ಜನ್ಮ ಸಂಖ್ಯೆ 1 ಯಾವುದೇ ತಿಂಗಳಿನ 1, 10, 19 ಮತ್ತು 28 ದಿನಾಂಕದಂದು ಜನಿಸಿದವರ 2023 ವರ್ಷ ಭವಿಷ್ಯ ಹೇಗಿರಲಿದೆ? ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಯಾವುದೇ ತಿಂಗಳಿನ 1, 10, 19 ಮತ್ತು 28ನೇ ದಿನಾಂಕದಲ್ಲಿ ಹುಟ್ಟಿದ್ದರೆ ಅಂತಹವರ ಜನ್ಮ ಸಂಖ್ಯೆ 1 ಆಗುತ್ತದೆ. ಇವರ ಅಧಿಪತಿ ರವಿ. ಅಂದರೆ ಸೂರ್ಯ. ಜನ್ಮ ಸಂಖ್ಯೆ 1 ಆಗಿದ್ದರೆ ಅಂತಹವರು ಎಲ್ಲಾ ದುಬಾರಿ ವಸ್ತುಗಳನ್ನು ಬಳಸುತ್ತಾರೆ. ಬ್ರ್ಯಾಂಡೆಡ್ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಶ್ರೀಮಂತ ಮತ್ತು ಅನುಕೂಲಸ್ಥ ಮನೆಗಳಲ್ಲಿ ಇವರು ಜನಿಸುತ್ತಾರೆ. ಒಂದು ವೇಳೆ ಇವರು ಜನಿಸುವ ಮುನ್ನ ಆ ಮನೆಯಲ್ಲಿ ಯಾವುದೇ ಅನುಕೂಲತೆ ಇಲ್ಲದೇ ಇದ್ದರೂ ಕೂಡ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸಂಖ್ಯೆಯಲ್ಲಿ ಜನಿಸಿದ ನಂತರ ಆ ಮನೆಯಲ್ಲಿ ಲಕ್ಷ್ಮಿ ಆಗಮನವಾಗುತ್ತದೆ. ಒಂದೊಂದಾಗಿ ಎಲ್ಲಾ ಸೌಲಭ್ಯಗಳು ದೊರೆಯುವುದಕ್ಕೆ ಆರಂಭವಾಗುತ್ತದೆ. ಆದ್ದರಿಂದ ಜನ್ಮ ಸಂಖ್ಯೆ 1 ಹೊಂದಿದ್ದವರು ಮನೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿರುತ್ತಾರೆ. ನಿಮ್ಮ ಜನ್ಮ ಸಂಖ್ಯೆಯ ಅನುಸಾರ 2023ರಲ್ಲಿ ನಿಮ್ಮ ಜೀವನ ಹೇಗಿರುತ್ತೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಸಂಖ್ಯೆ 1 ಎನ್ನುವುದು 1, 10, 19, ಮತ್ತು 28ರಂದು ಜನಿಸಿದ ಜನರ ಸಂಖ್ಯೆಯಾಗಿದ್ದು ಈ ಸಂಖ್ಯೆಯು ಸೂರ್ಯ ಮತ್ತು ಸ್ವಾತಂತ್ರವನ್ನು ಪ್ರತಿನಿಧಿಸುತ್ತದೆ. ಸೂರ್ಯನು ಬ್ರಹ್ಮಾಂಡವನ್ನು ಬೆಳೆಗಿಸುವ ಶಕ್ತಿ ನಿಮ್ಮ ವ್ಯಕ್ತಿತ್ವಕ್ಕೆ ಜೀವ ನೀಡುವವನು ಸೂರ್ಯ ಎಂದು ಹೇಳಲಾಗುತ್ತದೆ.
