ಬಿಳಿ ಕೂದಲು ಎಷ್ಟೇ ಇರಲಿ 5 ನಿಮಿಷದಲ್ಲಿ ಕಪ್ಪಾಗಿಸಿ NO ಬ್ಯೂಟಿಪಾರ್ಲರ್ NO ಹೇರ್ ಡೈ

0

ಬಿಳಿ ಕೂದಲು ಎಷ್ಟೇ ಇರಲಿ ಐದು ನಿಮಿಷದಲ್ಲಿ ಕಪ್ಪಾಗಿಸಿನಿಮ್ಮ ಕೂದಲನ್ನ ನ್ಯಾಚುರಲ್ಲಾಗಿ ಕಪ್ಪು ಮಾಡತ್ತೆ ಈ ಎಲೆ. ನಿಮ್ಮ ಕೂದಲು ಎಷ್ಟೇ ಬಿಳಿಯಾಗಿದ್ರು ಕೂಡ ಅದನ್ನ ನ್ಯಾಚುರಲ್ಲಾಗಿ ಪ್ರಕೃತಿದತ್ತವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಾವು ಕೂದಲನ್ನ ಕಪ್ಪಾಗಿ ಮಾಡ್ಕೊಳ್ಳಬಹುದು. ಇದರಲ್ಲಿ ಒಂದು ವಿಶೇಷವಾದಂತ ಎಲೆಯ ಪೌಡರ್ ನ ಬಳಸಿದ್ದೀವಿ.

ಇದು ನಮ್ಮ ಕೂದಲನ್ನ ಕಪ್ಪಾಗಿ ಮಾಡತ್ತೆ. ಹಾಗಾದ್ರೆ ಬನ್ನಿ ಈ ಮನೆ ಮದ್ದು ಹೇಗೆ ತಯಾರಿ ಮಾಡೋದು ಅಂತ ನೋಡೋಣ. ಫಸ್ಟ್ ನಾವಿಲ್ಲಿ ಬೀಟ್ರೂಟನ್ನ ತಗೊಂಡಿದ್ದೀವಿ. ಬೀಟ್ರೂಟ್ ಕೂದಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು ಮತ್ತು ಕೂದಲಿಗೆ ಒಂದು ಬಣ್ಣವನ್ನ ಕೊಡುತ್ತದೆ. ಇವಾಗ ನೋಡಿ ಬೀಟ್ರೂಟನ್ನ ನಾವು ಚೆನ್ನಾಗಿ ತೊಳ್ಕೊಬೇಕು. ಮೇಲ್ಗಡೆ ಸಿಪ್ಪೆನಾ ತೆಗಿಬೇಕು.

ಈ ರೀತಿ ನಾವು ಕಟ್ ಮಾಡ್ಕೊಳ್ಳೋಣ ಬೀಟ್ರೂಟನ್ನ. ಚಿಕ್ಕ ಚಿಕ್ಕ ಸ್ಲೈಸ್ ಆಗಿ ಕಟ್ ಮಾಡ್ಕೋಳ್ಬೇಕು. ಈ ಬೀಟ್ರೂಟ್ ನಮ್ಮ ಕೂದಲಿಗೊಂದೇ ಅಲ್ಲ ನಮ್ಮ ದೇಹದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಯಾರಿಗೆ ರಕ್ತ ಹೀನತೆ ಇದೆ ಅವರು ಒಂದ್ ವಾರ ಬೀಟ್ರೂಟ್ ಜ್ಯೂಸನ್ನ ಕುಡಿದು ನೋಡಿ ಎಷ್ಟ್ ಬೇಗ ನಿಮಗೆ ರಕ್ತ ಹೀನತೆ ಕಡಿಮೆ ಆಗುತ್ತ ಅಂತೇಳಿ.

