ವೃಶ್ಚಿಕ ರಾಶಿಗಿದ್ಯಾ ಅಚ್ಛೇ ದಿನ್?

0

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುರು ಪರಿವರ್ತನೆಯ ಬಗ್ಗೆ ತಿಳಿದುಕೊಳ್ಳೋಣ. ಇಷ್ಟು ದಿನ ಗುರುವಿನ ಬಲ ಅಷ್ಟು ಚೆನ್ನಾಗಿರಲಿಲ್ಲ ಮಾಡುವ ಕೆಲಸದಲ್ಲಿ ಅಷ್ಟೊಂದು ಯಶಸ್ಸು ಸಿಗುತ್ತಿರಲಿಲ್ಲ. ಮತ್ತು ಬಹಳಷ್ಟು ಜನಕ್ಕೆ ಆರೋಗ್ಯವು ಅಷ್ಟು ಚೆನ್ನಾಗಿರಲಿಲ್ಲ. ಐದು ವರ್ಷಗಳ ಗುರುಪಲದಲ್ಲಿ ನೋಡುವುದಾದರೆ 2024 ಮೇ ಒಂದಕ್ಕೆ ಗುರು ಪರಿವರ್ತನೆ ಆಗಲಿದ್ದಾನೆ ಮೇ ಒಂದರ ನಂತರ ಗುರುವು ನಿಮಗೆ ಅದ್ಭುತ ಶುಭ ಫಲವನ್ನು ನೀಡಲಿದ್ದಾನೆ.

ಗುರು ಬಲವು ಒಂದು ದೊಡ್ಡದಾದಂತಹ ಸಂಗತಿಯಾಗಿದೆ .ಅದನ್ನು ನಾವು ನಿರ್ಲಕ್ಷ ಮಾಡಲು ಸಾಧ್ಯವಾಗುವುದಿಲ್ಲ ಅದರಲ್ಲೂ ವೃಶ್ಚಿಕ ರಾಶಿಯವರಿಗೆ ಗುರು ಫಲವು ಒಂದು ದೊಡ್ಡ ಬದಲಾವಣೆಯನ್ನೇ ತರಲಿದೆ. ಮೇ ,2024ಕ್ಕೆ ಮೇಷ ರಾಶಿಯಿಂದ ವೃಷಭ ರಾಶಿಗೆ ಗುರುಗು ತನ್ನ ಸ್ಥಾನ ಬದಲಾವಣೆಯನ್ನು ಮಾಡಲಿದ್ದಾನೆ. ಮೇ 14 2025 ರ ತನಕ ಇರುತ್ತಾನೆ .ಅದು ಸಪ್ತಮ ಭಾಗದಲ್ಲಿ ಎಂದು ಹೇಳಬಹುದು . ಇದನ್ನು ಕಳತ್ರ ಭಾವ ಎಂದು ಹೇಳುತ್ತೇವೆ.

ಮುಖ್ಯವಾಗಿ ದಾಂಪತ್ಯ ಜೀವನದ ಬಗ್ಗೆ ಪ್ರೀತಿ ಪ್ರೇಮದ ವಿಚಾರದ ಬಗ್ಗೆ ನಾವು ಗಮನ ಕೊಡಬೇಕಾಗುತ್ತದೆ. ಬಹಳಷ್ಟು ಜನರಿಗೆ ಕಂಕಣ ಭಾಗ್ಯವು ಕೂಡಿ ಬರಲಿದೆ . ಮದುವೆಯ ಬಗ್ಗೆ ಬಹಳಷ್ಟು ಸಕರಾತ್ಮಕ ಬೆಳವಣಿಗೆಯನ್ನು ಹೊಂದುತ್ತೀರಾ. ಅತ್ತೆ ಮತ್ತು ಸೊಸೆಯ ನಡುವೆ ವೈಮನಸ್ ಇದ್ದರೆ ಮತ್ತು ಗಂಡ ಹೆಂಡತಿಯ ನಡುವೆ ಬಿರುತ್ತಿದ್ದರೆ ಇಂತಹ ಸಮಸ್ಯೆಗಳು ಇದ್ದರೆ ಅವೆಲ್ಲವೂ ಸರಿ ಹೋಗಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೌಟುಂಬಿಕ ವಿಚಾರದಲ್ಲಿ ನೆಮ್ಮದಿ ಉಂಟಾಗುತ್ತದೆ.

