ಪಿರಿಯಡ್ಸ್ ಸಮಯದಲ್ಲಿ ಅಂದ್ರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಲೇಬಾರದು, ಋತುಚಕ್ರವು ತುಂಬಾ ನೋವಿನಿಂದ ಕೂಡಿರುತ್ತದೆ ಈ ವೇಳೆಯಲ್ಲಿ ಮಹಿಳೆಯರು ಹೊಟ್ಟೆ ,ಸೊಂಟ, ತಲೆನೋವು, ಹೊಟ್ಟೆ ಸೆಳೆತ ,ಕಿರಿಕಿರಿ, ಮೂಡ್ ಸ್ವಿಂಗ್, ವಾಕರಿಕೆ ಮುಂತಾದ ಸಮಸ್ಯೆಗಳಿಂದ ನೋವನ್ನು ಅನುಭವಿಸುತ್ತಾರೆ ..ಅಷ್ಟೇ ಅಲ್ಲ ,
ಈ ದಿನಗಳಲ್ಲಿ ಯಾವುದೇ ರೀತಿಯ ಸೋಂಕು ತಗುಲದಿರುವಂತೆ ಸರಿಯಾದ ನೈರ್ಮಲ್ಯವನ್ನು ಸಹ ನೋಡಿಕೊಳ್ಳಬೇಕು. ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ತಾತ್ಕಾಲಿಕ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಋತುಚಕ್ರದ ಸಮಯದಲ್ಲಿ ಮಹಿಳೆಯರು ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಬಗ್ಗೆ ಬನ್ನಿ ನೋಡೋಣ ಋತುಚಕ್ರದ ಸಮಯದಲ್ಲಿ ಯೋನಿಯೂ ಸೂಕ್ಷ್ಮವಾಗಿರುತ್ತದೆ ಮತ್ತು ಅದನ್ನು ಅತಿಯಾಗಿ ತೊಳೆಯುವುದರಿಂದ ಯೋನಿಯಲ್ಲಿರುವ ಸೂಕ್ಷ್ಮಜೀವಿಯ ಮಟ್ಟವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಕೇವಲ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿದರೆ ಸಾಕು ಪಿರಿಯಡ್ಸ್ ಸಮಯದಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡಿ.
ಕೆಫಿನ್ ಹೊಟ್ಟೆಯ ಸೆಳೆತವನ್ನು ಇನ್ನಷ್ಟು ಹದಗೆಡಿಸುತ್ತದೆ ಹೆಚ್ಚು ಫ್ರೈಡ್ ಅಥವಾ ಸಿಹಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಸಿಹಿ ತಿಂಡಿಗಳು, ಕೆಫಿನ್ ಮತ್ತು ಆಲ್ಕೋಹಾಲ್ ನಿಮ್ಮ ದೇಹದಲ್ಲಿ ನೋವು ಹೆಚ್ಚಿಸುತ್ತದೆ. ಹೀಗಾಗಿ ಋತುಚಕ್ರದ ವೇಳೆ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಸಾಕಷ್ಟು ನೀರು ಕುಡಿಯಿರಿ ಅಥವಾ ಜಿಂಜರ್ ಟೀ ಕುಡಿಯಿರಿ ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ, ಆರರಿಂದ ಏಳು ಗಂಟೆಗಳ ಕಾಲ ಒಂದೇ ಪ್ಯಾಡ್ ನಲ್ಲಿ ಇರಬೇಡಿ
ಋತುಚಕ್ರದ ಸಮಯದಲ್ಲಿ ಹೊರ ಬರುವ ರಕ್ತವು ಹಾನಿಕಾರಕವಾಗಿದೆ ಆದ್ದರಿಂದ ಆದಷ್ಟು ಕ್ಲೀನ್ ಆಗಿರುವುದು ಮುಖ್ಯ ಪಿರಿಯಡ್ಸ್ ಸಮಯದಲ್ಲಿ ದಿನವಿಡಿ ಹಾಸಿಗೆಯಲ್ಲಿ ಮಲಗಬೇಡಿ , ಸಹಜವಾಗಿ ನೀವು ನೋವು ಅನುಭವಿಸಬಹುದು, ಕಿರಿಕಿರಿಯನ್ನು ಅನುಭವಿಸಬಹುದು ,ಆದರೆ ನೋವು ಕಡಿಮೆಯಾದಾಗಲೆಲ್ಲ ಸ್ವಲ್ಪ ವಾಕಿಂಗ್ ಮಾಡಿ .
ಎಲ್ಲದಕ್ಕಿಂತ ಮುಖ್ಯವಾಗಿ ಪಿರಿಯಡ್ಸ್ ಸಮಯದಲ್ಲಿ ಪೇನ್ ಕಿಲ್ಲರ್ಸ್ ಯಾವತ್ತಿಗೂ ಬಳಸಬಾರದು ಕೆಲವು ಮಹಿಳೆಯರು ಇಂತಹ ಸಮಯದಲ್ಲಿ ಆಹಾರ ಸೇವನೆ ಕಡಿಮೆ ಮಾಡುತ್ತಾರೆ ಆದರೆ ಈ ರೀತಿ ಮಾಡಬಾರದು ,ಏಕಂದರೆ ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಗಳು ನಡೆಯುತ್ತವೆ, ಇದರಿಂದಾಗಿ ಶಕ್ತಿಯು ಕಡಿಮೆಯಾಗುತ್ತೆ .
ಅಂತಹ ಸಂದರ್ಭದಲ್ಲಿ ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಅತಿ ಅವಶ್ಯಕ ಹೆಚ್ಚು ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ ಅದು ಹೊಟ್ಟೆಯ ಸೆಳೆತವನ್ನು ಹೆಚ್ಚಿಸುತ್ತದೆ ಸ್ನೇಹಿತರೆ ಇವತ್ತಿನ ಈ ವಿಡಿಯೋ ನಿಮಗೆಲ್ಲ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ ಇದೇ ತರ ಹೆಚ್ಚಿನ ಇನ್ಫಾರ್ಮೇಟಿವ್ ವಿಡಿಯೋಸ್ ಗಾಗಿ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡೋದನ್ನ ಖಂಡಿತಾ ಮರಿಬೇಡಿ ಕೇಳಿದ್ದಕ್ಕಾಗಿ ಧನ್ಯವಾದಗಳು