ಬೀರು ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ

ನಾವು ಈ ಲೇಖನದಲ್ಲಿ ಬೀರು ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ, ಹೇಗೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಬೀರುವಿನ ಕೆಳಗೆ ಈ ವಸ್ತುವನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗುತ್ತದೆ. ಬೀರುವಿನ ಕೆಳಗೆ ಈ ರಹಸ್ಯವಾದ ವಸ್ತುವನ್ನು ಇಡುವುದರಿಂದ, ಮನೆಯಲ್ಲಿ ಆಗುವಂತಹ ಅನಾವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ಬೀರಿವಿನ ಕೆಳಗೆ ಇಡಬೇಕು ಎಂದು ತಿಳಿದುಕೊಳ್ಳೋಣ

ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ .ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು ಬಂಗಾರವನ್ನು ,ಮುಖ್ಯವಾದ ದಾಖಲೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು, ಆದ್ದರಿಂದ ಬೀರುವನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ . ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುಗಳೆಂದರೆ, ಗೋಮತಿ ಚಕ್ರ, ಕಮಲದ ಬೀಜ, ಸುಗಂಧದ್ರವ್ಯ, ಆದ್ದರಿಂದ ಈ ವಸ್ತುಗಳನ್ನು ಬೀರುವಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು.

ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಮತ್ತು ಯಾವ ದಿಕ್ಕಿನಲ್ಲಿ ಸಂಪತ್ತು ಅಧಿಕಗೊಳ್ಳುತ್ತದೆ, ಎಂಬುದನ್ನು ಇಲ್ಲಿ ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪುಗಳು ಏನೆಂದರೆ ದಿಕ್ಕುಗಳ ಬಗ್ಗೆ ಸರಿಯಾದ ಮಾಹಿತಿ ಎಲ್ಲರಿಗೂ ಗೊತ್ತಿರುವುದಿಲ್ಲ. ಸರಿಯಾಗಿ ನೈರುತ್ಯದ ಮೂಲೆ ಯಾವ ಕಡೆ ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಬೀರುವನ್ನು ಯಾವಾಗಲೂ ಕೂಡ ನೈರುತ್ಯದ ಮೂಲೆಯಲ್ಲಿ ಇಡಬೇಕು.

ನೈರುತ್ಯ ದಿಕ್ಕು ದಕ್ಷಿಣ ದಿಕ್ಕು ಮತ್ತು ಪಶ್ಚಿಮ ದಿಕ್ಕು ಗಳ ಮಧ್ಯೆ ಬರುತ್ತದೆ, ಬೀರುವಿನ ಬಾಗಿಲನ್ನು ತೆರೆದಾಗ ಉತ್ತರ ದಿಕ್ಕಿಗೆ ಬಾಗಿಲು ತೆರೆಯಬೇಕು ಆಗಿದ್ದಾಗ ಮಾತ್ರ ಆ ಮನೆಯಲ್ಲಿ ಹಣಕಾಸಿನ ಹರಿವು ಹೆಚ್ಚಳವಾಗುವುದು. ಇನ್ನೂ ಯಾವ ಕಾರಣಕ್ಕಾಗಿ ಬೀರುವಿನ ಬಾಗಿಲು ತೆಗೆದಾಗ ಉತ್ತರ ದಿಕ್ಕಿಗೆ ತೆಗೆಯಬೇಕು ಎಂದರೆ , ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ಆದ್ದರಿಂದ ಉತ್ತರಕ್ಕೆ ಬಾಗಿಲು ತೆರೆಯುವಂತೆ ಇಡಬೇಕು ಎಂದು ವಾಸ್ತು ಶಾಸ್ತ್ರವು ತಿಳಿಸುತ್ತದೆ.

ಇನ್ನು ಬೇರುವಿನ ಬಾಗಿಲು ತೆರೆದಾಗ ಆ ಬೀರವಿನಿಂದ ಒಳ್ಳೆಯ ಸುವಾಸನೆ ಬರುವಂತೆ ನೋಡಿಕೊಳ್ಳಬೇಕು, ಬೀರು ಯಾವಾಗಲೂ ಸುಗಂಧ ಭರಿತ ಸುವಾಸನೆಯಿಂದ ಕೂಡಿರಬೇಕು. ಒಂದು ವೇಳೆ ಬೀರುವನ್ನು ಈಶಾನ್ಯ ದಿಕ್ಕಿಗೆ ಇಟ್ಟರೆ, ಖರ್ಚು ಅಧಿಕವಾಗುತ್ತದೆ, ಹಣಕಾಸಿನ ಸಂಕಷ್ಟಗಳು ಹೆಚ್ಚಾಗುತ್ತದೆ, ಎಷ್ಟು ಸಂಪಾದನೆ ಮಾಡಿ ಹಣ ಅಧಿಕವಾಗುತ್ತದೆ . ಅದನ್ನು ಈ ದಿಕ್ಕಿನಲ್ಲಿ ತಂದು ಇಟ್ಟರೆ ಅದು ನೀರಿನಂತೆ ಹರಿದು ಹೋಗುತ್ತದೆ. ಅಂದರೆ ಅನಗತ್ಯವಾದ ಅಧಿಕ ಖರ್ಚುಗಳು ಉಂಟಾಗುತ್ತದೆ .

