ನಾವು ಈ ಲೇಖನದಲ್ಲಿ ಆ ದೇವರು ನನಗೆ ಮಾತ್ರ ಯಾಕೆ ಹೀಗೆ ಮಾಡುತ್ತಾನೆ? ಶ್ರೀ ಕೃಷ್ಣನ ಈ ಮಾತುಗಳನ್ನು ಒಮ್ಮೆ ನೋಡೋಣ . ಒಮ್ಮೆ ಒಬ್ಬ ವ್ಯಕ್ತಿ ಭಗವಾನ್ ಬುದ್ಧರ ಬಳಿ ಬಂದು , “ನನ್ನ ಬದುಕಿನಲ್ಲಿ ಇಷ್ಟು ದುಃಖ ಇರುವುದು ಯಾಕೆ ? ” ಇಷ್ಟೊಂದು ತೊಂದರೆಗಳು ಇರುವುದು ಯಾಕೆ ? ಇಷ್ಟೊಂದು ಸಮಸ್ಯೆಗಳು ಇರುವುದು ಯಾಕೆ ? ಎಂದು ಪ್ರಶ್ನೆ ಕೇಳಿದರು .ಆಗ ಭಗವಾನ್ ಬುದ್ಧರು ” ನಿನಗೆ ಯಾವ ರೀತಿಯ ಸಮಸ್ಯೆಗಳಿವೆ ಎಂದು ನನಗೆ ತಿಳಿಸು” . ಎಂದು ಹೇಳಿದರು .
ಆಗ ಆ ವ್ಯಕ್ತಿ ” ನನಗಿರುವ ಕಷ್ಟಗಳಲ್ಲಿ ಎಷ್ಟನ್ನು ನಿಮಗೆ ಹೇಳಲಿ ” …ನನ್ನ ಇಡೀ ಜೀವನ ದುಃಖಗಳಿಂದಲೇ ತುಂಬಿದೆ. ನನ್ನ ಜೊತೆಗಿರುವ ಸಂಬಂಧಗಳಿಂದಲೂ ಸಹ ನನಗೆ ದುಃಖವಾಗಿದೆ . ನನ್ನ ದೇಹಕ್ಕೆ ಯಾವುದಾದರೂ ಒಂದು ಖಾಯಿಲೆ ಬರುತ್ತಲೇ ಇರುತ್ತದೆ . ಒಂದಲ್ಲಾ ಒಂದು ವಿಷಯದಿಂದ ಸಿಕ್ಕಿ ಹಾಕಿಕೊಳ್ಳುತ್ತಲೇ ಇರುತ್ತೇನೆ . ನನ್ನ ಜೊತೆಗಿರುವ ಸಂಬಂಧಗಳಿಂದ ನಾನು ಸಂತೋಷವಾಗಿಲ್ಲ. ನನ್ನ ಜನರ ಜೊತೆಗೆ ನನಗೆ ಸಂತೋಷ ಇಲ್ಲ . ನನ್ನ ಜೀವನದಲ್ಲಿ ಖುಷಿ ಎನ್ನುವುದೇ ಇಲ್ಲ .