ನೆಕ್ಸ್ಟ್ ನಾವು ಇದಕ್ಕೆ ಅಲೋವೆರವನ್ನ ಸೇರಿಸಿಕೊಳ್ಳೋಣ. ಅಲೋವೆರಾ ನಮ್ಮ ಕೂದಲು ಸಾಫ್ಟ್ ಆಗಲಿಕ್ಕೆ ನಮ್ಮ ಕೂದಲಿನ ಬುಡದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅಂದ್ರೆ ಸ್ಕ್ಯಾಲ್ಫಲ್ಲಿ ಯಾವುದೇ ಇಚ್ಚಿಂಗ್ ಆಗ್ತಾ ಇದ್ರೆ ಡ್ಯಾಂಡ್ರಫ್ ಆಗ್ತಾ ಇದ್ರು ಅದನ್ನ ಕಡಿಮೆ ಮಾಡತ್ತೆ. ಮತ್ತೆ ನಾವು ಯಾವುದೇ ಹೇರ್ ಡೈಯನ್ನ ಮಾಡಿದಾಗ ಕೂದಲು ತುಂಬಾನೇ ರಫ್ ಆಗತ್ತಲ್ಲ ಅದನ್ನ ಕಡಿಮೆ ಮಾಡುವಂತ ಗುಣ ಈ ಅಲೋವೆರಾಕ್ಕಿದೆ. ಅಲೋವೆರಾವನ್ನ ನಾವು ಯೂಸ್ ಮಾಡಿದಾಗ ನಮ್ಮ ಕೂದಲು ತುಂಬಾನೇ ಸಾಫ್ಟ್ ಆಗತ್ತೆ

ಮತ್ತು ತುಂಬಾ ಶೈನಿಂಗ್ ಬರುತ್ತೆ. ಇವಾಗ ನಾವು ಅಲೋವೆರಾ ಮತ್ತು ಈ ಬೀಟ್ರೂಟ್ ಎರಡನ್ನು ಮಿಕ್ಸಿಗೆ ಹಾಕೊಳ್ಳೋಣ. ನೋಡಿ ಇವೆರಡನ್ನೂ ನಾವು ಪೇಸ್ಟ್ ಮಾಡ್ಬೇಕು. ಮತ್ತೆ ನಮಗೆ ಈ ಎರಡು ಪದಾರ್ಥದ ರಸ ಬೇಕು. ಇವಾಗ ನಾವು ಈ ಎರಡನ್ನ ನೀಟಾಗಿ ಮಿಕ್ಸಿಗೆ ಹಾಕೊಳ್ಳೋಣ. ನೀವು ಬೇಕಾದ್ರೆ ಸ್ವಲ್ಪ ನೀರನ್ನ ಬೇಕಾದರೆ ಆಡ್ ಮಾಡ್ಬಹುದು. ಇಲ್ಲಿ ನೋಡಿ

ಈ ತರ ಪೇಸ್ಟ್ ತರ ತಯಾರಾಗಿದೆ. ಇದರಿಂದ ನಾವು ರಸವನ್ನ ಫಿಲ್ಟರ್ ಮಾಡಿ ತೆಗೆಯೋಣ. ಬೀಟ್ರೂಟನ್ನ ನಾನಿಲ್ಲಿ ಚಿಕ್ಕ ಬೀಟ್ರೂಟನ್ನ ಯೂಸ್ ಮಾಡಿದೀನಿ. ನಿಮ್ಮ ಕೂದಲು ತುಂಬಾನೇ ಲೆಂದಿ ಆಗಿದ್ದರೆ ನೀವು ಸ್ವಲ್ಪ ದೊಡ್ಡದನ್ನ ಕೂಡ ಯೂಸ್ ಮಾಡ್ಬಹುದು. ಈ ಮನೆಮದ್ದನ್ನ ಪುರುಷರು ಮಕ್ಕಳು ಪ್ರತಿಯೊಬ್ಬರೂ ಇದನ್ನ ಯೂಸ್ ಮಾಡ್ಬಹುದು.

