ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರಾಗ್ತಾರೆ ಗೊತ್ತ?

0

ನಾವು ಈ ಲೇಖನದಲ್ಲಿ ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಶ್ರೀಮಂತರು ಆಗುತ್ತಾರೆ , ಎಂಬುದನ್ನು ನೋಡೋಣ. ಮೊದಲನೆಯದಾಗಿ ಮೇಷ ರಾಶಿಯ ಬಗ್ಗೆ ತಿಳಿಯೋಣ. ಮೇಷ ರಾಶಿಯ ಜನರು 19 , 28, 37 ಮತ್ತು 55 ನೇ ವರ್ಷಗಳಲ್ಲಿ ಅವರುಗಳು ಇದ್ದಕ್ಕಿದ್ದಂತೆ ಹೇರಳವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ .ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಮೇಷ ರಾಶಿಯವರು ತಮ್ಮ ಸ್ವಂತ ಪರಿಶ್ರಮದಿಂದ ಮಾತ್ರ ಹಣವನ್ನು ಗಳಿಸುತ್ತಾರೆ. ಹಣವನ್ನು ಗಳಿಸುವುದಕ್ಕೆ ಇವರು ಅಡ್ಡ ದಾರಿಯನ್ನು ಎಂದಿಗೂ ಬಳಸುವುದಿಲ್ಲ. ಮೇಷ ರಾಶಿಯವರು ಜೀವನ ಪೂರ್ತಿ ಸಾಕಷ್ಟು ಹಣದ ಲಾಭವನ್ನು ಪಡೆಯುತ್ತಾ ಇರುತ್ತಾರೆ , ಅಂದರೆ ಪ್ರತೀ ಶುಕ್ರವಾರ ನಿಯಮಿತವಾಗಿ ತಾಯಿ ಮಹಾಲಕ್ಷ್ಮಿಗೆ ಗುಲಾಬಿ ಹೂವುಗಳನ್ನು ಅರ್ಪಿಸಬೇಕು .

ನಂತರ ವೃಷಭ ರಾಶಿ. ಈ ರಾಶಿಯ ಜನರು ತುಂಬಾ ಶ್ರಮ ಜೀವಿಗಳು ಆಗಿರುತ್ತಾರೆ . ತಮ್ಮ ಕಠಿಣ ಪರಿಶ್ರಮದಿಂದ ಮತ್ತು ಹೆಚ್ಚಿನ ಪ್ರಯತ್ನದಿಂದ ಹಣವನ್ನು ಪಡೆಯುತ್ತಾರೆ. 29ನೇ ವರ್ಷ 38ನೇ ವರ್ಷ ಮತ್ತು 56ನೇ ವರ್ಷಗಳಲ್ಲಿ ಹಣವನ್ನು ಪಡೆಯುವ ಸಾಧ್ಯತೆಯೂ ಬಲವಾಗಿ ಇರುತ್ತದೆ. ಇವರು ತಮ್ಮ ಸಂಗಾತಿಯಿಂದ ಹಣವನ್ನು ಪಡೆಯುವ ಸಾಧ್ಯತೆ ಹೊಂದಿರುತ್ತಾರೆ. ಅಂದರೆ ಹೆಂಡತಿಯ ತವರು ಮನೆಯಿಂದ ಆಸ್ತಿ ಅಥವಾ ಉಡುಗೊರೆ .