ಗುರುವು ಏಳನೇ ಮನೆಯಲ್ಲಿ ಇದ್ದು ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನು ತರುತ್ತಾನೆ. ಪರಸ್ಪರ ನೆಮ್ಮದಿಯ ವಾತಾವರಣ ಕೌಟುಂಬಿಕ ವಿಚಾರಗಳಲ್ಲಿ ಬೆಂಬಲ ಕೊಡುವಂತಹ ವಾತಾವರಣ ಉಂಟಾಗುತ್ತದೆ. ಕೆಲಸದ ಒತ್ತಡದಿಂದ ಬೇರೆ ಬೇರೆ ಊರುಗಳಲ್ಲಿ ಇದ್ದಂತಹ ಗಂಡ ಹೆಂಡತಿ ಒಟ್ಟಿಗೆ ಸಮಯ ಕಳೆಯ ಬಹುದು. ಒಡವೆ ವಸ್ತುಗಳು ಮತ್ತು ಮನೆಗೆ ಬೇಕಾದಂತಹ ವಸ್ತುಗಳನ್ನು ಖರೀದಿಸುವುದು ಇಂತಹ ವಿಚಾರಗಳಲ್ಲಿ ಬಹಳಷ್ಟು ಸಮಯವನ್ನು ಕಳೆಯಬಹುದು.

ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ ಬಹಳಷ್ಟು ಜನರಿಗೆ ಶುಭ ಸೂಚನೆ ದೊರಕುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ನೀವು ಮೋಸಕ್ಕೆ ಸಿಲುಕಿದರೆ ಗುರುವು ಅದರ ಅರಿವು ನಿಮಗೆ ಬರುವಂತೆ ಮಾಡುತ್ತಾನೆ. ನೀವು ನೋವಾಗದ ರೀತಿಯಲ್ಲಿ ಅದರಿಂದ ಆಚೆ ಬರಬಹುದು. ಮತ್ತು ಎಲ್ಲರೆದರೂ ಅಂತಹ ನಾಟಕದವರ ಮುಖವನ್ನು ಕಳಚಿಸುವ ಸಾಮರ್ಥ್ಯವು ನಿಮಗೆ ಬರುತ್ತದೆ. ನಿಮ್ಮ ಪ್ರೀತಿಯನ್ನು ಹೇಳಿಕೊಂಡರೆ ಅದರಲ್ಲಿ ನಿಮಗೆ ಯಶಸ್ಸು ಸಹ ಸಿಗುತ್ತದೆ. ವೃಶ್ಚಿಕ ರಾಶಿಯವರು ತುಂಬಾ ಗಂಭೀರ ಸ್ವಭಾವದವರಾಗಿರುತ್ತಾರೆ.

ವೃಶ್ಚಿಕ ರಾಶಿಯವರು ತಮ್ಮ ಗಂಭೀರ ಸ್ವಭಾವಕ್ಕೆ ತಕ್ಕಂತಹ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗುರು ಪ್ರವೇಶದಿಂದಾಗಿ ದೇವರ ಮೇಲಿನ ನಂಬಿಕೆ ಶ್ರದ್ಧೆ ಹೆಚ್ಚಾಗುತ್ತದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ಸಹ ಮಾಡಬಹುದು. ಕುಲದೇವರ ದರ್ಶನ ಮತ್ತು ತೀರ್ಥಯಾತ್ರೆಯನ್ನು ಸಹ ಕೈಗೊಳ್ಳಬಹುದು. ಇಂತಹ ಅನುಕೂಲಕರವಾದಂತಹ ವಾತಾವರಣವು ಉಂಟಾಗುತ್ತದೆ. ಇನ್ನು ಕೆಲವರು ಹೊಸ ಮನೆ ಹೊಸ ಮಳಿಗೆಗಳನ್ನು ಸಹ ಸ್ಥಾಪಿಸಬಹುದು.

