ಹೆಣ್ಣು ಹೇಗಿರಬೇಕು?

0

ನಾವು ಈ ಲೇಖನದಲ್ಲಿ ಹೆಣ್ಣು ಹೇಗಿರಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ. ವಾದ ಮಾಡಿದರೆ ವಾಚಾಳಿ ಎನ್ನುತ್ತಾರೆ. ನಗು ನಗುತ್ತಾ ಇದ್ದರೆ ನಂಬಬೇಡಿ ಎನ್ನುತ್ತಾರೆ. ಅತ್ತರೆ ಊರು ಹಾಳು ಮಾಡುವವಳು ಎನ್ನುತ್ತಾರೆ .

ಹೊಂದಿಕೊಂಡು ಹೋದರೆ ನಾಟಕ ಆಡುವವಳು ಎನ್ನುತ್ತಾರೆ . ಹೊಂದದಿದ್ದರೆ ಮನೆ ಹಾಳಿ ಎನ್ನುತ್ತಾರೆ. ಬಾಯಿ ಮಾಡಿದರೆ ಜಗಳಗಂಟಿ ಎನ್ನುತ್ತಾರೆ. ನಿಧಾನವಾಗಿ ಮಾತನಾಡಿದರೆ ಉಸುರಿಲ್ಲದವಳು ಎನ್ನುತ್ತಾರೆ.ಒಬ್ಬಳೇ ಕೆಲಸ ಮಾಡಿದರೆ ಯಾರನ್ನೂ ಕರೆಯುವುದಿಲ್ಲ ಎನ್ನುತ್ತಾರೆ.

ಕೆಲಸಕ್ಕೆ ಕರೆದರೆ ಸರಿಗಟ್ಟುವವಳು ಎನ್ನುತ್ತಾರೆ. ಕೇಳಿ ಮಾಡಿದರೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಕೇಳದೇ ಮಾಡಿದರೆ ಕಾರುಬಾರು ನಡೆಸುವವಳು ಎನ್ನುತ್ತಾರೆ. ಸಿಂಪಲ್ಲಾಗಿದ್ದರೆ ಅಂದರವಿಲ್ಲ ಎನ್ನುತ್ತಾರೆ. ಸಿಂಗರಿಸಿಕೊಂಡರೆ ಆಡಂಬರದವಳು ಎನ್ನುತ್ತಾರೆ.

ಮನೆತನದ ಕಾಳಜಿ ಮಾಡಿದರೆ ಇವಳೊಬ್ಬಳಿಗೆದೆಯೋ ಎನ್ನುತ್ತಾರೆ. ಕಾಳಜಿ ಮಾಡದಿದ್ದರೆ ನಿರ್ಲಕ್ಷ್ಯದವಳು ಎನ್ನುತ್ತಾರೆ. ವ್ರತ ಪೂಜೆ ಮಾಡಿದರೆ ಗೌರಮ್ಮ ಎನ್ನುತ್ತಾರೆ. ಏನೂ ಮಾಡದಿದ್ದರೆ ಸಂಸ್ಕೃತಿ ಇಲ್ಲದವಳು ಎನ್ನುತ್ತಾರೆ. ಹೆಣ್ಣನ್ನು ಹೇಗಿದ್ದರೆ ಹೊಗಳುವರು ?ಹೇಗಿದ್ದರೆ ಇಷ್ಟ ಪಡುವರು ?

ಹೆಣ್ಣು ಸಂಸಾರದ ಭಾರ , ಕಷ್ಟಗಳು , ಕಣ್ಣೀರು, ನೋವು, ನಲಿವುಗಳ ಮದ್ಯೆ ನಿಮ್ಮ ಕಷ್ಟ ನೋವುಗಳನ್ನು ಅವಳಿಗೆ ಹೊರಿಸಬೇಡಿ. ಹೊರಲು ಆಗೋದಿಲ್ಲ .ಅವಳಿಗೆ ಅವರದ್ದೇ ಆದ ಹೊಣೆ ತುಂಬಾ ಇವೆ . ಅದನ್ನೆಲ್ಲಾ ಅನುಭವಿಸಿ ಹೊತ್ತು ತನ್ನ ಸಣ್ಣ ಸಣ್ಣ ಸಂತೋಷ, ಆಸೆಗಳನ್ನು ಎಲ್ಲವನ್ನು ದೂರ ಮಾಡಿಕೊಂಡ ತ್ಯಾಗ ಮಯಿ ಹೆಣ್ಣು . ತಂದೆ ತಾಯಿಯರ

ಮಾತಿಗೆ ಕಟ್ಟು ಬಿದ್ದು ಮದುವೆ ಅನ್ನೋ ಮೂರು ಗಂಟಿಗೆ ಜೀವನ ಪರ್ಯಂತ ಗುರುತು ಪರಿಚಯ ಇಲ್ಲದವರ ಜೊತೆ ಜೀವನಪೂರ್ತಿ ಬದುಕನ್ನು ಹಂಚಿಕೊಂಡು, ದೇಹವನ್ನು ಹಂಚಿಕೊಂಡು, ಮಕ್ಕಳಿಗೆ ತಾಯಿಯಾಗಿ ಕೊನೆಯ ಗಳಿಗೆಯಲ್ಲಿ ಗಂಡನಿಗೆ ಮತ್ತೆ ತಾಯಿಯಾಗಿ ತನ್ನ ಬದುಕನ್ನು ಮುಗಿಸಿ ಕೊಳ್ಳುತ್ತಾಳೆ . ಹೆಣ್ಣು ನಿಜಕ್ಕೂ ದೇವರು ಕೊಟ್ಟ ವರ . ಪ್ರತಿ ಒಬ್ಬರು ಹೆಣ್ಣನ್ನು ಅರ್ಥ ಮಾಡಿಕೊಳ್ಳಬೇಕು .

Leave A Reply

Your email address will not be published.