ಹೀಗೆ ಈ ರಾಶಿಯವರು ಸಂಪತ್ತಿನ ನಿರೀಕ್ಷೆಯನ್ನು ಮಾಡಬಹುದು. ಹಣದ ಕೊರತೆ ಬರಬಾರದು ಎಂದರೆ
ವೃಷಭ ರಾಶಿಯವರು ನಿಯಮಿತವಾಗಿ ತಮ್ಮ ಕುತ್ತಿಗೆಗೆ ಬಿಳಿ ಸ್ಪಟಿಕದ ಹಾರವನ್ನು ಧರಿಸಬೇಕು. ಆದರೆ ಇದಕ್ಕಿಂತ ಮುಂಚೆ ಅವರು ನುರಿತ ಜ್ಯೋತಿಷಿಗಳ ಸಲಹೆಯನ್ನು ಪಡೆಯಬೇಕು. ನಂತರ ಮಿಥುನ ರಾಶಿ. ಮಿಥುನ ರಾಶಿಯವರಿಗೆ

27, 36, 45 ಮತ್ತು 57ನೇ ವರ್ಷಗಳಲ್ಲಿ ಆಕಸ್ಮಿಕವಾಗಿ ಧನ ಲಾಭವಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಮಿಥುನ ರಾಶಿಯವರಿಗೆ ತಂದೆಯ ಕಡೆಯಿಂದ ಆಸ್ತಿ ದೊರೆಯುತ್ತದೆ. ಮಿಥುನ ರಾಶಿಯವರು ಅವರ ಸ್ವಂತ ಪ್ರಯತ್ನದಿಂದ ಅಪಾರ ಹಣವನ್ನು ಗಳಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಸಿಂಧೂರವನ್ನು ಅರ್ಪಿಸುವುದು ರಿಂದ ಈ ರಾಶಿಯವರಿಗೆ ತುಂಬಾ ಶುಭ ಫಲವನ್ನು ಕೊಡುತ್ತದೆ.

ನಂತರ ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯ ಜನರು 23, 27 ,32 , 48 ಮತ್ತು 58 ನೇ ವರ್ಷಗಳಲ್ಲಿ ಆಕಸ್ಮಿಕ ಧನ ಲಾಭದ ಸಾಧ್ಯತೆ ಇದೆ. ಈ ರಾಶಿಯವರು ಅತ್ತೆ ಮನೆ ಕಡೆಯಿಂದ ಬೆಂಬಲ ಪಡೆಯುವ ಸಾಧ್ಯತೆ ಇದೆ. ಈ ರಾಶಿಯವರು ಲಕ್ಷ್ಮೀ ದೇವಿಗೆ ನಿಯಮಿತವಾಗಿ ಸುಗಂಧವನ್ನು ಅರ್ಪಿಸಬೇಕು. ಇದರಿಂದಾಗಿ ಈ ರಾಶಿಯವರಿಗೆ ಎಂದಿಗೂ ಹಣದ ಕೊರತೆ ಕಾಣುವುದಿಲ್ಲ.

ನಂತರ ಸಿಂಹ ರಾಶಿ. ಸಿಂಹ ರಾಶಿಯವರಿಗೆ 28, 32 ,50 ಮತ್ತು 60ನೇ ವರ್ಷಗಳಲ್ಲಿ ಆಕಸ್ಮಿಕ ಧನ ಲಾಭ ಆಗುವ ಸಾಧ್ಯತೆ ಇದೆ. ಇವರು ತಮ್ಮ ಸ್ವಂತ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ. ಈ ರಾಶಿಯವರು ಲಕ್ಷ್ಮೀ ದೇವಿಗೆ ನಿಯಮಿತವಾಗಿ ಹಸಿರು ಏಲಕ್ಕಿಯನ್ನು ಅರ್ಪಿಸಬೇಕು. ಅದರ ನಂತರ ಅದನ್ನು ಪ್ರಸಾದ ಎಂದು ಸೇವಿಸಬೇಕು. ಇದು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದು ಹಾಕುತ್ತದೆ.