ಗುರು ಕಳತ್ರ ಸ್ಥಾನದಲ್ಲಿ ಇರುವುದರಿಂದ ,ನೀವು ಯಾವುದೇ ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡುವುದರಿಂದ ಅಭಿವೃದ್ಧಿಯನ್ನು ಕಾಣಬಹುದು. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿದ್ದರೆ ನಿಮಗೆ ಗ್ರಾಹಕರು ಹೆಚ್ಚಿಗೆ ಬರುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರು ನಿಮ್ಮ ಜೊತೆ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಮತ್ತು ನಿಮ್ಮ ಪಾಲುದಾರರು ನಿಮಗೆ ಮೋಸ ಮಾಡುವ ಸಂಭವವು ಇರುವುದಿಲ್ಲ. ನಿಮ್ಮ ಜೊತೆ ಹೊಂದಿಕೊಂಡು ಹೋಗುವ ಸೌಜನ್ಯವನ್ನು ಇಟ್ಟುಕೊಂಡಿರುತ್ತಾರೆ. ನಿಮಗೆ ವ್ಯವಹಾರದಲ್ಲಿ ಒಳ್ಳೆಯ ಪಾಲುದಾರರು ಸಿಕ್ಕುವ ಸಕಾಲ ಸಮಯವಿದೆ.

ಮತ್ತು ಗಣ್ಯ ವ್ಯಕ್ತಿಗಳ ಸಹಾಯವೂ ಸಹ ನಿಮಗೆ ಸಿಗುತ್ತದೆ. ಮತ್ತು ವಿದೇಶದಲ್ಲಿ ಹೂಡಿಕೆಗೂ ಸಹ ಅವಕಾಶವಿರುತ್ತದೆ. ಕೆಲಸ ಮಾಡುವ ಕಡೆಯಲ್ಲಿ ನಿಮ್ಮ ಸಹೋದ್ಯೋಗಿಗಳ ಕಡೆಯಿಂದ ನಿಮಗೆ ಹೆಚ್ಚಿನ ಅನುಕೂಲವಾಗುತ್ತದೆ. ನಿಮ್ಮ ಜೊತೆಯಲ್ಲಿ ಇರುವವರ ಜೊತೆ ಹೆಚ್ಚಿಗೆ ಸಮಾಧಾನದಿಂದ ನೀವು ವರ್ತಿಸಬೇಕು. ಯಾಕೆಂದರೆ ವೃಶ್ಚಿಕ ರಾಶಿಯಲ್ಲಿ ಹುಟ್ಟಿರುವ ಜನರಿಗೆ ಹೆಚ್ಚಿನ ಆತುರವಿರುತ್ತದೆ . ಮತ್ತು ಮುಂದಾಲೋಚನೆ ಮಾಡದೆ ದುಡುಕುವ ಬುದ್ಧಿ ಇರುತ್ತದೆ ಆದ್ದರಿಂದ ನೀವು ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಬೇಕು. ಆರೋಗ್ಯದ ವಿಚಾರದಲ್ಲಿ ಏನು ತೊಂದರೆ ಇರುವುದಿಲ್ಲ. ಮಕ್ಕಳು ಚೆನ್ನಾಗಿ ಓದಿ ನಿಮ್ಮ ಗೌರವವನ್ನು ಹೆಚ್ಚಿಸಲುಬಹುದು. ಗುರುವಿನಿಂದ ನಿಮಗೆ 80 ರಿಂದ 85ರ ತನಕ ಶುಭಫಲವನ್ನೇ ಕಾಣುತ್ತೀರ.

Leave A Reply

Your email address will not be published.