ಇಂತಹ ಬದುಕಿಗಿಂತ ಸಾಯುವುದೇ ಮೇಲು ಅನಿಸುತ್ತದೆ .ಬದುಕಲು ನನಗೆ ಯಾವುದೇ ಕಾರಣ ಇಲ್ಲ ಎನ್ನುತ್ತಾನೆ . ಆದರೆ ಭಗವಾನ್ ಬುದ್ಧರು ನಿನ್ನಲ್ಲಿರುವ ಈ ದುಃಖಗಳಿಗೆ ಕಾರಣ ಏನು ಎಂದು ಹೇಳು ಎಂದು ಕೇಳುತ್ತಾರೆ . ಆಗ ಆ ವ್ಯಕ್ತಿ ಅದನ್ನು ತಿಳಿದುಕೊಳ್ಳುವ ಸಲುವಾಗಿಯೇ ನಾನು ನಿಮ್ಮ ಹತ್ತಿರ ಬಂದಿದ್ದೇನೆ . ನನಗೆ ಇಷ್ಟ ದುಃಖವಾಗಲು ಕಾರಣ ಏನು ಎಂದು ನೀವು ನನಗೆ ತಿಳಿಸಿ ಎಂದು ಹೇಳುತ್ತಾನೆ .ಆಗ ಉತ್ತರ ಈ ವಿಷಯವನ್ನು ನೀನು ಆಳವಾಗಿ ಯೋಚಿಸಿ ವಿಚಾರ ಮಾಡು , ನಿನ್ನ ದುಃಖ ಎಲ್ಲಿದೆ ಎಂದು ನೋಡು …
ನಿನ್ನ ದುಃಖಕ್ಕೆ ಕಾರಣ ಏನಿರಬಹುದು? ಎನ್ನುತ್ತಾರೆ . ಆಗ ಆ ವ್ಯಕ್ತಿ ಬಹಳ ಯೋಚಿಸುತ್ತಾನೆ . ಆದರೆ ಅವನಿಗೆ ತನ್ನ ದುಃಖಕ್ಕೆ ಕಾರಣ ಏನು ಎಂದು ತಿಳಿಯುವುದಿಲ್ಲ. ಆಗ ಬುದ್ಧರು ನಿನ್ನ ಎಲ್ಲಾ ದುಃಖಕ್ಕೂ ಕಾರಣ ಮತ್ತೇನು ಅಲ್ಲ, ಅದು ನೀನೇ . ನಿನ್ನ ಮನಸ್ಸಿನಲ್ಲಿ ಮೂಡುವ ಆಸಕ್ತಿ .ನಿನ್ನ ಮನಸ್ಸಿನಲ್ಲಿರುವ ಮೋಹ ಕಾರಣವಾಗಿದೆ . ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿ ನಿಮ್ಮ ಮಾತುಗಳು ನನಗೆ ಅರ್ಥವಾಗಲಿಲ್ಲ .ನನ್ನ ಮನಸ್ಸಿನಲ್ಲಿರುವ ಮೋಹ , ನನ್ನ ದುಃಖಕ್ಕೆ ಕಾರಣ ಆಗುವುದೇ ಹೇಗೆ ?
ಎಂದು ಬದ್ಧರನ್ನು ಪ್ರಶ್ನೆ ಮಾಡುತ್ತಾನೆ .ಆಗ ಭಗವಾನ್ ಬುದ್ಧರು ಆ ವ್ಯಕ್ತಿಗೆ ಮೂರು ಸಣ್ಣ ಕಥೆಗಳನ್ನು ಹೇಳುತ್ತಾರೆ . ಬುದ್ಧರು ಹೇಳಿದ ಮೊದಲ ಕಥೆ ಹೀಗಿತ್ತು .. ಒಬ್ಬ ವ್ಯಕ್ತಿ ಒಂದು ಮರದ ಹಿಂದೆ ಬಚ್ಚಿಟ್ಟುಕೊಂಡು ಕಿರುಚಲು ಶುರು ಮಾಡಿದ , ನನ್ನನ್ನು ಕಾಪಾಡಿ ಈ ಮರ ಹಿಡಿದುಕೊಂಡಿದೆ , ಮರದ ಹಿಡಿತದಿಂದ ನನ್ನನ್ನು ಬಿಡಿಸಿ ಎಂದು ಜೋರಾಗಿ ಕಿರುಚಿದ . ಅದೇ ದಾರಿಯಲ್ಲಿ ಗುರು ಶಿಷ್ಯರು ಹೋಗುತ್ತಿದ್ದರು .ಆ ವ್ಯಕ್ತಿಯನ್ನು ನೋಡಿದ ಶಿಷ್ಯ .”ಗುರುಗಳೇ ನಾವು ಆ ವ್ಯಕ್ತಿಗೆ ಸಹಾಯ ಮಾಡೋಣ ಎಂದು ಹೇಳುತ್ತಾನೆ ” .
