ದಿನಕ್ಕೆ 1 ಸೀಬೆ ( ಪೇರಲೆ ) ಹಣ್ಣು ತಿಂದರೆ 1 ವಾರದಲ್ಲಿ

0

ನಾವು ಈ ಲೇಖನದಲ್ಲಿ ದಿನಕ್ಕೆ ಒಂದು ಪೇರಳೆ ಹಣ್ಣು ತಿನ್ನುವುದರಿಂದ ಒಂದೇ ವಾರದಲ್ಲಿ ನಿಮಗೆ ಇಂತಹದೊಂದು ಆಶ್ಚರ್ಯ ಲಾಭಗಳು ಸಿಗುತ್ತದೆ ಎಂಬುದನ್ನು ನೋಡೋಣ.ಈ ಒಂದು ಪೇರಳೆ ಹಣ್ಣಿನ ವಿಶೇಷತೆ ಏನೆಂದರೆ, ಈಗ ಚರ್ಚೆ ಆಗುತ್ತಿರುವ ವೈರಾಣುಗಳ ಸಂದರ್ಭದಲ್ಲಿ ಅಂದರೆ, ವೈರಾಣುಗಳು ನಮ್ಮನ್ನ ಹೈರಾಣು ಆಗಿಸಿದೆ. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಇದೆ .ಸಾಕಷ್ಟು ವಿಟಮಿನ್ ಸಿ ಹೊಂದಿರುವುದರಿಂದಾಗಿ ಅತ್ಯಂತ ಪೋಷಕಾಂಶಯುಕ್ತ ಹಣ್ಣುಗಳ ಸಾಲಿನಲ್ಲಿ ಮೊದಲನೆಯದಾಗಿ ಬರುತ್ತದೆ.

ಮುಂಚೆ ಹೇಳುವ ಹಾಗೆ ದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು. ಅಂತ ಹೇಳುತ್ತಿದ್ದರು . ಈಗ ಅದನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ. ಅಂದರೆ ದಿನ ಒಂದು ಪೇರಳೆ ಹಣ್ಣು ತಿನ್ನುವುದರಿಂದ ವೈದ್ಯರಿಂದ ದೂರವಿರಬೇಕು ಎಂದು ಬದಲಾಯಿಸಿಕೊಳ್ಳಬೇಕು. ಯಾಕೆಂದರೆ ಪೇರಳೆ ಹಣ್ಣಿನಲ್ಲಿ ಸೇಬಿನ ಹಣ್ಣಿ ಗಿಂತ ಹೆಚ್ಚು ಪಟ್ಟು ಅಂದರೆ 10 ಪಟ್ಟು ಪೋಷಕಾಂಶ ಹೆಚ್ಚಾಗಿದೆ.

ಪೇರಳೆ ಹಣ್ಣು ಎಲ್ಲಾ ಕಾಲದಲ್ಲೂ ಕೂಡ ಸಿಗುತ್ತದೆ. ಮತ್ತು ಬಡವರ ಕೈಗೂ ಕೂಡ ಎಟಕುತ್ತದೆ.ಈ ಪೇರಳೆ ಹಣ್ಣು ಸೇಬಿನಷ್ಟು ದುಬಾರಿ ಇರುವುದಿಲ್ಲ.ಎಲ್ಲರೂ ಪೇರಳೆ ಹಣ್ಣನ್ನ ತೆಗೆದುಕೊಳ್ಳಬಹುದು.ಹಳ್ಳಿಗಳಲ್ಲಿ ಪೇರಳೆ ಹಣ್ಣನ್ನ ಸಾಕಷ್ಟು ಜನರು ಮನೆಗಳಲ್ಲಿಯೇ ಬೆಳೆದಿರುತ್ತಾರೆ. ಪೇರಳೆ ಹಣ್ಣಿನಲ್ಲಿ ಹೆಚ್ಚಿನ ವಿಟಮಿನ್ ಸಿ ಇರುತ್ತದೆ.ವೈಜ್ಞಾನಿಕವಾಗಿ ಇದು ಸಾಬೀತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ವ್ಯಕ್ತಪಡಿಸಿದೆ. ಮೊದಲನೆಯದಾಗಿ ಪೇರಳೆ ಹಣ್ಣಿನಿಂದ ನಮಗೆ ಏನೇನು ಪ್ರಯೋಜನಗಳು ಇದೆ ಎಂಬುದನ್ನು ನೋಡೋಣ. ಪೇರಳೆ ಹಣ್ಣಿನಲ್ಲಿ ಎರಡು ವಿಧಗಳಿವೆ.ಒಂದು ಬಿಳಿಯ ಬಣ್ಣವಿರುತ್ತದೆ ಮತ್ತೊಂದು ಕೆಂಪು ಬಣ್ಣವಿರುತ್ತದೆ. ಕೆಂಪು ಬಣ್ಣದ ಪೇರಳೆ ಹಣ್ಣು ತುಂಬಾ ರುಚಿಯು ಕೂಡ ಇರುತ್ತದೆ .ಹಾಗೆ ಅದರಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತದೆ.

