ದರಿದ್ರ ಮಹಿಳೆಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ದರಿದ್ರ ಮಹಿಳೆಯರ ಲಕ್ಷಣಗಳು ಯಾವುವು ಎಂಬುದನ್ನು ನೋಡೋಣ .
ಇಂತಹ ಮಹಿಳೆಯರಿಂದ ಮನೆಗೆ ಅದೃಷ್ಟ ಬರುವುದಿಲ್ಲ . 1 . ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು . ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ . ಏನೋ ಒಂದು ಅಡುಗೆ ಮಾಡಿ ಇಟ್ಟು ದಿನ ಟಿವಿ ಮೊಬೈಲ್ ನೋಡುವುದು . ಮತ್ತು ತಿನ್ನುವುದು , ಮಲಗುವುದು ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ . ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ನೋಡಿ ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕೆಲವೊಬ್ಬರು ಇರುತ್ತಾರೆ .

2 . ಮಾತಿನಲ್ಲಿ ಇತಿಮಿತಿ ಇರುವುದಿಲ್ಲ . ಕೆಲವೊಬ್ಬರ ಆಡುವ ಮಾತಿನಲ್ಲಿ ಇತಿಮಿತಿ ಇರುವುದಿಲ್ಲ . ಚಿಕ್ಕವರು ದೊಡ್ಡವರು ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ . ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡುತ್ತಿರುತ್ತಾರೆ ಗಂಡನಿಗೂ ಕೂಡ ಬೆಲೆ ಕೊಡುವುದಿಲ್ಲ . ಇತ್ತೀಚಿಗೆ ಗಂಡನನ್ನು ಹೋಗು ಬಾ ಎಂದು ಕರೆಯುತ್ತಾರೆ . ಫ್ರೆಂಡ್ ರೀತಿ ನೋಡುತ್ತಾರೆ . ಅದು ನಿಜ ಹೋಗು ಬಾ ಹಲವಾರು ರೀತಿಯಲ್ಲಿ ಉಚ್ಚರಿಸಬಹುದು ಆದರೆ 10 ಜನರ ಮಧ್ಯದಲ್ಲಿ ಇರುವಾಗ ಮಾತನಾಡುವ ರೀತಿ ಬೇರೆ ಇರಬೇಕು .

3 . ದೇವರ ಬಗ್ಗೆ ಭಕ್ತಿ ಇರುವುದಿಲ್ಲ . ದೇವರ ಪೂಜೆ , ಹಬ್ಬ ಹರಿದಿನ , ಆಚಾರ – ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾರೆ .4 . ವ್ಯರ್ಥವಾಗಿ ಸಮಯ ಕಳೆಯುವುದು , ಕೆಲವೊಬ್ಬರು ಟಿವಿ ಮುಂದೆ ಅಥವಾ ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ಸಮಯ ಕಳೆದಿದ್ದೆ ಅವರಿಗೆ ಗೊತ್ತಾಗುವುದಿಲ್ಲ . ಮನೆಗೆ ಯಾರು ಬಂದರು, ಯಾರು ಹೋದರು , ಗಂಡ ಆಫೀಸ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ .

ಅವರಿಗೆ ಒಂದು ಗ್ಲಾಸ್ ನೀರು ಕೊಡಬೇಕು .ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು ಇದು ಯಾವುದು ಅರಿವಿಲ್ಲದೆ ಟಿವಿ ಮುಂದೆ ಕೂತಿರುತ್ತಾರೆ . ಧಾರಾವಾಹಿಯ ಒಂದು ಸೀನ್ ಕೂಡ ಮಿಸ್ ಮಾಡುವುದಿಲ್ಲ . 5 .ಕಷ್ಟ ಸುಖದ ಅರಿವಿಲ್ಲದೆ ಇರುವುದು .ಕೆಲವೊಬ್ಬರಿಗೆ ಗಂಡ ಎಷ್ಟು ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ ಎಂಬುವ ಅರಿವಿರುವುದಿಲ್ಲ . ಒಟ್ಟಿನಲ್ಲಿ ಅವರ ಬಯಕೆಗಳು ಈಡೇರಬೇಕು .

6 . ಬೇಜವಾಬ್ದಾರಿ ಮಲಗಲು ಹೇಳಲು ನಿಗದಿತ ಸಮಯವಿಲ್ಲ ಅಡುಗೆ ಮಾಡುವುದರಲ್ಲಿ ತಿನ್ನುವುದರಲ್ಲೂ ಇತಿಮಿತಿ ಇರುವುದಿಲ್ಲ . ಆಹಾರ ವಿದ್ಯುತ್ ನೀರು ಯಾವುದಕ್ಕೂ ಗಮನ ಕೊಡುವುದಿಲ್ಲ .ಇತಿಮಿತಿಯಾಗಿ ಬಳಸುವುದಿಲ್ಲ . ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಗ್ರಿಗಳ ಬಗ್ಗೆ ಅರಿವಿರುವುದಿಲ್ಲ .ಹುಳ ಬೀಳಬಹುದು , ಕೊಳೆತು ಹೋಗಬಹುದು , ಹಾಳಾಗಬಹುದು ಎಂಬ ಅರಿವಿಲ್ಲದೆ ಎಲ್ಲವನ್ನು ವ್ಯರ್ಥ ಮಾಡುತ್ತಾರೆ .
ಹೆಣ್ಣು ಮನೆಯ ಮಹಾಲಕ್ಷ್ಮಿ ಸಂಸಾರದ ಕಣ್ಣು ಮನೆಯ ಬೆಳಕು ಅವಳು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಮನೆಯನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಸಾಧ್ಯ.

Leave a Comment