ಅಡಇಟ್ಟ ಬಂಗಾರ ಬಿಡಿಸಲು ಅರಿಷಿಣದ ಉಪಾಯ 3ದಿನದಲ್ಲೇ ಚಿನ್ನ ಮನೆಗೆ ಬರುತ್ತೆ

0

ಮಾತೇ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು ಬಂಗಾರ. ಪ್ರತಿಯೊಬ್ಬರು ಬಂಗಾರ ಖರೀದಿ ಮಾಡಿ ಧರಿಸಲು ಇಷ್ಟಪಡುತ್ತಾರೆ. ಲೋಹಗಳಲ್ಲಿ ಅತ್ಯಂತ ದುಬಾರಿಯಾದ ಲೋಹ ಎಂದರೆ ಅದು ಬಂಗಾರ. ಗುರು ಗ್ರಹದ ಲೋಹ ಯಾವುದು ಎಂದರೆ ಚಿನ್ನ. ಈ ಲೋಹವು ಸಂಪತ್ತಿನ ಸೂಚಕವು ಆಗಿದೆ. ಬಂಗಾರವನ್ನು ಧರಿಸುವುದರಿಂದ ವಿಶಿಷ್ಟವಾದ ಪ್ರಯೋಜನಗಳು ಸಿಗುತ್ತವೆ. ಚಿನ್ನ ಸೌಂದರ್ಯವನ್ನು ಹೆಚ್ಚುವುದಲ್ಲದೇ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ ಹಣಕಾಸನ್ನು ಮಾಗ್ನೇಟ್ ತರಹದ ಕೆಲಸವನ್ನು ಈ ಚಿನ್ನ ಮಾಡುತ್ತದೆ.

ಈ ಲೇಖನದಲ್ಲಿ ಕೆಲವೊಂದು ರಹಸ್ಯಗಳನ್ನು ತಿಳಿಸಿಕೊಡುತ್ತೇವೆ. ಚಿನ್ನಗಳನ್ನು ಧರಿಸುವುದರ ಮುಖ್ಯ ಪ್ರಯೋಜನಗಳು ಏನೆಂದರೆ ನಕಾರಾತ್ಮಕ ಶಕ್ತಿಗಳು ದೇಹವನ್ನು ಪ್ರವೇಶಿಸದ ರೀತಿ ಮಾಡುತ್ತದೆ. ದೇಹದಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಆಧ್ಯಾತ್ಮಿಕ ಭಾವನೆ ಹೆಚ್ಚಿಸುತ್ತದೆ. ಇದರಿಂದ ಜೀವನದಲ್ಲಿ ಸಂತೋಷ, ಶಾಂತಿ, ಸ್ಥಿರತೆಯನ್ನ ಬಂಗಾರ ತಂದುಕೊಡುತ್ತದೆ. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರ ಮೂಲಕ ನೀವು ದೈವಿಕ ಪ್ರಜ್ಞೆಯನ್ನು ಆಕರ್ಷಿಸಬಹುದು.

ಇದು ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಂಗುರಗಳನ್ನು ಧರಿಸುವುದರ ಮೊದಲು ಜ್ಯೋತಿಷ್ಯದವರ ಸಲಹೆ ಪಡೆಯುವುದು ಅವಶ್ಯಕ. ಚಿನ್ನದ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುವುದಕ್ಕೆ ಮಹಿಳೆಯರು ತಮ್ಮ ಎಡಗೈಯಲ್ಲಿ ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು ಮತ್ತು ಪುರುಷರು ತಮ್ಮ ಬಲಗೈಯಲ್ಲಿ ಉಂಗುರವನ್ನು ಧರಿಸಬೇಕು. ಚಿನ್ನವು ಭೂಮಿಯ ಮೇಲೆ ಕಂಡುಬರುವ ಅತ್ಯಾಮೂಲ್ಯ ಲೋಹ.

ಚಿನ್ನವನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದರೆ ಕಿರುಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು. ನೀವು ಹೆಸರು, ಖ್ಯಾತಿ ಅಥವಾ ಸ್ಥಾನಮಾನದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು. ನಿಮಗೆ ಏಕಾಗ್ರತೆಯ ತೊಂದರೆ, ವ್ಯಾಪಾರದಲ್ಲಿ ನಷ್ಟ ಮತ್ತು ಸುಲಭವಾಗಿ ಮನಸ್ಸು ವಿಚಲಿತವಾಗುವ ಸಮಸ್ಯೆ ಇದ್ದರೇ ತೋರು ಬೆರಳಿಗೆ ಚಿನ್ನವನ್ನು ಧರಿಸಬೇಕು.

ಹೀಗೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯವನ್ನು ಎದುರಿಸುತ್ತಿದ್ದರೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅನ್ಯೂನ್ಯತೆಯ ಕೊರತೆ ಇದ್ದರೇ ಚಿನ್ನದ ಚೈನ್ ಅಥವಾ ಪೆಂಡೆಂಟ್ ಅನ್ನು ಧರಿಸಿ. ಇದು ನಿಮ್ಮ ಜೀವನದಲ್ಲಿ ಅದ್ಭುತಗಳನ್ನು ಉಂಟು ಮಾಡುತ್ತದೆ. ಗರ್ಭಧರಿಸಲು ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಉಂಗುರದ ಬೆರಳಿಗೆ ಚಿನ್ನವನ್ನು ಧರಿಸಬೇಕು. ಹೊಟ್ಟೆಯ ಸಮಸ್ಯೆ ಅಥವಾ ಬೊಜ್ಜು ಇರುವವರು,

ಕೋಪದ ಸಮಸ್ಯೆ ಇರುವವರು ಆದಷ್ಟು ಚಿನ್ನವನ್ನು ಧರಿಸುವುದನ್ನು ತಪ್ಪಿಸಬೇಕು. ನಿಮ್ಮ ಜಾತಕದಲ್ಲಿ ಗುರು ಉಚ್ಛನಾಗಿದ್ದರೇ ಚಿನ್ನವನ್ನು ಧರಿಸಬೇಡಿ. ಕಬ್ಬಿಣ ಮತ್ತು ಕಲ್ಲಿದ್ದಲು ವ್ಯಾಪಾರ ಮಾಡುವವರು ಚಿನ್ನದಿಂದ ದೂರವಿರಬೇಕು. ಸಾಧ್ಯವಾದಷ್ಟು ಗರ್ಭಿಣಿ ಮಹಿಳೆಯರು ಮತ್ತು ವಯಸ್ಸಾದವರು ಚಿನ್ನವನ್ನು ಧರಿಸುವುದನ್ನು ತಪ್ಪಿಸಬೇಕು. ಸೊಂಟದ ಕೆಳಗೆ ಚಿನ್ನವನ್ನು ಧರಿಸದಿರುವುದು ಒಳ್ಳೆಯದು. ಸೊಂಟದ ಕೆಳಗೆ ಚಿನ್ನವನ್ನು ಧರಿಸುವುದರಿಂದ ಅದು ದುರಾದೃಷ್ಟವನ್ನು ಆಕರ್ಷಿಸುತ್ತದೆ.

ಚಿನ್ನವನ್ನು ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಹತ್ತಿರದ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಮಾತ್ರ ಚಿನ್ನವನ್ನು ಉಡುಗೊರೆಯಾಗಿ ನೀಡಿ. ಚಿನ್ನದ ಕಾಲುಂಗುರವನ್ನು ಧರಿಸಬಾರದು. ಸೊಂಟದಲ್ಲಿ ಚಿನ್ನವನ್ನು ಧರಿಸಬಾರದು, ಮಕ್ಕಳು ಕೆಂಪುದಾರದಲ್ಲಿ ಚಿನ್ನವನ್ನು ಧರಿಸಬಹುದು. ಚಿನ್ನವನ್ನು ಕೆಂಪು ಬಣ್ಣದ ಬಟ್ಟೆ ಅಥವಾ ಕಾಗದದಲ್ಲಿ ಇಟ್ಟು ತಿಜೋರಿಯಲ್ಲಿ ಪೂರ್ವ ಅಥವಾ ನೈರುತ್ಯ ಭಾಗದಲ್ಲಿ ಇಡಬೇಕು. ಚಿನ್ನದ ಜೊತೆ ಬೇರೆ ಲೋಹವನ್ನು ಬೆರೆಸಬಾರದು.

ಚಿನ್ನವನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ ಇದು ನಿದ್ರಾಹೀನತೆಯನ್ನುಂಟುಮಾಡಬಹುದು. ಮೇಷ, ಕರ್ಕಾಟಕ, ಸಿಂಹ, ಧನುಸ್ಸು ರಾಶಿಯವರಿಗೆ ಚಿನ್ನವು ಬಹಳ ಮಂಗಳಕರವಾಗಿದೆ. ಇದು ವೃಶ್ಚಿಕ ಮತ್ತು ಮೀನರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ವೃಷಭ, ಮಿಥುನ,ಕುಂಭ ಮತ್ತು ಕನ್ಯಾರಾಶಿಯವರಿಗೆ ಸಮಸ್ಯೆಗಳನ್ನುಂಟುಮಾಡಬಹುದು. ತುಲಾ ಮತ್ತು ಮಕರ ರಾಶಿಯವರು ಚಿನ್ನವನ್ನು ಧರಿಸುವುದನ್ನು ಆದಷ್ಟು ತಪ್ಪಿಸಬೇಕು. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ಚಿನ್ನದ ಆಭರಣಗಳನ್ನು ಧರಿಸುವುದಕ್ಕೆ ಶುಭ ದಿನ ಎಂದರೆ ಧನತ್ರಯೋದಶಿ ಮತ್ತು ದೀಪಾವಳಿ.

