ಬುದ್ದಿವಂತ ಮಕ್ಕಳು ಯಾವ ತಿಂಗಳಿನಲ್ಲಿ ಜನಿಸುತ್ತಾರೆ

0

ನಾವು ಈ ಲೇಖನದಲ್ಲಿ ಬುದ್ಧಿವಂತ ಮಕ್ಕಳು ಯಾವ ತಿಂಗಳಿನಲ್ಲಿ ಜನಿಸುತ್ತಾರೆ ಎಂದು ತಿಳಿಯೋಣ .
ಮಕ್ಕಳು ಯಾವ ತಿಂಗಳಿನಲ್ಲಿ ಜನಿಸಿದರೆ ಅವರು ಬುದ್ಧಿವಂತರು ಆಗುತ್ತಾರೆ . ಹಾಗೆಯೇ ಅದೃಷ್ಟವಂತರು ಆಗಿರುತ್ತಾರೆ . ಮತ್ತು ಅವರ ಮನಸ್ಸು ತತ್ವಗಳು ಹೇಗಿರುತ್ತದೆ ಎಂಬುದನ್ನು ಇನ್ನು ತಿಳಿಯೋಣ . ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಆ ದೇವರ ಸೃಷ್ಟಿ . ಆದರೆ ಕೆಲವರಿಗೆ ಭೋಗ ಭಾಗ್ಯಗಳು ಅಷ್ಟೈಶ್ವರ್ಯಗಳು ಮತ್ತು ಸುಖ ಸಂಪತ್ತುಗಳು ಹಾಗೆಯೇ ಆಡಂಬರದ ಜೀವನ ದೊರಕುತ್ತದೆ .ಇನ್ನು ಕೆಲವರಿಗೆ ಇಂತಹ ಯಾವುದೇ ಭೋಗ ಭಾಗ್ಯಗಳು ಸಿಗುವುದಿಲ್ಲ .

ಬಹಳಷ್ಟು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ . ಸಾಧಾರಣ ಜೀವನವನ್ನು ನಡೆಸುವುದಕ್ಕೂ ಸಹ ಪರದಾಡುವ ಪರಿಸ್ಥಿತಿಯನ್ನು ಸಹ ಎದುರಿಸಬೇಕಾಗುತ್ತದೆ. ಅವರು ಮಾಡುವ ಕೆಲಸಗಳು ಸಹ ವಿಫಲವಾಗುತ್ತದೆ . ಕೆಲವು ಮಂದಿ ಯಾವುದೇ ಕಷ್ಟ ಪಡದಿದ್ದರೂ ಸಹ ಅವರು ಸುಖವಾಗಿ ಇರುತ್ತಾರೆ . ಗರುಡ ಪುರಾಣದ ಪ್ರಕಾರ ಇದಕ್ಕೆಲ್ಲಾ ಕಾರಣ ನಮ್ಮ ಪೂರ್ವ ಜನ್ಮದ ಕರ್ಮಗಳು ಆಗಿರುತ್ತವೆ. ಪೂರ್ವ ಜನ್ಮದಲ್ಲಿ ನಾವು ಮಾಡಿದ ಕರ್ಮ ಫಲಗಳೇ ಬೇರೆ ಜನ್ಮದಲ್ಲಿ ಅವುಗಳನ್ನು ಅನುಭವಿಸುವುದಕ್ಕೆ ಕಾರಣವಾಗುತ್ತದೆ . ಕೆಲವು ಮಂದಿ ಮಕ್ಕಳು ಹುಟ್ಟುತ್ತಲೇ ಶ್ರೀಮಂತರಾಗಿ ಹುಟ್ಟುತ್ತಾರೆ .

ಅಂದರೆ ಅವರಿಗೆ ಹುಟ್ಟಿದ ದಿನದಿಂದಲೂ ಏನು ಬೇಕು ಎಲ್ಲವೂ ದೊರೆಯುತ್ತಿರುತ್ತದೆ . ಚಿನ್ನ, ಬೆಳ್ಳಿ , ಆಸ್ತಿ, ಆಡಂಬರದ ಜೀವನ ಅವರಿಗೆ ಲಭಿಸುತ್ತದೆ . ಅವರಿಗೆ ಹುಟ್ಟಿನಿಂದಲೇ ಎಲ್ಲವೂ ಚೆನ್ನಾಗಿರುತ್ತದೆ . ಬಹಳ ಹಣ ಇರುವ ಮನೆಯಲ್ಲಿ ಹುಟ್ಟುತ್ತಾರೆ . ಮತ್ತು ಎಲ್ಲರೂ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ . ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯುತ್ತದೆ. ಅವರು ಬಹಳ ಚುರುಕು ತನದಿಂದ ಕೂಡ ಇರುತ್ತಾರೆ . ಅವರು ಓದುವುದು ತಲೆಗೆ ಹತ್ತುತ್ತದೆ .ಜೀವನದಲ್ಲಿ ಚೆನ್ನಾಗಿ ನೆಲೆಗೊಳ್ಳುತ್ತಾರೆ .

ಇನ್ನೂ ಕೆಲವು ಮಕ್ಕಳು ಕಡುಬಡತನದಲ್ಲಿ ಹುಟ್ಟುತ್ತಾರೆ . ಹಾಗೆಯೇ ಅವರನ್ನು ಲಾಲನೆ ಪಾಲನೆ ಮಾಡುವವರು ಕೂಡ ಇರುವುದಿಲ್ಲ .ಬಂಧು ಬಳಗ ಬಹಳ ಕಡಿಮೆ ಇರುತ್ತದೆ . ಹಣಕ್ಕಾಗಿ ಪರದಾಡುತ್ತಿರುತ್ತಾರೆ . ತಿನ್ನುವ ಊಟಕ್ಕೂ ಕೂಡ ಬಹಳಷ್ಟು ಅಲೆದಾಡುತ್ತಾರೆ . ಒಂದು ಸಮಯ ಊಟ ಸಿಕ್ಕರೆ ಸಾಕು ಎಂದು ಯೋಚನೆ ಮಾಡುತ್ತಿರುತ್ತಾರೆ . ಇನ್ನೂ ಕೆಲವರು ಅನೇಕ ರೀತಿಯ ಆಹಾರಗಳನ್ನು ತೆಗೆದು ಕೊಳ್ಳುತ್ತಿರುತ್ತಾರೆ . ಅವರ ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ .

ಇನ್ನು ಕೆಲವರು ತಮಗೆ ಎಷ್ಟು ಬೇಕೋ ಅಷ್ಟು ಆಹಾರವನ್ನು ತೆಗೆದುಕೊಳ್ಳುತ್ತಾರೆ ಆದರೂ ಸಹ ಆರೋಗ್ಯದ ಸಮಸ್ಯೆ ಕಾಡುತ್ತದೆ . ಯಾವಾಗಲೂ ಅನಾರೋಗ್ಯ ಪೀಡಿತರಾಗಿ ಇರುತ್ತಾರೆ . ಹೆಚ್ಚಾಗಿ ಔಷಧಿಗಳಿಂದಲೇ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ .ಆದರೆ ಇವೆಲ್ಲಾ ಹೇಗೆ ನಡೆಯುತ್ತವೆ ಎಂದರೆ , ಗರುಡ ಪುರಾಣದ ಪ್ರಕಾರ ನಮ್ಮ ಪೂರ್ವಜನ್ಮದ ನಮ್ಮ ಕರ್ಮ ಫಲಗಳು ಈ ಜನ್ಮದಲ್ಲಿ ನಮಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತದೆ ಎಂದು ಹೇಳುತ್ತಾರೆ . ಹಾಗೆಯೇ ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಭೂಮಿ ಮೇಲೆ ಜನಿಸುವ ಪ್ರತಿ ಮನುಷ್ಯನಿಗೂ ಆತ ಹುಟ್ಟಿದಾಗಿನಿಂದಲೂ ಸಾಯುವವರೆಗೂ ಅಂದರೆ ,

ಆತನ ಹುಟ್ಟಿಗಾಗಲಿ, ಮದುವೆಗಾಗಲಿ ಮತ್ತು ನಾಮಕರಣಕ್ಕಾಗಲಿ ಪ್ರತಿಯೊಂದಕ್ಕೂ ಕೂಡ ಗ್ರಹ ನಕ್ಷತ್ರಗಳು ಅವರು ಹುಟ್ಟಿದ ಗಳಿಗೆ ಮತ್ತು ತಿಂಗಳುಗಳು ಆಧರಿಸಿ ನಿರ್ಧರಿಸಬಹುದು. ಆದರೆ ಇಂತಹುಗಳು ನಡೆಯುತ್ತಲೇ ಇರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರಿಯಾಗಿ ಇರುತ್ತವೆ. ಆದ್ದರಿಂದ ಯಾವ ಯಾವ ತಿಂಗಳಲ್ಲಿ ಹುಟ್ಟುವ ಮಕ್ಕಳು ಹೆಚ್ಚಾಗಿ ಚುರುಕಾಗಿ ಇರುತ್ತಾರೆ. ಮತ್ತು ಎಂತಹ ಮನಸ್ಸು ತತ್ವ ಹೊಂದಿರುತ್ತಾರೆ ಎಂದು ತಿಳಿಯೋಣ .