ಆಗ ಗುರುಗಳು ” ಯಾರಿಂದಲೂ ಆ ವ್ಯಕ್ತಿಗೆ ಸಹಾಯ ಮಾಡಲು ಸಾಧ್ಯವಿಲ್ಲ. “… ಎನ್ನುತ್ತಾರೆ .ಆಗ ಶಿಷ್ಯ ಗಾಬರಿಯಾಗಿ , “ಅವನಿಗೆ ಸಹಾಯ ಮಾಡಲು ಆಗದೆ ಇರುವಂಥದ್ದು ಏನಿದೆ…” ಇಂದು ಗುರುಗಳಿಗೆ ಕೇಳುತ್ತಾರೆ . ಆಗ ಗುರುಗಳು , ಮರವನ್ನು ಆ ವ್ಯಕ್ತಿಯೇ ಹಿಡಿದುಕೊಂಡಿದ್ದಾನೆ ಯಾರಾದರೂ ಅವರೇ ಆ ವಸ್ತುವನ್ನು ತಿಳಿದುಕೊಂಡಿದ್ದರೆ , ಮತ್ತೊಬ್ಬರು ಅದರಿಂದ ಆ ವ್ಯಕ್ತಿಯನ್ನು ಬಿಡಿಸಲು ಹೇಗೆ ಸಾಧ್ಯ. ಎಂದು ಹೇಳುತ್ತಾರೆ. ಈ ಕಥೆ ಹೇಳಿದ ಬಳಿಕ ಬುದ್ಧರು ಹೀಗೆ ಹೇಳುತ್ತಾರೆ.
ನೀನು ಕೂಡ ಇದೇ ರೀತಿ ಇನ್ನು ಎಲ್ಲಾ ದುಃಖಗಳನ್ನು ಹಿಡಿದು ಇಟ್ಟುಕೊಂಡಿದ್ದೀಯಾ , ಇದೆಲ್ಲವೂ ನನ್ನದು , ನನಗೆ ಸೇರಿದ್ದು, ಇದೆಲ್ಲವೂ ನನ್ನ ಬಳಿಯೇ ಇರಬೇಕು . ಇವು ನನಗೆ ಸಿಗಲೇಬೇಕು . ಈ ರೀತಿ ನಿನ್ನ ಎಲ್ಲಾ ದುಃಖಗಳಿಗೂ ಕಾರಣ ಆಗಿರುವುದು . ನಾನು ಮತ್ತು ನನ್ನೊಳಗಿನ ಬಂಧನ ಎಂದು ಬುದ್ದರು ಹೇಳುತ್ತಾರೆ .
ಭಗವಾನ್ ಬುದ್ಧರು ಹೇಳಿದ ಎರಡನೇ ಕಥೆ ….ಜೇಡ ಯಾವ ರೀತಿ ಕಷ್ಟಪಟ್ಟು ಬಲೆ ನೇಯುತ್ತದೆ.ಆದರೆ ಒಂದು ದಿನ ತಾನೇ ನೇಯ್ದು ಬಲೆಯಲ್ಲಿ ಅನಿಸಿಕೆ ಹಾಕಿ ಕೊಳ್ಳುತ್ತದೆ . ಅದೇ ರೀತಿ ನಿನಗೂ ನಿನ್ನ ಜೀವನದಲ್ಲಿ ಎಷ್ಟು ಸಂಬಂಧಗಳಿಗೆ ? ಎಷ್ಟು ಜನ ವ್ಯಾಮೋಹಕ್ಕೆ ನೀನು ಒಳಗಾಗಿದ್ದೀಯಾ? ಎಷ್ಟು ಜನರನ್ನು ನೀನು ನಿನ್ನವರು ಅಂದುಕೊಂಡಿದ್ದೀಯಾ ? ಅವರೆಲ್ಲರ ಮೇಲೆ ನಿನಗೆ ಮೊಹರೋದರಿಂದಲೇ ಅವರಿಂದ ನಿನಗೆ ದುಃಖ ಆಗುತ್ತಿದೆ . ಈ ಜಗತ್ತಿನಲ್ಲಿ ಏನೇ ನಡೆಯುತ್ತಿದ್ದರು ನಮಗೆ ಸುಖ ಅಥವಾ ದುಃಖ ಆಗುವುದಿಲ್ಲ. ನಮಗೆ ಸುಖ ದುಃಖ ಆಗುವುದು, ನಮ್ಮವರ ಜೊತೆಯಲ್ಲಿ ಏನಾದರೂ ಆದಾಗ, ಅಥವಾ ನಮ್ಮವರು ಏನನ್ನಾದರೂ ಮಾಡಿದಾಗ ಎಂದು ಬುದ್ಧರು ಹೇಳುತ್ತಾರೆ.