ಮತ್ತೆ ಇದನ್ನ ಗಡ್ಡಕ್ಕೂ ಕೂಡ ಅಪ್ಲೈ ಮಾಡ್ಬಹುದು. ನೋಡಿ ಇವಾಗ ನಂಗೆ ಒಂದ್ ಮುಕ್ಕಾಲು ಬೌಲ್ ಆಗುವಷ್ಟು ಬೀಟ್ರೂಟ್ ಮತ್ತು ಅಲೋವೇರಾದ ರಸ ಸಿಗ್ತು ಜ್ಯೂಸ್ ಸಿಗ್ತು. ಇದನ್ನ ಸ್ವಲ್ಪ ಬಿಸಿ ಮಾಡ್ಕೋಳ್ಬೇಕು. ಈಗ ನೋಡಿ ಒಂದು ಬಾಂಡ್ಲಿಗೆ ಇದನ್ನ ನಾನು ಹಾಕ್ತಾ ಇದ್ದೀನಿ. ಯಾವುದೇ ದಪ್ಪ ತಳ ಇರುವಂತಹ ಈತರ ಪಾತ್ರೆಗೆ ನೀವು ಹಾಕಿಕೊಂಡ್ರೆ ಬರತ್ತೆ. ಇದನ್ನ ಸ್ವಲ್ಪ ಲೈಟ್ ಆಗಿ ನಾವು ಬಿಸಿ ಮಾಡೋಣ.

ನೋಡಿ ಬಿಸಿ ಯಾಕ್ ಮಾಡಬೇಕು ಅಂದ್ರೆ ತುಂಬಾ ಜನಕ್ಕೆ ಡೈರೆಕ್ಟಾಗಿ ಅಲೋವೆರಾ ಆಗ್ಲಿ ಬೀಟ್ರೂಟನ್ನ ಅಪ್ಲೈ ಮಾಡಿದಾಗ ತಲೆಯಲ್ಲಿ ಇಚ್ಚಿಂಗ್ ಆಗುವಂತ ಸಾಧ್ಯತೆ ಇರತ್ತೆ. ಹಾಗಾಗಿ ಈ ತರ ಸ್ವಲ್ಪ ಇದನ್ನ ಕುದಿಸಿದ್ರೆ ಅಂತಹ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸ್ವಲ್ಪ ನೀವು ಸ್ಟವ್ ಅನ್ನ ಮೀಡಿಯಂ ಫ್ಲೇಮ್ ನಲ್ಲಿ ಇಟ್ಕೊಂಡು ಕುದಿಸಿ ಹೈ ಫ್ಲೇಮ್ ಬೇಡ. ನೋಡಿ ಇವಾಗ ಸ್ವಲ್ಪ ಬತ್ತತಾ ಇದೆ.

ಸ್ವಲ್ಪ ಕಲರ್ ಕೂಡ ಸ್ವಲ್ಪ ಡಾರ್ಕ್ ಆಗ್ತಾ ಇದೆ ಅಲ್ವಾ. ಒಂದ್ ಕುದಿ ಬಂದ್ರೆ ಸಾಕು ಸ್ಟವ್ ಅನ್ನ ಆಫ್ ಮಾಡ್ಬಿಡಿ. ಇಷ್ಟ್ ಆದ್ರೆ ಸಾಕು ಸ್ವಲ್ಪ ತಣ್ಣಗಾದ ಮೇಲೆ ಇದನ್ನ ಬೌಲಿಗೆ ಹಾಕೊಳ್ಳೋಣ. ಇವಾಗ ನಾವು ತಯಾರಿ ಮಾಡ್ತಿರುವಂತಹ ಹೇರ್ ಡೈ ನಮ್ಮ ಕೂದಲ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಹೇರ್ ಫಾಲನ್ನು ಕೂಡ ಕಂಟ್ರೋಲ್ ಮಾಡತ್ತೆ.