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಜನಿಸುವ ಮಕ್ಕಳು ಹೆಚ್ಚು ಚುರುಕಾಗಿ ಇರುತ್ತಾರೆ. ಅವರು ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಯಾವಾಗಲೂ ಕೂಡ ತಂದೆ ತಾಯಿಗಳಿಗೆ ಕೀರ್ತಿಯನ್ನು ತಂದು ಕೊಡುತ್ತಾರೆ. ಅವರ ಬಾಲ್ಯದಿಂದಲೇ ಅವರ ಜೀವನಕ್ಕೆ ಅವರೇ ಅಧಿಪತಿಯಾಗಿ ಇರುತ್ತಾರೆ. ಅವರು ಯಾವುದೇ ಸಮಯದಲ್ಲಿ ಕೂಡ ಅವರು ತಂದೆ ತಾಯಿಗಳಿಗೆ ಹಾನಿಯಾಗುವ ಕೆಲಸವನ್ನು ಮಾಡುವುದಿಲ್ಲ . ಇಂತಹ ಮಕ್ಕಳು ಬಹಳ ಬುದ್ದಿವಂತರಾಗಿ ಇರುತ್ತಾರೆ. ಮತ್ತು ಅದೃಷ್ಟವನ್ನು ಹೊಂದಿರುತ್ತಾರೆ.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜನಿಸುವ ಮಕ್ಕಳಿಗೆ ಕೋಪವು ಅಧಿಕವಾಗಿರುತ್ತವೆ. ಇವರು ತಾವು ಮಾಡುವ ಕೆಲಸವೇ ಸರಿ ಎಂದು ವರ್ತಿಸುತ್ತಾರೆ. ಅವರು ಮಾಡುವ ಕೆಲಸದಲ್ಲಿ ಮೆಚ್ಚುಗೆಯನ್ನು ಪಡೆಯಬೇಕೆಂಬ ಆಸೆಯಿಂದ ಎಷ್ಟು ದೂರ ಬೇಕಾದರೂ ಹೋಗುತ್ತಾರೆ. ಅಥವಾ ಕಷ್ಟ ಪಡುತ್ತಾರೆ. ಇಂತಹವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸತ ಪ್ರಯತ್ನ ಮಾಡುತ್ತಾರೆ. ಅವರ ಕೆಲಸವನ್ನು ಅವರೇ ನೋಡಿಕೊಳ್ಳುತ್ತಾರೆ. ಅಕ್ಕ ಪಕ್ಕದವರ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರಿಗೆ ಪ್ರತಿಯೊಂದೂ ಕೂಡ ಕ್ರಮಬದ್ದವಾಗಿ ಮತ್ತು ನಿಯಮಬದ್ಧವಾಗಿ ಇರಬೇಕು. ಇಲ್ಲವೆಂದರೆ ಇವರು ಹೆಚ್ಚಾಗಿ ಕೋಪಿಸಿಕೊಳ್ಳುತ್ತಾರೆ.

