ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು

0

ನಾವು ಈ ಲೇಖನದಲ್ಲಿ ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು ಮತ್ತು ಯಾವ ಸಮಯದಲ್ಲಿ ಧರಿಸಬೇಕು ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಬಂಗಾರವನ್ನು ಯಾವ ದಿನ ಖರೀದಿ ಮಾಡಬೇಕು . ಹಾಗೂ ಯಾವ ದಿನ ಯಾವ ಸಮಯದಲ್ಲಿ ಧರಿಸಬೇಕು !!ಬಂಗಾರ… ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹ ಅಲ್ಲ . ಬದಲಾಗಿ ಲಕ್ಷ್ಮಿ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನು ದೇವಿಗೆ ಹಾಕಿ ಪೂಜೆ ಮಾಡುತ್ತೇವೆ .ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ , ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಅಂದರೆ ಅಕ್ಷಯ ತೃತೀಯವನ್ನು ಬಿಟ್ಟು ಮತ್ತೆ ಬೇರೆ ದಿನಗಳಲ್ಲಿ ತೆಗೆದು ಕೊಳ್ಳುವಾಗಲೂ ಸಮಯ ನೋಡುವುದು ಅವಶ್ಯಕವಾಗಿದೆ. ನಿಮಗೆ ಬೇಕಾದ ಸಮಯದಲ್ಲಿ ಚಿನ್ನ ಕೊಂಡು ತಂದರೆ ಅದರಿಂದ ಅಭಿವೃದ್ಧಿಯ ಬದಲು ನಷ್ಟವು ಸಂಭವಿಸಬಹುದು. ಹಾಗಾಗಿ ಚಿನ್ನ ತರಲು ಕೆಲ ಶುಭ ದಿನ ,ಶುಭ ಮುಹೂರ್ತಗಳನ್ನು ನೋಡಲಾಗುತ್ತದೆ.

ಚಿನ್ನ ಎಂದರೆ ಪ್ರತಿಯೊಬ್ಬರಿಗೂ ಹೇಗೆ ಇಷ್ಟವೋ, ಅದೇ ರೀತಿಯಾಗಿ ಚಿನ್ನವನ್ನು ಖರೀದಿಸಲು ಕೂಡ ಇಷ್ಟಪಡುತ್ತಾರೆ, ಆದರೆ ಚಿನ್ನವನ್ನು ಯಾವ ದಿನ ಖರೀದಿಸಿದರೆ , ಒಳ್ಳೆಯದು ಯಾವ ದಿನ ಖರೀದಿಸಬಾರದು ಎಂದು ತಿಳಿದುಕೊಳ್ಳುವುದು ಅತಿ ಮುಖ್ಯ . ಹಾಗಾದರೆ ಚಿನ್ನವನ್ನು ಯಾವ ದಿನ ಖರೀದಿಸಬೇಕು ಮತ್ತು ಖರೀದಿಸಬಾರದು ಎಂದು ನೋಡೋಣ.

ಮೊದಲು ಚಿನ್ನವು ವೃದ್ಧಿಯಾಗಬೇಕು ಅಂದರೆ , ಈ ಒಂದು ಕೆಲಸವನ್ನು ಮಾಡಿ . ನಿಮ್ಮ ಮನೆಯ ಹತ್ತಿರ ಇರುವ ಬಾಳೆಹಣ್ಣಿನ ಗಿಡದ ಬುಡದ ಹತ್ತಿರ ಹೋಗಿ ಅಲ್ಲಿ ಬಾದಾಮಿ ಎಲೆಯನ್ನು ಇಟ್ಟು ಅಲ್ಲಿ ಲಕ್ಷ್ಮಿ ನಾರಾಯಣ ಸ್ವಾಮಿಯ ಚಿತ್ರ ಪಟವನ್ನು ಇಡಬೇಕು . ನಂತರ ನಿಮ್ಮ ಹತ್ತಿರ ಇರುವ ಯಾವುದಾದರೂ ಒಡವೆಯನ್ನು ಚಿತ್ರ ಪಟದ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು. ಈ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮೀ ನಾರಾಯಣಸ್ವಾಮಿಯ ಅನುಗ್ರಹದಿಂದ ನಿಮ್ಮ ಹತ್ತಿರ ಇರುವ ಬಂಗಾರ ವೃದ್ಧಿಸುತ್ತದೆ.