ಅದರಲ್ಲಿ ಲೈಕೋ ಪೀನ್ ಎನ್ನುವ ಒಂದು ಅಂಶ ಇದೆ.ಈ ಲೈಕೋ ಪೀನ್ ಎನ್ನುವ ಅಂಶ ಕೆಂಪು ಬಣ್ಣ ಬರುವುದಕ್ಕೆ ಕಾರಣವಾಗುತ್ತದೆ.ಈ ಕೆಂಪು ಬಣ್ಣ ರಕ್ತನಾಳಗಳ ಒಳಗೆ ಶುದ್ಧಿಕರಿಸುತ್ತದೆ. ಪುರುಷರಿಗೆ ಒಂದು ಒಳ್ಳೆಯ ವಿಚಾರವೇನೆಂದರೆ , ನಲವತ್ತು ವರ್ಷ ಮೇಲ್ಪಟ್ಟವರಲ್ಲಿ ಸಕ್ಕರೆ ಕಾಯಿಲೆ , ಬಿಪಿಯಿಂದಾಗಿ ಲೈಂಗಿಕ ನಿರಾಶಕ್ತಿ ಉಂಟಾಗುತ್ತಿದೆ. ನಿಮಿರುವಿಕೆ ದೌರ್ಬಲ್ಯ ತಡೆಗಟ್ಟಲು, ಲೈಕೋ ಪಿನ್ ಅನ್ನೋ ಅಂಶ ಬೇಕಾಗುತ್ತದೆ.ಇವೆಲ್ಲ ಕಡಿಮೆಯಾಗಬೇಕು ಅಂದರೆ ನಮಗೆ ಲೈಕೋಪಿನ್ ಬೇಕಾಗುತ್ತದೆ.

ಹಾಗಾಗಿ ಮಹಿಳೆ ಯರಲ್ಲಿಯೂ ಕೂಡ ಇಂತಹ ಸಮಸ್ಯೆ ಇದೆ.ಮಹಿಳೆಯರು ಕೂಡ ಇದನ್ನು ಪಾಲಿಸಿದರೆ ಅವರ ಸಮಸ್ಯೆಗಳು ದೂರವಾಗುತ್ತವೆ . ಪುರುಷರಿಗೆ ಅಥವಾ ಮಹಿಳೆಯರಿಗೆ ಲೈಂಗಿಕ ಸಮಸ್ಯೆಗಳು ಇದ್ದರೆ ಈ ಲೈಕೋಪಿನ್ ಅನ್ನುವ ವಂಶ ಸರಿ ಮಾಡುತ್ತದೆ. ಆ ಲೈಕೋ ಪಿನ್ ಪೇರಳೆ ಹಣ್ಣಿನಲ್ಲಿದೆ. ನಾವು ಪ್ರತಿ ದಿನ ಒಂದು ಪೇರಳೆ ಹಣ್ಣನ್ನು ತಿನ್ನುತ್ತಾ ಬಂದರೆ, ಚರ್ಮದ ತೊಂದರೆಗಳು ಕೂಡ ನಿವಾರಣೆಯಾಗುತ್ತದೆ .

ಈ ಪೇರಳೆ ಹಣ್ಣಿನಲ್ಲಿ ಯಾವೆಲ್ಲ ಪೋಷಕಾಂಶಗಳು ಇದೆ.ವೈಜ್ಞಾನಿಕವಾಗಿ ರುಜುವಾತಾಗಿದೆ ಎಂಬುದನ್ನು ನೋಡೋಣ.ಕೆಂಪು ಪೇರಳೆ ಹಣ್ಣಿನಲ್ಲಿ ಲೈಕೋಪಿನ್ ಅಂಶ ಎನ್ನುವುದು ಇರುತ್ತದೆ. ಲೈಕೋ ಪಿನ್ ಇದು ಪವರ್ಫುಲ್ ಆ್ಯಂಟಿ ಆಕ್ಸಿಡೆಂಟ್.ಇದು ನಮ್ಮ ತ್ವಚೆಯನ್ನು ಅಥವಾ ಚರ್ಮವನ್ನು ಯುವಿ ರೇಸಿಂದ ಕಾಪಾಡಲು ಸಹಾಯ ಮಾಡುತ್ತದೆ.