ಇನ್ನೂ ಮೇ ಮತ್ತು ಜೂನ್ ತಿಂಗಳಲ್ಲಿ ಹುಟ್ಟುವ ಮಕ್ಕಳು ಬಹಳ ಬುದ್ದಿವಂತರಾಗಿ ಇರುತ್ತಾರೆ. ಅವರ ಮನಸ್ಸು ಬಹಳ ಸ್ವಚ್ಚವಾಗಿ ಇರುತ್ತದೆ. ಆದರೆ ಇವರ ಅದೃಷ್ಟವು ಇವರಿಗೆ ಸಹಾಯ ಮಾಡುವುದಿಲ್ಲ. ಅದೃಷ್ಟವೂ ಯಾವಾಗಲೂ ಇವರಿಗೆ ಎರಡು ಹೆಜ್ಜೆ ದೂರದಲ್ಲಿ ಇರುತ್ತದೆ. ಇವರು ಇತರರಿಗೆ ಹೆಚ್ಚಾಗಿ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ . ಆದರೆ ಇವರ ಒಳ್ಳೆಯ ತನವೇ ಇವರಿಗೆ ವಿರುದ್ಧವಾಗುತ್ತದೆ. ಇವರು ಯಾವಾಗಲೂ ಅಕ್ಕ ಪಕ್ಕದವರಿಂದಲೇ ಮೋಸ ಹೋಗುತ್ತಾರೆ. ಮತ್ತು ಅವರಿಂದಲೇ ದುಃಖಕ್ಕೆ ಗುರಿಯಾಗುತ್ತಾರೆ. ಇವರು ಅವರ ಸ್ವಂತ ಜೀವನದ ಬಗ್ಗೆ ಅವರೇ ನಿರ್ಧಾರ ಮಾಡುತ್ತಾ , ಅವರ ಜೀವನವನ್ನು ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಬೇರೆಯವರು ಮಾಡಿದ ಕೆಲಸಕ್ಕೂ ಕೂಡ ದುಃಖ ಪಡುವ ಪರಿಸ್ಥಿತಿ ಇವರ ಜೀವನದಲ್ಲಿ ಹೆಚ್ಚಾಗಿ ಎದುರಾಗುತ್ತದೆ.

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜನಿಸಿದ ಮಕ್ಕಳು ಬಹಳ ಅದೃಷ್ಟವಂತರು, ಮತ್ತು ಅವರ ತಂದೆ ತಾಯಿಗಳು ಅದಕ್ಕಿಂತಲೂ ಅದೃಷ್ಟವಂತರೂ ಎಂದು ಹೇಳಬಹುದು. ಏಕೆಂದರೆ , ಇವರು ದಯೆ ಮತ್ತು ಕರುಣೆಯನ್ನು ಹೊಂದಿರುತ್ತಾರೆ. ಇವರು ತಂದೆ ತಾಯಿಗಳಿಗೆ ಯಾವುದೇ ರೀತಿಯ ಸೇವೆಗಳನ್ನು ಕೂಡ ಮಾಡಲು ತಯಾರಾಗಿರುತ್ತಾರೆ. ತಂದೆ ತಾಯಿಗಳ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ, ಹಾಗೆಯೇ ಇವರು ತಮ್ಮ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಮತ್ತು ಹೆಚ್ಚಾಗಿ ಧರ್ಮದ ಮಾರ್ಗದಲ್ಲಿ ನಡೆಯುತ್ತಾರೆ. ಅನ್ಯಾಯವನ್ನು ಸಹಿಸುವುದಿಲ್ಲ . ಜೀವನದಲ್ಲಿ ಧೈರ್ಯವಾಗಿ ಮುನ್ನುಗ್ಗುತ್ತಾ ತಂದೆ ತಾಯಿಗಳ ಜೊತೆ ಜೀವನ ಕಳೆಯಬೇಕು ಎಂದು ಆಶಿಸುತ್ತಾರೆ.

ಇನ್ನೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಜನಿಸಿದ ಮಕ್ಕಳು ಜಾತಕವಂತರು. ಇವರು ಧರ್ಮದ ಮಾರ್ಗವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ದೈವಭಕ್ತಿ ಹೆಚ್ಚಾಗಿ ಇರುತ್ತದೆ. ಇವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇರುತ್ತದೆ. ಇವರ ಜೀವನದಲ್ಲಿ ಬಹಳ ಕಷ್ಟಗಳು ಎದುರಾಗುತ್ತವೆ. ಆದರೆ ಆ ಭಗವಂತನ ಕೃಪೆ ಇವರ ಮೇಲೆ ಸದಾ ಕಾಲ ಇರುತ್ತದೆ. ಆದ್ದರಿಂದ ಇವರ ಒಳ್ಳೆಯ ಜೀವನವನ್ನು ಮುನ್ನೆಡೆಸುತ್ತಾರೆ. ಹಾಗೆಯೇ ಇವರು ಹಿರಿಯರನ್ನು ಗೌರವಿಸುತ್ತಾ , ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಓದಿನಲ್ಲಿ ಒಳ್ಳೆಯ ಅಭಿವೃದ್ಧಿ ಪಡೆಯುತ್ತಾರೆ. ಇವರಿಗೆ ಹೆಚ್ಚಾಗಿ ಕಷ್ಟಗಳು ಬರುತ್ತವೆ . ಆದರೆ ಅವುಗಳಿಗೆ ಎದರದೇ ದೇವರ ಮೇಲೆ ಭಾರ ಹಾಕಿ ಅವರ ಜೀವನದಲ್ಲಿ ಧೈರ್ಯವಾಗಿ ಮುಂದೆ ಸಾಗುತ್ತಾರೆ.

ಕೊನೆಯದಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜನಿಸುವ ಮಕ್ಕಳು ಬಹಳ ವಿಧವಾದ ತೊಂದರೆಗಳಿಗೆ ಗುರಿಯಾಗುತ್ತಾರೆ . ಆದರೆ ಅವರಿಗೆ ದೇಶ ಭಕ್ತಿ ಹೆಚ್ಚಾಗಿರುತ್ತದೆ .ಇತರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ . ತಮಗೆ ಹೊಟ್ಟೆ ಹಸಿವಿದ್ದರೂ, ಬೇರೆಯವರ ಹೊಟ್ಟೆ ತುಂಬಿಸುವ ಗುಣ ಇರುತ್ತದೆ. ಇವರು ಇತರರಿಗೆ ಮಾಡುವ ಸಹಾಯವೇ ಬೇರೆ ರೂಪದಲ್ಲಿ ಬಂದು ಅವರ ಕಷ್ಟಗಳಿಂದ ಅವರನ್ನು ಕಾಪಾಡುತ್ತದೆ. ಇವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇರುತ್ತದೆ.

ತಂದೆ ತಾಯಿಗಳನ್ನು ಇವರು ಗೌರವಿಸುತ್ತಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಇವರಿಗೆ ದೇಶಭಕ್ತಿ ಇರುತ್ತದೆ. ಇವರು ಹೆಚ್ಚಾಗಿ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ . ಹಾಗೆಯೇ ಹೆಚ್ಚಾಗಿ ಮೊಂಡು ತನವನ್ನು ಹೊಂದಿರುತ್ತಾರೆ . ತಾವು ಅಂದುಕೊಂಡಿದ್ದನ್ನು ಸಾಧಿಸಬೇಕೆಂಬ ಹಠ ಇವರಲ್ಲಿ ಇರುತ್ತದೆ . ತಂದೆ ತಾಯಿಗಳ ಆಶೀರ್ವಾದದಿಂದ ಜೀವನ ನಡೆಸಬೇಕೆಂದು ಬಯಸುವ ಶ್ರೇಷ್ಠ ಗುಣ ಅವರದು .

ಆದರೆ ಯಾವ ಯಾವ ತಿಂಗಳಿನಲ್ಲಿ ಜನಿಸಿದ ಮಕ್ಕಳ ಸಿದ್ಧಾಂತಗಳು ಹೇಗಿರುತ್ತವೆ ಎಂದು ಮತ್ತು ಅವರ ಭವಿಷ್ಯ ಹೇಗಿರಬಹುದೆಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ತಿಳಿಯಬಹುದು. ಈ ವಿಧವಾಗಿ ಬಹಳಷ್ಟು ಸಾರಿ ನಮಗೆ ತಿಳಿದೋ , ತಿಳಿಯದೆಯೋ , ಒಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಹಾಗೆ ಮಾಡದೆ ನಮ್ಮ ಮಕ್ಕಳ ಆಲೋಚನೆಗಳು ಯಾವ ರೀತಿ ಇರುತ್ತವೆಯೋ , ಅವುಗಳನ್ನು ನಾವು ಗ್ರಹಿಸಿ, ಅವುಗಳಿಗೆ ತಕ್ಕ ಹಾಗೇ ಸರಿಯಾದ ವಿಧಾನದಲ್ಲಿ ಅವರ ಜೊತೆಯಲ್ಲಿ ಬೆರೆತು, ಅವರನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿದರೆ, ಅವರೂ ಕೂಡ ಅವರ ಜೀವನದಲ್ಲಿ ಮುಂದೆ ಸಾಗಿ ಅವರ ಆಶಯವನ್ನು ಈಡೇರಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗಿದೆ .

Leave A Reply

Your email address will not be published.