ಯಾಕಂದ್ರೆ ಇಲ್ಲಿ ಬೀಟ್ರೂಟ್ ಮತ್ತು ಅಲೋವೆರಾವನ್ನು ಬಳಸಿದ್ದೀವಲ್ಲ. ಇದರಲ್ಲಿರುವಂತ ಎಲ್ಲ ನ್ಯೂಟ್ರಿಯನ್ಸ್ ಗಳು ಕೂದಲ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಇವಾಗ ನೋಡಿ ಇಷ್ಟು ರಸ ನಿಮಗೆ ಸಿಕ್ತಲ್ವಾ ಇದಕ್ಕೆ ನಾವು ನಮ್ಮ ಕೂದಲನ್ನ ಕಪ್ಪಾಗಿ ಮಾಡುವಂತಹ ಪ್ರಕೃತಿ ನೀಡಿದಂತ ವರದಾನ ಇಂಡಿಗೋ ಪೌಡರ್ ಅಂತ ಹೇಳಿ ಇಂಡಿಗೋ ಪೌಡರ್ ಇದು ಒಂದು ರೀತಿಯ ಎಲೆಯಿಂದ ತಯಾರಿ ಮಾಡಿರುತ್ತಾರೆ.

ಇಂಡಿಗೋ ಪೌಡರ್ ಗೆ ಇತ್ತೀಚೆಗೆ ತುಂಬಾನೇ ಬೇಡಿಕೆ ಇರುವುದರಿಂದ ಇದನ್ನ ತುಂಬಾನೇ ಇಡೀ ಗದ್ದೆಗಳಲ್ಲಿ ಇದನ್ನ ಬೆಳೀತಾ ಇದ್ದಾರೆ ಅಂದ್ರೆ ಇದನ್ನ ಹೆಚ್ಚಾಗಿ ಉತ್ತರ ಭಾರತದಲ್ಲಿ ಬೆಳೀತಾರೆ ಅದರಲ್ಲೂ ಬಿಹಾರದಲ್ಲಿ ಇದನ್ನು ತುಂಬಾ ಬೆಳೀತಾರೆ. ಈ ಇಂಡಿಗೋ ಎಲೆಗಳನ್ನು ಇವಾಗ ಗದ್ದೆ ರೀತಿಯಲ್ಲಿ ಬೆಳೀತಿದ್ದಾರೆ ಸಿಕ್ಕಾಪಟ್ಟೆ ಇದರ ಬೇಡಿಕೆ ಹೆಚ್ಚಾಗ್ತಾ ಇದೆ.

ಆ ಎಲೆಗಳನ್ನ ತಂದು ಅದನ್ನ ಒಣಗಿಸಿ ಪೌಡರ್ ನ ತಯಾರಿ ಮಾಡ್ತಾರೆ. ನಿಮಗೆ ಇಂಡಿಗೋ ಪೌಡರ್ ಸ್ಟೇಷನರಿ ಅಂಗಡಿಲಿ ಸಿಗತ್ತೆ ಆನ್ಲೈನಲ್ಲು ಸಿಗುತ್ತೆ. ಇಲ್ಲಿ ನಿಮಗೆ ಕೆಲವೊಂದು ಇಂಡಿಗೋ ಪೌಡರ್ ನೇಮ್ಸನ್ನ ಹೇಳಿದ್ದೀನಿ ನೋಡಿ ಈ ಎಲ್ಲಾ ಕಂಪನಿಗಳ ಪೌಡರನ್ನು ನೀವು ತಗೋಬಹುದು. ಇವೆಲ್ಲ ನ್ಯಾಚುರಲ್ ಆಗಿದೆ ಅಂತೇಳಿ ಗೂಗಲ್ ನಲ್ಲಿ ಹೇಳಿದ್ದಾರೆ.

ಇವಾಗ ನಾವು ಈ ಬಿಟ್ ರೂಟ್ ಮತ್ತು ಅಲೋವೆರಾ ರಸಕ್ಕೆ ಮೂರು ಸ್ಪೂನ್ ಆಗುವಷ್ಟು ಇಂಡಿಗೋ ಪೌಡರ್ನ ನಾನು ಹಾಕ್ಕೊಳ್ತಾ ಇದೀನಿ. ನಿಮ್ಮ ಕೂದಲು ಒಂದು ವೇಳೆ ಉದ್ದ ಆಗಿದ್ರೆ ಇನ್ನು ಹೆಚ್ಚಿಗೆ ನೀವು ಹಾಕೊಳ್ಬಹುದು. ಈ ರೀತಿ ನಾವು ನ್ಯಾಚುರಲ್ ಆಗಿರುವಂತಹ ಪ್ರಕೃತಿಯಲ್ಲಿ ಸಿಗುವಂತಹ ಪದಾರ್ಥಗಳಿಂದ ನಮ್ಮ ಕೂದಲನ್ನ ಕಪ್ಪಾಗಿಸುವುದರಿಂದ ನಮ್ಮ ಕೂದಲಿಗೆ ಯಾವುದೇ ರೀತಿಯ ಹಾನಿ ಅಥವಾ ಡ್ಯಾಮೇಜ್ ಉಂಟಾಗೋದಿಲ್ಲ. ಇನ್ನು ಇದು ನಮ್ಮ ಕೂದಲ ಬುಡಕ್ಕೆ ತುಂಬಾನೇ ಒಳ್ಳೆಯದು.