ಮುಖದ ಮೇಲೆ ಆಗುವ ಕಲೆಯನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ಇದು ಡಿಎನ್ಎ ಡ್ಯಾಮೇಜ್ ಅನ್ನ ಸಮಸ್ಯೆಯನ್ನು ಅಂದರೆ ಅದನ್ನು ತಡೆಯುತ್ತದೆ. ಚಿಕ್ಕ ವಯಸ್ಸಿನವರು ದೊಡ್ಡ ವಯಸ್ಸಿನ ಹಾಗೆ ಕಾಣುತ್ತಿರುತ್ತಾರೆ .ಅಂಥವರು ದಿನ ಒಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ಅವರ ಯೌವ್ವನ ಕಾಪಾಡಿಕೊಳ್ಳಬಹುದು. ಮತ್ತೆ ಅವರ ಕಣ್ಣಿನ ದೃಷ್ಟಿ ಚೆನ್ನಾಗಿರಲು ಸಹಾಯ ಮಾಡುತ್ತದೆ. ಈ ಪೇರಳೆ ಹಣ್ಣಿನಲ್ಲಿ ಬೀಟಾ ಕೆರೋಟಿನ್ ಅನ್ನೋ ಅಂಶ ಇರುತ್ತದೆ.

ಅನೇಕ ವ್ಯಕ್ತಿಗಳಿಗೆ ಕಣ್ಣಿನಲ್ಲಿ ಪೊರೆ ಬೇಗ ಬರುತ್ತದೆ . ಈ ಕಣ್ಣಿನ ಸಮಸ್ಯೆಯನ್ನು ದೂರ ಮಾಡಲು ಇದು ಸಹಾಯ ಮಾಡುತ್ತದೆ. ಇದು ವೈರಾಣುಗಳ ವಿರುದ್ಧ ಹೋರಾಡುವುದಕ್ಕೆ ಮತ್ತು ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಮತ್ತೆ ಸಾಕಷ್ಟು ವಿಟಮಿನ್ ಸಿ ಇರುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಿಂಬೆ ಹಣ್ಣಿಗಿಂತಲು ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ.

ಆ್ಯಂಟಿ ಟ್ಯೂಮರ್ ಮತ್ತು ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಶಕ್ತಿ ಈ ಪೇರಳೆ ಹಣ್ಣಿಗಿದೆ. ರಕ್ತ ನಾಳಗಳ ವಿಕಾಸನವಾಗುವುದಕ್ಕೆ ಸಹಾಯಮಾಡುತ್ತದೆ. ಇದರಲ್ಲಿ ವಿಟಮಿನ್ , ವಿಟಮಿನ್ ಕೆ , ನಿಯಾಸಿನ್, ಫೋಲೈಟಿದೆ.
ವಿಟಮಿನ್ ಬಿ ಸಿಕ್ಸ್, ಕಾಪರ್ , ಮ್ಯಾಗ್ನಿಷಿಯಂ ,ಇದೆಲ್ಲಾ ನಮಗೆ ಹೊಸ ರಕ್ತ ಉತ್ಪತ್ತಿಯಾಗಲು ಬೇಕಾಗುತ್ತದೆ .ರಕ್ತಹೀನತೆ ಇರುವವರು

ಕೂಡ ದಿನಕ್ಕೆ ಒಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ಕಡಿಮೆಯಾಗುತ್ತದೆ. ಇದರಲ್ಲಿ ಇರುವ ನಾರಿನ ಅಂಶ ಮಲ ವಿಸರ್ಜನೆಗೆ ಸಹಾಯ ಮಾಡುತ್ತದೆ. ಊಟದ ಜೊತೆಯಲ್ಲಿ ನಾವು ಒಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ಅನ್ನದಲ್ಲಿರುವ ಸಕ್ಕರೆ ಅಂಶವನ್ನು ಅದು ಹೀರಿಕೊಳ್ಳುತ್ತದೆ .ಹಾಗಾಗಿ ಊಟದ ಜೊತೆ ಪೇರಳೆ ಹಣ್ಣು ಸೇವಿನೆ ಮಾಡುವುದರಿಂದ ಸಕ್ಕರೆ ಕಾಯಿಲೆ ಹೆಚ್ಚಾಗದಂತೆ ತಡೆಯುತ್ತದೆ. ಇದರಿಂದ ನಮಗೆ ಒಳ್ಳೆಯ ಕೊಲೆಸ್ಟ್ರಾಲ್ ಸಿಗುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಆಚೆ ಹಾಕುತ್ತದೆ. ಪೇರಳೆ ಹಣ್ಣು ನಮ್ಮ ಆರೋಗ್ಯದಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ..

Leave A Reply

Your email address will not be published.