ಬಂಗಾರದ ಮಾತು ಯಾವುದು ಎಂದು ತಿಳಿಯೋಣ

ನಾವು ಈ ಲೇಖನದಲ್ಲಿ ಬಂಗಾರದ ಮಾತು ಯಾವುದು ಎಂದು ತಿಳಿಯೋಣ .ನೀವು ಸೈಲೆಂಟ್ ಆಗಿ ಇದ್ದೀರಾ ಅಂತ ತುಂಬಾ ಜನ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ . ಅದಕ್ಕೆಲ್ಲಾ ಪ್ರತಿಕ್ರಿಯೆ ಮಾಡಬೇಡಿ, ನೋಟು ಯಾವಾಗಲೂ ಸೈಲೆಂಟಾಗಿ ಇರೋದು, ಈ ಚಿಲ್ಲರೆಗಳೇ ಸೌಂಡ್ ಮಾಡುವುದು..

ಹಠ ಎಂದರೆ ನಿನಗೆ ಬೇಕಾಗಿರುವುದನ್ನು ಪಡೆದು ಮರೆಯುವುದಲ್ಲ . ಎಲ್ಲಿ ನಿನಗೆ ಬೆಲೆ ಇಲ್ಲವೋ , ಅಲ್ಲಿ ನಿನ್ನ ಬೆಲೆ ಸೃಷ್ಟಿಸುವುದು ಅದೇ ನಿಜವಾದ ಹಠ. ಮರಳಿನ ಮೇಲೆ ಮಾಡುವ ನಿಮ್ಮ ಹೆಜ್ಜೆಯ ಗುರುತುಗಳನ್ನು , ಅಲೆಗಳು ಹೇಗೆ ಸಮಯ ಬಂದಾಗ ಅಳಿಸಿ ಹಾಕುವುದು , ಹಾಗೆಯೇ ದೇವರು ನಿಮ್ಮ ಕಷ್ಟಗಳನ್ನು , ಸಮಯ ಬಂದಾಗ ಅಳಿಸಿ ಹಾಕುವನು..

ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಶ್ರೀಮಂತಿಕೆ ಇಲ್ಲದಿದ್ದರೂ ಚಿಂತೆ ಇಲ್ಲ . ಕನಿಷ್ಠ ಪಕ್ಷ ನಿನ್ನ ಕಷ್ಟ ಏನು ಎಂದು ಕೇಳುವಷ್ಟು ಹೃದಯ ಶ್ರೀಮಂತಿಕೆ ಇರಬೇಕು … ಕಷ್ಟದಲ್ಲಿ ಇರುವವರ ಮಾತನ್ನು ಕೇಳುವ ಸಹನೆ ಇರಬೇಕು. ಇದರಿಂದ ಅವರ ಹೃದಯ ನಿಮ್ಮಿಂದ ಹಗುರಾಗಬಹುದು .

ಸಣ್ಣ ಸಣ್ಣ ಕಾರಣ ಕೊಟ್ಟು ದೂರ ಹೋಗುವ ವರನ್ನು ಬಿಟ್ಟು ಬಿಡಿ . ಕಾರಣವೇ ಇಲ್ಲದೆ ನಿಮ್ಮ ಜೊತೆಗೆ ಇರುವವರು ನಿಮ್ಮ ನಿಜವಾದ ಆತ್ಮೀಯರು ಅಂತವರನ್ನು ಕಳೆದುಕೊಳ್ಳಬೇಡಿ…!

ಬಿಡುವಿಲ್ಲದಂತೆ ಕೆಲಸ ಮಾಡುತ್ತಲೇ ಇರಿ. ಮನಸ್ಸು ಅತ್ತಿತ್ತ ಚಲಿಸಲು ಪುರಸೊತ್ತು ಕೊಡಬೇಡಿ. ಇದು ರೂಢಿಯಾಗಿ ಬಿಟ್ಟರೆ ನಿಮ್ಮಷ್ಟು ಸುಖಿ ಯಾರೂ ಇಲ್ಲ.. ನಿನಗೆ ಬೆಲೆ ಕೊಡದವರ ಮುಂದೆ ತಲೆ ಬಾಗಬೇಡ . ನಿಮಗೆ ಮಿಡಿಯದವರು ನಿನ್ನ ಶಿರ ಕಡಿಯಲು ಹಿಂಜರಿಯುವುದಿಲ್ಲ .

ನಿನ್ನತನ ಬಿಟ್ಟು ಬದುಕಿದರೆ ನೀನು ಇಲ್ಲಿ ನೆಲೆಯಿದ್ದು ಕೊಲೆಯಾದ ದೇಹ ದಂತೆ ಬಳಸೋರ ಮುಂದೆ ನುಗ್ಗುವ ಅಲೆಯಾಗು , ಬಯಸೋರ ಮುಂದೆ ಪ್ರೀತಿಯ ಶಿಲೆಯಾಗು.. ಸುಂದರವಾದ ಉಡುಪು ನಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ …

ಸುಂದರವಾದ ಗುಣವಿರುವ ಸಂಗಾತಿ ನಮ್ಮ ಬದುಕನ್ನೇ ಬದಲಿಸಬಹುದು .. ಆಲದ ಮರಕ್ಕೆ ಬೇರು ಆಳವಾಗಿರುತ್ತದೆ, ಹಾಗಾಗಿಯೇ ಸಾವಿರ ವರ್ಷ ಹಸಿರಾಗಿರುತ್ತದೆ.

ಆಮೆಯ ಉಸಿರಾಟ ನಿಧಾನವಾಗಿರುತ್ತದೆ, ಅದಕ್ಕಾಗಿಯೇ ನೂರಾರು ವರುಷ ಬದುಕುತ್ತದೆ. ತಾತ್ಪರ್ಯ. ಆಳವಾದ ಜ್ಞಾನ, ನಿಧಾನವಾದ ನಡತೆ , ಮನುಷ್ಯನನ್ನು ಸದಾ ಹಸಿರು ಮತ್ತು ಶಿಖರದತ್ತೆರದಲ್ಲಿ ಕೊಂಡೊಯ್ಯುತ್ತದೆ…ನಿಭಾಯಿಸಲು ಯೋಗ್ಯತೆ ಇಲ್ಲದ ವ್ಯಕ್ತಿಗೆ …

ಅಧಿಕಾರಗಳಾಗಲಿ ಜವಾಬ್ದಾರಿಗಳಾಗಲಿ ನೀಡಬಾರದು, ನೀಡಿದರು ಲಾಭವಿಲ್ಲ ಏಕೆಂದರೆ….

ಬಂಗಾರದ ದೊಡ್ಡದು ಎಂದು ತಿಳಿದ ಮೂರ್ಖನಿಗೆ ವಜ್ರದ ಬೆಲೆ . ಗೊತ್ತಿರುವುದಿಲ್ಲ ಗೊತ್ತಾಗುವುದು ಇಲ್ಲ…!!!

Leave a Comment