ಕೂದಲು ಉದುರುವುದನ್ನ ಇದು ಕಡಿಮೆ ಮಾಡುತ್ತೆ. ಕೂದಲು ದಟ್ಟವಾಗಿ, ಕಪ್ಪಾಗಿ ಬೆಳೀಲಿಕ್ಕೂ ಕೂಡ ತುಂಬಾನೇ ಹೆಲ್ಪ್ ಆಗತ್ತೆ. ನಾವ್ ಬರಿ ಆರ್ಟಿಫಿಶಿಯಲ್ ಹೇರ್ ಡೈಯನ್ನೇ ಯೂಸ್ ಮಾಡೋದ್ರಿಂದ ಸ್ಕಾಲ್ಪಿಗೆ ಅಂದ್ರೆ ನಮ್ಮ ಕೂದಲಿನ ಬುಡಕ್ಕೆ ತುಂಬಾನೇ ಹಾನಿಯನ್ನು ಉಂಟು ಮಾಡುತ್ತೆ. ಕೂದಲು ತುಂಬಾನೇ ರಫ್ ಆಗುವುದು ಮತ್ತು ಒಂದ್ ಸಲ ಹೇರ್ ಡೈಯನ್ನ ನೀವು ಯೂಸ್ ಮಾಡಿದ್ರಿ,

ಆರ್ಟಿಫಿಶಿಯಲ್ ಹೇರ್ ಡೈನಾ ಅಂದ್ರೆ ಬೇಗ ಹೇರ್ ಗ್ರೇ ಆಗಲಿಕ್ಕೆ ಬಿಳಿ ಆಗಲಿಕ್ಕೆ ಸ್ಟಾರ್ಟ್ ಆಗತ್ತೆ. ಈ ರೀತಿಯ ನ್ಯಾಚುರಲ್ ಹೇರ್ ಡೈಯನ್ನ ನೀವು ಚಿಕ್ಕ ಮಕ್ಕಳಿಗೆ ಒಂದ್ ವೇಳೆ ಬಿಳಿ ಕೂದಲಾಗಿದ್ರೂ ಕೂಡ ಅವರಿಗೆ ಕೂಡ ನೀವು ಯೂಸ್ ಮಾಡಬಹುದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ. ಈ ಪೌಡರನ್ನ ನಾವು ಮಿಕ್ಸ್ ಮಾಡಿದ ಮೇಲೆ ಒಂದೆರಡು ನಿಮಿಷ

ಅದನ್ನು ಹಾಗೆ ಮುಚ್ಚಿಡಬೇಕು. ಇನ್ಸ್ಟಂಟ್ ಆಗಿ ಯೂಸ್ ಮಾಡಿಕೊಳ್ಳಬಹುದು. ಇವಾಗ ನೀವು ನೋಡ್ತಿದ್ದೀರಲ್ಲ ಎಷ್ಟು ಚೆನ್ನಾಗಿ ನ್ಯಾಚುರಲ್ ಆಗಿ ಕಲರ್ ಬಂದಿದೆ ಅಂತ ಹೇಳಿ ಈ ನ್ಯಾಚುರಲ್ ಆದಂತ ಹೇರ್ ಕಲರ್ ಅನ್ನ ಇವಾಗ ನಾವು ನಮ್ಮ ಕೂದಲಿಗೆ ಅಪ್ಲೈ ಮಾಡೋಣ. ನಾವು ಕೂದಲಿಗೆ ಅಪ್ಲೈ ಮಾಡಬೇಕಾದರೆ ನಮ್ಮ ಕೂದಲು ಒಣಗಿರಬೇಕು ಯಾವುದೇ ರೀತಿಯ ಆಯಿಲ್ ನ ಹಾಕಿರಬಾರದು.

