3 12 21 30 ಈ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ

0

ಯಾವುದೇ ತಿಂಗಳನ 3 12 21 30 ರಂದು ಹುಟ್ಟಿದವರು ಮೂರನೇ ಸಂಖ್ಯೆಯ ಗುರುವಿನ ಅಧಿಪತ್ಯಕ್ಕೆ ಒಳಪಡುತ್ತಾರೆ. ಈ ದಿನಾಂಕದಂದು ಹುಟ್ಟಿದವರು ಆತ್ಮವಿಶ್ವಾಸವಿರುವವರು ದುಡಿಮೆಯಲ್ಲಿ ದೊಡ್ಡವರಾಗುತ್ತಾರೆ ದೊಡ್ಡ ನಾಯಕನಾಗಿ ವಿಜಯ ಸಾಧಿಸುತ್ತಾರೆ ರಾಜಕೀಯದಲ್ಲಿ ಬೆಳೆಯುತ್ತಾರೆ ಬೇರೆಯವರಿಗೆ ಉಪಯೋಗವಾಗುವಂತಹ

ಸಂಸ್ಕಾರ ಉಳ್ಳವರು ದೈವ ಭಕ್ತಿ ದೇಶ ಭಕ್ತಿ ಇರುವವರು ಪ್ರೇಮ ಪ್ರೀತಿ ಸಹನೆ ಭಕ್ತಿ ನ್ಯಾಯ ನೀತಿ ಅಂತಹ ಗುಣವನ್ನು ಹೊಂದಿರುವವರು ದೊಡ್ಡವನ ಮಾತಿಗೆ ಗೌರವ ಕೊಡುತ್ತಾರೆ ವಿಶ್ವಾಸವಿರುವವರು ಇವರು ಹೋದ ಜಾಗದಲ್ಲಿ ಪ್ರಸಿದ್ಧಿಗಳಿಸುತ್ತಾರೆ. ಬಡವರನ್ನು ಗೌರವಿಸುತ್ತಾರೆ ಸಲಹೆಗಳನ್ನು ಕೊಡುವುದರಲ್ಲಿ ಇವರು ಎತ್ತಿದ ಕೈ ಯಾವುದೇ ಕೆಲಸವಾದರೂ ಹಿಂದೆ ಸರಿಯುವುದಿಲ್ಲ

ಇವರು ಆಜ್ಞೆ ಮಾಡುವುದರಲ್ಲೂ ನಿಸ್ಸೀಮರು ತುಂಬಾ ಮೃದು ಸ್ವಭಾವದವರು ದುಃಖದಲ್ಲಿರುವವರನ್ನು ಕಾಪಾಡುವಂಥವರು. ಪ್ರಾಚೀನ ಕಾಲದ ಸಂಪ್ರದಾಯ ಆಚಾರ ವಿಚಾರವನ್ನು ಗೌರವಿಸುತ್ತಾರೆ. ಹೊಸ ನಾಗರಿಕತೆಯನ್ನು ಬೇಗನೇ ಇವರು ಸ್ವೀಕರಿಸುವುದಿಲ್ಲ ದೊಡ್ಡವರನ್ನು ಗುರುಗಳನ್ನು ಅನುಸರಿಸುತ್ತಾರೆ. ಸ್ವಂತ ಬುದ್ಧಿಯಿಂದ ಯಾವುದೇ ಕೆಲಸವನ್ನಾದರೂ ಮಾಡುತ್ತಾರೆ.

ಆಶ್ರಯ ಕೇಳಿದವರಿಗೆ ತಪ್ಪದೆ ಸಹಾಯ ಮಾಡುತ್ತಾರೆ. ಇವರು ಯಾರನ್ನು ಸಹಾಯ ಕೇಳುವುದಿಲ್ಲ ಇವರ ಕಷ್ಟ ಸುಖವನ್ನು ಬೇರೆಯವರಿಗೆ ತಿಳಿಸುವುದಿಲ್ಲ ರಹಸ್ಯವನ್ನು ಕಾಪಾಡುತ್ತಾರೆ ಆತ್ಮ ಗೌರವ ಜಾಸ್ತಿ ಸೂಕ್ಷ್ಮ ಬುದ್ಧಿಯುಳ್ಳವರು ಹಠವಾದಿಗಳು ಕಾರ್ಯಸಾಧಕರು ಇವರ ಮಾತಿಗೆ ನಡವಳಿಕೆಗೆ ಜನ ಅಭಿಪ್ರಾಯ ಗೌರವವನ್ನು ಪಡೆಯುತ್ತಾರೆ. ನಿಧಾನವಾಗಿ ಹಂತ ಹಂತವಾಗಿ ಬೆಳೆಯುತ್ತಾರೆ