ನಂತರ ಭಗವಾನ್ ಬುದ್ಧರು ಮೂರನೇ ಕಥೆಯನ್ನು ಆ ವ್ಯಕ್ತಿಗೆ ಹೇಳಿದರು. ಒಂದು ಸಾರಿ ಒಂದು ಪಾತ್ರೆಯ ಪೂರ್ತಿ ಜೇನಿನ ರಸ ಇರುವುದನ್ನು ನೋಡಿ, ಒಂದು ನೊಣ ಆ ಪಾತ್ರೆಯ ಒಳಗೆ ಹೋಗುತ್ತದೆ. ಅಲ್ಲಿರುವ ಜೇನನ್ನು ನೋಡಿ ನೊಣಕ್ಕೆ ಬಹಳ ಸಂತೋಷ ಆಗುತ್ತದೆ. ನೊಣ ಮನಸ್ಸು ಮಾಡಿದ್ದರೆ, ಅದರೊಳಗೆ ಸ್ವಲ್ಪ ಮಾತ್ರ ಹೋಗಿ, ಸುಲಭವಾಗಿ ಅಲ್ಲಿಂದ ಹೊರಗಡೆ ಬರಬಹುದು . ಆದರೆ ಜೇನನ್ನು ನೋಡಿ ಅದು ಎಷ್ಟು ಸಂತೋಷದಲ್ಲಿ ಇರುತ್ತದೆ. ಬಂದರೆ, ನೊಣ ಅಲ್ಲಿಂದ ಹೊರಬರಲು ಇಷ್ಟ ಪಡುವುದಿಲ್ಲ . ಜೇನಿನ ರಸವನ್ನು ಕುಡಿಯುತ್ತಾ ನೊಣದ ಹೊಟ್ಟೆ ಪೂರ್ತಿಯಾಗಿ ತುಂಬುವುದಕ್ಕಿಂತ ಮೊದಲೇ ಅದು ಜೇನಿನ ಪಾತ್ರೆಯ ಒಳಗೆ ಸಿಕ್ಕಿಹಾಕಿ ಕೊಳ್ಳುತ್ತದೆ.
ಹೊರಗಡೆ ಬರಲು ಸಾಧ್ಯ ಆಗುವುದಿಲ್ಲ. ಹೀಗೆ ಸಿಕ್ಕಿಹಾಕಿಕೊಂಡ ನಂತರ ಪಾತ್ರೆಯಿಂದ ಹೊರಬರಲು ಎಲ್ಲಾ ಪ್ರಯತ್ನಗಳನ್ನು ನೊಣ ಮಾಡುತ್ತದೆ. ಮುಂದೆ ಬರುತ್ತದೆ. ಹಿಂದೆ ಹೋಗುತ್ತದೆ. ಮೇಲೆ ಹಾರೋದಕ್ಕೆ ಪ್ರಯತ್ನ ಮಾಡುತ್ತದೆ. ಆದರೆ ಏನೇ ಮಾಡಿದರೂ ಅದು ಹೊರಗೆ ಬರಲು ಸಾಧ್ಯ ಆಗೋದಿಲ್ಲ . ಕೊನೆಗೆ ಆ ಪಾತ್ರೆಯ ಒಳಗೆ ಸಿಕ್ಕಿಹಾಕಿಕೊಂಡು ಬಿಡುತ್ತದೆ. ಅದೇ ರೀತಿ ನೀನು ಕೂಡ ನಿನಗೆ ಜೊತೆಯಾಗುವ ಸಂಬಂಧಗಳ ಶುರುವಿನಲ್ಲಿ ಅವರ ಜೊತೆಗೆ ಬಹಳ ಸಂತೋಷವಾಗಿರುತ್ತೀಯಾ .
