ಅದೃಷ್ಟವಂತ ಹೆಣ್ಣುಮಕ್ಕಳ ಗುಣಲಕ್ಷಣಗಳು ಹೇಗೆ ಇರುತ್ತವೆ

0

ನಾವು ಈ ಲೇಖನದಲ್ಲಿ ಅದೃಷ್ಟವಂತ ಹೆಣ್ಣುಮಕ್ಕಳ ಗುಣಲಕ್ಷಣಗಳು ಹೇಗೆ ಇರುತ್ತವೆ ಎಂದು ತಿಳಿಯೋಣ . ಹೆಣ್ಣು ಮಕ್ಕಳ ಮುಂದಿನ ಎರಡು ಹಲ್ಲಿನ ಮಧ್ಯೆ ಅಂತರ ಇದ್ದರೆ ಅಂತಹ ಹೆಣ್ಣುಮಕ್ಕಳನ್ನು ಭಾಗ್ಯ ಶಾಲಿಗಳು ಎಂದು ಪರಿಗಣಿಸಲಾಗುತ್ತದೆ .

ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಶಂಖ ಮತ್ತು ಶುಭ ಚಿಹ್ನೆ ಇದ್ದರೆ ಅಂತಹ ಹೆಣ್ಣು ಮಕ್ಕಳ ಕೈಯಲ್ಲಿ ನಾವು ಅವರ ಸೌಭಾಗ್ಯವನ್ನು ನೋಡಬಹುದು .

ಹೆಣ್ಣು ಮಕ್ಕಳಲ್ಲಿ ಕುತ್ತಿಗೆ ಭಾಗ ತೆಳುವಾಗಿ ಉದ್ದವಾಗಿ ಇದ್ದರೆ ಅಂತಹ ಹೆಣ್ಣು ಮಕ್ಕಳು ಬಹಳ ಭಾಗ್ಯ ಶಾಲಿಗಳು ಆಗಿರುತ್ತಾರೆ, ಇಂತಹ ಹೆಣ್ಣು ಮಕ್ಕಳನ್ನು ಮದುವೆಯಾಗವ ಅವರ ಗಂಡಂದಿರು ತಮ್ಮ ವ್ಯಾಪಾರದಲ್ಲಿ ದೊಡ್ಡಮಟ್ಟದ ಉನ್ನತಿಯನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ .

ಪಾದಗಳು ಉದ್ದವಾಗಿರುವ ಹೆಣ್ಣು ಮಕ್ಕಳನ್ನು ಸಾಕ್ಷಾತ್ ದೇವಿ ಸ್ವರೂಪವೆಂದು ಪರಿಗಣಿಸಲಾಗುತ್ತದೆ . ಇಂಥಹ ಹೆಣ್ಣು ಮಕ್ಕಳು ಕಾಲಿಟ್ಟ ಕಡೆಯೆಲ್ಲಾ ಸುಖ ಸಮೃದ್ಧಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಪರಿಗಣಿಸಲಾಗಿದೆ .

ಪಾದಗಳು ಬಹಳ ಮೃದುವಾಗಿದ್ದು ಗುಲಾಬಿ ಬಣ್ಣದಿಂದ ಕೂಡಿರುತ್ತದೆ . ಅಂದರೆ ,ಅಂತಹ ಹೆಣ್ಣು ಮಕ್ಕಳು ಸಂಪೂರ್ಣ ಮಹಿಳೆ ಎಂದು ಹೇಳಬಹುದು . ಇವರು ತಮ್ಮ ಗಂಡಂದಿರನ್ನು ತುಂಬಾ ಸಂತೋಷವಾಗಿ ಇರುವಂತೆ ನೋಡಿಕೊಳ್ಳುತ್ತಾರೆ .

ಚಪ್ಪಟೆ ಪಾದವನ್ನು ಹೊಂದಿರುವ ಹೆಣ್ಣುಮಕ್ಕಳು ಅವರ ಅತ್ತೆ ಮಾವನಿಗೆ ಅದೃಷ್ಟವಂತರಾಗಿ ಇರುತ್ತಾರೆ .ಅವರು ಕುಟುಂಬ ಸದಸ್ಯರೊಂದಿಗೆ ಹೊಂದಿಕೊಳ್ಳುತ್ತಾರೆ .ಮತ್ತು ಮನೆಯಲ್ಲಿ ಯಾವುದೇ ವಾದಗಳು ಆಗಲು ಬಿಡುವುದಿಲ್ಲ .

ಉದ್ದನೆಯ ಕಿವಿಯನ್ನು ಹೊಂದಿರುವ ಹೆಣ್ಣು ಮಕ್ಕಳನ್ನು ಭಾಗ್ಯ ಶಾಲಿಗಳು ಎಂದು ಹೇಳಲಾಗುತ್ತದೆ . ಇಂಥಹ ಹೆಣ್ಣುಮಕ್ಕಳು ಇರುವಂತಹ ಮನೆಯಲ್ಲಿ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ .

ಮೂಗಿನ ಪಕ್ಕದಲ್ಲಿ ಮಚ್ಚೆ ಅಥವಾ ನರುಳ್ಳಿ ಹೊಂದಿರುವ ಹೆಣ್ಣು ಮಕ್ಕಳು ಬಹಳ ಅದೃಷ್ಟವಂತರು ಎಂದು ಹೇಳಲಾಗಿದೆ .

ಸಾಮಾನ್ಯಕ್ಕಿಂತ ದೊಡ್ಡದಾಗಿರುವ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳನ್ನು ಸಾಕ್ಷಾತ್ ಸರಸ್ವತಿಯ ಸ್ವರೂಪ ಎಂದು ಹೇಳಲಾಗುತ್ತದೆ . ಇಂತಹ ಹೆಣ್ಣು ಮಕ್ಕಳು ತಮ್ಮ ಬುದ್ಧಿವಂತಿಕೆಯಿಂದ ಮನೆಯಲ್ಲಿ ಸುಖ – ಸಮೃದ್ಧಿ ನೆಲೆಸುವಂತೆ ನೋಡಿಕೊಳ್ಳುತ್ತಾರೆ . ಮನೆಯ ಸದಸ್ಯರ ನಡುವೆ ಸಾಮರಸ್ಯವನ್ನು ಕಾಪಾಡುತ್ತಾರೆ .

Leave A Reply

Your email address will not be published.