ಅಂತಹ ಕೂದಲಿಗೆ ನೋಡಿ ನೀವು ಈ ರೀತಿ ನಿಮ್ಮ ಕೂದಲಿನ ಬುಡಕ್ಕೆ ಅಪ್ಲೈ ಮಾಡಬೇಕು. ಇದನ್ನ ನೀವು ಅಪ್ಲೈ ಮಾಡಿದ ಮೇಲೆ ಅಟ್ ಲೀಸ್ಟ್ 30 ನಿಮಿಷ ನಿಮ್ಮ ತಲೆಯಲ್ಲಿ ಇರುವ ಹಾಗೆ ಮಾಡ್ಬೇಕು ಇಲ್ಲಾಂದ್ರೆ ಟೈಮ್ ಇದ್ರೆ ಒಂದ್ ಗಂಟೆ ಇದ್ರೂ ಪರವಾಗಿಲ್ಲ ಒಂದ್ ಗಂಟೆ ಬಿಟ್ಟ ಮೇಲೆ ನೀವು ಯಾವುದೇ ಶಾಂಪೂ ಅಥವಾ ಸೋಪನ್ನ ಯೂಸ್ ಮಾಡದೆ ಹೇರ್ ವಾಶನ್ನ ಮಾಡ್ಕೋಬೇಕು ನೋಡಿ ನಿಮ್ಮ ತಲೆಯಲ್ಲಿ ಎಷ್ಟೇ ಬಿಳಿ ಕೂದಲಿದ್ರೂ ಕೂಡ ಕಪ್ಪಾಗಿ ಟ್ರಾನ್ಸ್ಫರ್ ಆಗುತ್ತೆ.

ನೋಡಿ ಅದರ ಜೊತೆಗೆ ಕೂದಲು ತುಂಬಾನೇ ಶೈನಿಂಗ್ ಆಗುತ್ತೆ. ಇನ್ನು ಈ ಹೇರ್ ಡೈ ತುಂಬಾನೇ ನ್ಯಾಚುರಲ್ ಆಗಿರೋದ್ರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ. ನೀವು ಕಮೆಂಟ್ಸ್ ಲ್ಲಿ ಕೇಳ್ತೀರಾ ಮಕ್ಕಳಿಗೆ ಇದನ್ನ ಯೂಸ್ ಮಾಡ್ಬಹುದಾ ಅಂತೇಳಿ 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀವಿದನ್ನ ಆರಾಮಾಗಿ ಅಪ್ಲೈ ಮಾಡಬಹುದು. ಜೊತೆಗೆ ಇದನ್ನ ಅಪ್ಲೈ ಮಾಡೋದ್ರಿಂದ ಯಾರಿಗೆ ತುಂಬಾನೇ ರಫ್ ಹೇರ್ ಇರುತ್ತೆ

ಅದು ತುಂಬಾನೇ ಸಾಫ್ಟ್ ಆಗುತ್ತೆ. ಅದಲ್ಲದೆ ಈ ನ್ಯಾಚುರಲ್ ಹೇರ್ ಪ್ಯಾಕ್ ಅನ್ನು ಯೂಸ್ ಮಾಡೋದ್ರಿಂದ ಕೂದಲು ಉದುರ್ತಾ ಇದ್ರೂ ಕೂಡ ಅದು ಕಡಿಮೆ ಆಗುತ್ತೆ. ತಲೆಯಲ್ಲಿ ಡ್ಯಾಂಡ್ರಫ್ ಆಗಿದ್ರೂ ಯಾವುದೇ ರೀತಿಯ ಇಚ್ಚಿಂಗ್ ಆಗ್ತಾ ಇದ್ದರೂ ಕಡಿಮೆಯಾಗುತ್ತೆ. ಕೂದಲು ತುಂಬಾನೇ ದಟ್ಟವಾಗಿ ಬೆಳೆಯತ್ತೆ. ತುಂಬಾ ಶೈನಿಂಗ್ ಆಗುತ್ತೆ ಕಪ್ಪಾಗುತ್ತೆ. ನೋಡಿದ್ರಲ್ಲ ಫ್ರೆಂಡ್ಸ್ ಎಷ್ಟು ಅದ್ಭುತವಾದಂತಹ ಹೇರ್ ಡೈ ಇವತ್ತು ನಾನು ಹೇಳ್ಕೊಟ್ಟಿದ್ದೀನಿ. ತುಂಬಾನೇ ಒಳ್ಳೆಯ ಹೇರ್ ಡೈ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇದರಿಂದ ನಿಮಗೆ ಆಗೋದಿಲ್ಲ.