ದುರಾಸೆ ಇಲ್ಲದವರು ಬೇರೆಯವರ ಅಧಿಕಾರಕ್ಕೆ ಆಸೆ ಪಡುವುದಿಲ್ಲ ತಪ್ಪು ಮಾಡಿದವರನ್ನು ಕ್ಷಮಿಸುತ್ತಾರೆ. ಸತ್ಯ ಪ್ರಾಮಾಣಿಕ ದಾರಿಯಲ್ಲಿ ನಡೆಯುವವರು. ಇವರು ಗುರು ಅಧೀನದಲ್ಲಿರುವುದರಿಂದ ಪ್ರಾಣಕ್ಕಿಂತ ಆತ್ಮ ಗೌರವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ತ್ಯಾಗ ಜೀವಿಗಳು ಇವರು ವಿದ್ಯೆಯಲ್ಲಿ ಮುಂದೆ ಇರುತ್ತಾರೆ. ಎಲ್ಲರ ಅಭಿನಂದನೆ ಗಳಿಸುತ್ತಾರೆ.

ಕೆಲವರು ಚಿಕ್ಕ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ತೆಗೆದುಕೊಂಡಿರುತ್ತಾರೆ. ಧರ್ಮ ನಿಷ್ಠೆ ಪಾಲನೆ ಮಾಡುತ್ತಾರೆ. ಸಂಗ ಸಂಸ್ಥೆಗಳನ್ನು ನಿರ್ವಹಿಸುತ್ತಾರೆ ಕಾನೂನು ವಿರೋಧಿ ಕೆಲಸವನ್ನು ಮಾಡುವುದಿಲ್ಲ. ಬೇರೆಯವರ ಮನಸ್ಸನ್ನು ನೋಯಿಸುವುದಿಲ್ಲ. ಇವರ ವೇಶಭೂಷಣದಲ್ಲಿ ಇವರದೇ ಆದ ಆಕರ್ಷಣೆ ಹೊಂದಿರುತ್ತಾರೆ ಗಂಭೀರವಾದ ನಡತೆ ಆಕರ್ಷಣೆಯ ನೋಟ ಮಾತಿನಲ್ಲಿ ಚತುರರು ಭಾಷಣ ಕೇಳಲು ಮಧುರವಾಗಿರುತ್ತದೆ ರಾಜಕೀಯ ಸಿನಿಮಾ ಕ್ರೀಡೆ ಹೀಗೆ ಎಲ್ಲಾ ರಂಗದಲ್ಲೂ ಪಾಲ್ಗೊಳ್ಳುತ್ತಾರೆ.

ಒಳ್ಳೆ ಕೀರ್ತಿ ಸಂಪಾದನೆ ಮಾಡುತ್ತಾರೆ. ಕುಟುಂಬದ ಮೇಲೆ ಪ್ರೇಮ ಪ್ರೀತಿ ಹೆಚ್ಚು ತೋರಿಸುತ್ತಾರೆ. ತಮ್ಮ ಕುಟುಂಬದವರಿಗೆ ಸ್ನೇಹಿತರಿಗೆ ನಂಬಿದವರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ ಇವರು ವ್ಯಾಪಾರ ಆರ್ಥಿಕತೆಯಲ್ಲಿ ನ್ಯಾಯಾಲಯದಲ್ಲಿ ಭೂಮಿಗೆ ಸಂಬಂಧಿಸಿದದಲ್ಲಿ ಇವುಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಇವರು ಹುಟ್ಟಿದಾಗ ಬಡವರಾಗಿದ್ದರು ಬೆಳೆಯುತ್ತಿರುವಾಗ ಶ್ರೀಮಂತರಾಗುತ್ತಾರೆ. ಇವರು ಮೂವತ್ತು ಏಳನೇ ವರ್ಷ 40 48ನೇ ವಯಸ್ಸಿನಲ್ಲಿ ಆಕಸ್ಮಿಕವಾದ ಹಣ ಸಂಪಾದನೆ ಆಗುತ್ತದೆ.

ಆಹಾರದಲ್ಲಿ ಇವರು ಸಿಹಿಯನ್ನು ತುಂಬಾ ಇಷ್ಟಪಡುತ್ತಾರೆ. ಅಜೀರ್ಣ ಸಮಸ್ಯೆ ಜಾಸ್ತಿ ಚರ್ಮ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ವಾತ ಪಿತ್ತದಿಂದಲೂ ಇವರು ಬಾದೆ ಪಡುತ್ತಾರೆ ಮೂರು 12 21 30 ದಿನಾಂಕದಂದು ಹುಟ್ಟಿದ ಸ್ತ್ರೀಯರು ದೊಡ್ಡ ಮುಖ ಉಳ್ಳವರು ವಿಶಾಲವಾದ ಕಣ್ಣು ನೀಟಾದ ಕಣ್ಣುಹಬ್ಬಗಳನ್ನು ಹೊಂದಿರುತ್ತಾರೆ.

