ದಾನದಿಂದ ಶ್ರೇಯಸ್ಸು

0

ನಾವು ಈ ಲೇಖನದಲ್ಲಿ ದಾನದಿಂದ ಶ್ರೇಯಸ್ಸು ಮತ್ತು ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂಬುದನ್ನು ತಿಳಿಯೋಣ . ದಾನದಿಂದ ಶ್ರೇಯಸ್ಸು ಲಭಿಸುತ್ತದೆ. ಪಾಪ ಪರಿಹಾರವಾಗುತ್ತದೆ ಎನ್ನಲಾಗಿದೆ,ಅನೇಕ ರೀತಿಯ ದಾನಗಳನ್ನು ನಾವು ಗುರುತಿಸಬಹುದು, ಹಾಗಾದರೆ ಗರುಡ ಪುರಾಣದ ಪ್ರಕಾರ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂಬ ವಿವರ ಇಲ್ಲಿದೆ …

ಅನ್ನದಾನ :- ದಾರಿದ್ರ್ಯ ನಾಶವಾಗುತ್ತದೆ . ಸಾಲಗಳು ತೀರುತ್ತದೆ. 2.ವಸ್ತ್ರದಾನ :- ಆಯುಷ್ಯ ಹೆಚ್ಚುತ್ತದೆ .3.ಜೇನುತುಪ್ಪ ದಾನ :- ಪುತ್ರ ಭಾಗ್ಯ ಕಾಣಿಸುತ್ತದೆ . 4.ದೀಪ ದಾನ : – ಹಣದ ಸಮಸ್ಯೆ ಇರುವುದಿಲ್ಲ . ಮೊಸರು ದಾನ : – ಇಂದ್ರಿಯಗಳು ವೃದ್ಧಿಯಾಗುತ್ತವೆ . 6.ಬಂಗಾರ ದಾನ : – ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ .7.ಬೆಳ್ಳಿ ದಾನ : – ಮನಸ್ಸಿನ ಚಿಂತೆ ನೀಗುತ್ತದೆ .

8.ಗೋ ದಾನ : – ಮುಖ್ಯವಾಗಿ ಗೋದಾನ ಎಂದರೆ ಪವಿತ್ರವಾಗಿ ಇರುವ ದಾನವಾಗಿದೆ, ನಮ್ಮಲ್ಲಿ ಮತ್ತು ನಮ್ಮ ಜಾತಕದಲ್ಲಿ ಯಾವುದಾದರೂ ದೋಷಗಳು ಇದ್ದರೆ, ಪಂಚಾಂಗದಲ್ಲಿ ದುಷ್ಟ ನಕ್ಷತ್ರಗಳಲ್ಲಿ ಜನಿಸಿದ್ದವರು ಆಗಿದ್ದರೆ, ಅಭೂಕ್ತ ಮೂಲ ದೋಷ ಎನ್ನುವುದು ಬಂದಿದ್ದರೆ , ಅದನ್ನು ನಿವಾರಣೆ ಮಾಡುವ ಶಕ್ತಿ ಈ ಹಸುವಿಗೆ ಗೋವಿಗೆ ಇದೆ.

9.ತೆಂಗಿನ ಕಾಯಿ ದಾನ :– ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ನೆನೆದ ಕಾರ್ಯ ಸಿದ್ದಿಸುತ್ತದೆ .10.ಸಸ್ಯ ದಾನ : – ಮನೆಯಲ್ಲಿ ಸದಾ ಸುಖ , ಶಾಂತಿ , ನೆಮ್ಮದಿ ಮತ್ತು ಸಂಪತ್ತಿನ ಮೇಲೆ ಇರುವ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.

11.ಕನ್ಯಾ ದಾನ : – ಹಿಂದೂ ವಿವಾಹ ಸಂಸ್ಕಾರಗಳಲ್ಲಿ ಅತಿ ಮುಖ್ಯವಾದ ಸಂಸ್ಕಾರ, ಕನ್ಯೆಯನ್ನು ದಾನ ಮಾಡುವುದು . ಕೇವಲ ಒಂದು ಹೊಣೆಗಾರಿಕೆಯನ್ನು ಕಳೆದುಕೊಳ್ಳುವ ಉದ್ದೇಶದಿಂದಲ್ಲ. ಕನ್ಯೆಯ ಪೋಷಕ ಅವಳನ್ನು ದಾನ ಮಾಡುವಾಗ ಅರ್ಥ ಗರ್ಭಿತವಾದ ಮಂತ್ರೋಚ್ಚಾರಣೆಯ ಮೂಲಕ ಧರ್ಮ , ಅರ್ಥ, ಕಾಮಗಳ, ಪೂರೈಕೆಗಾಗಿ ಈ ದಾನವನ್ನು ಮಾಡುತ್ತಿರುವುದಾಗಿ ತಿಳಿಸಿ ಅವುಗಳನ್ನು ಧರ್ಮ, ಅರ್ಥ, ಕಾಮ ಗಳ ಸಾಧನೆಯಲ್ಲಿ ತನ್ನ ಸಹಧರ್ಮಿಣಿಯಾಗಿರಲು , ನಾನು ಸ್ವೀಕರಿಸುತ್ತಿದ್ದೇನೆಂದು ವರನಿಂದ ಮೂರು ಬಾರಿ ವಚನ ತೆಗೆದುಕೊಳ್ಳುತ್ತಾರೆ.

Leave A Reply

Your email address will not be published.