ನಂತರ ಕನ್ಯಾ ರಾಶಿ. ಕನ್ಯಾ ರಾಶಿಯ ಜನರು ತಮ್ಮ ವ್ಯಾಪಾರ . ನೌಕರಿ ಮತ್ತು ಜೀವನ ಸಂಗಾತಿಯ ಮೂಲಕ ನಿಯಮಿತವಾಗಿ ಹಣವನ್ನು ಪಡೆಯುವ ಯೋಗವನ್ನು ಹೊಂದಿರುತ್ತಾರೆ. ಈ ರಾಶಿಯವರು 15 ,24. ,35 ಮತ್ತು 42 ನೇ ವರ್ಷಗಳಲ್ಲಿ ಅಪಾರ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯವರು ಬೆಳ್ಳಿಯನ್ನು ಧರಿಸಿ ನಿತ್ಯವೂ ಶಿವನನ್ನು ಪೂಜಿಸಬೇಕು .ಅವರಿಗೆ ಜೀವನದಲ್ಲಿ ಎಂದಿಗೂ ಹಣಕಾಸಿನ ತೊಂದರೆ ಆಗುವುದಿಲ್ಲ .

ನಂತರ ತುಲಾ ರಾಶಿ. ತುಲಾ ರಾಶಿಯ ಜನರು 16 , 34, 42 ಮತ್ತು 51 ನೇ ವರ್ಷದಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಯೋಗಗಳು ಇರುತ್ತವೆ. ಈ ರಾಶಿ ಅವರು ನಿಯಮಿತವಾಗಿ ಸೂರ್ಯದೇವನಿಗೆ ನೀರನ್ನು ಅರ್ಪಿಸಬೇಕು. ಇದರಿಂದಾಗಿ ನಿರಂತರವಾಗಿ ಹಣ ಇವರ ಕೈಗೆ ಸೇರುತ್ತದೆ. ಆದಾಯ ಮತ್ತು ಖರ್ಚು ಇವೆರಡನ್ನು ಈ ರಾಶಿಯವರು ಸಮ ತೋಲನವಾಗಿ ನೋಡಿಕೊಳ್ಳುತ್ತಾರೆ.

ನಂತರ ವೃಶ್ಚಿಕ ರಾಶಿ . ವೃಶ್ಚಿಕ ರಾಶಿ ಜನರು ಚಿಕ್ಕಪ್ಪ ಅಥವಾ ತಂದೆ ಕಡೆಯ ಸಂಬಂಧಿಕರಿಂದ ಹಣ ಪಡೆಯುವ ವಿಶೇಷ ಯೋಗಗಳನ್ನು ಹೊಂದಿರುತ್ತಾರೆ. ಅವರು ತಮ್ಮ 35, 44 ,53 ಮತ್ತು 63 ನೇ ವರ್ಷಗಳಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಗಣೀಶನನ್ನು ಗರಿಕೆಯಿಂದ ನಿತ್ಯಮೂ ಪೂಜಿಸಬೇಕು.ಮತ್ತು ಗಿಡಗಳಿಗೆ ನೀರು ಹಾಕಬೇಕು .ಹಣಕಾಸಿ ನಂತಹ ನಷ್ಟದ ಸಮಸ್ಯೆಗಳು ಬರುವುದಿಲ್ಲ. ಮತ್ತು ಧನ ಪ್ರಾಪ್ತಿ ಹೆಚ್ಚಾಗಿ ಆಗುತ್ತದೆ.

ನಂತರ ಧನಸ್ಸು ರಾಶಿ . ಧನಸ್ಸು ರಾಶಿಯ ಜನರು 36, 45 ,54 ಮತ್ತು 63 ನೇ ವರ್ಷದಲ್ಲಿ ಸಂಪತ್ತು ಪಡೆಯುವ ಬಲವಾದ ಯೋಗವಿದೆ. ಈ ರಾಶಿಯವರಿಗೆ ತಾಯಿ ಮತ್ತು ತಾಯಿಯ ಕಡೆಯವರ ಸಂಬಂಧದಿಂದ ಹಣವನ್ನು ಗಳಿಸುವ ಸಾಧ್ಯತೆ ಹೆಚ್ಚು ಇದೆ. ಈ ರಾಶಿ ಅವರು ನಿಯಮಿತವಾಗಿ ಲಕ್ಷ್ಮೀ ದೇವಿಗೆ ಗುಲಾಬಿ ಹೂವನ್ನು ಅರ್ಪಿಸಬೇಕು. ಈ ರಾಶಿಯವರಿಗೆ ನಿರಂತರವಾಗಿ ಧನ ಲಾಭ ಆಗುತ್ತದೆ.