ಚಿಕ್ಕ ನಾಲಿಗೆ ಗುಂಡಾದ ಕೆನ್ನೆ ವಿಶಾಲವಾದ ಭುಜಗಳು ನೀಟಾದ ಹಲ್ಲುಗಳನ್ನು ಹೊಂದಿರುತ್ತಾರೆ. ಇವರು ಗಂಭೀರವಾಗಿ ಇರುತ್ತಾರೆ ನೋಡುವವರಿಗೆ ತುಂಬಾ ಆಕರ್ಷಿಣೀಯವಾಗಿ ಕಾಣುತ್ತಾರೆ ತಮ್ಮ ಸುತ್ತಮುತ್ತಲಿರುವವರನ್ನು ಆಕರ್ಷಿಸಬೇಕೆಂಬ ಹಂಬಲವಿರುತ್ತದೆ ಒಳ್ಳೆಯ ಪುಸ್ತಕವನ್ನು ಓದುವ ಹವ್ಯಾಸವಿರುತ್ತದೆ ಯಾವುದಾದರೂ ಉದ್ಯೋಗ ಮಾಡಬೇಕೆಂಬ ಹಂಬಲವಿರುತ್ತದೆ.

ಸ್ವಯಂ ಸೇವಾ ಸಂಸ್ಥೆಯಲ್ಲಿ ನಾಯಕರಾಗಬೇಕೆಂದು ಪ್ರಯತ್ನ ಪಡುತ್ತಾರೆ ಇವರ ಭಾವನೆಗಳಿಗೆ ಆಸೆಗಳಿಗೆ ಅನುಕೂಲವಾದ ಗಂಡ ಸಿಗುವುದು ಕಷ್ಟ ಇವರು ಪುಸ್ತಕವನ್ನು ಓದುವುದು ವಿನೋದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಇದರಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಇವರಿಗೆ ಸೊಕ್ಕು ಜಾಸ್ತಿ ಪ್ರೀತಿ ಪ್ರೇಮ ದಯೆ ಹುಟ್ಟಿನಿಂದಲೇ ಬಂದಿರುತ್ತದೆ.

ರಕ್ತಕ್ಕೆ ಮತ್ತು ನರಗಳಿಗೆ ಸಂಬಂಧಿಸಿದಂತೆ ಭಾದೆಯನ್ನು ಅನುಭವಿಸುತ್ತಾರೆ. ಇವರಿಗೆ ಅನುಕೂಲಕರವಾದ ಸಂಖ್ಯೆಗಳು 1 3 5 9 ಇವರಿಗೆ ಅನಾನುಕೂಲವಾದ ಸಂಖ್ಯೆ 6 8 7 ವಿವಾಹಕ್ಕೆ ಸಂಬಂಧಿಸಿದ ಅನುಕೂಲಕರವಾದ ಸಂಖ್ಯೆ1 5 9. ವಿವಾಹ ಮಾಡಿಕೊಳ್ಳಬೇಕಾದ ದಿನಾಂಕಗಳು1,3,5,9,10,12, 14,19,21,23,27,28,30.
ಇವರು ಧರಿಸಬೇಕಾದ

ಅದೃಷ್ಟ ರತ್ನ ಕನಕ ಪುಷ್ಯ ರಾಗ ಧರಿಸಬೇಕಾದ ಬೆರಳು ತೋರು ಬೆರಳು ಧರಿಸಬೇಕಾದ ಲೋಹ ಚಿನ್ನ ಧರಿಸಬೇಕಾದ ದಿನ ಗುರುವಾರ ಧರಿಸಬೇಕಾದ ಸಮಯ ಬೆಳಗ್ಗೆ ಆರರಿಂದ ಏಳು 30 ಧರಿಸಬೇಕಾದ ಮಾಲೆ ಗಂಧದ ಮಾಲೆ ಧರಿಸಬೇಕಾದ ರುದ್ರಾಕ್ಷ ಪಂಚಮುಖಿ ರುದ್ರಾಕ್ಷ ಧರಿಸಬೇಕಾದ ಬಟ್ಟೆ ಬಿಳಿ ಬಟ್ಟೆ ತರಿಸಬೇಕಾದ ಬಣ್ಣ ಅರಿಶಿಣ ಇವರು ಪೂಜಿಸಬೇಕಾದ ದೇವರು ದುರ್ಗೆ ಶಿರಡಿ ಸಾಯಿ ಶಿವ ಇವರಿಗ ಅದೃಷ್ಟದ ದಿಕ್ಕು ಈಶಾನ್ಯ ಮಾಡಬೇಕಾದ ದಾನ ಕಡಲೆ ಅದೃಷ್ಟವಾದ ಗುರುವಾರ

Leave A Reply

Your email address will not be published.