ಹಾಗೆಯೇ ಪಚ್ಚ ಕರ್ಪೂರವನ್ನು ಶುಚಿಯಾದ ವಸ್ತ್ರದ ಒಳಗೆ ಇಟ್ಟು ಅದನ್ನು ಸುತ್ತಿ ಬೀರುವಿನ ಒಂದು ಮೂಲೆಯಲ್ಲಿ ಇಟ್ಟರೆ, ತುಂಬಾ ಒಳ್ಳೆಯದು. ಇದರಿಂದ ಲಕ್ಷ್ಮೀದೇವಿಯು ಬೀರುವಿನಲ್ಲಿ ವಾಸಿಸುತ್ತಾಳೆ ಎಂಬ ಭಾವನೆ ಬರುತ್ತದೆ.

ಬೀರುವಿನ ಕೆಳ ಭಾಗದಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲಪ್ಪನ್ನು ಹಾಕಿ ಅದರ ಮೇಲೆ ಒಂದು ಬಿಳಿ ಸ್ಫಟಿಕವನ್ನು ಇಡಬೇಕು. ನಂತರ ಆ ಗಾಜಿನ ಬಟ್ಟಲನ್ನು ತೆಗೆದುಕೊಂಡು ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟು, ಮಂಗಳವಾರ, ಗುರುವಾರ, ಹಾಗೂ ಶುಕ್ರವಾರ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಸಹ ಮಾಡಬೇಕು. ಗಾಜಿನ ಬಟ್ಟಲಲ್ಲಿ ಇ ರುವ ಕಲ್ಲುಪ್ಪನ್ನು ಬದಲಾಯಿಸಬೇಕೆಂದರೆ ಅದನ್ನು ಅಮಾವಾಸ್ಯೆಯ ದಿನದಂದು ಬದಲಾಯಿಸಿ , ಹೊಸ ಕಲ್ಲುಪ್ಪನ್ನು ಇಡಬಹುದು. ಹಳೆ ಕಲ್ಲುಪ್ಪನ್ನು ಯಾರು ತುಳಿಯದ ಜಾಗದಲ್ಲಿ ಹಾಕಬೇಕು.

ಹಾಗೆಯೇ ಮತ್ತೊಂದು ಪರಿಹಾರವೆಂದರೆ , ಕಲ್ಲುಪ್ಪನ್ನು ತೆಗೆದುಕೊಂಡು ಅದಕ್ಕೆ ನಾಲ್ಕು ಲವಂಗವನ್ನು ಸೇರಿಸಿ ಬಟ್ಟಲನ್ನು ಹಿಡಿದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಓಡಾಡಿ ತದನಂತರ ಬೀರುವಿನ ಕೆಳಗಡೆ ಇಡುವುದು ತುಂಬಾ ಉತ್ತಮ. ಇದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಸ್ಫಟಿಕವನ್ನು ಆರು ತಿಂಗಳಿಗೊಮ್ಮೆ ಅಮಾವಾಸ್ಯೆ ದಿನದಂದು ಬದಲಾಯಿಸುವುದು ಉತ್ತಮ. ಈ ರೀತಿಯಾಗಿ ಎರಡು ಪರಿಹಾರವನ್ನು ಮಾಡಿಕೊಂಡರೆ, ಅನವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಮತ್ತು ಧನಸಂಪತ್ತು ವೃದ್ಧಿಯಾಗುತ್ತದೆ.

ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ , ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಬೀರವನ್ನು ಇಡಬಾರದು, ಯಾವಾಗಲೂ ನೈರುತ್ಯ ದಿಕ್ಕಿಗೆ ಬೀರುವನ್ನು ಇಡಬೇಕು. ಬೀರುವನ್ನು ತೆಗೆದಾಗ ಅದು ಉತ್ತರ ದಿಕ್ಕಿಗೆ ಬಾಗಿಲು ತೆರೆಯುವಂತೆ ಇಡಬೇಕು.

Leave a Comment