ಈ ಸಂಖ್ಯೆಯ ಜನರು ಬಹಳ ಶಕ್ತಿವಂತರು ಎಂದು ಹೇಳಬಹುದು. ಈ ಸಂಖ್ಯೆಯ ಜನರು ಸಾಕಷ್ಟು ರಚನಾತ್ಮಕ ಗುಣ ಮತ್ತು ಉತ್ತಮ ನಿರ್ವಹಣ ಸ್ವಾತಂತ್ರವನ್ನು ಹೊಂದಿರುತ್ತಾರೆ. ಅಲ್ಲದೇ ಸಂದರ್ಭಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ. ಎಲ್ಲಾ ಕ್ಷೇತ್ರದಲ್ಲೂ ಈ ನಂಬರ್‍ನಲ್ಲಿ ಜನಿಸಿದವರು ಇರುತ್ತಾರೆ. ಈ 1 ಎಂಬ ಸಂಖ್ಯೆಯು ಅದೃಷ್ಟದ ಸಂಖ್ಯೆಯಾಗಿದೆ. 2023ರಲ್ಲಿ ವೃತ್ತಿ ಮತ್ತು ಹಣಕಾಸಿಗೆ ಸಂಬಂಧಪಟ್ಟಂತೆ ಸಮನಾದ ಬೆಳವಣಿಗೆಯನ್ನು ಹೊಂದಿರುತ್ತಾರೆ. ನಿಮ್ಮ ಗುರಿಗಳನ್ನು ಸಾಧಿಸಲು ಕೆಲವು ಸವಾಲುಗಳನ್ನು ಎದುರಿಸಬಹುದು.
ಈ ವರ್ಷ ಯಶಸ್ವಿಯಾಗುವುದಕ್ಕೆ ವರ್ಷದ ದ್ವಿತೀಯಾರ್ಧದಲ್ಲಿ ಇನ್ನು ಹೆಚ್ಚಿನ ಪ್ರಯತ್ನವನ್ನು ಮಾಡಬೇಕು. ದೀರ್ಘಕಾಲದಿಂದ ಪ್ರಗತಿಯಲ್ಲಿರುವ ಕೆಲಸಗಳನ್ನು ಮಾರ್ಚ್ ತಿಂಗಳಿನಲ್ಲಿ ಪ್ರಾರಂಭಿಸಬಹುದು. ಜೂನ್ ಮತ್ತು ನಂತರದ ತಿಂಗಳುಗಳ ನಂತರ ಸ್ವಲ್ಪ ಲಾಭ ಹೆಚ್ಚಾಗುತ್ತದೆ. ಇಡೀ ವರ್ಷದಲ್ಲಿ ನೀವು ಬಜೆಟ್ ಹಾಕಿಕೊಳ್ಳುವ ಅಗತ್ಯವಿದೆ. ಮತ್ತು ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಬಹಳ ಅಗತ್ಯ. ಈ ವರ್ಷ ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಒಟ್ಟಾರೆಯಾಗಿ ಸಣ್ಣಪುಟ್ಟ ಏರಿಳಿತಗಳು ಮಾತ್ರ ಇರುತ್ತದೆ. ಪ್ರೀತಿ ಮತ್ತು ಕುಟುಂಬದ ವಿಚಾರÀಕ್ಕೆ ಬಂದರೆ ಈ ವರ್ಷ ಬಹಳ ಸಂತೋಷದ ವರ್ಷವಾಗಿರುತ್ತದೆ.
ನಿಮ್ಮ ಸಂಗಾತಿಯ ಜೊತೆ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಕಳೆಯಬೇಕು. ಆದರೆ ವರ್ಷದ ಮಧ್ಯದಲ್ಲಿ ತಪ್ಪು ತಿಳುವಳಿಕೆಗಳಿಂದ ಗೊಂದಲ ಉಂಟಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ನಿಮಗೆ ಸರಿಯಾದ ಮಾಹಿತಿ ಇಲ್ಲದೇ ಇದ್ದರೆ ಅಂತಹ ವಿಚಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಂಬಂಧ ಹಾಳಾಗುವುದು ಸುಲಭ ಆದರೆ ನಂಬಿಕೆಯನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಆದ್ದರಿಂದ ಯಾವುದೇ ಸಮಸ್ಯೆಯನ್ನು ತಪ್ಪಿಸುವುದಕ್ಕೆ ಸಾಧ್ಯವಾದಷ್ಟು ಎಲ್ಲಾ ಸಂಗತಿಗಳನ್ನು ತಿಳಿದುಕೊಂಡು ನಂತರ ನಿರ್ಧಾರ ಮಾಡಿ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅವಿವಾಹಿತರಿಗೆ ಕಂಕಣ ಭಾಗ್ಯ ಸಿಗುತ್ತದೆ. ತಂತ್ರಜ್ಞಾನ, ವಿಜ್ಞಾನ, ಸಂಶೋಧನೆ, ತರಭೇತಿ, ಜ್ಯೋತಿಷ್ಯಕೇಂದ್ರದ ವಿದ್ಯಾರ್ಥಿಗಳಿಗೆ ಈ ವರ್ಷ ಬಹಳ ಒಳ್ಳೆಯದಾಗುತ್ತದೆ. ಸರ್ಕಾರಿ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿರುವವರು ಅನೇಕ ಸವಾಲುಗಳನ್ನು ಎದುರಿಸಬಹುದು ಆದರೆ ಈ ಸವಾಲುಗಳನ್ನು ಸರಿಯಾಗಿ ಎದುರಿಸಿದರೆ ಮಾತ್ರ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ನಡೆಸುತ್ತಿರುವ ವಿದ್ಯಾರ್ಥಿಗಳು ಅರ್ಧವರ್ಷದ ನಂತರ ಪರೀಕ್ಷೆಗೆ ಹಾಜರಾದರೆ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ವಿದ್ಯಾರ್ಥಿಗಳು ಬಯಸಿದ್ದನ್ನು ಪಡೆಯಲು ಈ ವರ್ಷ ಸಾಧ್ಯವಾಗುತ್ತದೆ. ಆದರೂ ಸಹ ನೀವು ಹೆಚ್ಚು ಜಾಗರೂಕರಾಗಿರಬೇಕು. ಆದಷ್ಟು ಕೆಟ್ಟ ಜನರ ಸಹವಾಸವನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅದು ವೃತ್ತಿಜೀವನವನ್ನು ಹಾಳುಮಾಡುತ್ತದೆ. ಹಾಗಾಗಿ ನಿಮ್ಮ ಮಾರ್ಗದರ್ಶಕರು ಮತ್ತು ಪೋಷಕರಿಂದ ಸಲಹೆಯನ್ನು ಪಡೆಯಿರಿ. ಜನ್ಮ ಸಂಖ್ಯೆ 1 ಹೊಂದಿರುವವರು ಬಲಗೈಯಲ್ಲಿ ಕಿತ್ತಳೆಬಣ್ಣದ ದಾರವನ್ನು ಧರಿಸುವುದರಿಂದ 2023ರಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸೂರ್ಯದೇವನಿಗೆ ಅಘ್ರ್ಯ ನೀಡಿ, ಹಳದಿ, ಕೇಸರಿ ನಿಮ್ಮ ಅದೃಷ್ಟದ ಬಣ್ಣವಾಗಿದ್ದು, ಭಾನುವಾರ, ಗುರುವಾರ ನಿಮ್ಮ ಅದೃಷ್ಟದ ವಾರವಾಗಿರುತ್ತದೆ.
1 ಮತ್ತು 9 ನಿಮ್ಮ ಅದೃಷ್ಟದ ಸಂಖ್ಯೆಗಳಾಗಿರುತ್ತದೆ. ನಿಮ್ಮ ಅದೃಷ್ಟದ ದಿಕ್ಕು ಪೂರ್ವವಾಗಿರುತ್ತದೆ. 2023 ರ ಹೊಸ ವರ್ಷ ಒಟ್ಟು ಸಂಖ್ಯೆ 7 ಆಗಿದ್ದು, ಅದು ಕೇತುವಿನ ವರ್ಷವಾಗಿದ್ದು, ನಮಗೆಲ್ಲಾ ಗೊತ್ತಿರುವ ಹಾಗೆ ಪ್ರಕೃತಿಯನ್ನು ನಿಯಂತ್ರಿಸುವ ಕೆಲಸವನ್ನು ಸೂರ್ಯ ಮಾಡುತ್ತಾನೆ. ಆದರೆ ಅದಕ್ಕೆ ವಿರುದ್ಧವಾದ ಕೆಲಸವನ್ನು ಕೇತು ಮಾಡುತ್ತಾನೆ. ಅಂದರೆ ಕೇತು ಸೋಮಾರಿಯಾಗಿರುತ್ತಾನೆ. ಈ ವರ್ಷ ಇವರಿಗೆ ವ್ಯಾಪಾರ ವ್ಯವಹಾರ ಮಾಡುವವರಿಗೆ ನಿಮ್ಮ ಸ್ವಭಾವ ಮುಖ್ಯವಾಗಿರುತ್ತದೆ. ಸೂರ್ಯ ನಿಮ್ಮನ್ನು ಹೊಸ ಕೆಲಸ ಮಾಡಲು ಪ್ರೇರೇಪಿಸುತ್ತಾನೆ. ಆದರೆ ಕೇತು ಆದದ್ದಾಗಲಿ ಎಂಬ ಮನಸ್ಥಿತಿಯನ್ನು ಕೊಡುತ್ತಾನೆ.