ಸಾಮಾನ್ಯವಾಗಿ ಬಹಳಷ್ಟು ಜನರು ಬಂಗಾರವನ್ನು ಖರೀದಿ ಮಾಡಲು ಶನಿವಾರ ಅಥವಾ ಭಾನುವಾರ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಶಾಸ್ತ್ರದಲ್ಲಿ ಹೇಳಿರುವ ಹಾಗೆ ಭಾನುವಾರದಂದು ಯಾವುದೇ ಕಾರಣಕ್ಕೂ ಬಂಗಾರವನ್ನು ಖರೀದಿ ಮಾಡಬಾರದು. ಒಂದು ವೇಳೆ ಭಾನುವಾರ ದಿನದಂದು ಬಂಗಾರವನ್ನು ಖರೀದಿ ಮಾಡಿದ್ದಲ್ಲಿ ಖರೀದಿ ಮಾಡಿದ ಬಂಗಾರ ಹಾಗೂ ಮನೆಯಲ್ಲಿದ್ದ ಬಂಗಾರವೂ ನಶಿಸಿ ಹೋಗುತ್ತದೆ . ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಅದೇ ರೀತಿಯಾಗಿ ಶನಿವಾರದಂದು ಚಿನ್ನವನ್ನು ಖರೀದಿ ಮಾಡಿದರ ಕಳ್ಳ ತನ ಆಗುತ್ತದೆ . ಅಥವಾ ಬಂಗಾರವೂ ನಮ್ಮ ಹತ್ತಿರ ಉಳಿಯುವುದಿಲ್ಲ . ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ . ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಬಂಗಾರವನ್ನು ಖರೀದಿ ಮಾಡಬಾರದು .

ಇನ್ನು ಬುಧವಾರ, ಗುರುವಾರ ಹಾಗೂ ಶುಕ್ರವಾರ ಬಂಗಾರವನ್ನು ಖರೀದಿ ಮಾಡಲು ಉತ್ತಮ ದಿನ ,ವಿಶೇಷವಾಗಿ ಗುರುವಾರ ದಿನ ಪುಷ್ಯ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಲಾಭದಾಯಕ ಎಂದು ಹೇಳಲಾಗುತ್ತದೆ.

ಶುಕ್ರವಾರ ಪೂರ್ವಾಷಾಡ ನಕ್ಷತ್ರ ಬಂದಾಗ ಬಂಗಾರವನ್ನು ಖರೀದಿ ಮಾಡಿದರೆ ತುಂಬಾ ಒಳ್ಳೆಯದು . ಆದೇ ರೀತಿ ಬುಧವಾರ ಗುರುವಾರ ಹಾಗೂ ಶುಕ್ರವಾರ ದಿನದಂದು ಬಂಗಾರವನ್ನು ಧರಿಸಿದರೆ ಪುಣ್ಯಗಳು ಪ್ರಾಪ್ತಿಯಾಗುತ್ತದೆ . ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ .

ಇನ್ನು ಭಾನುವಾರ ಹಾಗೂ ಸೋಮವಾರ ಚಿಕ್ಕ ಮಕ್ಕಳಿಗೆ ಹಾಕಿರುವ ಬಂಗಾರವನ್ನು ಯಾವುದೇ ಕಾರಣಕ್ಕೂ ತೆಗೆಯ ಬಾರದು. ಬಂಗಾರವನ್ನು ಯಾವಾಗಲೂ ಬುಧವಾರ, ಗುರುವಾರ ಅಥವಾ ಶುಕ್ರವಾರದ ದಿನದಂದು ಖರೀದಿ ಮಾಡುವುದು ತುಂಬಾ ಉತ್ತಮ .

ಅದೇ ರೀತಿ ಬಂಗಾರವನ್ನು ಧರಿಸಬೇಕಾದರೂ ಕೂಡ ಬುಧವಾರ ,ಗುರುವಾರ , ಶುಕ್ರವಾರದ ದಿನದಂದು ಧರಿಸುವುದು ತುಂಬಾ ಒಳ್ಳೆಯದು. ಬಂಗಾರವನ್ನು ಖರೀದಿ ಮಾಡಿದ ನಂತರ ಹಸುವಿನ ಹಾಲಿನಲ್ಲಿ ಹದ್ದಬೇಕು, ತದನಂತರ ಶುದ್ಧವಾದ ನೀರಿನಲ್ಲಿ ತೊಳೆದು ಲಕ್ಷ್ಮಿ ನಾರಾಯಣ ಸ್ವಾಮಿಯ ಪಾದಕ್ಕೆ ಸ್ಪರ್ಶಿಸಿ, ತದ ನಂತರ ಬಂಗಾರವನ್ನು ಧರಿಸಬೇಕು.ಈ ರೀತಿ ಶುಕ್ರವಾರದ ದಿನ ಮಾಡುವುದರಿಂದ , ನಮ್ಮಲ್ಲಿರುವ ಬಂಗಾರವು ದುಪ್ಪಟ್ಟು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Leave A Reply

Your email address will not be published.