ನಂತರ ಮಕರ ರಾಶಿ . ಮಕರ ರಾಶಿಯ ಜನರು ತಮ್ಮ ಸ್ವಂತ ವ್ಯಾಪಾರ ನೌಕರಿ ಇತರೆ ವೃತ್ತಿ ಗಳಿಂದ ಹಣವನ್ನ ಪಡೆಯುತ್ತಾರೆ. ಈ ರಾಶಿಯವರಿಗೆ 28, 37, 46 ಮತ್ತು 55 ನೇ ವರ್ಷಗಳಲ್ಲಿ ಹಣ ಪಡೆಯುವ ಸಾಧ್ಯತೆ ಇದೆ. ಈ ರಾಶಿಯ ಜನರು ಮಂಗಳವಾರದಂದು ನಿಯಮಿತವಾಗಿ ಕನಿಷ್ಠ ಒಂದು ಹೊತ್ತು ಆದರೂ ಉಪವಾಸ ಇರಬೇಕು. ಮತ್ತು ಹನುಮಂತ ದೇವರನ್ನು ಪೂಜಿಸಬೇಕು.

ನಂತರ ಕುಂಭ ರಾಶಿ . ಈ ಕುಂಭ ರಾಶಿಯ ಜನರು ತಮ್ಮ ಅದೃಷ್ಟ ಮತ್ತು ದೇವರ ದಯೆಯಿಂದ ಹಣವನ್ನು ಪಡೆಯುತ್ತಾರೆ. ಈ ರಾಶಿಯವರು 29 ,38 47 ಮತ್ತು 57 ನೇ ವರ್ಷಗಳಲ್ಲಿ ಹಣವನ್ನು ಗಳಿಸುವ ಸಾಧ್ಯತೆ ಇರುತ್ತದೆ. ಈ ರಾಶಿಯ ಜನರು ನಿರಂತರವಾಗಿ ಹಣವನ್ನು ಪಡೆಯಲು ಬಯಸಿದರೆ, ನಿಯಮಿತವಾಗಿ ದೇವಾಲಯಗಳಲ್ಲಿ ಬಾಳೆಹಣ್ಣನ್ನು ದಾನ ಮಾಡಬೇಕು.

ನಂತರ ಮೀನ ರಾಶಿ . ಮೀನ ರಾಶಿಯ ಜನರು 39,48 ಮತ್ತು 57 ನೇ ವರ್ಷಗಳಲ್ಲಿ ಧನ ಆಗಮನದ ಸಾಧ್ಯತೆಗಳು ತುಂಬಾ ಪ್ರಬಲವಾಗಿದೆ. ಇವರ ಜೀವನದಲ್ಲಿ ಮಕ್ಕಳ ಆಗಮನದೊಂದಿಗೆ ಮತ್ತು ಮಕ್ಕಳ ಸಹಕಾರದೊಂದಿಗೆ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇವರು ಮುಖ್ಯವಾಗಿ ಅಶ್ವಥ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸ ಬೇಕು. ಹೀಗೆ ಮಾಡುವುದರಿಂದ ಅದು ಸಂಪತ್ತಿನ ಆಗಮನಕ್ಕೆ ಕಾರಣವಾಗುತ್ತದೆ. ಹೀಗೆ ನಾವು ಯಾವ ಯಾವ ರಾಶಿಯವರು ಯಾವ ಯಾವ ವಯಸ್ಸಿನಲ್ಲಿ ಶ್ರೀಮಂತರು ಆಗುತ್ತಾರೆ ಎಂಬುದನ್ನು ಹೇಳಲಾಗಿದೆ.

Leave A Reply

Your email address will not be published.