ಇನ್ನು ಈ ಹೇರ್ ಡೈಯನ್ನ ಬಳಸೋವಾಗ ಯಾರಿಗೆ ಅಲರ್ಜಿ ಅಂದ್ರೆ ತುಂಬಾ ಶೀತ ಆಗ್ತಾ ಇರುತ್ತೆ ಅವರು ಇದನ್ನು ಬಳಸಿದ್ರೂ ಕೂಡ ಒಂದು ಐದರಿಂದ 10 ನಿಮಿಷ ಅಷ್ಟೇ ತಲೆಯಲ್ಲಿಟ್ಟುಕೊಳ್ಳಿ ಹೆಚ್ಚಿಗೆ ಹೊತ್ತು ಇಟ್ಕೊಂಡ್ರೆ ಕೋಲ್ಡ್ ಆಗುವಂತ ಸಾಧ್ಯತೆ ಇರುತ್ತೆ. ಯಾರಿಗೆ ಅಲರ್ಜಿ ಪ್ರಾಬ್ಲಮ್ ಇದೆ ಅಂದ್ರೆ ತುಂಬಾನೇ ಶೀತ ಆಗುವಂತ ಪ್ರಾಬ್ಲಮ್ ಇರೋರ್ ಆದ್ರೆ ಬೇಸಿಗೆಯಲ್ಲಿ ಇದನ್ನ ಬಳಸೋದು ತುಂಬಾನೇ ಒಳ್ಳೆಯದು. ಈ ಹೇರ್ ಡೈಯನ್ನ ನೀವು ವಾರಕ್ಕೆ

ಒಂದು ಸಲ ಅಪ್ಲೈ ಮಾಡಿದ್ರೆ ಸಾಕು. ಸ್ಟಾರ್ಟಿಂಗ್ನಲ್ಲಿ ವಾರಕ್ಕೆ ಒಂದ್ ಸಲ ಅಪ್ಲೈ ಮಾಡಿ. ನೆಕ್ಸ್ಟ್ ಫಿಫ್ಟೀನ ಡೇಸಿಗೆ ಒಂದ್ಸಲ ಅಪ್ಲೈ ಮಾಡಿದ್ರೆ ಸಾಕಾಗುತ್ತೆ. ಇದನ್ನ ಪುರುಷರು ತಮ್ಮ ಬಿಳಿ ಗಡ್ಡಕ್ಕೆ ಅಪ್ಲೈ ಮಾಡಿ ಕಪ್ಪಾಗಿಸಿಕೊಳ್ಳಬಹುದು. ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಕೊಡುವಂತ ಮನೆ ಮದ್ದು ಇವತ್ತಿನದಾಗಿದೆ ಫ್ರೆಂಡ್ಸ್. ಇದುವರೆಗೂ ನನ್ ವಿಡಿಯೋ ನೋಡಿದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಇದೇ ರೀತಿಯ ವಿಡಿಯೋಗಳಿಗಾಗಿ ನನ್ನ ಚಾನಲನ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಮತ್ತೆ ಭೇಟಿಯಾಗೋಣ ಹೊಸದೊಂದು ವಿಡಿಯೋ ದೊಂದಿಗೆ.

Leave A Reply

Your email address will not be published.