ಚಿನ್ನವನ್ನು ಧರಿಸಲು ಈ ದಿನವನ್ನೇ ಕಾಯಬೇಕಾಗಿಲ್ಲ, ಕೆಲವೊಂದು ಶುಭ ದಿನಗಳಲ್ಲೂ ಚಿನ್ನವನ್ನು ಧರಿಸಬಹುದು. ಗುರುವಾರ ಮತ್ತು ಶುಕ್ರವಾರದಂದೂ ಚಿನ್ನವನ್ನು ಧರಿಸಬಹುದು. ಆದರೇ ನಿಮ್ಮ ಜನ್ಮ ನಕ್ಷತ್ರಕ್ಕಿಂತ ಮುಂದಿನ ಮೂರನೇ ನಕ್ಷತ್ರ ಇರುವ ದಿನ ಚಿನ್ನವನ್ನು ಧರಿಸಬಾರದು. ಅಲ್ಲದೇ ಚತುರ್ಥಿ, ನವಮಿ,ಚತುರ್ದಶಿ ಮತ್ತು ಅಷ್ಟಮಿಗಳಲ್ಲಿ ಹೊಸ ಚಿನ್ನವನ್ನು ಧರಿಸುವುದು ಒಳ್ಳೆಯದಲ್ಲ. ಚಿನ್ನವನ್ನು ಖರೀದಿ ಮಾಡಲು ಹೋಗುವಾಗ

ಈ ರೀತಿ ಮಾಡಿದರೇ ಚಿನ್ನ ನಿಮ್ಮ ಬಳಿ ಶಾಶ್ವತವಾಗಿ ಉಳಿಯುತ್ತದೆ. ಶುಕ್ಲಪಕ್ಷದಲ್ಲಿ ಪುಷ್ಯಮಿ ನಕ್ಷತ್ರ ಯಾವಾಗ ಬರುತ್ತದೆ ಎಂದು ನೋಡಿಕೊಳ್ಳಿ. ಶುಕ್ಲಪಕ್ಷದ ಗುರುವಾರ ಮತ್ತು ಪುಷ್ಯಮಿ ನಕ್ಷತ್ರವಿದ್ದಾಗ ಚಿನ್ನವನ್ನು ಕೊಂಡುಕೊಂಡರೇ ನಿಮ್ಮ ಮನೆಯಲ್ಲಿ ಚಿನ್ನ ಶಾಶ್ವತವಾಗಿ ಉಳಿಯುತ್ತದೆ. ಪುಷ್ಯಮಿ ನಕ್ಷತ್ರದ ದಿನ ಚಿನ್ನ ಕೊಂಡುಕೊಳ್ಳಲು ಹೋಗುವಾಗ ಮನೆದೇವರ ಪೂಜೆಯನ್ನು ಮಾಡಿ ನಂತರ ಮನೆ ಹತ್ತಿರ ಎಲ್ಲಿಯಾದರೂ ಹುಣಸೆ ಮರ ಇದ್ದರೇ ಆ ಮರಕ್ಕೆ ಕೈ ಮುಗಿದು ಹುಣಸೆ ಮರದ ಬೇರು ಅಥವಾ ಕೊಂಬೆಯನ್ನು ತಂದು ಮನೆಗೆ ಬನ್ನಿ . ಹುಣಸೆ ಮರದ ಬೇರಿಗೆ ಗಂಧ ಕುಂಕುಮ,

ಅರಿಶಿಣವನ್ನು ಹಚ್ಚಿ ಹಿಂದಿನ ದಿನ ಪೂಜಾ ಸಾಮಾಗ್ರಿಯ ಅಂಗಡಿಯಿಂದ ಒಂದು ತಾಯಾತ ಅಥವಾ ಯಂತ್ರ ಮತ್ತು ಕೆಂಪು ದಾರವನ್ನು ತನ್ನಿ ನಂತರ ಹುಣಸೆ ಮರದ ಬೇರಿಗೆ ಅರಿಶಿಣ,ಕುಂಕುಮವನ್ನು ಹಚ್ಚಿ ಭಕ್ತಿಯಿಂದ ಕೈಮುಗಿದು ದೇವರ ಬಳಿ ಕೇಳಿಕೊಳ್ಳಿ ನಾವು ಚಿನ್ನವನ್ನು ಕೊಂಡುಕೊಳ್ಳಲು ಹೋಗುತ್ತಿದ್ದೇವೆ ಈ ಚಿನ್ನ ನಮ್ಮ ಮನೆಯಲ್ಲಿ ಶಾಶ್ವತವಾಗಿ ಸದಾ ಕಾಲ ನೆಲೆಸಬೇಕು ಎಂದು ಭಕ್ತಿಯಿಂದ ಬೇಡಿಕೊಳ್ಳಿ. ನಂತರ ಬೇರನ್ನು ಕೈ ನಲ್ಲಿ ಹಿಡಿದುಕೊಂಡು