ಬಹಳ ಆನಂದದಿಂದ ತುಂಬಿದ್ದ ಆ ಸಂಬಂಧವೇ ಈಗ ನಿನಗೆ ನೋವು ಕೊಡುತ್ತಾ ಇದೆ. ಕೆಲವು ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ರುಚಿಯ ಹಿಂದೆ ಹೋಗಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾರೆ. ಆದರಿಂದ ಅವರ ದೇಹದ ಆರೋಗ್ಯ ಹಾಳಾಗಿ ಖಾಯಿಲೆಗಳು ಬರಲು ಆರಂಭವಾಗುತ್ತದೆ. ಹೀಗೆಯೇ ಸಂಸಾರದಲ್ಲಿ ನಡೆಯುವ ಅನೇಕ ವಿಚಾರಗಳಲ್ಲಿ ವ್ಯಾಮೋಹಕ್ಕೆ ಒಳಗಾಗಿ ಹಣದ ಮೇಲೆ ದುರಾಸೆ ಬೆಳೆಯುತ್ತದೆ. ಆಗ ಆ ವ್ಯಕ್ತಿಗೆ ಎಷ್ಟೇ ಹಣ ಸಿಕ್ಕರೂ , ಆತನಿಗೆ ತೃಪ್ತಿ ಎನ್ನುವುದೇ ಸಿಗುವುದಿಲ್ಲ .
ಹಣದ ವಿಚಾರದಲ್ಲಿ ಅತೃಪ್ತನಾಗಿಯೇ ಉಳಿಯುತ್ತಾನೆ. ಈ ಕಾರಣದಿಂದ ಮನಸ್ಸಿನಲ್ಲಿ ದುಃಖ ಆರಂಭವಾಗುತ್ತದೆ. ಈ ಮಾತುಗಳನ್ನು ಕೇಳಿದ ಆ ವ್ಯಕ್ತಿಗೆ ಭಗವಾನ್ ಬುದ್ದರು ಹೇಳಿದ್ದು ಅರ್ಥವಾಗುತ್ತದೆ. ಬುದ್ಧರು ಹೇಳುತ್ತಿರುವುದು ಸರಿಯಾಗಿಯೇ ಇದೆ. ನನ್ನ ಎಲ್ಲಾ ದುಃಖಕ್ಕೂ ಇದೇ ಕಾರಣ . ನನ್ನ ದುಃಖಗಳಿಗೆ ನಾನೇ ಕಾರಣ. ಈ ದುಃಖ ಹುಟ್ಟಿದ್ದು ನನ್ನ ಮನಸ್ಸಿನ ಮೋಹದಿಂದ ಮತ್ತು ಬಂಧನದಿಂದ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ಬಳಿಕ ಬುದ್ಧರ ಬಳಿ ಮತ್ತೊಮ್ಮೆ ,
“ನನ್ನ ದುಃಖದ ಕಾರಣವನ್ನು ನನಗೆ ತಿಳಿಸಿ ಕೊಡಿ, ಎಂದು ಹೇಳುತ್ತಾನೆ. ಅದಕ್ಕೆ ಉಪಾಯವನ್ನು ಕೂಡ ನೀವೇ ತಿಳಿಸಿ ಕೊಡಬೇಕು. ಎಂದು ಹೇಳುತ್ತಾನೆ. ನಿನ್ನ ಎಲ್ಲಾ ದುಃಖಗಳಿಂದ ನೀನು ಪಾರಾಗಬೇಕು. ಎಂದುಕೊಂಡಿದ್ದರೆ , ನಿನ್ನ ಮನಸ್ಸನ್ನು ವ್ಯಾಮೋಹ ಮತ್ತು ಮೋಹದ ಮೇಲೆ ಇಟ್ಟು ಪ್ರೀತಿಯಿಂದ ಹಾಗೂ ಖುಷಿಯಿಂದ ಅವುಗಳನ್ನು ತುಂಬಿಸು . ಪ್ರೀತಿ ಮತ್ತು ಸಂತೋಷದ ದೀಪ ಯಾರ ಹೃದಯದಲ್ಲಿ ಬೆಳಗುತ್ತದೋ, ಆ ಸ್ಥಳದಲ್ಲಿ ಎಲ್ಲಾ ಕತ್ತಲೆ ಕೂಡ ಮಾಯವಾಗುತ್ತದೆ.
