ಧನು ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ಡಿಸೆಂಬರ್ ತಿಂಗಳಿನ ಧನುರ್ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ತೃತೀಯದಲ್ಲಿರುವ ಶನಿಯು ಸ್ವಲ್ಪ ಬಿಡುಗಡೆಯನ್ನು ಕೊಟ್ಟಿದ್ದಾನೆ. ಪಂಚಮದಲ್ಲಿರುವ ಗುರುವಿನಿಂದ ವಾತಾವರಣ ಸ್ವಲ್ಪ ತಿಳಿಯಾಗಿದೆ ಎನ್ನುವುದಾದರೂ ಡಿಸೆಂಬರ್ ನಲ್ಲಿ ಸ್ವಲ್ಪ ತಾಳ್ಮೆ ಬೇಕಾಗುತ್ತದೆ. ಧನುಸ್ ಸ್ವಲ್ಪ ಬಾಗಿಕೊಂಡಿದೆ ಆದರೇ ಧನುಸ್ ರಾಶಿಯವರು ಯಾರಿಗೂ ಬಾಗುವುದಿಲ್ಲ. ಆದರೇ ಈಗ ಬಾಗುವ ಪರಿಸ್ಥಿತಿ ಬಂದಿದೆ ಅಂದ ಮಾತ್ರಕ್ಕೆ ಬೇರೆ ಯಾರಿಗೂ ಅಲ್ಲ ದೇವರಿಗೆ ಬಾಗಿದರೇ ಸಾಕು. ನಿಮಗೆ ಇರುವ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.

ಡಿಸೆಂಬರ್ ತಿಂಗಳಿನಲ್ಲಿ ತಾಳ್ಮೆಯಿಂದ ಇದ್ದರೇ ಮುಂಬರುವ ದಿನಗಳು ನಿಮಗೆ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ರಾಶ್ಯಾಧಿಪತಿಯಾದ ಗುರುವು ನಿಮಗೆ ವಕ್ರನಾಗಿದ್ದಾನೆ ಆದರೇ ಕೆಲವೊಂದು ಗ್ರಹಗಳು ನಿಮಗೆ ಒಳ್ಳೆಯದ್ದನ್ನೇ ಮಾಡುತ್ತವೆ. ನಿಮ್ಮ ಗುರಿಯನ್ನ ಮುಟ್ಟಲು ಬೇರೆ ಗ್ರಹಗಳು ಸಹಾಯ ಮಾಡುತ್ತವೆ. ಟೆನ್ಷನ್ ಬೇಡ, ನೆಗೆಟಿವ್ ವಿಚಾರ ಮಾಡಬೇಡಿ ಎಲ್ಲವೂ ಸರಿಹೋಗುತ್ತದೆ. ನಿಮ್ಮ ತಾಳ್ಮೆಯನ್ನ ಪರೀಕ್ಷೆ ಮಾಡುವ ಸಂದರ್ಭ ಎದುರಾಗಬಹುದು ಅದು ನಿಮಗೆ ಕಷ್ಟವನ್ನು ಕೂಡ ಕೊಡಬಹುದು

ಇದರಿಂದ ನಿಮಗೆ ಹತಾಷೆ ಉಂಟಾಗುತ್ತದೆ. ನೀವು ಮಾಡಬೇಕಾದ ಕೆಲಸ ಆಗಿಲ್ಲ ಎಂದಾಗ ಟೆನ್ಷನ್ ಹೆಚ್ಚಾಗುತ್ತದೆ ಇದರಿಂದ ನಿಮ್ಮ ದೇಹದಲ್ಲಿ ಒತ್ತಡ ಹೆಚ್ಚಾಗುವುದರಿಂದ ದೇಹದಲ್ಲಿ ಉಷ್ಣತೆ ಉಂಟಾಗುತ್ತದೆ. ನಿಮಗೆ ಸೋಲಿನ ಮನೋಭಾವನೆ ಮತ್ತು ಅನುಮಾನಗಳು ಹೆಚ್ಚಾಗುತ್ತವೆ. ನೀವು ಹೆಚ್ಚು ಕೆಲಸ ಮಾಡುವವರು ಆಗಿರುತ್ತೀರ ನಿಮ್ಮಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. ಬ್ಯುಜಿನೆಸ್ ಮತ್ತು ಫ್ರಿಲಾನ್ಸರ್ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಇವರುಗಳಿಗೆ ಕೆಲಸಗಳು ಬರುತ್ತಲೇ ಇರುತ್ತದೆ

ಬಂದ ಹಾಗೇ ಮತ್ತಷ್ಟು ಕೆಲಸವನ್ನು ತೆಗೆದುಕೊಳ್ಳೋಣ ಎನಿಸುತ್ತದೆ, ಕಾರಣ ಕಮಿಟ್ ಮೆಂಟ್ಸ್ ಗಳು. ಈ ಕಮಿಟ್ ಮೆಂಟ್ಸ್ ಗಳಿಂದ ಒತ್ತಡ ಈ ಡಿಸೆಂಬರ್ ತಿಂಗಳಿನಲ್ಲಿ ನಿಮಗೆ ಉಂಟಾಗುತ್ತದೆ. ನೀವು ಪರಿಸ್ಥಿತಿಗಳನ್ನ ಬೇಧಿಸುವಂತಹ ಧೈರ್ಯವಿರಬೇಕು ಮತ್ತು ಭಯ ಬಿಡಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಕೆಲಸದಲ್ಲಿ ಮುನ್ನುಗ್ಗಿದರೇ ಒಳ್ಳೆಯದು. ನಿಮ್ಮಲ್ಲಿ ಉತ್ಸಾಹ ಹೆಚ್ಚಿಸಿಕೊಳ್ಳಿ, ಯಾವುದೇ ಕಾರಣಕ್ಕೂ ನೆಗೆಟಿವಿಟಿಗೆ ಅವಕಾಶವನ್ನು ಕೊಡಬೇಡಿ.

ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯ ಫಲಿತಾಂಶವನ್ನ ನಿರೀಕ್ಷಿಸಬಹುದು. ಯಾವಾಗ ಧನುಸ್ ರಾಶಿಯವರಿಗೆ ಒಳ್ಳೆಯದು ಆಗುತ್ತದೆಂದರೆ ಕೇತು ಗ್ರಹ ದಶಮದಲ್ಲಿದೆ. ಕೆಲಸದಲ್ಲಿ ಯಶಸ್ಸು ಇದೆ. ಸ್ವಲ್ಪ ಕಾಯಬೇಕು ಇದರ ಜೊತೆಗೆ ಹೋರಾಟವೂ ಇದೆ. ಏಕಾದಶದಲ್ಲಿ ಶುಕ್ರನಿರುವುದರಿಂದ ಲಾಭವಿದೆ. ವ್ಯವಸ್ಥಿತಿವಾಗಿ ಉದ್ಯೋಗ ಮತ್ತು ಕೆಲಸ ಮಾಡುತ್ತಿರುವವರಿಗೆ ಸುಗಮವಾಗಿ ಕೆಲಸ ಕಾರ್ಯಗಳು ನೆರವೇರುತ್ತದೆ. ಈ ತಿಂಗಳಿನಲ್ಲಿ ಕೆಲಸ ಮಾಡುತ್ತಿರುತ್ತೀರ ಹಾಗೆಯೇ ಅದಕ್ಕೆ ತಕ್ಕಹಾಗೇ ಪ್ರತಿಫಲವೂ ಸಿಗುತ್ತದೆ ಮತ್ತು ಹಣಕಾಸಿನ ಸಮಸ್ಯೆ

ಈ ತಿಂಗಳಿನಲ್ಲಿ ಇರುವುದಿಲ್ಲ. ಶುಕ್ರ ವ್ಯಯಕ್ಕೆ ಬಂದಾಗ ಮನಸ್ಸಿಗೆ ನೆಮ್ಮದಿ ಮತ್ತು ಖುಷಿ ಸಿಗುತ್ತದೆ. ಆದರೇ ಡಿಸೆಂಬರ್ 24ನೇ ತಾರೀಖಿನ ವರೆವಿಗೂ ಕಾಯಬೇಕಾಗುತ್ತದೆ. ತಿಂಗಳ ಕೊನೆಯಲ್ಲಿ ಪ್ರಯಾಣ ಮಾಡುವವರಾಗಿದ್ದರೇ ನಿಮ್ಮ ಯೋಜನೆಯೂ ಉಲ್ಟಾ ಆಗಬಹುದು. ಸಣ್ಣ ಪುಟ್ಟ ವಿಷಯಗಳಿಗೆ ಖುಷಿ ಕಡಿಮೆಯಾಗಬಹುದು ಆದರೇ ನಿಮ್ಮ ಪ್ರಯಾಣವೂ ನಡದೇ ನಡೆಯುತ್ತದೆ.

ಕುಟುಂಬಕ್ಕೆ ಸಂಬಂಧಪಟ್ಟಂತೆ ನಿಮ್ಮ ಮತ್ತು ತಾಯಿಯ ನಡುವೆ ಮನಸ್ಥಾಪವಿದ್ದರೇ ಅದು ತಿಳಿಯಾಗುವುದು ಕಡಿಮೆ ಇದೆ. ಹಾಗೆಯೇ ವಾಹನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ದೂರ ಪ್ರಯಾಣ ಮಾಡಬೇಕಾದರೇ ಎಚ್ಚರವಹಿಸಿ ಮತ್ತು ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಕೊಳ್ಳಿ. ಆರೋಗ್ಯದ ವಿಚಾರಕ್ಕೆ ಬಂದರೇ ಈ ತಿಂಗಳ ಆರಂಭದಲ್ಲಿ ಅಷ್ಟಾಗಿ ತೊಂದರೆ ಏನು ಇರುವುದಿಲ್ಲ. ಇದೇ ತಿಂಗಳ ಮಧ್ಯಭಾಗದಲ್ಲಿ ರವಿಗ್ರಹ ಬರುವುದರಿಂದ ಮತ್ತು ತಿಂಗಳ ಕೊನೆಯಲ್ಲಿ ಕುಜ ಗ್ರಹ ಪ್ರವೇಶ ಮಾಡುವುದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಮಾಡುತ್ತವೆ. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.

Leave A Reply

Your email address will not be published.