ಓಂ ಕನಕ ಲಕ್ಷ್ಮಿ ನಮಃ ಎಂದು 21 ಬಾರಿ ಜಪವನ್ನು ಮಾಡಿ ನಂತರ ತಾಯಾತದ ಒಳಗೆ ಈ ಹುಣಸೆ ಬೇರನ್ನು ಹಾಕಿ ಅದರ ಮುಚ್ಚುಳವನ್ನು ಮುಚ್ಚಿ ಅದನ್ನು ಕೆಂಪು ದಾರದಿಂದ ಕಟ್ಟಬೇಕು. ನಂತರ ಆ ಯಂತ್ರವನ್ನು ನಿಮ್ಮ ಬಲಗೈ ತೋಳಿನಲ್ಲಿ ಕಟ್ಟಿಕೊಳ್ಳಬೇಕು. ಆಮೇಲೆ ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಖರೀದಿಸಬೇಕು. ಇದರಿಂದ ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ. ಕಷ್ಟದ ಸಮಯದಲ್ಲಿ ನಿಮ್ಮ ಚಿನ್ನವನ್ನು ಅಡವಿಟ್ಟಿದ್ದರೇ ಈ ಉಪಾಯವನ್ನು ಮಾಡಿಕೊಳ್ಳಿ. ಮಂಗಳವಾರ ಅಥವಾ ಶುಕ್ರವಾರ ಮುಚ್ಚುಳ ಮುಚ್ಚುವಂತಹ ಒಂದು

ಚಿಕ್ಕ ಪೆಟ್ಟಿಗೆಯನ್ನು ತೆಗೆದುಕೊಂಡು ಬನ್ನಿ ಅಥವಾ ಆಭರಣದ ಡಬ್ಬವನ್ನು ತೆಗೆದುಕೊಂಡು ಅದಕ್ಕೆ ಶುದ್ಧ ಅರಿಶಿಣವನ್ನು ತುಂಬಿಸಿ ಹಳದಿ ಬಣ್ಣದಲ್ಲ ಶುದ್ಧ ಕಪ್ಪು ಬಣ್ಣದ ಅರಿಶಿಣವನ್ನು ತುಂಬಿಸಿ. ಕಪ್ಪು ಅರಿಶಿಣ ಪೂಜಾ ಸಾಮಾಗ್ರಿ ಅಂಗಡಿಗಳಲ್ಲಿ ಸಿಗುತ್ತದೆ. ಡಬ್ಬದ ತುಂಬಾ ಕಪ್ಪು ಅರಿಶಿಣವನ್ನು ತುಂಬಿದ ನಂತರ ಒಂದು ಲಕ್ಷ್ಮಿ ಕಾಯಿನ್ ಅನ್ನು ಅದರಲ್ಲಿ ಇಡಿ. ಈ ಡಬ್ಬವನ್ನು ನಿಮ್ಮ ಚಿನ್ನಾಭರಣವನ್ನು ಇಡುವ ಸ್ಥಳದಲ್ಲಿ ಇಡಿ. ಒಮ್ಮೆ ಡಬ್ಬ ಇಟ್ಟಿದ ಮೇಲೆ ಪದೇ ಪದೇ ನೋಡುವಂತಿಲ್ಲ. ಸುಮಾರು ಆರು ತಿಂಗಳವರೆಗೂ ಆ ಡಬ್ಬವನ್ನು ತೆಗೆದು ನೋಡುವಂತಿಲ್ಲ. ಒಂದು ವೇಳೆ ಅರಿಶಿಣದಲ್ಲಿ ಹುಳ ಬಂದಿದ್ದರೇ ಬೇರೆ ಅರಿಶಿಣವನ್ನು ಹಾಕಿರಿ. ಹಳೇ ಅರಿಶಿಣವನ್ನು ತೆಂಗಿನಬುಡಕ್ಕೆ ಹಾಕಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಬಂಗಾರವನ್ನು ಅಡವಿಡುವ ಪರಿಸ್ಥಿತಿ ಎಂದಿಗೂ ಬರುವುದಿಲ್ಲ.

Leave A Reply

Your email address will not be published.