ನೀವು ಮೊದಲು ನಿಮ್ಮ ಸ್ವಭಾವನ್ನು ಮೊದಲು ನಿಯಂತ್ರಿಸಬೇಕು. ಸೋಮಾರಿತನವನ್ನು ಹೋಗಲಾಡಿಸಬೇಕು. ಹಾಗಾಗಿ ಮಾತಿನಲ್ಲಿ ಹಿಡಿತ ಸಾಧಿಸಬೇಕು. ನಿಮಗೆ ನಷ್ಟ ಸಂಭವಿಸಿದರೆ ಕಾರಣ ನಿಮ್ಮ ಮಾತು ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಅನಗತ್ಯ ಮಾತನಾಡಿ ನಷ್ಟವನ್ನು ತಂದುಕೊಳ್ಳಬೇಡಿ. ಆದರೆ ಈ ಬಗ್ಗೆ ಹೆಚ್ಚಾಗಿ ಚಿಂತಿಸುವ ಅಗತ್ಯವಿಲ್ಲ. 2023ರಲ್ಲಿ ವ್ಯಾಪಾರದಲ್ಲಿ ಲಾಭವನ್ನು ಕಾಣುತ್ತೀರಿ. ಹಾಗೆಯೇ ಕೋರ್ಟ್ ಕೇಸ್‍ನಲ್ಲಿ ಜಯವನ್ನು ಕಾಣುತ್ತೀರಿ. ಪೂರ್ವಜರ ಆಸ್ತಿ ವಿಷಯದಲ್ಲಿ ಜಯ ಸಿಗುತ್ತದೆ. ಜನವರಿ, ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳು ವ್ಯಾಪಾರಕ್ಕೆ ಒಳ್ಳೆಯದಲ್ಲ.
ಈ ವರ್ಷ ಯಾವುದೇ ಹೂಡಿಕೆ ಮಾಡಬೇಕಾದರೂ ಈ ಮೂರು ತಿಂಗಳು ಮಾಡಬೇಡಿ. ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ. ಇವರಿಗೆ ಈ ವರ್ಷ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಜೊತೆಗೆ ಈ ವರ್ಷ ನಿಮ್ಮ ಆಪ್ತರನ್ನು ಪರೀಕ್ಷಿಸುವ ಸಮಯವಾಗಿರುತ್ತದೆ. ನಿಮ್ಮ ಕಷ್ಟಸುಖಗಳಿಗೆ ಯಾರು ಇದ್ದಾರೆ ಯಾರು ಇಲ್ಲ ಎನ್ನುವುದು ತಿಳಿಯುತ್ತದೆ. ಪ್ರೀತಿ ವಿಷಯದಲ್ಲಿ ಕಾಳಜಿ ವಹಿಸುವುದು ಅಗತ್ಯ. ಈ ಮಧ್ಯೆ ಸಂಗಾತಿಯ ನಡುವೆ ಜಗಳವಾಗಿದ್ದರೆ ಅದು ಮುಂದುವರೆಯುವ ಸಾಧ್ಯತೆ ಇದೆ.
ಹೊಸ ವರ್ಷ ಯಾವುದೇ ಅನಗತ್ಯ ವಿಚಾರಕ್ಕೆ ಸಿಲುಕಬೇಡಿ. ಮಾನಸಿಕ ಸಮಸ್ಯೆಗಳು ಹೆಚ್ಚಾಗುವ ಲಕ್ಷಣಗಳಿವೆ. ಸೂರ್ಯ ಮತ್ತು ಕೇತು ಕಾರಣದಿಂದಾಗಿ ಗೊಂದಲವನ್ನು ಅನುಭವಿಸುತ್ತೀರಿ ಆದರೆ ಸೂರ್ಯ ನಿಮ್ಮ ಜೊತೆ ಇರುವುದರಿಂದ ಈ ಸ್ಥಿತಿಯಿಂದ ಬಹಳ ಬೇಗ ಹೊರಬರಬಹುದು. ನಿಮ್ಮ ಮೇಲೆ ವಿಶ್ವಾಸವಿಟ್ಟುಕೊಳ್ಳುವುದು ಉತ್ತಮ. ಈ ವರ್ಷ ನೀವು ತುಂಬಾ ಸಾಧನೆಯನ್ನು ಮಾಡುತ್ತೀರಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755