗಷ್ಟೇ ಸೀಮಿತವಾಗಿ ಇಡಿ . ಜನರು ತಮ್ಮದಲ್ಲದೆ ಇರುವುದನ್ನು ಕಳೆದುಕೊಳ್ಳಲು ಭಯ ಪಡುತ್ತಾರೆ . ಪ್ರೀತಿ ತುಂಬಾ ದುರ್ಲಭ ಅದನ್ನು ಹಿಡಿದಿಡಿ. ಕೋಪ ವಿನಾಶಕಾರಿ ಅದನ್ನು ಒತ್ತಿ ಹಿಡಿದಿಡಿ.

ಜಗತ್ತಿನ ಮುಂದೆ ಅಳುವುದಕ್ಕಿಂತ ತಾಳ್ಮೆ ಇಂದ ಇರುವುದು ಒಳ್ಳೆಯದು . ಯಾವ ಯಾವ ವಸ್ತುಗಳನ್ನು ನಿಮ್ಮಿಂದ ಕಿತ್ತುಕೊಳ್ಳ ಬಹುದು ಅವು ಯಾವುದು ನಿಮ್ಮ ವಸ್ತುಗಳು ಆಗಿರಲಿಲ್ಲವೆಂದು ತಿಳಿದುಕೊಂಡು ಬಿಡಿ .

ಸಮಯ ಸಮಯದೊಂದಿಗೆ ಬದಲಾಗುತ್ತದೆ . ಆದರೆ ಮನುಷ್ಯ ಮಾತ್ರ ಯಾವ ಸಮಯದಲ್ಲಿ ಬೇಕಾದರೂ ಬದಲಾಗಬಹುದು .

ಹಣದಿಂದ ಸಿಕ್ಕ ಸಂತೋಷ ಕೆಲವು ಕ್ಷಣದವರೆಗೆ ಮಾತ್ರ ಇರುತ್ತದೆ. ಆದರೆ ನಮ್ಮವರಿಂದ ಸಿಕ್ಕ ಖುಷಿ ಜೀವನ ಪರ್ಯಂತ ನಮ್ಮ ಜೊತೆ ಇರುತ್ತದೆ . ಸಂಬಂಧ ಆಳವಾಗಿರಲಿ ಬಿಡಲಿ ಆದರೆ ವಿಶ್ವಾಸ ಮಾತ್ರ ಆಳವಾಗಿರಲೇ ಬೇಕಾಗುತ್ತದೆ .

ಜೀವನದಲ್ಲಿ ಎಲ್ಲವೂ ಮುಗಿದು ಹೋಯಿತು ಅಂತ ಏನು ಇರುವುದಿಲ್ಲ . ಯಾವಾಗಲೂ ಹೊಸ ಪ್ರಾರಂಭ ಮಾತ್ರ ನಿಮ್ಮ ಹಾದಿ ಕಾಯುತ್ತಿರುತ್ತದೆ . ಹೊರಗಿನಿಂದ ತುಂಬಾ ಗಟ್ಟಿ ಆಗಿ ಕಾಣಿಸುವ ಜನ ಒಳಗಿನಿಂದ ತುಂಬಾ ದುರ್ಬಲರಾಗಿರುತ್ತಾರೆ .

ತಮ್ಮವರು ಈಗಲೂ ತಮ್ಮವರಾಗಿ ಉಳಿದುಕೊಂಡಿರುವ ಜನ ತುಂಬಾ ಅದೃಷ್ಟವಂತರೇ ಸರಿ . ಯಾರು ನಿಮಗೆ ಎಷ್ಟು ಗೌರವ ಕೊಡುತ್ತಾರೋ, ಅವರಿಗೆ ಅಷ್ಟೇ ಗೌರವ ಕೊಡಿ . ಅಗತ್ಯಕ್ಕಿಂತ ಹೆಚ್ಚು ಗೌರವ ಕೊಡುವುದು ನಿಮ್ಮ ಜೀವನವನ್ನು ಹಾಳು ಮಾಡಿ ಬಿಡಬಹುದು .

ಯಾರು ಮೋಸ ಮಾಡುತ್ತಾರೋ, ಅದು ಅವರ ತಪ್ಪಲ್ಲ. ಮೋಸ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುವುದು ಅದು ನಮ್ಮ ತಪ್ಪು . ನೀವು ಬದುಕುವ ರೀತಿ ಬದಲಾಯಿಸಿ. ಯಾರು ನಿಮ್ಮ ಕಾಳಜಿ ಮಾಡುವುದಿಲ್ಲವೋ , ಅವರಿಗಾಗಿ ರೋದಿಸುವುದನ್ನು ಬಿಟ್ಟುಬಿಡಿ .