ಈ ಮಾತುಗಳನ್ನು ಹೇಳುವುದು . ಸುಲಭ , ಆದರೆ ಈ ರೀತಿ ನಡೆದುಕೊಳ್ಳುವುದು ಬಹಳ ಕಷ್ಟ . ಆದರೆ ಭಗವಾನ್ ಬುದ್ಧ ಹೇಳಿರುವ ಈ ಮಾತುಗಳ ಅರ್ಥ ತಿಳಿದು ಕೊಳ್ಳುವವರು , ತಮ್ಮ ಎಲ್ಲಾ ದುಃಖಗಳಿಂದ ನೋವುಗಳಿಂದ ಹೊರಬರುತ್ತಾರೆ. ಇಂತಹ ಘಟನೆಗಳು ನಮ್ಮ ಬದುಕಿನಲ್ಲಿ ಕೂಡ ನಡೆಯುತ್ತದೆ. ನಾವು ಜನರ ಜೊತೆಗೆ ಸಂಬಂಧ ಬೆಳೆಸುತ್ತೇವೆ. ನಂತರ ಅದರಿಂದ ನಾವೇ ಅಳುತ್ತಾ ಕುಳಿತುಕೊಳ್ಳುವ ಹಾಗೆ ಆಗುತ್ತದೆ. ಹೆಚ್ಚಾಗಿ ಪ್ರೀತಿಸಿ, ಸಂಬಂಧಗಳಿಂದ ನಮಗೆ ನೋವಾಗುತ್ತದೆ .
ಯಾರ ವಿಚಾರದಲ್ಲಿ ನಾವು ಅವರು ನನ್ನವರು ಎಂದು ಅತಿಯಾಗಿ ಹಚ್ಚಿಕೊಂಡು ಅವರ ಬಗ್ಗೆಯೇ ಯೋಚಿಸುತ್ತಾ ಇರುತ್ತೇವೋ , ಅಂಥವರಿಂದಲೇ ನಮಗೆ ಹೆಚ್ಚಿನ ನೋವು ಸಿಗುವುದು , ಯಾವೊಬ್ಬ ವ್ಯಕ್ತಿಯ ಸಂತೋಷಕ್ಕಾಗಿ ಯಾವ ತ್ಯಾಗಕ್ಕೆ ಬೇಕಾದರೂ ನಾವು ಸಿದ್ಧವಾಗಿ ಇರುತ್ತೆವೆಯೋ , ಯಾರ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿ ಇರುತ್ತೇವೆಯೋ, ಅಂತಹ ವೃಕ್ತಿಯಿಂದಲೇ ನಮ್ಮ ಜೀವನ ಕತ್ತಲಾಗಿ ಅವರೇ ನಮ್ಮ ಜೀವನಕ್ಕೆ ಅಪಾಯ ತರುತ್ತಾರೆ .
ಅದು ನಮ್ಮ ಸಂಸಾರ , ಅಥವಾ ಸ್ನೇಹಿತರು, ಮಕ್ಕಳು, ಅಥವಾ ಇನ್ಯಾವುದೇ ಸಂಬಂಧ ಇರಬಹುದು . ಆ ಸಂಬಂಧದ ಮೇಲೆ ಯಾವಾಗ ನಮಗೆ ಮೋಹ, ಪ್ರೀತಿ, ಹೆಚ್ಚಿನ ಭಾಂದವ್ಯ ಬೆಳೆಯುತ್ತದೆಯೋ , ಅಲ್ಲಿಂದಲೇ ನಮ್ಮ ದುಃಖಗಳು ಆರಂಭವಾಗುತ್ತದೆ. ಮೋಹ ಹಾಗೂ ವ್ಯಾಮೋಹವನ್ನು ತ್ಯಜಿಸಿ ನಿಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿಸಿ ಎಂದು ಭಗವಾನ್ ಬುದ್ಧ ಆ ವ್ಯಕ್ತಿಗೆ ಹೇಳಿದ ಮಾತುಗಳನ್ನು ನಾವು ಕೂಡ ನಮ್ಮ ಜೀವನದಲ್ಲಿ ಅನುಸರಿಸಿದರೆ, ನಮ್ಮ ಎಲ್ಲಾ ದುಃಖಗಳನ್ನು ಮರೆತು ಸಂತೋಷವಾಗಿ ಇರುತ್ತೇವೆ.