ನಿಜವಾಗಿ ಪ್ರೀತಿ ಮಾಡುವವರು ಪ್ರತಿ ಸಲ ಪ್ರೀತಿಯ ನಿವೇದನೆ ಮಾಡುವುದಿಲ್ಲ . ನಿಮ್ಮ ಕಾಳಜಿಯನ್ನು ಮಾಡುತ್ತಾರೆ . ನಿಮ್ಮವರೇ ನಿಮ್ಮ ಮೇಲೆ ಕೋಪ ಮಾಡಿಕೊಳ್ಳುವಷ್ಟು ಬ್ಯುಸಿ ಆಗಬೇಡಿ. ಮತ್ತು ನಿಮ್ಮ ಗೌರವ ಕಡಿಮೆಯಾಗುವಷ್ಟು ಫ್ರೀ ಕೂಡ ಆಗಬೇಡಿ .

ಜನರು ನಿಮ್ಮೊಂದಿಗೆ ಇರುತ್ತಾರೆ . ನಿಮ್ಮ ಉಪಯೋಗ ಪಡೆದುಕೊಳ್ಳುತ್ತಾರೆ . ಮತ್ತು ಅವಶ್ಯಕತೆ ಮುಗಿದ ಮೇಲೆ ನಿಮ್ಮಲ್ಲಿ ಇಲ್ಲದ ನ್ಯೂನ್ಯತೆಗಳನ್ನು ಹುಡುಕಲು ಶುರು ಮಾಡುತ್ತಾರೆ. ಮತ್ತು ನಿಮ್ಮಿಂದ ದೂರವಾಗಿ ಬಿಡುತ್ತಾರೆ. ಇಂಥವರಿಗೆ ದುಃಖಿಸುತ್ತಾ ಕೂರುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ .

ಅಳುವುದರಿಂದ ಮನುಷ್ಯ ದುರ್ಬಲನಾಗುತ್ತಾನೆ, ಎಂಬುದು ಸುಳ್ಳು. ಅತ್ತು ಅತ್ತು ಚೂರಾದ ವ್ಯಕ್ತಿ ಎಲ್ಲರಿಗಿಂತ ಗಟ್ಟಿ ಆಗುತ್ತಾನೆ . ಪಶ್ಚಾತ್ತಾಪ ಆಗಿ ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ . ಮತ್ತು
ಚಿಂತೆ ಮುಂದಿನ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ . ಅದಕ್ಕಾಗಿ ವರ್ತಮಾನದ ಸುಖವನ್ನು ಅನುಭವಿಸುವುದೇ ನಿಜವಾದ ಸುಖ .

ನಿಮ್ಮನ್ನು ಮನಸ್ಸಿನಿಂದ ಪ್ರೀತಿಸುವವರು ಮಾತು ಮಾತಿಗೂ ನಿಮ್ಮ ಮೇಲೆ ಹೊಟ್ಟೆ ಕಿಚ್ಚು ಪಡುತ್ತಿರುತ್ತಾರೆ .ನಿಮ್ಮ ಮಾತಿಗಿಂತ ಮುಂಚೆ ನಿಮ್ಮ ಮೌಲ್ಯವನ್ನು ಗುರುತಿಸುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ .

ಯಾರಿಗಾದರೂ ತಾಳಿ ಕಟ್ಟಿ ಅವರನ್ನು ನಿಮ್ಮವರನ್ನಾಗಿಸಿ ಕೊಳ್ಳಬಹುದು. ಆದರೆ ಹೃದಯದ ಖಾಲಿ ತನವನ್ನು ತುಂಬಲು ಸಾಧ್ಯವಿಲ್ಲ .ನಿಮ್ಮ ಸುಂದರವಾದ ಸಂಬಂಧವನ್ನು ಎಲ್ಲರ ದೃಷ್ಟಿಯಿಂದ ಕಾಯ್ದುಕೊಳ್ಳಿ . ಯಾಕೆಂದರೆ ದೃಷ್ಟಿ ತಾಗುವ ಸಂಭವವಿರುತ್ತದೆ .

ಬುದ್ಧಿವಂತರಾದವರು ಮಾತು ಮಾತಿಗೂ ಕೋಪ ಮಾಡಿಕೊಳ್ಳುವುದಿಲ್ಲ . ಮಾತು ಮಾತಿಗೂ ಕೋಪ ಮಾಡಿಕೊಳ್ಳದವರು ಬುದ್ಧಿವಂತರಾಗಿರುವುದಿಲ್ಲ .

Leave A Reply

Your email address will not be published.